Village Missionary Movement         கிராம மிஷனரி இயக்கம்

ಧೈನಂದಿನ ಧ್ಯಾನ(Kannada) – 30.03.2023
Share:

By Village Missionary Movement

Thursday, 30-Mar-2023

ಧೈನಂದಿನ ಧ್ಯಾನ(Kannada) – 30.03.2023

 

ಒಳ್ಳೆಯದನ್ನು ಕೊಡುತ್ತಾರೆ

 

"ಇದಲ್ಲದೆ ನೀವು ನನ್ನ ಹೆಸರಿನಲ್ಲಿ ಏನೇನು ಬೇಡಿಕೊಳ್ಳುವಿರೋ, ಅದನ್ನು ನೆರವೇರಿಸುವೆನು; ಹೀಗೆ ಮಗನ ಮೂಲಕವಾಗಿ ತಂದೆಗೆ ಮಹಿಮೆ ಉಂಟಾಗುವದು" - ಯೋಹಾನ 14:13

 

ಐದು ವರ್ಷದ ವಿಲಿಯಂ, ತನ್ನ ಜನ್ಮದಿನದಂದು ತನ್ನ ತಾಯಿಯೊಂದಿಗೆ ಅವನ ಹುಟ್ಟಿದ ಹಬ್ಬದ ಪ್ರಯುಕ್ತ ಗೊಂಬೆ ಅಂಗಡಿಗೆ ಹೋಗಿ ತನಗೆ ಇಷ್ಟವಾದ ಆಟದ ಸಾಮಾನುಗಳನ್ನು ಖರೀದಿಸಲು ಹೋದನು. ಅಲ್ಲಿ ಅನೇಕ ಗೊಂಬೆಗಳು ಮತ್ತು ಆಟದ ಸಾಮಾನುಗಳು ತುಂಬಿದ್ದವು. ಬಣ್ಣಬಣ್ಣದ ದೀಪಗಳೊಂದಿಗೆ ವಿವಿಧ ಶಬ್ದಗಳೊಂದಿಗೆ ವೇಗವಾಗಿ ಓಡುವ ಕಾರು ಅಲ್ಲಿತ್ತು. ಅದನ್ನು ಕಂಡ ಅವನು ತನ್ನ ತಾಯಿಯ ಬಳಿಗೆ ಹೋಗಿ ನನಗೆ ಈ ಕಾರು ಬೇಕು ಎಂದು ಪೀಡಿಸಿದ. ಅಮ್ಮನೂ ನೋಡುತ್ತೇನೆ ಎಂದು ಹೇಳಿ ಮನೆಗೆ ಮರಳಿದರು. ಮರುದಿನ ಹುಟ್ಟುಹಬ್ಬದ ಉಡುಗೊರೆಯಾಗಿ ಅವನು ಬಯಸಿದ ಅದೇ ಕಾರನ್ನು ನೀಡಿದರು. ಅದನ್ನು ನೋಡಿ ಅವನಿಗೆ ಸಂತೋಷ ತಡೆಯಲಾಗಲಿಲ್ಲ. ಆಗ ಅವನ ಅಣ್ಣ ಹೇಳಿದ, “ನೀನು ಈ ಕಾರಿಗೇ ಇಷ್ಟೊಂದು ಖುಷಿಯಾಗಿದ್ದೀಯ, ಅಮ್ಮ ನಿನಗೆ ದೊಡ್ಡ ರಿಮೋಟ್ ಕಂಟ್ರೋಲ್ ಕಾರನ್ನು ಖರೀದಿಸಲು ಹೊರಟಿದ್ದಳು. ಆದರೆ ನೀನು ಅದನ್ನು ಖರೀದಿಸಲು ಒತ್ತಾಯಿಸಿದ್ದರಿಂದ ಅವರು ಅದನ್ನು ತೆಗೆದುಕೊಟ್ಟರು” ಎಂದನು. ಅದನ್ನು ಕೇಳಿದಾಗ ವಿಲಿಯಂಗೆ ದುಃಖವಾಯಿತು.

 

ಹೊಸ ಒಡಂಬಡಿಕೆಯಲ್ಲಿ ಯೋಹಾನನು ಬರೆದ ಸುವಾರ್ತೆಯಲ್ಲಿ, ನೀವು ನನ್ನ ಹೆಸರಿನಲ್ಲಿ ಏನೇನು ಬೇಡಿಕೊಳ್ಳುವಿರೋ, ಅದನ್ನು ನೆರವೇರಿಸುವೆನು; ಹೀಗೆ ಮಗನ ಮೂಲಕವಾಗಿ ತಂದೆಗೆ ಮಹಿಮೆ ಉಂಟಾಗುವುದು (ಯೋಹಾನ 14:13). ಎಂದು ಬರೆಯಲಾಗಿದೆ. ನಾವು ನಮ್ಮ ಅಗತ್ಯಗಳಿಗಾಗಿ ಗೋಳಾಡಿ, ಹೋರಾಡಿ ದೇವರ ಬಳಿ ಪಡೆದುಕೊಳ್ಳುತ್ತೇವೆ. ಕರ್ತನು ಸಹ ಅದನ್ನು ಕೊಡುತ್ತಾರೆ. ಆದರೆ ದೇವರು ನಾವು ಕೇಳಿದ್ದಕ್ಕಿಂತ ಉತ್ತಮವಾದದ್ದನ್ನು ನೀಡಲು ಸಿದ್ಧರಿರಬಹುದು. ಆದರೆ ನಮ್ಮ ಪ್ರಾರ್ಥನೆ ಅದನ್ನು ತಡೆದಿರಬಹುದು.

