Village Missionary Movement         கிராம மிஷனரி இயக்கம்

ಧೈನಂದಿನ ಧ್ಯಾನ(Kannada) – 01.04.2023
Share:

By Village Missionary Movement

Saturday, 01-Apr-2023

ಧೈನಂದಿನ ಧ್ಯಾನ(Kannada) – 01.04.2023

 

ನಾವು ಪ್ರಜ್ಞಾವಂತರೇ?

 

"ಆಗ ಯೇಸು - ತಂದೆಯೇ, ಅವರಿಗೆ ಕ್ಷವಿುಸು; ತಾವು ಏನು ಮಾಡುತ್ತೇವೆಂಬದನ್ನು ಅರಿಯರು ಅಂದನು..." - ಲೂಕ 23:34

 

ಯೇಸು ಶಿಲುಬೆಯ ಮೇಲೆ ನುಡಿದ ಮೊದಲನೆಯ ಮಾತು:

ಯೇಸುಕ್ರಿಸ್ತನನ್ನು ಶಿಲುಬೆಗೇರಿಸಲು ಕಾರಣರಾದವರು ಯಾರು? ಅಥವಾ ಯಾವುದು? ಎಂದು ಯೋಚಿಸಿದರೆ, ಯೆಶಾಯ 53:5 ರಲ್ಲಿ ಅದಕ್ಕೆ ಉತ್ತರವನ್ನು ಕಾಣಬಹುದು "ನಮ್ಮ ದ್ರೋಹಗಳ ನಿಮಿತ್ತ ಆತನಿಗೆ ಗಾಯವಾಯಿತು, ನಮ್ಮ ದುಷ್ಕೃತ್ಯಗಳ ನಿಮಿತ್ತ ಆತನು ಜಜ್ಜಲ್ಪಟ್ಟನು" ಆದ್ದರಿಂದ ನಾನು, ನೀವು ಮತ್ತು ಈ ಜಗತ್ತಿನಲ್ಲಿರುವ ಪ್ರತಿಯೊಬ್ಬರೂ ಕಾರಣರಾಗಿದ್ದೇವೆ. ಅದೇ ಸಮಯದಲ್ಲಿ ಯೇಸು ಕ್ರಿಸ್ತನು ಶಿಲುಬೆಯಲ್ಲಿ ನೇತಾಡುವಾಗ "ತಂದೆಯೇ, ಅವರಿಗೆ ಕ್ಷವಿುಸು; ತಾವು ಏನು ಮಾಡುತ್ತೇವೆಂಬದನ್ನು ಅರಿಯರು" ಎಂದು ಯಾರಿಗಾಗಿ ಮಧ್ಯಸ್ಥಿಕೆ ವಹಿಸಿ ಮಾತನಾಡುತ್ತಿದ್ದಾರೆ?

 

ಆ ಕಾಲದಲ್ಲಿ ಜೀವಿಸಿದ ಯೆಹೂದ್ಯರು, ವಿಶೇಷವಾಗಿ ಫರಿಸಾಯರು ಮತ್ತು ಸದ್ದುಕಾಯರೇ ಯೇಸುಕ್ರಿಸ್ತನನ್ನು ಯೋಜನೆಹಾಕಿ ಕುತಂತ್ರವಾಗಿ ಶಿಲುಬೆಗೇರಿಸಿದರು. ಇಸ್ಕರಿಯೋತ ಯೂದನಿಗೆ ಹಣ ಕೊಟ್ಟಂದಿನಿಂದ ಹಿಡಿದು ಪಿಲಾತನ ಒಪ್ಪಿಗೆಯವರೆಗೂ ಇವರೇ ಕಾರಣರು ಎಂಬುದು ನಮಗೆ ಗೊತ್ತು. ದೇವರನ್ನು ಹುಡುಕುತ್ತಾ, ದೇವರವಾಕ್ಯಗಳನ್ನು ಅಧ್ಯಯನ ಮಾಡುವ ಈ ಫರಿಸಾಯರು ಮತ್ತು ಸದ್ದುಕಾಯರು ಯೇಸುಕ್ರಿಸ್ತನ ವಿಷಯದಲ್ಲಿ ಅವರು ಮಾಡಿದ್ದು ನೂರಕ್ಕೆ ನೂರರಷ್ಟು ಸರಿ ಎಂದು ಭಾವಿಸಿದ್ದರು. ಅದಕ್ಕಾಗಿಯೇ ನಮ್ಮ ಕರ್ತನಾದ ಯೇಸು ಕ್ರಿಸ್ತನು ಅವರನ್ನು ಕ್ಷಮಿಸುವಂತೆ ತಂದೆಗೆ ಪ್ರಾರ್ಥಿಸುತ್ತಾರೆ, "ತಾವು ಏನು ಮಾಡುತ್ತೇವೆಂಬದನ್ನು ಅರಿಯರು" ಎಂದು ನಮ್ಮ ಕರ್ತನಾದ ಯೇಸುಕ್ರಿಸ್ತನು ತಂದೆಯ ಬಳಿ ಇವರನ್ನು ಕ್ಷಮಿಸುವಂತೆ ಪ್ರಾರ್ಥಿಸುತ್ತಾರೆ.

