Village Missionary Movement         கிராம மிஷனரி இயக்கம்

ಧೈನಂದಿನ ಧ್ಯಾನ(Kannada) – 27.03.2023
Share:

By Village Missionary Movement

Monday, 27-Mar-2023

ಧೈನಂದಿನ ಧ್ಯಾನ(Kannada) – 27.03.2023

 

ಕ್ರಿಸ್ತನ ಕೈ

 

"ನೀವು ನನ್ನಲ್ಲಿ ನೆಲೆಗೊಂಡಿರ್ರಿ, ನಾನೂ ನಿಮ್ಮಲ್ಲಿ ನೆಲೆಗೊಂಡಿರುವೆನು. ಕೊಂಬೆಯು ಬಳ್ಳಿಯಲ್ಲಿ ನೆಲೆಗೊಂಡಿರದಿದ್ದರೆ ಹೇಗೆ ತನ್ನಷ್ಟಕ್ಕೆ ತಾನೇ ಫಲಕೊಡಲಾರದೋ..." - ಯೋಹಾನ 15: 4

 

ಒಬ್ಬ ಬಡ ಹುಡುಗ ಚಾಕೊಲೇಟ್ ಅಂಗಡಿಯ ಮುಂದೆ ಬಂದು ಹೊರಗೆ ಬರುವ ಜನರನ್ನು ನೋಡುತ್ತಿದ್ದನು. ಅಂಗಡಿಯವರು ಅವನ ಮೇಲೆ ಕರುಣೆ ತೋರಿ "ನಿನಗೇನು ಬೇಕು?" ಎಂದು ಕೇಳಿದರು. ಅವನೋ ಪ್ರತ್ಯುತ್ತರವಾಗಿ ಏನನ್ನೂ ಹೇಳಲಿಲ್ಲ. ಅಂಗಡಿಯವರು ತಕ್ಷಣ ಒಳಗೆ ಹೋಗಿ ಚಾಕಲೇಟ್ ಬಾಟಲಿಯನ್ನು ತಂದು ಅವನ ಕೈಗೆ ಕೊಟ್ಟು ನಿನಗೆ ಬೇಕಾದುದನ್ನು ತೆಗೆದುಕೋ ಎಂದು ಹೇಳಿದರು.

 

ಆದರೆ ಹುಡುಗ ಅಂಗಡಿಯವರನ್ನೇ ನೋಡುತ್ತಾ ನಿಂತಿದ್ದ. "ಯಾಕೆ ಹಾಗೆ ನೋಡುತ್ತಿದ್ದೀಯ, ನಿನಗೆ ಚಾಕಲೇಟ್ ಬೇಡವೇ?" ಎಂದರು. ಹುಡುಗ ಉತ್ತರಿಸಿದ, "ನನ್ನ ಕೈ ಚಿಕ್ಕದಾಗಿದೆ! ನಾನು ತೆಗೆದುಕೊಂಡರೆ, ಸ್ವಲ್ಪ ಬರುತ್ತದೆ. ಆದರೆ ನಿಮ್ಮ ಕೈ ದೊಡ್ಡದು. ನೀವು ಎತ್ತಿಕೊಟ್ಟರೆ ಹೆಚ್ಚು ಸಿಗುತ್ತದೆ. ಆದ್ದರಿಂದ ನೀವೇ ಎತ್ತಿ ಕೊಡಿ'' ಎಂದನಂತೆ.

 

ಹೌದು, ಪ್ರಿಯರೇ! ನಾವು ನಮ್ಮ ಸ್ವಂತ ಪ್ರಯತ್ನದಿಂದ ಸಾಧಿಸುವ ಯಶಸ್ಸಿಗಿಂತ ದೇವರ ಹಸ್ತವನ್ನು ಅವಲಂಬಿಸಿ ಅವರಿಂದ ಪಡೆದುಕೊಳ್ಳುವ ಯಶಸ್ಸು ತುಂಬಾ ದೊಡ್ಡದಾಗಿರುತ್ತದೆ. ನಾವು ಮಾಡುವ ಪ್ರತಿಯೊಂದರಲ್ಲೂ ಕ್ರಿಸ್ತನಿಗೆ ಮೊದಲ ಸ್ಥಾನ ನೀಡಿದರೆ ಗೆಲುವು ನಮ್ಮದೇ!

 

ಸತ್ಯವೇದದಲ್ಲಿಯೂ ಸಹ, ಗಿದ್ಯೋನನೆಂಬವರನ್ನು ನಾವು ನೋಡುವುದಾದರೆ, ಇವರು ನಂಬಿಕೆಯ ಯೋಧರ ಪಟ್ಟಿಯಲ್ಲಿ ಸ್ಥಾನ ಪಡೆದವರು. (ಇಬ್ರಿಯ; 11:32-33). ಇಸ್ರಾಯೇಲನ್ನು 40 ವರ್ಷಗಳ ಕಾಲ ನ್ಯಾಯವಿಚಾರಿಸಿದರು. ಇವರು ಕರ್ತನ ಮಾತಿಗೆ ವಿಧೇಯರಾಗಿ ಮಿದ್ಯಾನ್ಯರಿಗೆ ವಿರುದ್ಧವಾಗಿ, 300 ಜನರೊಂದಿಗೆ ಹೋದರು. ಕೈಯಲ್ಲಿ ಕತ್ತಿಯಿಲ್ಲದೆ ಬೆಂಕಿಕಡ್ಡಿಗಳನ್ನು, ಮಡಿಕೆಗಳನ್ನು ಮತ್ತು ತುತ್ತೂರಿಗಳನ್ನು ಹೊತ್ತ 300 ಜನರೊಂದಿಗೆ ಅವರು ದೊಡ್ಡ ಸೈನ್ಯದ ವಿರುದ್ಧ ನಂಬಿಕೆಯಿಂದ ಹೋರಾಡಿ ಗೆಲುವು ಕಂಡವರು. ಹೌದು, 1 ಕೊರಿಂಥ. 1.27 ರಲ್ಲಿ 

