Village Missionary Movement         கிராம மிஷனரி இயக்கம்

ಧೈನಂದಿನ ಧ್ಯಾನ(Kannada) – 02.04.2023
Share:

By Village Missionary Movement

Sunday, 02-Apr-2023

ಧೈನಂದಿನ ಧ್ಯಾನ(Kannada) – 02.04.2023

 

ಯೇಸುವಿನ ಕಲ್ವಾರಿ ಪ್ರೀತಿ

 

“ನಮ್ಮ ದ್ರೋಹಗಳ ನಿಮಿತ್ತ ಆತನಿಗೆ ಗಾಯವಾಯಿತು, ನಮ್ಮ ದುಷ್ಕೃತ್ಯಗಳ ನಿಮಿತ್ತ ಆತನು ಜಜ್ಜಲ್ಪಟ್ಟನು..." - ಯೆಶಾಯ 53:5

 

"ಅಯ್ಯೋ ಒಂದು ತಪ್ಪೂ ಮಾಡದ ನನ್ನ ಮಗುವನ್ನು ಈ ರೀತಿ ರಕ್ತ ಸುರಿಯುವ ಹಾಗೆ ಹೊಡೆದು ಹಿಂಸಿಸುತ್ತಿದ್ದಾರಲ್ಲಾ" ಎಂದು ಹೃದಯ ವೇದನೆಯಿಂದ ಅಳುತ್ತಿದ್ದ ಆ ತಾಯಿಯ ಅಳುವಿನ ಶಬ್ದವನ್ನೂ, ತನ್ನ ಮಗು ಪಡುತ್ತಿರುವ ನೋವನ್ನೂ ಕಂಡು ಜನರ ಹೃದಯ ಒಡೆಯಿತು. ಆ ತಾಯಿಗೆ ಸಾಂತ್ವನ ಕೂಡ ಹೇಳಲಾಗದೆ ಅವರೊಂದಿಗೆ ಸೇರಿ ಅಳುತ್ತಿದ್ದರು. ನನ್ನ ಹದಿಹರೆಯದ ಮಗನನ್ನು ಸುಂದರವಾದ ಬಟ್ಟೆಯಲ್ಲಿ ಸುಂದರವಾಗಿ ಕಾಣಬೇಕೆಂದು ನಾನು ಬಯಸಿದೆ. ಆದರೆ ಹರಿದ ಬಟ್ಟೆಯನ್ನು ಧರಿಸಿ ನಿಂತಿದ್ದಾನಲ್ಲಾ! ಎಲ್ಲರಿಗೂ ಮಾದರಿಯಾಗಿದ್ದ ನನ್ನ ಮಗನಿಗೆ ಚಿನ್ನದ ಕಿರೀಟ ತೊಡಿಸಿ ಮಹಿಮೆಪಡಿಸುತ್ತಾರೆ ಅಂದುಕೊಂಡರೆ, ಈ ರೀತಿ ಮುಳ್ಳಿನ ಕಿರೀಟವನ್ನು ಇಟ್ಟು ಮುಖವೆಲ್ಲಾ ರಕ್ತ ಹರಿಯುತ್ತಿದ್ದರೆ ನನ್ನ ಮಗನನ್ನು ನೋಡಲು ಸಹ ಆಗದ ಸ್ಥಿತಿಯಲ್ಲಿದ್ದಾನಲ್ಲಾ ಎಂದು ಯೋಚಿಸಿ ಇನ್ನೂ ಬಿಕ್ಕಿ ಬಿಕ್ಕಿ ಅಳುತ್ತಿದ್ದರು. ಆ ತಾಯಿಯ ಅವಸ್ಥೆ ನೋಡಿದರೆ ನಮ್ಮ ಹೃದಯಕ್ಕೂ ನೋವಾಗುತ್ತಿದೆ ಅಲ್ಲವೇ?

 

