Village Missionary Movement         கிராம மிஷனரி இயக்கம்

ಧೈನಂದಿನ ಧ್ಯಾನ(Kannada) – 25.03.2023
Share:

By Village Missionary Movement

Saturday, 25-Mar-2023

ಧೈನಂದಿನ ಧ್ಯಾನ(Kannada) – 25.03.2023

 

ಆಶೀರ್ವಾದಕರವಾದ ಕಣ್ಣೀರು

 

“...ಕರ್ತನು ಹೀಗೆ ಹೇಳುತ್ತಾನೆ, ನಾನು ನಿನ್ನ ಪ್ರಾರ್ಥನೆಯನ್ನು ಕೇಳಿದ್ದೇನೆ, ನಿನ್ನ ಕಣ್ಣೀರನ್ನೂ ನೋಡಿದ್ದೇನೆ;..." - ಯೆಶಾಯ 38:5

 

ಅರಸನಾದ ಹಿಜ್ಕೀಯನು ಇಸ್ರಾಯೇಲ್ ದೇಶವನ್ನು ಆಳುತ್ತಿದ್ದರು. ದೇವರು ಬಯಸಿದಂತೆ ಅವರು ನೀತಿವಂತ ಆಡಳಿತಗಾರನಾಗಿದ್ದನು. ದೇವರಿಗಾಗಿ ಭಕ್ತಿ ಮತ್ತು ವೈರಾಗವುಳ್ಳವರಾಗಿದ್ದರು. ದೇವರು ಅವರನ್ನು ಆಶೀರ್ವದಿಸಿದ್ದರು. ಇದ್ದಕ್ಕಿದ್ದಂತೆ ಅವರಿಗೆ ಒಂದು ಮಾರಣಾಂತಿಕ ಕಾಯಿಲೆ ಬಂತು. ಆದ್ದರಿಂದ ಅವರು ಸಾವಿನಂಚಿಗೆ ಹೋದರು. ಆಗ ದೇವರು ಪ್ರವಾದಿಯಾದ ಯೆಶಾಯನನ್ನು ಕಳುಹಿಸಿ, ಒಂದು ಸಂದೇಶವನ್ನು ಹೇಳಿ ಕಳುಹಿಸುತ್ತಾರೆ. “ನಿನ್ನ ಮನೆಯ ವಿಷಯವಾಗಿ ವ್ಯವಸ್ಥೆ ಮಾಡಿಕೋ; ಯಾಕಂದರೆ ನೀನು ಉಳಿಯುವ ಹಾಗಿಲ್ಲ" ಎಂದು. ಇದನ್ನು ಕೇಳಿದ ಹಿಜ್ಕೀಯನು ಕಣ್ಣೀರಿನಿಂದ ಪ್ರಾರ್ಥಿಸಿದರು. ಅವರು ತನ್ನ ಹೃದಯವನ್ನು ತೆರೆದು ತನ್ನ ಮನಸ್ಸಿನಲ್ಲಿರುವ ಎಲ್ಲಾ ವಿಷಯಗಳನ್ನು ದೇವರ ಬಳಿ ಹೇಳಿದರು. ಅವರು ದೇವರ ಮುಂದೆ ಸತ್ಯವಾಗಿಯೂ ಯಥಾರ್ಥವಾಗಿ ನಡೆದುಕೊಂಡದ್ದನ್ನು, ದೇವರ ದೃಷ್ಟಿಯಲ್ಲಿ ಒಳ್ಳೆಯದನ್ನು ಮಾಡಿದ್ದನ್ನು ಹೇಳಿ ಪ್ರಾರ್ಥಿಸಿದರು. ಹಿಜ್ಕೀಯನ ಕಣ್ಣೀರಿನ ಪ್ರಾರ್ಥನೆಯನ್ನು ಕಂಡು ದೇವರು ಮನಮರುಗಿದರು. ದೇವರು ಪುನಃ ಪ್ರವಾದಿಯಾದ ಯೆಶಾಯನನ್ನು ಕರೆದು ಒಂದು ಶುಭವಾರ್ತೆಯನ್ನು ಹೇಳಲು ಕಳುಹಿಸಿದರು. ಹಿಜ್ಕೀಯನನ್ನು ಗುಣಪಡಿಸಿ, ಅವರಿಗೆ ಆಯುಷ್ಯಕ್ಕೆ ಹದಿನೈದು ವರ್ಷಗಳನ್ನೂ ಕೂಡಿಸಿಕೊಟ್ಟರು. ಅಷ್ಟೇ ಅಲ್ಲ, ನಿನ್ನನ್ನೂ ಈ ನಗರವನ್ನೂ ಅಶ್ಶೂರದ ಅರಸನ ಕೈಯಿಂದ ಬಿಡಿಸುವೆನೆಂದು ವಾಗ್ದಾನ ಮಾಡಿದರು. ಅಂತಿಮವಾಗಿ ಹಿಜ್ಕೀಯನ ಕಣ್ಣೀರು ದೇವರಿಂದ ಒಂದು ಗುರುತನ್ನು ಹೊತ್ತು ತಂದಿತು.

