Village Missionary Movement         கிராம மிஷனரி இயக்கம்

ಧೈನಂದಿನ ಧ್ಯಾನ(Kannada) – 29.03.2023
Share:

By Village Missionary Movement

Wednesday, 29-Mar-2023

ಧೈನಂದಿನ ಧ್ಯಾನ(Kannada) – 29.03.2023

 

ದಾಸತ್ವದ ಜೀವನವೇ?

 

"ಆದರೆ ನೀವು ಪಾಪಕ್ಕೆ ದಾಸ ರಾಗಿದ್ದರೂ ನಿಮಗೆ ಒಪ್ಪಿಸಲ್ಪಟ್ಟ ಬೋಧನೆಗೆ ನೀವು ಹೃದಯಪೂರ್ವಕವಾಗಿ ಅಧೀನರಾದದರಿಂದ ದೇವ ರಿಗೆ ಸ್ತೋತ್ರವಾಗಲಿ" - ರೋಮಾ 6:17

 

ನಾನು ಚಿಕ್ಕವನಿದ್ದಾಗ ಓದಿದ ಒಂದು ಕಥೆ ನೆನಪಾಗುತ್ತಿದೆ. ಎರಡು ದೇಶಗಳ ನಡುವೆ ಯುದ್ಧ ನಡೆಯುವಾಗ, ಯುದ್ಧದಲ್ಲಿ ಗೆದ್ದ ರಾಜ, ತನ್ನೊಂದಿಗೆ ಸೋತಹೋದ ರಾಜನನ್ನು ಮತ್ತು ಅವನ ಪ್ರಜೆಗಳನ್ನು, ಅವನ ಆಸ್ತಿ, ಆಡುಗಳು, ಹಸುಗಳು ಮತ್ತು ಬೆಲೆಬಾಳುವ ವಸ್ತುಗಳು, ರಾಜನ ಕಿರೀಟ ಮತ್ತು ಉಂಗುರಗಳು, ಅವನ ಕತ್ತಿ ಮತ್ತು ಅವನ ಎಲ್ಲಾ ಸೈನ್ಯವನ್ನು ತನ್ನ ದಾಸರನ್ನಾಗಿ ಮಾಡಿಕೊಳ್ಳುವುದು ಹವ್ಯಾಸ. ಒಂದು ದೇಶಕ್ಕೆ ದಾಸರನ್ನಾಗಿ ಕರೆದುಕೊಂಡು ಹೋದರೆ, ಅಥವಾ ಮಾರಾಟ ಮಾಡಿದರೆ ಅದರಿಂದ ಹೊರಬರುವುದು ಅಷ್ಟು ಸುಲಭವಲ್ಲ. ಸಾಯುವವರೆಗೂ ದಾಸನಾಗಿ ಬದುಕುವಂತಹ ಸಂದರ್ಭ ಏರ್ಪಡಬಹುದು. ಆದರೆ ದಾಸತ್ವಕ್ಕೆ ಮಾರಲ್ಪಟ್ಟು ದೇವರಿಂದ ಉನ್ನತೀಕರಿಸಲ್ಪಟ್ಟ ಒಬ್ಬ ಮನುಷ್ಯನ ಬಗ್ಗೆ ನೋಡೋಣ!

 

