By Village Missionary Movement
Monday, 03-Apr-2023ಧೈನಂದಿನ ಧ್ಯಾನ(Kannada) – 04.04.2023
ಇಗೋ ನಿನ್ನ ತಾಯಿ
"... ಯೇಸು ತನ್ನ ತಾಯಿಗೆ - ಅಮ್ಮಾ, ಇಗೋ ನಿನ್ನ ಮಗನು ಎಂದು ಹೇಳಿದನು" - ಯೋಹಾನ 19:26
ಯೇಸು ಶಿಲುಬೆಯ ಮೇಲೆ ನುಡಿದ ಮೂರನೆಯ ಮಾತು:
ಯೇಸು ಕ್ರಿಸ್ತನು ಶಿಲುಬೆಯಲ್ಲಿ ನೇತಾಡುತ್ತಿದ್ದಾಗ ಮಾತನಾಡಿದ ಪ್ರತಿಯೊಂದು ಮಾತುಗಳಲ್ಲೂ ಸಹ ಬಹಳಷ್ಟು ಅರ್ಥ ಅಡಗಿದೆ. ಸಾಮಾನ್ಯವಾಗಿ ಒಬ್ಬ ವ್ಯಕ್ತಿಯು ತನ್ನ ಕುಟುಂಬದ ಜವಾಬ್ದಾರಿಗಳನ್ನು ಮರಣದ ಅಂಚಿನಲ್ಲಿರುವ ಸರಿಯಾದ ಜನರಿಗೆ ಹಸ್ತಾಂತರಿಸುತ್ತಾನೆ. ತಂದೆಯಾಗಿದ್ದರೆ, ಹೆಂಡತಿಗೋ, ಅನೇಕ ಮಕ್ಕಳಿದ್ದರೆ ಹಿರಿಯ ಮಗನ ಬಳಿಯೋ ಇತರ ಮಕ್ಕಳನ್ನು ನೋಡಿಕೊಳ್ಳುವ ಜವಾಬ್ದಾರಿಯನ್ನು ವಹಿಸಿಕೊಡುತ್ತಾರೆ. ಅದೇ ರೀತಿ, ನಮ್ಮ ಕರ್ತನಾದ ಯೇಸು ಕ್ರಿಸ್ತನು ತನ್ನ ಗಂಡನಿಲ್ಲದ ತಾಯಿಯನ್ನು ನೋಡಿಕೊಳ್ಳುವ ಜವಾಬ್ದಾರಿಯನ್ನು ತನ್ನ ಪ್ರೀತಿಯ ಶಿಷ್ಯನಾದ ಯೋಹಾನನಿಗೆ ನೀಡುತ್ತಾರೆ. ಅವರು ತಮ್ಮ 33 ½ ವರ್ಷಗಳ ಲೌಕಿಕ ಜೀವನದಲ್ಲಿ ತಂದೆಯು ತನಗೆ ನೀಡಿದ ಎಲ್ಲವನ್ನೂ ಪೂರ್ಣಗೊಳಿಸಿದರು. ಆ ಘೋರ ನೋವಿನ ನಡುವೆಯೂ ಸಂಸಾರದಲ್ಲಿ ತನ್ನ ಜವಾಬ್ದಾರಿಯನ್ನು ಕಾಳಜಿಯಿಂದ ನಿರ್ವಹಿಸುತ್ತಿರುವುದನ್ನು ಕಾಣುತ್ತೇವೆ.
ಜಗತ್ತಿನಲ್ಲಿ ಬೇರೆ ಯಾರಿಗೂ ಸಿಗದಂತಹ ಸವಲತ್ತು ಮರಿಯಳಿಗೆ ದೊರೆತಿತ್ತು. ದೇವರ ಮಗನನ್ನು ಗರ್ಭದಲ್ಲಿ ಹೊತ್ತುಕೊಂಡು ಬೆಳೆಸುವುದೇ ದೊಡ್ಡ ಸೌಭಾಗ್ಯ! ಆದರೂ ನಿನ್ನ ಆತ್ಮವನ್ನೂ ಒಂದು ಕತ್ತಿಯು ಎಳೆದುಕೊಂಡು ಹೋಗುತ್ತದೆ ಎಂಬ ಪ್ರವಾದನೆಯು ನೆರವೇರುವಾಗ, ಯೇಸು ಶಿಲುಬೆಯಲ್ಲಿ ನೇತಾಡುತ್ತಿರುವುದನ್ನು ನೋಡಿ ಸಹಿಸಲಾಗದೆ ಕಣ್ಣೀರಿಟ್ಟಳು. ಮರಿಯಳಿಗೆ ತನ್ನನ್ನು ಇನ್ನು ಮುಂದೆ ಯಾರು ನೋಡಿಕೊಳ್ಳುತ್ತಾರೋ ಎಂಬ ಆಲೋಚನೆ ಇತ್ತೋ ಇಲ್ಲವೋ, ಆದರೆ ದುಃಖದ ಮಧ್ಯೆಯೂ ಸಹ, ಯೇಸು ಕ್ರಿಸ್ತನಿಗೆ ಈ ಆಲೋಚನೆ ಇತ್ತು. ಯೇಸುವನ್ನು ಶಿಲುಬೆಗೇರಿಸಿದಾಗ ಅನೇಕ ಶಿಷ್ಯರು ಓಡಿಹೋದರು. ಯೋಹಾನನು ಮಾತ್ರ ಮರಿಯಳ ಪಕ್ಕದಲ್ಲಿ ನಿಂತಿದ್ದ. ತನ್ನ ಎದೆಯ ಮೇಲೆ ಒರಗಿಕೊಂಡಿದ್ದ ಯೋಹಾನನಿಗೆ ಯೇಸುವಿನ ಹೃದಯದ ಭಾರವು ಗೊತ್ತಿತ್ತು, ಅವರೇ ಇದಕ್ಕೆ ಅರ್ಹನು ಎಂದು ಮರಿಯಳನ್ನು ಯೋಹಾನನಿಗೆ ಒಪ್ಪಿಸಿದರು. ಹೆತ್ತವರ ಮೇಲೆ ಕಾಳಜಿ ವಹಿಸುವುದರಲ್ಲಿ ಜಗತ್ತಿನಲ್ಲೇ ಒಂದು ಮೂಲಮಾದರಿ ಯೇಸುಕ್ರಿಸ್ತನೇ.
