Village Missionary Movement         கிராம மிஷனரி இயக்கம்

ಧೈನಂದಿನ ಧ್ಯಾನ(Kannada) – 03.04.2023
Share:

By Village Missionary Movement

Monday, 03-Apr-2023

ಧೈನಂದಿನ ಧ್ಯಾನ(Kannada) – 03.04.2023

 

ಪರದೈಸಿ

 

"ಅದಕ್ಕೆ ಯೇಸು - ಈಹೊತ್ತೇ ನನ್ನ ಸಂಗಡ ಪರದೈಸಿನಲ್ಲಿರುವಿ ಎಂದು ನಿನಗೆ ಸತ್ಯವಾಗಿ ಹೇಳುತ್ತೇನೆ ಎಂದು ಉತ್ತರಕೊಟ್ಟನು” - ಲೂಕ 23:43

 

ಯೇಸು ಶಿಲುಬೆಯ ಮೇಲೆ ನುಡಿದ ಎರಡನೆಯ ಮಾತು:

ಕರ್ತನಾದ ಯೇಸು ಶಿಲುಬೆಯಲ್ಲಿ ಸಂಕಟದಿಂದ ನೇತಾಡುತ್ತಿರುವಾಗ, ಶಿಲುಬೆಯಲ್ಲಿದ್ದ ಅಪರಾಧಿಗಳಲ್ಲಿ ಒಬ್ಬನು ಯೇಸುವಿನೊಂದಿಗೆ ಮಾತನಾಡಿದನು. ಶಿಲುಬೆಯಲ್ಲಿ ಸಂಕಟದಲ್ಲಿ ಮಿಡಿಯುತ್ತಿರುವಾಗಲೂ ತನ್ನನ್ನು ವೇದನೆಪಡಿಸಿದವರಿಗಾಗಿ "ತಂದೆಯೇ, ಅವರನ್ನು ಕ್ಷಮಿಸು" ಎಂದು ಹೇಳಿದ ಯೇಸುವಿನ ಸದ್ಗುಣಗಳನ್ನು ಆ ಮನುಷ್ಯ ಗಮನಿಸುತ್ತಿದ್ದನು. ಯೇಸುವಿನ ಪ್ರೀತಿ, ಕ್ಷಮೆ ಮತ್ತು ಸಹಾನುಭೂತಿಯನ್ನು ನೋಡಿದ ಕಳ್ಳನು ತಕ್ಷಣವೇ ಮಾನಸಾಂತರ ಹೊಂದಿದನು. "ಯೇಸುವೇ, ನೀನು ನಿನ್ನ ರಾಜ್ಯವನ್ನು ಪಡೆದವನಾಗಿ ಬರುವಾಗ ನನ್ನನ್ನು ನೆನಸಿಕೋ" ಎಂದು ತನ್ನ ವಿಜ್ಞಾಪನೆಯನ್ನು ಯೇಸುವಿನ ಬಳಿ ಹೇಳಿದನು.

 

ಆ ಕ್ಷಣದಲ್ಲಿ ಯೇಸು ನುಡಿದ ಮಾತೇ "ಈಹೊತ್ತೇ ನನ್ನ ಸಂಗಡ ಪರದೈಸಿನಲ್ಲಿರುವಿ" ಎಂಬುದು! ದುಷ್ಟ ಜೀವನವನ್ನು ಬಿಟ್ಟು ಮಾನಸಾಂತರ ಹೊಂದುವ ಯಾವ ಪಾಪಿಗಾದರೂ ಪಾಪಕ್ಷಮಾಪಣೆ ಮತ್ತು ನಿತ್ಯಜೀವವುಂಟು ಎಂದು ಪರಲೋಕವು ನಮಗೆ ವಾಗ್ದಾನ ಮಾಡಿದೆ. ಸಾಯುವವನ ಸಾವನ್ನು ನಾನು ಬಯಸುವುದಿಲ್ಲ ಎಂದು ನಮ್ಮ ದೇವರು ಹೇಳುತ್ತಿದ್ದಾರೆ. ಯೇಸುಕ್ರಿಸ್ತನ ಬಳಿ ಮಾನಸಾಂತರ ಹೊಂದಿ ಬರುವ ವ್ಯಕ್ತಿಗೆ ದೇವರು ನೀಡುವ ಮೊದಲ ಆಶೀರ್ವಾದವೇ ರಕ್ಷಣಾನಂದ. 