 

ಇದನ್ನು ಓದುತ್ತಿರುವ ಪ್ರೀತಿಯ ಜನರೇ! ನಮ್ಮ ಅಗತ್ಯಗಳನ್ನು ಪೂರೈಸಲು ಮಾತ್ರವೇ ಕೇಳಿಕೊಳ್ಳುತ್ತೇವೆ. ಆದರೆ ನಮ್ಮ ಕರ್ತನು ಇದನ್ನು ಕೊಡುವುದಕ್ಕೆ ಶಕ್ತನಾಗಿದ್ದಾನೆ. ಆದರೆ ಇದರಲ್ಲಿ ಕರ್ತನು ಮಹಿಮೆಹೊಂದುವುದಿಲ್ಲ. ನಾವು ಆತನ ಚಿತ್ತಕ್ಕೆ ಅಧೀನರಾಗಿ "ಕರ್ತನೇ, ನಿನ್ನ ಚಿತ್ತದ ಪ್ರಕಾರ ನಮಗೆ ಕೊಡು" ಎಂದು ಪ್ರಾರ್ಥಿಸಿದಾಗ ಆತನು ನಮಗೆ ಒಳ್ಳೆಯದನ್ನು ನೀಡಲು ಶಕ್ತನಾಗಿದ್ದಾರೆ. ಆದ್ದರಿಂದ, ನಾವು ನಮ್ಮ ಆಸೆಗಳನ್ನು ಮತ್ತು ಇಚ್ಛೆಗಳನ್ನು ಅವರ ಬಳಿ ಬಲವಂತವಾಗಿ ಪಡೆಯದೇ ಅವರು ನಮಗೆ ದಯಪಾಲಿಸುವ ಉಪಕಾರಗಳನ್ನೇ ಪಡೆಯೋಣ. ಅದರ ಮೂಲಕ ತಂದೆಯ ನಾಮವು ಮಹಿಮೆಹೊಂದುತ್ತದೆ!

- Mrs. ಶಕ್ತಿ ಶಂಕರರಾಜ್

 

ಪ್ರಾರ್ಥನಾ ಅಂಶ:

ನಮ್ಮಿಂದ ಸಂಪೂರ್ಣ ಬೈಬಲ್ ಅನ್ನು ಪಡೆದ ಪ್ರತಿಯೊಬ್ಬರೂ ಅದನ್ನು ಕ್ರಮವಾಗಿ ಓದಿ ಸತ್ಯದಲ್ಲಿ ಬೆಳೆಯುವಂತೆ ಪ್ರಾರ್ಥಿಸಿರಿ

 

*Whatsapp*

ಈ ಧ್ಯಾನ ಸಂದೇಶವನ್ನು ತಮಿಳು, ಇಂಗ್ಲಿಷ್, ಹಿಂದಿ, ಮಲಯಾಳಂ, ತೆಲುಗು, ಕನ್ನಡ, ಪಂಜಾಬಿ ಮತ್ತು ಒರಿಯಾ ಭಾಷೆಗಳಲ್ಲಿ ವಾಟ್ಸಾಪ್‌ನಲ್ಲಿ ಪಡೆದುಕೊಳ್ಳಲು *+91 94440 11864* ಈ ಸಂಖ್ಯೆಯನ್ನು ಸಂಪರ್ಕಿಸಿ.

 

www.vmm.org.in

ಈಮೈಲ್:- info@vmm.org.in

Android App: https://play.google.com/store/apps/details?id=com.infobells.vmmorgin

        

ವಿಲೇಜ್ ಮಿಷಿನರಿ ಮೊಮೆಂಟ್ ವಿರುಧುನಗರ್, ಇಂಡಿಯಾ-626001

ಪ್ರಾರ್ಥನಾ ಅವಶ್ಯಕತೆಗಾಗಿ :- +91 93455 40482



hacklink satın al meritking meritking giriş meritking güncel giriş perabet perabet perabet giriş deneme bonusu deneme bonusu veren siteler matbet matbet giriş matbet güncel giriş betsat betsat giriş betsat güncel giriş perabet perabet giriş perabet güncel giriş kingroyal kingroyal giriş kingroyal güncel giriş vaycasino vaycasino giriş vaycasino güncel giriş jojobet superbetin matbet jojobet deneme bonusu deneme bonusu veren siteler holiganbet holiganbet giriş Superbetin superbetin giriş superbetin güncel giriş süperbetin aresbet aresbet giriş perabet perabet giriş milanbahis milanbahis giriş milanbahis milanbahis giriş holiganbet holiganbet giriş holiganbet holiganbet giriş jojobet jojobet giriş alobet alobet giriş casibom casibom giriş