ಸತ್ಯವೇದದ ಪ್ರಕಾರ ದಾಸನಾಗಿ ಮಾರಲ್ಪಟ್ಟು ದೇವರಿಂದ ಉನ್ನತೀಕರಿಸಲ್ಪಟ್ಟ ಮನುಷ್ಯನು ಎಂದ ಕೂಡಲೇ ನಮ್ಮ ನೆನಪಿಗೆ ಬರುವವರು ಯೋಸೇಫನೇ ತಾನೇ. ಯೋಸೇಫನು ದಾಸನಾಗಿ ಹುಟ್ಟಲಿಲ್ಲ, ಆದರೆ ದಾಸತ್ವಕ್ಕೆ ಮಾರಲ್ಪಟ್ಟರು. ಮಾಡದ ತಪ್ಪಿಗೆ ಶಿಕ್ಷೆ ಅನುಭವಿಸಿದರೂ ಆತನ ಬಲಿಷ್ಠ ಹಸ್ತದಲ್ಲಿ ಅಧೀನನಾಗಿ ಇದ್ದಿದ್ದಕ್ಕೆ ಕಾರಣ ಕರ್ತನು ಯೋಸೇಫನೊಂದಿಗಿದ್ದದ್ದೇ. (ಆದಿಕಾಂಡ 39:2) ಇನ್ನೊಂದು ರೀತಿಯಲ್ಲಿ ಹೇಳುವುದಾದರೆ, ಯೋಸೇಫನು ದೇವರಿಗೆ ಸಮೀಪದಲ್ಲಿ ಜೀವಿಸಿದನೆಂದು ನಾವು ಹೇಳಬಹುದು. ಇಂದು ದೇವರೊಂದಿಗೆ ನಮಗಿರುವ ಸಂಬಂಧವೇನು? ಅವನು ಯಶಸ್ವಿಯಾಗಿರುವುದನ್ನು ಅವನ ಯಜಮಾನನು ಕಾಣಲು ಸಾಧ್ಯವಾಯಿತು. ಹದಿಹರೆಯದಲ್ಲಿ ಲೈಂಗಿಕ ಬಯಕೆಗಳಿಂದ ಓಡಿಹೋದ ಯೋಸೇಫನ ಪವಿತ್ರತೆಯು ನಮ್ಮನ್ನು ಆಶ್ಚರ್ಯಗೊಳಿಸುತ್ತಿದೆಯೇ? ಇಂದು ನಮ್ಮ ಜೀವನದಲ್ಲಿ ಪವಿತ್ರವಾಗಿ ಬದುಕಲು ನಾವು ಎಷ್ಟು ಪ್ರಯತ್ನ ಮಾಡುತ್ತಿದ್ದೇವೆ! ತನ್ನೊಂದಿಗೆ ಸೆರೆಯಲ್ಲಿದ್ದ ಭಕ್ಷ್ಯಕಾರನ ಮತ್ತು ಪಾನದಾಯಕನ ಮುಖಗಳು ದುಃಖದಿಂದ ಕೂಡಿರುವುದನ್ನು ಕಂಡು ಅವರನ್ನು ಆಸಕ್ತಿಯಿಂದ ವಿಚಾರಿಸಿದರು. ಹಾಗೆಯೇ, ನಮ್ಮ ಸುತ್ತಲಿರುವವರು ದುಃಖಿಸುತ್ತಿರುವುದನ್ನು ನಾವು ನೋಡಿದಾಗ, ನಾವು ಆಸಕ್ತಿಯಿಂದ ವಿಚಾರಿಸಿ ಸಹಾಯ ಮಾಡುತ್ತೇವೆಯೇ? ನನಗೇ 1008 ಸಮಸ್ಯೆ ಇದೆ, ಇನ್ಯಾರನ್ನೂ ವಿಚಾರಿಸಲು ಸಾಧ್ಯವಿಲ್ಲ ಎಂಬ ಮನಸ್ಥಿತಿಯಲ್ಲಿ ನಾವು ಬದುಕುತ್ತಿದ್ದೇವೆಯೇ? ಯೋಚಿಸೋಣ. ಕನಸುಗಳಿಗೆ ಅರ್ಥ ಹೇಳುವ ಅವರ ಜಾಣ್ಮೆ ಮತ್ತು ಕನಸುಗಳ ಅರ್ಥವು ದೇವರಿಂದ ದೊರಕಬಹುದಲ್ಲವೇ ಎಂದು ದೇವರನ್ನು ಉನ್ನತೀಕರಿಸಿದ ವಿಧಾನವು ಒಂದು ದೇಶದ ರಾಜನನ್ನೇ ಬೆರಗುಗೊಳಿಸಿತು. ಅವನಿಗೆ ಮುದ್ರಿಕೆ, ನಾರುಮಡಿ, ಕೊರಳಿಗೆ ಚಿನ್ನದ ಸರಪಣಿಯನ್ನು ಹಾಕಿಸಿ

ತನಗಿದ್ದ ಎರಡನೆಯ ರಥದಲ್ಲಿ ಕುಳ್ಳಿರಿಸಿ, ಇಡೀ ಐಗುಪ್ತದೇಶಕ್ಕೆ ಸರ್ವಾಧಿಕಾರಿಯನ್ನಾಗಿ ಮಾರ್ಪಡಿಸಿತು.

