By Village Missionary Movement
Friday, 31-Mar-2023ಧೈನಂದಿನ ಧ್ಯಾನ(Kannada) – 31.03.2023
ತೀರ್ಪುಮಾಡಬೇಡಿರಿ
"ತೀರ್ಪುಮಾಡಬೇಡಿರಿ; ಹಾಗೆ ನಿಮಗೂ ತೀರ್ಪಾಗುವದಿಲ್ಲ" - ಮತ್ತಾಯ 7:1
ನಿಮ್ಮಿ ಎಂಬ ಚಿಕ್ಕ ಹುಡುಗಿಯ ಕೈಯಲ್ಲಿ ಎರಡು ಆಪಲ್ ಗಳು ಇದ್ದವು. ಅವಳ ಅಕ್ಕ ನಿಮ್ಮಿಯ ಬಳಿ ನನಗೊಂದು ಆಪಲ್ ಕೊಡು ಎಂದು ಕೇಳಿದಳು. ನಿಮ್ಮಿ ತಕ್ಷಣವೇ ಎರಡೂ ಆಪಲ್ ಗಳನ್ನು ಕಚ್ಚಿ ಎಂಜಿಲು ಮಾಡಿಬಿಟ್ಟಳು. ತಕ್ಷಣ ಅಕ್ಕ, "ನೀನು ಸರಿಯಾದವಳು, ನೀನು ಯಾರಿಗೂ ಏನನ್ನೂ ಕೊಡೋದಿಲ್ಲ ಮತ್ತು ನಿನ್ನನ್ನು ನಂಬಲೂಬಾರದು" ಎಂದು ಹೇಳಿ ಅಲ್ಲಿಂದ ಹೊರಟು ಹೋದಳು. ನಿಮ್ಮಿ ಅಕ್ಕನ ಹಿಂದೆ ಓಡಿ ಬಂದು ಅವಳ ಕೈ ಹಿಡಿದು ಒಂದು ಆಪಲ್ ಅನ್ನು ಕೈಯಲ್ಲಿಟ್ಟು ಇದು ತುಂಬಾ ಸಿಹಿಯಾಗಿದೆ ಇದನ್ನು ಇಟ್ಟುಕೋ ಎಂದಳು. ಅಕ್ಕನಿಗೆ ತಕ್ಷಣ ತನ್ನ ತಪ್ಪಿನ ಅರಿವಾಗಿ ನಿಮ್ಮಿಯನ್ನು ಅಪ್ಪಿಕೊಂಡು ಮುತ್ತಿಟ್ಟಳು.
ಈ ರೀತಿಯಾಗಿ ನಾವು ಅನೇಕ ಬಾರಿ ಒಬ್ಬರ ಕೃತ್ಯಗಳನ್ನು ನೋಡಿದ ಕೂಡಲೇ ತಪ್ಪಾಗಿ ಯೋಚಿಸಿ ಇವರು ಹೀಗೆ ಎಂದು ಅವಸರಪಟ್ಟು ಮಾತನಾಡಿಬಿಡುತ್ತೇವೆ. ಅಥವಾ ನಾವು ತೀರ್ಪು ಮಾಡಿಬಿಡುತ್ತೇವೆ. ಕರ್ತನು ಕೀರ್ತನೆ 50:20 ರಲ್ಲಿ ನೀನು ಕೂತು ಕೊಂಡು ನಿನ್ನ ಸಹೋದರನಿಗೆ ವಿರೋಧವಾಗಿ ನುಡಿ ಯುತ್ತೀ; ನಿನ್ನ ಸ್ವಂತ ಒಡಹುಟ್ಟಿದವನ ಮೇಲೆ ಚಾಡಿ ಹೇಳುತ್ತೀ ಎಂದು ಹೇಳಿ ಖಂಡಿಸುತ್ತಾರೆ. ಫರಿಸಾಯನ ಮನೆಯಲ್ಲಿ ಕೂತಿದ್ದ ಯೇಸುವಿನ ಪಾದಗಳಲ್ಲಿ ಪರಿಮಳ ತೈಲವನ್ನು ಸುರಿದ ಸ್ತ್ರೀಯನ್ನು ಫರಿಸಾಯನು ಇವಳು ಪಾಪಿ ಎಂಬ ದೃಷ್ಟಿಯಲ್ಲಿ ನೋಡಿದನು. ಆದರೆ ಯೇಸು, ಆ ಸ್ತ್ರೀಯನ್ನು ತುಂಬಾ ಪ್ರೀತಿಯುಳ್ಳ ಸ್ತ್ರೀ ಎಂಬ ದೃಷ್ಟಿಯಲ್ಲಿ ನೋಡಿದರು. ಹಾಗಾಗಿ ನಾವು ಇತರರನ್ನು ನೋಡುವ ರೀತಿ ಯೇಸುವಿನಂತಿದ್ದರೆ ಒಳ್ಳೆಯದು. ನಾವು ಇತರರಿಗೆ ತೀರ್ಪು ಮಾಡಲು ಪ್ರಯತ್ನಿಸುವಾಗ ನಮ್ಮ ಕಣ್ಣಿನಲ್ಲಿ ತೊಲೆ ಇದೆ ಎಂಬುದನ್ನು ಗ್ರಹಿಸುವಂತಹ ಹೃದಯವನ್ನು ದೇವರು ನಮಗೆ ನೀಡಲಿ.
