Village Missionary Movement         கிராம மிஷனரி இயக்கம்

ಧೈನಂದಿನ ಧ್ಯಾನ(Kannada) – 28.03.2023
Share:

By Village Missionary Movement

Tuesday, 28-Mar-2023

ಧೈನಂದಿನ ಧ್ಯಾನ(Kannada) – 28.03.2023

 

ಹೆರೋದ್ಯಳು

 

“ಅವರು ಅವನ ತಲೆಯನ್ನು ಪರಾತಿನಲ್ಲಿ ತಂದು ಆ ಹುಡುಗಿಗೆ ಕೊಟ್ಟರು; ಅವಳು ಅದನ್ನು ತನ್ನ ತಾಯಿಯ ಬಳಿಗೆ ತಕ್ಕೊಂಡುಹೋದಳು" - ಮತ್ತಾಯ 14:11

 

ನಾವು ಅನುಸರಿಸಲು ಸಾಧ್ಯವಾಗದ ಮೂಲಮಾದರಿಯೇ ಹೆರೋದ್ಯಳು. ಹೆರೋದ್ಯಳ ಜೀವನವು ಯಾವ ರೀತಿಯಲ್ಲೂ ಅನುಸರಿಸಲು ಸಾಧ್ಯವಾಗದಂತ ಜೀವನವಾಗಿತ್ತು. ತಾಯಿಯಂತೆ ಮಗು ದಾರದಂತೆ ಸೀರೆ ಎಂಬ ಗಾದೆ ಮಾತಿದೆ. ಅದರಂತೆಯೇ ಹೆರೋದ್ಯಳ ಮಗಳು ಅವಳಂತೆಯೇ ಕಠಿಣ ಹೃದಯಿಯಾಗಿ ಕಂಡುಬಂದಳು. ಆಕೆಯ ಹೆಸರು ಸಲೋಮಿ ಎಂದು ಮತ್ತು ಆ ಸಮಯದಲ್ಲಿ ಆಕೆಗೆ ಸುಮಾರು 14 ವರ್ಷ ವಯಸ್ಸಾಗಿತ್ತು ಎಂದು ಇತಿಹಾಸದ ಸಂಶೋಧಕರು ಬ್ಲೆಮಿಸ್ ಜೋಸಫ್ಸ್ ಹೇಳುತ್ತಾರೆ.

 

ಈ ವಯಸ್ಸಿನ ಮಗಳು ತಾಯಿಯ ಸಲಹೆಯನ್ನು ನಿರಾಕರಿಸಿರಬಹುದು. ಇದಕ್ಕೆ ವ್ಯತಿರಿಕ್ತವಾಗಿ, ಹೆರೋದ್ಯಳ ಜೀವನವು ಆ ಹುಡುಗಿಯು ತನ್ನ ತಾಯಿಯಂತೆ ಕ್ರೂರವಾಗಲು ಕಾರಣವಾಯಿತು. ಯಾಕಂದರೆ ಅವಳು ಅಂತಹ ವಾತಾವರಣದಲ್ಲಿ ಬೆಳೆದದ್ದರಿಂದ ಅವಳಿಗೆ ತಪ್ಪು ಎಂದರೇನು ಎಂಬುದೇ ತಿಳಿಯದೇ ಹೋಯಿತು. ಅವಳು ತನ್ನ ನೃತ್ಯಕ್ಕೆ ಬಹುಮಾನವಾಗಿ ತನ್ನ ತಾಯಿಯ ಆಲೋಚನೆಯಂತೆ ಸ್ನಾನಿಕನಾದ ಯೋಹಾನನ ತಲೆಯನ್ನು ಕೇಳಿದಳು. ಪರಾತಿನಲ್ಲಿ ಇಟ್ಟು ತನಗೆ ಕೊಡಲ್ಪಟ್ಟ ಸ್ನಾನಿಕನಾದ ಯೋಹಾನನ ರಕ್ತ ಸೋರುತ್ತಿದ್ದ ತಲೆಯನ್ನು ನಿರ್ಭಯವಾಗಿ ತೆಗೆದುಕೊಂಡು ತಾಯಿಗೆ ಸೇರಿಸಿದಳು. ಒಂದು ವ್ಯಕ್ತಿಯ ಅನೈತಿಕ ಜೀವನವು ಅವರ ಮೇಲೆ ಮಾತ್ರವಲ್ಲದೆ ಅವರ ಸಂತಾನದ ಮೇಲೂ ಪರಿಣಾಮ ಬೀರುತ್ತದೆ. "ಬಹಳವಾಗಿ ಗದರಿಸಿದರೂ ತಗ್ಗದವನು ಏಳದ ಹಾಗೆ ಫಕ್ಕನೆ ಮುರಿದು ಬೀಳುವನು" (ಜ್ಞಾನೋಕ್ತಿ 29:1) ಎಂಬ ಸತ್ಯವೇದದ ವಾಕ್ಯಕ್ಕನುಸಾರವಾಗಿ ಹೆರೋದ್ಯಳ ಅಂತ್ಯದಿನಗಳು ಇದ್ದವು. ಜೋಸಫ್ಸ್ ನ ಅಧ್ಯಯನದ ಪ್ರಕಾರ ದಕ್ಷಿಣ ಫ್ರಾನ್ಸ್‌ನ ವಿಯೆನ್ನಾದ ಪ್ರವಾಸದಲ್ಲಿ ಮರಣಹೊಂದಿದಳು.