 

ಇದನ್ನು ಓದುತ್ತಿರುವ ಪ್ರೀತಿಯ ಸ್ನೇಹಿತರೇ! ನೀವು ಯಾವುದೋ ಒಂದು ಕಾರ್ಯದಲ್ಲಿ ದಾಸರಾಗಿ ಅಂಗಲಾಚುತ್ತಿದ್ದೀರಾ! ಯೋಸೇಫನೊಂದಿಗಿದ್ದ ದೇವರು ನಮ್ಮೊಂದಿಗೂ ಇರುತ್ತಾರೆ. ದಾಸತ್ವವನ್ನು ಆಶ್ಚರ್ಯವಾಗಿ ಮಾರ್ಪಡಿಸಲು ಅವರಿಂದ ಸಾಧ್ಯ. ನಂಬೋಣ, ಸಮರ್ಪಿಸೋಣ ದೇವರು ನಮ್ಮನ್ನೂ ಮೇಲಕ್ಕೆತ್ತುತ್ತಾರೆ. ಹಲ್ಲೇಲೂಯ.

- A. ಬ್ಯೂಲಾ

 

ಪ್ರಾರ್ಥನಾ ಅಂಶ:

ಹೊಸದಾಗಿ ಪ್ರಾರಂಭಿಸಿರುವ ಸೇವಾಕ್ಷೇತ್ರಗಳಲ್ಲಿ ಬಳಸಲು 5 ದ್ವಿಚಕ್ರ ವಾಹನಗಳು ಅತ್ಯಗತ್ಯವಾಗಿದೆ ಇದಕ್ಕಾಗಿ ಪ್ರಾರ್ಥಿಸಿರಿ.

 

*Whatsapp*

ಈ ಧ್ಯಾನ ಸಂದೇಶವನ್ನು ತಮಿಳು, ಇಂಗ್ಲಿಷ್, ಹಿಂದಿ, ಮಲಯಾಳಂ, ತೆಲುಗು, ಕನ್ನಡ, ಪಂಜಾಬಿ ಮತ್ತು ಒರಿಯಾ ಭಾಷೆಗಳಲ್ಲಿ ವಾಟ್ಸಾಪ್‌ನಲ್ಲಿ ಪಡೆದುಕೊಳ್ಳಲು *+91 94440 11864* ಈ ಸಂಖ್ಯೆಯನ್ನು ಸಂಪರ್ಕಿಸಿ.

 

www.vmm.org.in

ಈಮೈಲ್:- info@vmm.org.in

Android App: https://play.google.com/store/apps/details?id=com.infobells.vmmorgin

        

ವಿಲೇಜ್ ಮಿಷಿನರಿ ಮೊಮೆಂಟ್ ವಿರುಧುನಗರ್, ಇಂಡಿಯಾ-626001

ಪ್ರಾರ್ಥನಾ ಅವಶ್ಯಕತೆಗಾಗಿ :- +91 93455 40482



hacklink satın al grandpashabet grandpashabet grandpashabet grandpashabet giriş grandpashabet grandpashabet güncel giriş grandpashabet grandpashabet güncel grandpashabet grandpashabet giriş grandpashabet giriş grandpashabet grandpashabet grandpashabet grandpashabet holiganbet giriş jojobet giriş holiganbet güncel giriş holiganbet giriş sahabet onwin casibom giriş casibom casibom giriş casibom matbet matbet giriş casibom casibom giriş amgbahis amgbahis giriş casibom casibom giriş jojobet jojobet giriş perabet perabet giriş holiganbet holiganbet giriş matbet matbet giriş superbetin superbetin giriş supertotobet supertotobet giriş superbetin superbetin giriş supertotobet supertotobet giriş imajbet imajbet giriş perabet perabet giriş coinbar coinbar giriş klasbahis klasbahis giriş ngsbahis ngsbahis giriş matbet matbet giriş mavibet mavibet giriş nakitbahis nakitbahis giriş marsbahis marsbahis giriş interbahis interbahis giriş mariobet mariobet giriş betpas betpas giriş artemisbet artemisbet giriş betsmove betsmove giriş restbet restbet giriş egebet egebet giriş https://yourfilterconnection.com/ grandpashabet