Village Missionary Movement         கிராம மிஷனரி இயக்கம்

ಧೈನಂದಿನ ಧ್ಯಾನ(Kannada) – 06.04.2023
Share:

By Village Missionary Movement

Thursday, 06-Apr-2023

ಧೈನಂದಿನ ಧ್ಯಾನ(Kannada) – 06.04.2023

 

ನೀರಡಿಕೆಯಾಗಿದೆ

 

"ಇದಾದ ಮೇಲೆ ಯೇಸು ಈಗ ಎಲ್ಲಾ ತೀರಿತೆಂದು ತಿಳಿದು ಶಾಸ್ತ್ರದ ಮಾತು ನೆರವೇರುವಂತೆ - ನನಗೆ ನೀರಡಿಕೆ ಆಗಿದೆ ಅಂದನು" - ಯೋಹಾನ 19:28

 

ಯೇಸು ಶಿಲುಬೆಯ ಮೇಲೆ ನುಡಿದ ಐದನೆಯ ಮಾತು:

ಯಾವನಿಗಾದರೂ ನೀರಡಿಕೆಯಾಗಿದ್ದರೆ ಅವನು ನನ್ನ ಬಳಿಗೆ ಬಂದು ಕುಡಿಯಲಿ. ನನ್ನನ್ನು ನಂಬಿದವನ ಹೊಟ್ಟೆಯೊಳಗಿಂದ ಜೀವಕರವಾದ ನೀರಿನ ಹೊಳೆಗಳು ಹರಿಯುವವು ಎಂದು ನಮ್ಮ ಯೇಸು ಹೇಳಿದ್ದಾರೆ (ಯೋಹಾನ 7:37,38). ಹೀಗೆ ನಮ್ಮ ಬಾಯಾರಿಕೆಯನ್ನು ನೀಗಿಸುವೆನೆಂದು ಹೇಳಿದ ಯೇಸು, ನನಗೆ ನೀರಡಿಕೆಯಾಗಿದೆ ಎಂದು ಹೇಳುತ್ತಿದ್ದಾರೆ. ಶಿಲುಬೆಯ ಮೇಲೆ ಯೇಸುಕ್ರಿಸ್ತನ ದಾಹ ಜನರ ಆತ್ಮಗಳ ಕುರಿತಾದ ದಾಹವಾಗಿತ್ತು. "ಅವರು ತನ್ನ ಆತ್ಮವು ಅನುಭವಿಸಿದ ಶ್ರಮೆಯ ಫಲವನ್ನು ಕಂಡು ತೃಪ್ತನಾಗುವನು" ಎಂದು ಯೇಸುವಿನ ದಾಹದ ಬಗ್ಗೆ ಪ್ರವಾದಿಯಾದ ಯೆಶಾಯನು ಬಹಳ ಸುಂದರವಾಗಿ ಹೇಳಿದ್ದಾರೆ. (ಯೆಶಾಯ 53:11) ನಮ್ಮ ದೇವರ ಅತಿ ದೊಡ್ಡ ದಾಹವೇನೆಂದರೆ ತನ್ನ ಸ್ವರೂಪದಲ್ಲಿ ಸೃಷ್ಟಿಸಲ್ಪಟ್ಟ ಮನುಷ್ಯನು ತನ್ನ ಮಂದೆಯಲ್ಲಿ ಬಂದು ಸೇರಬೇಕು ಎಂಬುದೇ. ಹಿಂಡಿನಲ್ಲಿ ಇಲ್ಲದ ಕುರಿಗಳನ್ನು ಆತನ ಬಳಿಗೆ ತರುವ ಕಾರ್ಯದಲ್ಲಿ ನಾವು ತೊಡಗಿದಾಗ ಆತನ ದಾಹವನ್ನು ನೀಗಿಸುವವರಾಗಿದ್ದೇವೆ.

 

ಇದಕ್ಕಾಗಿ ನಾನು ಇಲ್ಲಿ ಒಂದು ನೈಜ ಕಥೆಯನ್ನು ಹೇಳುತ್ತಿದ್ದೇನೆ. 1780 ರಲ್ಲಿ, ಲಂಡನ್‌ನ ಉಪನಗರಗಳಲ್ಲಿ ವಾಸಿಸುವ ಅನಕ್ಷರಸ್ಥ ಬಡ ಮಕ್ಕಳ ಬಗ್ಗೆ ರಾಬರ್ಟ್ ರೆಯೆಸ್ ಕಳವಳ ವ್ಯಕ್ತಪಡಿಸಿದರು. ಅವರ ಜೀವನವನ್ನು ಬದಲಾಯಿಸಲು ಏನಾದರೂ ಮಾಡಬೇಕೆಂದು ಅವರು ಪ್ರಯತ್ನಿಸಿದರು. ಶಾಲೆಗಳನ್ನು ತೆರೆದು ಭಾನುವಾರದಂದು ಆ ಮಕ್ಕಳಿಗೆ ತರಗತಿಗಳನ್ನು ನಡೆಸಲು ಕೆಲವು ಮಹಿಳೆಯರನ್ನು ಏರ್ಪಡಿಸಿದರು. ಬೈಬಲ್ ಅನ್ನು ಪಠ್ಯಪುಸ್ತಕವಾಗಿ ಬಳಸಿಕೊಂಡು, ಶಿಕ್ಷಕರು ಬಡ ಮಕ್ಕಳಿಗೆ ಓದಲು ಕಲಿಸಿದರು ಮತ್ತು ಬೈಬಲ್ ನಲ್ಲಿ ಹೇಳಲ್ಪಟ್ಟಿರುವ ಜ್ಞಾನವನ್ನು ಅವರಿಗೆ ಕಲಿಸಿದರು. ನೂರು ಮಕ್ಕಳೊಂದಿಗೆ ಆರಂಭವಾದ ಸಂಡೇ ಸ್ಕೂಲ್ ತರಗತಿಗಳು ಬಹುಬೇಗ ಸಾವಿರಾರು ಹುಡುಗ ಹುಡುಗಿಯರ ಬದುಕನ್ನು ಮುಟ್ಟಿತು. 1831 ರ ಹೊತ್ತಿಗೆ, ಲಂಡನ್ ನಗರದಲ್ಲಿ ಭಾನುವಾರ ಶಾಲೆಗಳು 10,000 ಮಕ್ಕಳನ್ನು ತಲುಪಿತು.