ಪ್ರಿಯರೇ! ಈ ಜವಾಬ್ದಾರಿ ನಮಗೂ ಇದೆ. ನಾವು ಖಂಡಿತವಾಗಿಯೂ ಅದನ್ನು ಸಾಧಿಸಬೇಕು. ಇಂದಿನ ಯುಗದಲ್ಲಿ, ಮಕ್ಕಳು ಮದುವೆ ಅಥವಾ ಕೆಲಸಕ್ಕಾಗಿ ದೂರದ ಸ್ಥಳಗಳಿಗೆ ಅಥವಾ ದೇಶಗಳಿಗೆ ಹೋಗುತ್ತಾರೆ. ತಂದೆ-ತಾಯಿಯನ್ನು ನೋಡಿಕೊಳ್ಳುವುದೇ ಒಂದು ಸೌಭಾಗ್ಯ ಎಂಬ ಸತ್ಯವನ್ನು ಒಪ್ಪಿಕೊಳ್ಳಲು ಬಯಸುವುದಿಲ್ಲ. ಕೆಲವರು ಅವರಿಂದ ಆಸ್ತಿಯನ್ನು ತೆಗೆದುಕೊಂಡು ಅವರನ್ನು ಸಂಪೂರ್ಣವಾಗಿ ಮರೆತುಬಿಡುತ್ತಾರೆ. ಆಶೀರ್ವಾದದೊಂದಿಗಿರುವ ಏಕೈಕ ಆಜ್ಞೆ "ನಿನ್ನ ತಂದೆತಾಯಿಗಳನ್ನು ಸನ್ಮಾನಿಸಬೇಕು" ಎಂಬುದೇ! ನಾವು ಯೇಸುವಿನ ಮಾದರಿಯನ್ನು ಅನುಸರಿಸೋಣ ಮತ್ತು ಈ ಜಗತ್ತಿನಲ್ಲಿ ಆಶೀರ್ವದಿಸಲ್ಪಟ್ಟ ಸಂತತಿಯಾಗಿ ಬದುಕೋಣ.
- Mrs. ಭುವನಾ ಧನಪಾಲನ್
ಪ್ರಾರ್ಥನಾ ಅಂಶ:
ಸೇವಾ ಕ್ಷೇತ್ರಗಳಲ್ಲಿ ಸೇವೆಗಾಗಿ ದ್ವಿಚಕ್ರ ವಾಹನಗಳ ತುರ್ತು ಅವಶ್ಯಕತೆ ಇರುವುದರಿಂದ ಸಹಾಯ ಮಾಡುವ ವ್ಯಕ್ತಿಗಳು ಎದ್ದೇಳುವಂತೆ ಪ್ರಾರ್ಥಿಸಿರಿ.
*Whatsapp*
ಈ ಧ್ಯಾನ ಸಂದೇಶವನ್ನು ತಮಿಳು, ಇಂಗ್ಲಿಷ್, ಹಿಂದಿ, ಮಲಯಾಳಂ, ತೆಲುಗು, ಕನ್ನಡ, ಪಂಜಾಬಿ ಮತ್ತು ಒರಿಯಾ ಭಾಷೆಗಳಲ್ಲಿ ವಾಟ್ಸಾಪ್‌ನಲ್ಲಿ ಪಡೆದುಕೊಳ್ಳಲು *+91 94440 11864* ಈ ಸಂಖ್ಯೆಯನ್ನು ಸಂಪರ್ಕಿಸಿ.
www.vmm.org.in
ಈಮೈಲ್:- info@vmm.org.in
Android App: https://play.google.com/store/apps/details?id=com.infobells.vmmorgin
ವಿಲೇಜ್ ಮಿಷಿನರಿ ಮೊಮೆಂಟ್ ವಿರುಧುನಗರ್, ಇಂಡಿಯಾ-626001
ಪ್ರಾರ್ಥನಾ ಅವಶ್ಯಕತೆಗಾಗಿ :- +91 93455 40482