 

ಹೌದು, ಹಿಜ್ಕೀಯನ ಹೃದಯದ ವೇದನೆಯಿಂದ ಹೊರ ಬಂದ ಕಣ್ಣೀರು ಒಂದು ಆಶೀರ್ವಾದಕರವಾದ ಬದಲಾವಣೆಗೆ ಕಾರಣವಾಯಿತು. ಅವರನ್ನು ಮರಣದಿಂದ ವಿಮೋಚಿಸಿತು. ಆಯುಷ್ ದಿನಗಳನ್ನು ಕೂಡಿಸಿಕೊಟ್ಟಿತು. ನಗರದಲ್ಲಿ ಭದ್ರತೆಯನ್ನು ಒದಗಿಸಿತು. ದೇವರಿಂದ ಒಂದು ಗುರುತನ್ನು ಹೊತ್ತು ತಂದಿತು. ಇಂದು ನಾವು ಸಹ ನಮ್ಮ ಜೀವನದಲ್ಲಿ ಬರುವ ಎಲ್ಲಾ ಸಮಸ್ಯೆಗಳನ್ನು ಮತ್ತು ಹೋರಾಟಗಳನ್ನು ದೇವರ ಬಳಿ ಹೇಳಿ ಯಥಾರ್ಥವಾದ ಹೃದಯದಿಂದ ಕಣ್ಣೀರು ಸುರಿಸಿ ಪ್ರಾರ್ಥಿಸುವುದಾದರೆ, ಖಂಡಿತವಾಗಿಯೂ ಆ ಪರಿಸ್ಥಿತಿಗಳನ್ನು ದೇವರು ಬದಲಾಯಿಸುತ್ತಾರೆ. ದುಃಖದ ಕಣ್ಣೀರು ಆಶೀರ್ವಾದದ ಬದಲಾವಣೆಯನ್ನು ತರುತ್ತದೆ.

 

