By Village Missionary Movement
Tuesday, 04-Apr-2023ಧೈನಂದಿನ ಧ್ಯಾನ(Kannada) – 05.04.2023
ದೇವರು ಎಲ್ಲಿ?
“ಹೆಚ್ಚು ಕಡಿಮೆ ಒಂಭತ್ತನೆಯ ತಾಸಿನಲ್ಲಿ ಯೇಸು--ಏಲೀ, ಏಲೀ, ಲಮಾ ಸಬಕ್ತಾನೀ? ಅಂದರೆ ನನ್ನ ದೇವರೇ, ನನ್ನ ದೇವರೇ, ಯಾಕೆ ನನ್ನನ್ನು ಕೈ ಬಿಟ್ಟಿದ್ದೀ ಎಂದು ಮಹಾಶಬ್ದದಿಂದ ಕೂಗಿ ಹೇಳಿದನು" - ಮತ್ತಾಯ 27:46
ಯೇಸು ಶಿಲುಬೆಯ ಮೇಲೆ ನುಡಿದ ನಾಲ್ಕನೆಯ ಮಾತು
"ಕ್ರಿಶ್ಚಿಯನ್ & ಮಿಷನರಿ ಅಲೈಯನ್ಸ್" ಎಂಬ ಜಗತ್ಪ್ರಸಿದ್ಧ ಮಿಷನರಿ ಚಳುವಳಿಯ ಸ್ಥಾಪಕರು ಶ್ರೀ. A.B. ಸಂಸೋನ್. ಇವರ ಜೀವನ ಕಥೆಯನ್ನು A.W. ಡೋಜರ್ ಬರೆದ Wingspread ಎಂಬ ಅತ್ಯುತ್ತಮ ಪುಸ್ತಕದಲ್ಲಿ ಓದಬಹುದು. ರಕ್ಷಣೆ ಹೊಂದಿ ಸೇವೆ ಮಾಡಲು ಪ್ರಾರಂಭಿಸಿದ ಸಂಸೋನನ ಜೀವನದಲ್ಲಿ, ಬೆಳವಣಿಗೆಯು ತುಂಬಾ ವೇಗವಾಗಿತ್ತು. ಆದರೆ ಒಂದು ನಿರ್ದಿಷ್ಟ ಅವಧಿಯಲ್ಲಿ, ದೈಹಿಕ ದೌರ್ಬಲ್ಯದೊಂದಿಗೆ, ಆಧ್ಯಾತ್ಮಿಕ ಕತ್ತಲೆಯಂತಹ ಒಂದು ಅವರ ಜೀವನದಲ್ಲಿ ಬಂದಿತು. ನನ್ನ ದೇವರೇ! ನನ್ನ ದೇವರೇ! ಯಾಕೆ ನನ್ನನ್ನು ಕೈ ಬಿಟ್ಟಿದ್ದೀ ಎಂಬ ಗೋಳಾಟವು ಅವರ ಹೃದಯದಲ್ಲಿತ್ತು. ಆ ಪರಿಸ್ಥಿತಿಯಲ್ಲಿ ಪ್ರಾರ್ಥನೆ ಮಾಡುವುದು, ಸತ್ಯವೇದ ಓದುವುದು ಇವ್ಯಾವುದೂ ಕೂಡ ಸಹಾಯ ಮಾಡಲಿಲ್ಲ. ಈ ಆಯಾಸದ ಕೆಸರಿನಲ್ಲಿ ಸಿಕ್ಕಿಹಾಕಿಕೊಂಡಿದ್ದ ಅವರು ಮತ್ತೆ ಎದ್ದು ಬರಲು ಹಲವು ದಿನಗಳು ಬೇಕಾಯಿತು.
ಹೀಗೆ ದೇವರ ಪ್ರಸನ್ನತೆ ಇಲ್ಲದೇ, ಬಹುಶಃ ದೇವರಿಲ್ಲವೋ ಎಂದು ತೋಚುವ ಈ ಸಮಯಗಳು ಕ್ರೈಸ್ತ ಜೀವನದ ಒಂದು ಭಾಗವೇ ಎಂದು A.W. ಡೋಜರ್ ಬರೆಯುತ್ತಾರೆ. ದೇವರನ್ನು ಅತಿಯಾಗಿ ಪ್ರೀತಿಸುವ ಮತ್ತು ಆತನಿಗಾಗಿ ಏನನ್ನಾದರೂ ಮಾಡುವವರ ಜೀವನದಲ್ಲಿ ಇದು ಸಹಜವೇ ಎಂದು ಹೇಳುತ್ತಾರೆ. ನಾವು ನಮ್ಮ ಭಾವನೆಗಳು ಮತ್ತು ಸನ್ನಿವೇಶಗಳನ್ನು ಲೆಕ್ಕಿಸದೆ ನಂಬಿಕೆಯಲ್ಲಿ ದೇವರ ಮೇಲೆ ಅವಲಂಬಿತರಾಗಲು ಕಲಿಯಲು ಸಹಾಯ ಮಾಡುವ ಕ್ಷಣಗಳೇ ಇವು!