ಪ್ರಿಯರೇ! ನಮ್ಮ ಅಭಿಪ್ರಾಯಗಳು ಮತ್ತು ನಮ್ಮ ಮಾತುಗಳ ಬಗ್ಗೆ ನಾವು ಜಾಗರೂಕರಾಗಿರೋಣ. ಇತರರನ್ನು ತಪ್ಪಿತಸ್ಥರು ಅಥವಾ ಒಳ್ಳೆಯವರು ಎಂದು ತೀರ್ಪು ಮಾಡಬೇಡಿರಿ. ದಾವೀದನಂತೆ ಕರ್ತನೇ, ನನ್ನ ಬಾಯಿಗೆ ಕಾವ ಲಿಡು; ನನ್ನ ತುಟಿಗಳ ಕದವನ್ನು ಕಾಯಿ. (ಕೀರ್ತ. 141:3) ಎಂದು ಪ್ರತಿದಿನ ಪ್ರಾರ್ಥಿಸಿ ಶೋಧನೆಯನ್ನು ಜಯಿಸೋಣ. ನಮ್ಮನ್ನು ನಾವೇ ವಿಚಾರಿಸಿ ಕೊಂಡರೆ ನ್ಯಾಯವಿಚಾರಣೆಗೊಳಗಾಗುವದಿಲ್ಲ ಎಂದು 1ಕೊರಿಂಥ.11:31 ರಲ್ಲಿ ಓದುತ್ತೇವೆ. ಇಲ್ಲಿಯವರೆಗೆ ಮತ್ತೊಬ್ಬರನ್ನು ತೀರ್ಪುಮಾಡಿ ಮಾತನಾಡಿದ್ದನ್ನೆಲ್ಲಾ ದೇವರ ಬಳಿ ಹರಕೆಮಾಡಿ ಕ್ಷಮೆ ಕೇಳೋಣ. ಈ ತಪ್ಪನ್ನು ಪುನಃ ಮಾಡದಿರೋಣ. ಬಹು ಜಾಗ್ರತೆಯಿಂದ ನಿನ್ನ ಹೃದಯವನ್ನು ಕಾಪಾಡಿಕೋ; ಜೀವಧಾರೆಗಳು ಅದರೊಳಗಿಂದ ಹೊರಡುವವು. ಹಲ್ಲೇಲೂಯ.
- Mrs. ಅನ್ಬುಜ್ಯೋತಿ ಸ್ಟಾಲಿನ್
ಪ್ರಾರ್ಥನಾ ಅಂಶ:
ಚಲನಚಿತ್ರ ಸೇವೆಗಳ ಮೂಲಕ ಭೇಟಿಯಾದ ಜನರು ಯೇಸುವನ್ನು ತಿಳಿದುಕೊಳ್ಳುವಂತೆ ಪ್ರಾರ್ಥಿಸಿರಿ.
*Whatsapp*
ಈ ಧ್ಯಾನ ಸಂದೇಶವನ್ನು ತಮಿಳು, ಇಂಗ್ಲಿಷ್, ಹಿಂದಿ, ಮಲಯಾಳಂ, ತೆಲುಗು, ಕನ್ನಡ, ಪಂಜಾಬಿ ಮತ್ತು ಒರಿಯಾ ಭಾಷೆಗಳಲ್ಲಿ ವಾಟ್ಸಾಪ್‌ನಲ್ಲಿ ಪಡೆದುಕೊಳ್ಳಲು *+91 94440 11864* ಈ ಸಂಖ್ಯೆಯನ್ನು ಸಂಪರ್ಕಿಸಿ.
www.vmm.org.in
ಈಮೈಲ್:- info@vmm.org.in
Android App: https://play.google.com/store/apps/details?id=com.infobells.vmmorgin
ವಿಲೇಜ್ ಮಿಷಿನರಿ ಮೊಮೆಂಟ್ ವಿರುಧುನಗರ್, ಇಂಡಿಯಾ-626001
ಪ್ರಾರ್ಥನಾ ಅವಶ್ಯಕತೆಗಾಗಿ :- +91 93455 40482