 

ಡಿ. ಎಲ್. ಮೂಡಿ ಎಂಬ ಸುವಾರ್ತಾಬೋಧಕರು ಪಾಪಕ್ಷಮಾಪಣೆಯನ್ನು ಮತ್ತು ಪರಲೋಕವನ್ನು ಬೋಧಿಸುತ್ತಿದ್ದರು. ಸಭೆಯ ಕೊನೆಯಲ್ಲಿ ಘೋರವಾದ ದುಷ್ಕರ್ಮಿಯೊಬ್ಬ ಡಿ.ಎಲ್. ಮೂಡಿಯವರನ್ನು ತನ್ನ ಪಾಳುಬಿದ್ದ ಮನೆಗೆ ಕರೆದೊಯ್ದನು. ತನ್ನ ದುಷ್ಟತನದಿಂದ ಉಂಟಾದ ಪಾಪಕ್ರಿಯೆಗಳಿಂದಲೇ ತನ್ನ ಮನೆ ಪೂರ್ತಿ ತುಂಬಿ ತುಳುಕುತ್ತಿದೆ ಎಂದು ಮೂಡಿಯವರಿಗೆ ತೋರಿಸಿದನು. ನಿಮ್ಮ ಯೇಸು ಇದನ್ನೆಲ್ಲಾ ನನಗೆ ಕ್ಷಮಿಸುತ್ತಾರಾ? ಅವರು ನನ್ನನ್ನು ಸ್ವೀಕರಿಸುತ್ತಾರಾ ಎಂದು ನೋವಿನ ಧ್ವನಿಯಲ್ಲಿ ಕೇಳಿದನು. ಅದಕ್ಕೆ ಮೂಡಿಯವರು ಶಾಂತವಾಗಿ ಯೇಸು ಖಂಡಿತವಾಗಿಯೂ ನಿನ್ನನ್ನು ಕ್ಷಮಿಸುತ್ತಾರೆ. ನಿನ್ನನ್ನು ತನ್ನ ರಾಜ್ಯದಲ್ಲಿ ಸ್ವೀಕರಿಸುತ್ತಾರೆ ಎಂದು ಹೇಳಿದರು. ಆ ಮನುಷ್ಯನು ತಕ್ಷಣವೇ ಯೇಸುವನ್ನು ಸ್ವೀಕರಿಸಿದನು. ಪರಲೋಕದ ಸಂತೋಷವನ್ನೂ ಅನುಭವಿಸಿದನು. ನಾವು ಸಹ ನಮ್ಮ ಹಳೆಯ ಜೀವನವನ್ನು ಬಿಟ್ಟು ಯೇಸುವಿನ ಕಡೆಗೆ ತಿರುಗಿದಾಗ, ನಿತ್ಯಜೀವವಾಗಿರುವ ಪರಲೋಕವು ನಮಗೆ ಉಂಟು ಎಂದು ನಮ್ಮ ಪ್ರೀತಿಯ ಕರ್ತನು ವಾಗ್ದಾನ ಮಾಡಿದ್ದಾರೆ. ಅದನ್ನು ಸ್ವತಂತ್ರಿಸಿಕೊಳ್ಳೋಣ.

- Bro. ಜೇಕಬ್ ಶಂಕರ್

 

ಪ್ರಾರ್ಥನಾ ಅಂಶ:

ಹಸಿದವರಿಗೆ ಆಹಾರ ನೀಡುವ ಯೋಜನೆಯ ಮೂಲಕ ಇಂದು ಭೇಟಿಯಾಗುವ ಒಂದೊಂದು ಆತ್ಮಗಳಿಗಾಗಿ ಪ್ರಾರ್ಥಿಸಿರಿ.

 

*Whatsapp*

ಈ ಧ್ಯಾನ ಸಂದೇಶವನ್ನು ತಮಿಳು, ಇಂಗ್ಲಿಷ್, ಹಿಂದಿ, ಮಲಯಾಳಂ, ತೆಲುಗು, ಕನ್ನಡ, ಪಂಜಾಬಿ ಮತ್ತು ಒರಿಯಾ ಭಾಷೆಗಳಲ್ಲಿ ವಾಟ್ಸಾಪ್‌ನಲ್ಲಿ ಪಡೆದುಕೊಳ್ಳಲು *+91 94440 11864* ಈ ಸಂಖ್ಯೆಯನ್ನು ಸಂಪರ್ಕಿಸಿ.

 

www.vmm.org.in

ಈಮೈಲ್:- info@vmm.org.in

Android App: https://play.google.com/store/apps/details?id=com.infobells.vmmorgin

        

ವಿಲೇಜ್ ಮಿಷಿನರಿ ಮೊಮೆಂಟ್ ವಿರುಧುನಗರ್, ಇಂಡಿಯಾ-626001

ಪ್ರಾರ್ಥನಾ ಅವಶ್ಯಕತೆಗಾಗಿ :- +91 93455 40482



hacklink satın al