ಹೌದು, ಕಣ್ಣೀರೆಂಬ ಕೀಲಿಯಿಂದ, ಮುಚ್ಚಲ್ಪಟ್ಟ ಯಾವ ಬಾಗಿಲನ್ನಾದರೂ ತೆರೆಯಲು ಸಾಧ್ಯ. ಕಣ್ಣೀರಿನ ಪ್ರಾರ್ಥನೆಯಿಂದ ಮುಚ್ಚಲ್ಪಟ್ಟ ಗರ್ಭಗಳು ಸಹ ಆಶೀರ್ವದಿಸಲ್ಪಡುತ್ತವೆ. ಮರುಭೂಮಿಯಲ್ಲಿ ನೀರಿನ ಒರತೆಗಳು ಉಂಟಾಗುತ್ತದೆ. ಅದಕ್ಕೆ ಹನ್ನ ಮತ್ತು ಹಾಗರಳ ಕಣ್ಣೀರಿನ ಪ್ರಾರ್ಥನೆಯೇ ಉದಾಹರಣೆ. ನಿಮ್ಮ ಕಣ್ಣೀರಿಗೂ ಖಂಡಿತವಾಗಿ ಉತ್ತರ ಉಂಟು. ಅವು ಪರಲೋಕದ ಲೆಕ್ಕದಲ್ಲಿ ತಾನೇ ಇದೆ. ಅದು ಬುದ್ದಲಿಯಲ್ಲಿ ತಾನೇ ಸಂಗ್ರಹಿಸಿಡಲಾಗಿದೆ! ಎಲ್ಲಕ್ಕಿಂತ ಹೆಚ್ಚಾಗಿ ನಮ್ಮ ದೇವರು ಕಣ್ಣೀರು ನೋಡುವವರಲ್ಲವೇ? ಆದ್ದರಿಂದ ನಿಮ್ಮ ಕಣ್ಣೀರಿಗೆ ಆಶೀರ್ವಾದಕರವಾದ ಉತ್ತರ ಉಂಟು. ಕಳವಳಗೊಳ್ಳದಿರಿ!

- K.M. ಪ್ರಸಾದ್

 

ಪ್ರಾರ್ಥನಾ ಅಂಶ:

ನಮ್ಮ ಸೇವಾ ಕ್ಷೇತ್ರಗಳಲ್ಲಿ ನಡೆಯುವಂತಹ ಮನೆ ಪ್ರಾರ್ಥನಾ ಗುಂಪುಗಳಲ್ಲಿ ಅನೇಕರು ಹೊಸದಾಗಿ ಬಂದು ಭಾಗವಹಿಸುವಂತೆ ಪ್ರಾರ್ಥಿಸಿರಿ.

 

*Whatsapp*

ಈ ಧ್ಯಾನ ಸಂದೇಶವನ್ನು ತಮಿಳು, ಇಂಗ್ಲಿಷ್, ಹಿಂದಿ, ಮಲಯಾಳಂ, ತೆಲುಗು, ಕನ್ನಡ, ಪಂಜಾಬಿ ಮತ್ತು ಒರಿಯಾ ಭಾಷೆಗಳಲ್ಲಿ ವಾಟ್ಸಾಪ್‌ನಲ್ಲಿ ಪಡೆದುಕೊಳ್ಳಲು *+91 94440 11864* ಈ ಸಂಖ್ಯೆಯನ್ನು ಸಂಪರ್ಕಿಸಿ.

 

www.vmm.org.in

ಈಮೈಲ್:- info@vmm.org.in

Android App: https://play.google.com/store/apps/details?id=com.infobells.vmmorgin

        

ವಿಲೇಜ್ ಮಿಷಿನರಿ ಮೊಮೆಂಟ್ ವಿರುಧುನಗರ್, ಇಂಡಿಯಾ-626001

ಪ್ರಾರ್ಥನಾ ಅವಶ್ಯಕತೆಗಾಗಿ :- +91 93455 40482



hacklink satın al grandpashabet grandpashabet grandpashabet grandpashabet giriş grandpashabet grandpashabet güncel giriş grandpashabet grandpashabet güncel grandpashabet grandpashabet giriş grandpashabet giriş grandpashabet grandpashabet grandpashabet grandpashabet holiganbet giriş holiganbet giriş matbet holiganbet sahabet onwin casibom giriş casibom casibom giriş casibom matbet matbet giriş jojobet superbetin superbetin giriş betsmove betsmove giriş holiganbet holiganbet giriş jasminbet jasminbet giriş kargabet kargabet giriş matbet matbet giriş norabahis norabahis giriş piabellacasino piabellacasino giriş supertotobet supertotobet giriş marsbahis casibom casibom giriş holiganbet holiganbet giriş jojobet jojobet giriş holiganbet casibom çarkbet vizebet vizebet giriş alobet alobet giriş amgbahis amgbahis giriş sweet bonanza grandpashabet grandpashabet jojobet gameofbet