 

ದೇವರು ಬಲಿಷ್ಠರನ್ನು ನಾಚಿಕೆಪಡಿಸುವದಕ್ಕಾಗಿ ಈ ಲೋಕದ ಬಲಹೀನರನ್ನು ಆರಿಸಿಕೊಂಡಿದ್ದಾನೆ ಎಂದು ನೋಡುತ್ತೇವೆ. ಇಂದು ನಾವು ಸಹ ದೇವರ ಕೈಗಳಲ್ಲಿ ನಮ್ಮನ್ನು ಒಪ್ಪಿಸಿಕೊಟ್ಟು ಆತನನ್ನೇ ಒರಗಿಕೊಂಡು ಆತನಿಗೆ ವಿಧೇಯರಾಗಿ ಜೀವಿಸಿದರೆ, ದೇವರು ಆತನ ಚಿತ್ತದಂತೆ ನಮ್ಮನ್ನು ಮೇಲಕ್ಕೆತ್ತುತ್ತಾರೆ. ದೇವರು ಯಾರನ್ನೂ ತಳ್ಳಿಬಿಡುವವರಲ್ಲ. ನಾವೆಲ್ಲರೂ ಆತನ ರಕ್ತದಲ್ಲಿ ತೊಳೆಯಲ್ಪಟ್ಟಿದ್ದೇವೆ. ಆತನ ಮಕ್ಕಳಾದ ನಾವು ಆತನ ತ್ರಾಣವುಳ್ಳ ಹಸ್ತದ ಕೆಳಗೆ ನಮ್ಮನ್ನು ತಗ್ಗಿಸಿಕೊಂಡರೆ ಜಯ ಹೊಂದುತ್ತೇವೆ. ಆಮೆನ್!

- Mrs. ದಿವ್ಯಾ ಅಲೆಕ್ಸ್

 

ಪ್ರಾರ್ಥನಾ ಅಂಶ:

ಫಿಲಿಪ್ ಗಾಸ್ಪೆಲ್ ಸೇವೆಯ ಮೂಲಕ ಹೊಸದಾಗಿ ಭೇಟಿ ಮಾಡುವ ಹಳ್ಳಿಗಳಲ್ಲಿ ದೇವರು ಉಜ್ಜೀವನವನ್ನು ಆಜ್ಞಾಪಿಸುವಂತೆ ಪ್ರಾರ್ಥಿಸಿರಿ.

 

*Whatsapp*

ಈ ಧ್ಯಾನ ಸಂದೇಶವನ್ನು ತಮಿಳು, ಇಂಗ್ಲಿಷ್, ಹಿಂದಿ, ಮಲಯಾಳಂ, ತೆಲುಗು, ಕನ್ನಡ, ಪಂಜಾಬಿ ಮತ್ತು ಒರಿಯಾ ಭಾಷೆಗಳಲ್ಲಿ ವಾಟ್ಸಾಪ್‌ನಲ್ಲಿ ಪಡೆದುಕೊಳ್ಳಲು *+91 94440 11864* ಈ ಸಂಖ್ಯೆಯನ್ನು ಸಂಪರ್ಕಿಸಿ.

 

www.vmm.org.in

ಈಮೈಲ್:- info@vmm.org.in

Android App: https://play.google.com/store/apps/details?id=com.infobells.vmmorgin

        

ವಿಲೇಜ್ ಮಿಷಿನರಿ ಮೊಮೆಂಟ್ ವಿರುಧುನಗರ್, ಇಂಡಿಯಾ-626001

ಪ್ರಾರ್ಥನಾ ಅವಶ್ಯಕತೆಗಾಗಿ :- +91 93455 40482



hacklink satın al grandpashabet grandpashabet grandpashabet grandpashabet giriş grandpashabet grandpashabet güncel giriş grandpashabet grandpashabet güncel grandpashabet grandpashabet giriş grandpashabet giriş grandpashabet grandpashabet grandpashabet grandpashabet holiganbet giriş holiganbet giriş matbet holiganbet sahabet onwin casibom giriş casibom casibom giriş casibom matbet matbet giriş jojobet superbetin superbetin giriş betsmove betsmove giriş holiganbet holiganbet giriş jasminbet jasminbet giriş kargabet kargabet giriş matbet matbet giriş norabahis norabahis giriş piabellacasino piabellacasino giriş supertotobet supertotobet giriş marsbahis casibom casibom giriş holiganbet holiganbet giriş jojobet jojobet giriş holiganbet casibom çarkbet vizebet vizebet giriş alobet alobet giriş amgbahis amgbahis giriş sweet bonanza grandpashabet grandpashabet jojobet gameofbet