 

ಶಿಲುಬೆಯ ಮೇಲೆ ನಮ್ಮ ಕರ್ತನು ನುಡಿದ ಮೇಲಿನ ಮಾತುಗಳು ನಮಗೆ ತಿಳಿಸುವುದೇನೆಂದರೆ, ನಮ್ಮ ದೃಷ್ಟಿಯಲ್ಲಿ ನೂರಕ್ಕೆ ನೂರರಷ್ಟು ಸರಿ ಎಂದು ನಾವು ಭಾವಿಸುವ ವಿಷಯವೂ ಸಹ ದೇವರ ದೃಷ್ಟಿಯಲ್ಲಿ ನೂರಕ್ಕೆ ನೂರರಷ್ಟು ತಪ್ಪಾಗಿರಬಹುದು. ಇಂತಹ ವಿಷಯಗಳಲ್ಲಿ ದೇವರು ದಯೆಯಿಂದ ನಮ್ಮನ್ನು ಕ್ಷಮಿಸುತ್ತಾರೆ. ಆದಾಗ್ಯೂ, ನಾವು ಹೀಗೆ ಯಾವ ವಿಷಯಗಳಲ್ಲಿ ಪ್ರಜ್ಞಾಹೀನರಾಗಿಯೂ, ಅರಿವಿಲ್ಲದವರಾಗಿಯೂ ಇದ್ದೇವೆಂದು ನಮ್ಮನ್ನು ನಾವೇ ಪರೀಕ್ಷಿಸಿಕೊಳ್ಳಬೇಕು. ಕೀರ್ತನೆ 139: 24 ರಲ್ಲಿ ಪ್ರಾರ್ಥಿಸುವ ಪ್ರಕಾರ ನಾವು ಪ್ರಾರ್ಥಿಸಬೇಕು, ವಿಶೇಷವಾಗಿ ನಾವು ಮಾಡುವ ಯಾವ ಕಾರ್ಯವಾದರೂ ನಮ್ಮ ಜ್ಞಾನದಿಂದಲ್ಲ, ದೇವರ ದೃಷ್ಟಿಗೆ ಸರಿಯಾಗಿದೆಯೇ ಎಂದು ಯೋಚಿಸಿ ಕ್ರಿಯೆ ಮಾಡಬೇಕು. ಇದನ್ನು ತಿಳಿದುಕೊಳ್ಳಲು ಪ್ರಜ್ಞಾಹೃದಯವನ್ನು ಹುಡುಕಬೇಕು. ಮತ್ತಷ್ಟು ಸತ್ಯವೇದದಿಂದಲೂ ಮತ್ತು ಇತರರ ಮೂಲಕವಾಗಿಯೂ ನಮ್ಮ ತಪ್ಪುಗಳನ್ನು ಗುರುತಿಸಿ ಸರಿಪಡಿಸಿಕೊಳ್ಳಲು ಪ್ರಯತ್ನ ಮಾಡಬೇಕು.

- J. ಸಂತೋಷ್

 

ಪ್ರಾರ್ಥನಾ ಅಂಶ:

ಈ ತಿಂಗಳು ಪೂರ್ತಿಯಾಗಿ ನಡೆಯುವಂತಹ ಸೇವೆಗಳಲ್ಲಿ ದೇವರ ಹಸ್ತವು ಜೊತೆಯಿದ್ದು ನಡೆಸುವಂತೆ ಪ್ರಾರ್ಥಿಸಿರಿ.

 

*Whatsapp*

ಈ ಧ್ಯಾನ ಸಂದೇಶವನ್ನು ತಮಿಳು, ಇಂಗ್ಲಿಷ್, ಹಿಂದಿ, ಮಲಯಾಳಂ, ತೆಲುಗು, ಕನ್ನಡ, ಪಂಜಾಬಿ ಮತ್ತು ಒರಿಯಾ ಭಾಷೆಗಳಲ್ಲಿ ವಾಟ್ಸಾಪ್‌ನಲ್ಲಿ ಪಡೆದುಕೊಳ್ಳಲು *+91 94440 11864* ಈ ಸಂಖ್ಯೆಯನ್ನು ಸಂಪರ್ಕಿಸಿ.

 

www.vmm.org.in

ಈಮೈಲ್:- info@vmm.org.in

Android App: https://play.google.com/store/apps/details?id=com.infobells.vmmorgin

        

ವಿಲೇಜ್ ಮಿಷಿನರಿ ಮೊಮೆಂಟ್ ವಿರುಧುನಗರ್, ಇಂಡಿಯಾ-626001

ಪ್ರಾರ್ಥನಾ ಅವಶ್ಯಕತೆಗಾಗಿ :- +91 93455 40482



hacklink satın al meritking meritking giriş meritking güncel giriş perabet perabet perabet giriş deneme bonusu deneme bonusu veren siteler matbet matbet giriş matbet güncel giriş betsat betsat giriş betsat güncel giriş perabet perabet giriş perabet güncel giriş kingroyal kingroyal giriş kingroyal güncel giriş vaycasino vaycasino giriş vaycasino güncel giriş jojobet superbetin matbet jojobet deneme bonusu deneme bonusu veren siteler holiganbet holiganbet giriş Superbetin superbetin giriş superbetin güncel giriş süperbetin aresbet aresbet giriş perabet perabet giriş milanbahis milanbahis giriş milanbahis milanbahis giriş holiganbet holiganbet giriş holiganbet holiganbet giriş jojobet jojobet giriş alobet alobet giriş casibom casibom giriş