 

ರಾಬರ್ಟ್ ಎಂಬ ಒಬ್ಬ ಏಕ ವ್ಯಕ್ತಿಯ ಪ್ರಯತ್ನಕ್ಕಿಂತ ಹೆಚ್ಚಾಗಿ, ಪರಿಶುದ್ಧ ಗ್ರಂಥದಲ್ಲಿರುವ ದೇವರ ಪ್ರೀತಿ ಏನೆಂದು ಅವರು ತಿಳಿದುಕೊಂಡರು. ಹಸಿದ ಮತ್ತು ಅಸಹಾಯಕರ ಕಡೆಗೆ ನಾವು ತೋರಿಸುವ ಕಾಳಜಿಯು ನಮ್ಮ ದೇವರ ದಾಹವನ್ನು ನೀಗಿಸುವುದು. ನಾವೂ ಸಹ ದೇವರ ದಾಹವನ್ನು ನೀಗಿಸುವಂತೆ ಆತನು ನಮಗೆ ಮಾರ್ಗದರ್ಶನ ನೀಡಲಿ.

- Bro. ಜೇಕಬ್ ಶಂಕರ್

 

ಪ್ರಾರ್ಥನಾ ಅಂಶ:

ಆಮೆನ್ ವಿಲೇಜ್ ಟಿವಿ ಪ್ರಸಾರವಾಗಲು ಬೇಕಾದ ಹಣಕಾಸಿನ ಅವಶ್ಯಕತೆಗಳು ಪೂರೈಸಲ್ಪಡುವಂತೆ ಪ್ರಾರ್ಥಿಸಿರಿ.

 

*Whatsapp*

ಈ ಧ್ಯಾನ ಸಂದೇಶವನ್ನು ತಮಿಳು, ಇಂಗ್ಲಿಷ್, ಹಿಂದಿ, ಮಲಯಾಳಂ, ತೆಲುಗು, ಕನ್ನಡ, ಪಂಜಾಬಿ ಮತ್ತು ಒರಿಯಾ ಭಾಷೆಗಳಲ್ಲಿ ವಾಟ್ಸಾಪ್‌ನಲ್ಲಿ ಪಡೆದುಕೊಳ್ಳಲು *+91 94440 11864* ಈ ಸಂಖ್ಯೆಯನ್ನು ಸಂಪರ್ಕಿಸಿ.

 

www.vmm.org.in

ಈಮೈಲ್:- info@vmm.org.in

Android App: https://play.google.com/store/apps/details?id=com.infobells.vmmorgin

        

ವಿಲೇಜ್ ಮಿಷಿನರಿ ಮೊಮೆಂಟ್ ವಿರುಧುನಗರ್, ಇಂಡಿಯಾ-626001

ಪ್ರಾರ್ಥನಾ ಅವಶ್ಯಕತೆಗಾಗಿ :- +91 93455 40482



hacklink satın al holiganbet giriş matbet holiganbet holiganbet giriş casibom giriş casibom casibom giriş casibom matbet matbet giriş imajbet imajbet giriş perabet perabet giriş coinbar coinbar giriş klasbahis klasbahis giriş supertotobet giriş supertotobet jojobet giriş jojobet casibom casibom giriş jojobet giriş jojobet interbahis interbahis giriş mariobet mariobet giriş betpas betpas giriş artemisbet artemisbet giriş marsbahis giriş marsbahis restbet restbet giriş egebet egebet giriş Hiltonbet Hiltonbet giriş jojobet alobet alobet giriş betcio betcio giriş grandpashabet grandpashabet giriş superbetin superbetin giriş perabet perabet giriş pashagaming tarafbet editörbet perabet perabet giriş grandbetting hitbet xslot betkom giriş betkanyon giriş perabet perabet giriş Hiltonbet Hiltonbet giriş grandpashabet grandpashabet giriş grandpashabet güncel giriş grandpashabet grandpashabet giriş grandpashabet giriş güncel jojobet jojobet giriş holiganbet holiganbet giriş casibom casibom giriş jojobet jojobet giriş alobet alobet giriş marsbahis marsbahis giriş milanobet jojobet jojobet jojobet jojobet jojobet holiganbet ibizabet holiganbet amkbet sonbahis betgit cratosroyalbet cratosroyalbet gameofbet