ಮನುಷ್ಯ ಮತ್ತು ದೇವರ ನಡುವೆ ಇರುವ ಸಂಬಂಧವನ್ನು ಮತ್ತು ಅದರ ಗುಣಮಟ್ಟವನ್ನು ಕೊಂಡಾಡುವ ಪುಸ್ತಕವೇ ಕೀರ್ತನೆಗಳ ಪುಸ್ತಕ. ಕೀರ್ತನೆ 16:11 ರಲ್ಲಿ, "ನಿನ್ನ ಸಮ್ಮುಖದಲ್ಲಿ ಪರಿಪೂರ್ಣ ಸಂತೋಷವೂ...ಶಾಶ್ವತ ಭಾಗ್ಯವೂ ಇರುತ್ತವೆ" ಎಂದು ವಿವರಿಸಿ ಹೇಳಿದ ಅರಸನಾದ ದಾವೀದನು, ಕೀರ್ತನೆ 22: 1 ರಲ್ಲಿ, "ನನ್ನ ದೇವರೇ, ನನ್ನ ದೇವರೇ, ಯಾಕೆ ನನ್ನನ್ನು ಕೈಬಿಟ್ಟಿದ್ದೀ" ಎಂದು ಗೋಳಾಡುತ್ತಾರೆ. ಸಭೆ ಇತಿಹಾಸವನ್ನು ಹಿಂತಿರುಗಿ ನೋಡಿದರೆ, ಅನೇಕ ಕ್ರೈಸ್ತ ಮಾನವರಲ್ಲಿ, ಈ ಅನುಭವಗಳು ತಮ್ಮ ಜೀವನದಲ್ಲಿಯೂ ಇದ್ದವು ಎಂದು ಸಾಕ್ಷಿ ನೀಡುತ್ತಾರೆ. ದೇವರ ಮುಖವನ್ನು ಮರೆಮಾಚುವ ಈ ಕಠಿಣವಾದ ಅನುಭವವನ್ನು ನಮ್ಮ ಕರ್ತನಾದ, ಯೇಸು ಕ್ರಿಸ್ತನೂ ಸಹ ಶಿಲುಬೆಯಲ್ಲಿ ಅನುಭವಿಸಿದರು. ಕೀರ್ತನೆ 22:1 ರಲ್ಲಿರುವ ಮಾತುಗಳನ್ನು ಹೇಳಿ ಅವರು ಸಹ ಗೋಳಾಡಿದರು. ಹಾಗಾಗಿ ಅವರಿಗೂ ನಮ್ಮ ಅನುಭವಗಳು ಅರ್ಥವಾಗುತ್ತದೆ.
ಪ್ರಿಯರೇ! ಈ ರೀತಿಯ ಆಧ್ಯಾತ್ಮಿಕ ಅಂಧಕಾರವು ನಮ್ಮ ಜೀವನದಲ್ಲೂ ಬರುವಾಗ ದೇವರಲ್ಲಿ ನಂಬಿಕೆಯಿಂದ ಕುಳಿತುಕೊಳ್ಳೋಣ. ಇತರ ವಿಶ್ವಾಸಿಗಳೊಂದಿಗಿರುವ ಐಕ್ಯತೆಯಲ್ಲಿ ದೇವರ ಮುಖದ ಬೆಳಕು ಶೀಘ್ರದಲ್ಲೇ ನಮ್ಮ ಮೇಲೆ ಬೆಳಗುತ್ತದೆ.
- J. ಸಂತೋಷ್
ಪ್ರಾರ್ಥನಾ ಅಂಶ:
ಅಮೆನ್ ವಿಲೇಜ್ ಟಿವಿ ತಮಿಳುನಾಡಿನಾದ್ಯಂತ ಅಡೆತಡೆಯಿಲ್ಲದೆ ಪ್ರಸಾರ ಮಾಡಲು ಪ್ರಾರ್ಥಿಸಿರಿ.
*Whatsapp*
ಈ ಧ್ಯಾನ ಸಂದೇಶವನ್ನು ತಮಿಳು, ಇಂಗ್ಲಿಷ್, ಹಿಂದಿ, ಮಲಯಾಳಂ, ತೆಲುಗು, ಕನ್ನಡ, ಪಂಜಾಬಿ ಮತ್ತು ಒರಿಯಾ ಭಾಷೆಗಳಲ್ಲಿ ವಾಟ್ಸಾಪ್‌ನಲ್ಲಿ ಪಡೆದುಕೊಳ್ಳಲು *+91 94440 11864* ಈ ಸಂಖ್ಯೆಯನ್ನು ಸಂಪರ್ಕಿಸಿ.
www.vmm.org.in
ಈಮೈಲ್:- info@vmm.org.in
Android App: https://play.google.com/store/apps/details?id=com.infobells.vmmorgin
ವಿಲೇಜ್ ಮಿಷಿನರಿ ಮೊಮೆಂಟ್ ವಿರುಧುನಗರ್, ಇಂಡಿಯಾ-626001
ಪ್ರಾರ್ಥನಾ ಅವಶ್ಯಕತೆಗಾಗಿ :- +91 93455 40482