ಆ ಮಗು ಯಾರು? ಏಕೆ ಆ ಮಗುವಿಗೆ ಇಂಥಾ ಘೋರ ಸ್ಥಿತಿ? ಅಂಥಾ ಏನು ತಪ್ಪಾದರೂ ಮಾಡಿದರು ಎಂದು ನೋಡೋಣವಾ? ಆತನೇ ನಮ್ಮ ಕರ್ತನಾದ ಯೇಸು ಕ್ರಿಸ್ತನು. ಅಲ್ಲಿ ಅಳುತ್ತಿದ್ದ ಆ ತಾಯಿಯ ಧ್ವನಿ ಯೇಸುವಿನ ತಾಯಿ ಮರಿಯಳದ್ದೇ. ಏಕೆ ಅವರನ್ನು ಹೀಗೆ ಹಿಂಸಿಸಿದರು ಎಂದು ತಾನೇ ನೀವು ಆಶ್ಚರ್ಯ ಪಡುತ್ತಿದ್ದೀರ. ನಮ್ಮ ಪಾಪಗಳಿಗಾಗಿಯೇ! ಏಕೆಂದರೆ ಆತನು ನಮ್ಮನ್ನು ತುಂಬಾ ಪ್ರೀತಿಸಿದ ಕಾರಣ, ನಮ್ಮ ಮೇಲೆ ಬೀಳಬೇಕಾದ ಪ್ರತಿಯೊಂದು ಹೊಡೆತವನ್ನು ಅವರು ತನ್ನ ಮೇಲೆ ತೆಗೆದುಕೊಂಡರು. ಹೊಡೆತವೆಂದರೆ ಸಾಮಾನ್ಯವಾದ ಬೆಲ್ಟ್ ಅಥವಾ ಕೋಲಿನಿಂದ ಹೊಡೆದಿಲ್ಲ. ಯೇಸಪ್ಪನನ್ನು ಹೊಡೆದ ಚಾಟಿ 7 ಭಾಗಗಳಾಗಿ ವಿಂಗಡಿಸಲಾಗಿತ್ತು. ಆ ಚಾಟಿಯ ತುದಿಯಲ್ಲಿ ಕಬ್ಬಿಣದ ಕೊಕ್ಕೆಗಳನ್ನು ಜೋಡಿಸಲಾಗಿತ್ತು, ಅದರಿದಲೇ ಯೇಸಪ್ಪನನ್ನು 40 ಬಾರಿ ಹೊಡೆದರು ಹಾಗೆ ಅವರನ್ನು ಹೊಡೆಯುವಾಗ, ಅವರ ಬೆನ್ನಿನಲ್ಲಿರುವ ಮಾಂಸವೆಲ್ಲಾ ಕಿತ್ತು ಬರುತ್ತಿತ್ತಂತೆ. ಅವರ ಬೆನ್ನು ಉಳುಮೆ ಮಾಡಿದ ಭೂಮಿಯಂತೆ ಕಾಣುತ್ತಿತ್ತಂತೆ. ಅಷ್ಟೇ ಅಲ್ಲ, ಅವರ ತಲೆಗೆ ಹಾಕಿದ್ದ ಮುಳ್ಳಿನ ಕಿರೀಟವೂ ಸಹ ತಂತಿಯಂತೆ ದೃಢವಾಗಿಯೂ ಚೂಪಾಗಿಯೂ ಇತ್ತಂತೆ. ಅದನ್ನು ಅವರ ತಲೆಯ ಮೇಲೆ ಒತ್ತಿದಾಗ ಅದು ಅವರ ತಲೆಯೊಳಗೆ ಚುಚ್ಚಿ ಕಣ್ಣಿನೊಳಗೆ ಹರಿಯಿತಂತೆ. ಹಾಗಾದರೆ ಎಷ್ಟು ರಕ್ತ ಸುರಿದಿರಬಹುದು! ಯೇಸಪ್ಪ ಹೇಗೆ ಸಂಕಟಪಟ್ಟಿರುತ್ತಾರೆ!

 

ಅದರಂತೆಯೇ ಆ ಮುಳ್ಳಿನ ಕಿರೀಟವನ್ನು ಧರಿಸಿ ಭಾರವಾದ ಶಿಲುಬೆಯನ್ನು ಹೊತ್ತು ಕಪಾಲಸ್ಥಳವೆಂಬ ಪರ್ವತಕ್ಕೆ ಹೋದರು. ದಾರಿಯುದ್ದಕ್ಕೂ ರಕ್ತ. ಅಲ್ಲಿಗೆ ಹೋದ ನಂತರ ಅವರು ಧರಿಸಿದ್ದ ಬಟ್ಟೆಯನ್ನು ಸಹ ತೆಗೆದುಬಿಟ್ಟು ಅವರು ಹೊತ್ತಿದ್ದ ಅದೇ ಶಿಲುಬೆಯಲ್ಲಿ ಅವರನ್ನು ನೇತು ಹಾಕಿ ಮೊಳೆ ಹೊಡೆದರು. ಅವರು ನಮಗಾಗಿ ಶಿಲುಬೆಯ ಮೇಲೆ ಮರಣಹೊಂದಿದರು, ಎರಡೂ ಕೈಗಳು ಮತ್ತು ಪಾದಗಳಿಗೆ ಮೊಳೆ ಹೊಡೆದರು. ಪ್ರೀತಿಯ ಸಹೋದರ ಸಹೋದರಿಯರೇ, ನಿಮಗಾಗಿ ತುಂಬಾ ನೋವು ಮತ್ತು ಸಂಕಟಗಳನ್ನು ಅನುಭವಿಸಿದ ಆ ಯೇಸುವನ್ನು ನೀವು ಅಳಲು ಮತ್ತು ನರಳುವಂತೆ ಮಾಡಲು ಹೊರಟಿದ್ದೀರಾ ಅಥವಾ ಅವರನ್ನು ಸಂತೋಷಪಡಿಸಲು ಹೊರಟಿದ್ದೀರಾ?

- Mrs. ಸಾರಾ ಸುಭಾಷ್

 

*Whatsapp*

ಈ ಧ್ಯಾನ ಸಂದೇಶವನ್ನು ತಮಿಳು, ಇಂಗ್ಲಿಷ್, ಹಿಂದಿ, ಮಲಯಾಳಂ, ತೆಲುಗು, ಕನ್ನಡ, ಪಂಜಾಬಿ ಮತ್ತು ಒರಿಯಾ ಭಾಷೆಗಳಲ್ಲಿ ವಾಟ್ಸಾಪ್‌ನಲ್ಲಿ ಪಡೆದುಕೊಳ್ಳಲು *+91 94440 11864* ಈ ಸಂಖ್ಯೆಯನ್ನು ಸಂಪರ್ಕಿಸಿ.

 

www.vmm.org.in

ಈಮೈಲ್:- info@vmm.org.in

Android App: https://play.google.com/store/apps/details?id=com.infobells.vmmorgin

        

ವಿಲೇಜ್ ಮಿಷಿನರಿ ಮೊಮೆಂಟ್ ವಿರುಧುನಗರ್, ಇಂಡಿಯಾ-626001

ಪ್ರಾರ್ಥನಾ ಅವಶ್ಯಕತೆಗಾಗಿ :- +91 93455 40482



hacklink satın al