 

ನಮ್ಮ ಜೀವನವನ್ನು ಸ್ವಲ್ಪ ನಿಧಾನಿಸಿ ನೋಡೋಣ. ಹೆರೋದ್ಯಳ ಜೀವನದಂತೆ ಧೈರ್ಯ ಮತ್ತು ಸೇಡು ತೀರಿಸಿಕೊಳ್ಳುವ ಪಾಪವಿದೆಯೇ? ಅಥವಾ ಪೌಲನಂತೆ "ನನ್ನನ್ನು ಹಿಂಬಾಲಿಸಿರಿ" ಎಂದು ಧೈರ್ಯವಾಗಿ ಹೇಳಲು ಸಾಧ್ಯವೇ? ನಾವು ಜಗತ್ತಿಗೆ ಬೆಳಕಾಗಿ ಬಾಳದಿದ್ದರೂ, ನಮ್ಮ ಕುಟುಂಬಗಳಿಗೆ ಮತ್ತು ನಮ್ಮ ವಂಶಸ್ಥರಿಗೆ ಬೆಳಕು ಚೆಲ್ಲುವ ದೀಪಗಳಾಗಿ ನಮ್ಮನ್ನು ಪರಿವರ್ತಿಸಿಕೊಳ್ಳೋಣ. ಇತರರು ಅನುಸರಿಸುವ ಜೀವನವನ್ನು ನಡೆಸಲು ಬಯಸೋಣ. ದೇವರು ನಮಗೆ ಸಹಾಯ ಮಾಡುತ್ತಾರೆ.

- Mrs. ಬೇಬಿ ಕಾಮರಾಜ್

 

ಪ್ರಾರ್ಥನಾ ಅಂಶ:

ಆಂಧ್ರ ಪ್ರದೇಶ ಮತ್ತು ಒಡಿಶಾದಲ್ಲಿ ಡೇ ಕೇರ್ ಸೆಂಟರ್ ಸೇವೆಗಳಿಗಾಗಿ ಪ್ರಾರ್ಥಿಸಿರಿ.

 

*Whatsapp*

ಈ ಧ್ಯಾನ ಸಂದೇಶವನ್ನು ತಮಿಳು, ಇಂಗ್ಲಿಷ್, ಹಿಂದಿ, ಮಲಯಾಳಂ, ತೆಲುಗು, ಕನ್ನಡ, ಪಂಜಾಬಿ ಮತ್ತು ಒರಿಯಾ ಭಾಷೆಗಳಲ್ಲಿ ವಾಟ್ಸಾಪ್‌ನಲ್ಲಿ ಪಡೆದುಕೊಳ್ಳಲು *+91 94440 11864* ಈ ಸಂಖ್ಯೆಯನ್ನು ಸಂಪರ್ಕಿಸಿ.

 

www.vmm.org.in

ಈಮೈಲ್:- info@vmm.org.in

Android App: https://play.google.com/store/apps/details?id=com.infobells.vmmorgin

        

ವಿಲೇಜ್ ಮಿಷಿನರಿ ಮೊಮೆಂಟ್ ವಿರುಧುನಗರ್, ಇಂಡಿಯಾ-626001

ಪ್ರಾರ್ಥನಾ ಅವಶ್ಯಕತೆಗಾಗಿ :- +91 93455 40482



hacklink satın al grandpashabet grandpashabet grandpashabet grandpashabet giriş grandpashabet grandpashabet güncel giriş grandpashabet grandpashabet güncel grandpashabet grandpashabet giriş grandpashabet giriş grandpashabet grandpashabet grandpashabet grandpashabet holiganbet giriş holiganbet giriş matbet holiganbet sahabet onwin casibom giriş casibom casibom giriş casibom matbet matbet giriş jojobet superbetin superbetin giriş betsmove betsmove giriş holiganbet holiganbet giriş jasminbet jasminbet giriş kargabet kargabet giriş matbet matbet giriş norabahis norabahis giriş piabellacasino piabellacasino giriş supertotobet supertotobet giriş marsbahis casibom casibom giriş holiganbet holiganbet giriş jojobet jojobet giriş holiganbet casibom çarkbet vizebet vizebet giriş alobet alobet giriş amgbahis amgbahis giriş sweet bonanza grandpashabet grandpashabet jojobet gameofbet