Village Missionary Movement         கிராம மிஷனரி இயக்கம்

ಧೈನಂದಿನ ಧ್ಯಾನ(Kannada) – 18.03.2023
Share:

By Village Missionary Movement

Saturday, 18-Mar-2023

ಧೈನಂದಿನ ಧ್ಯಾನ(Kannada) – 18.03.2023

 

ಬದಲಾಗದ ಪ್ರೀತಿ

 

“ಕ್ರಿಸ್ತನು ನಮಗೋಸ್ಕರ ತನ್ನ ಪ್ರಾಣವನ್ನು ಕೊಟ್ಟದರಲ್ಲಿಯೇ ಪ್ರೀತಿ ಇಂಥದೆಂದು ನಮಗೆ ತಿಳಿದು ಬಂದದೆ..." - 1 ಯೋಹಾನ. 3:16

 

ಕೆಲವು ವರ್ಷಗಳ ಹಿಂದೆ ಒಂದು ಕೊಲೆಯ ಅಪರಾಧಕ್ಕಾಗಿ ಯೌವ್ವನಸ್ಥನೊಬ್ಬನನ್ನು ಜೈಲಿನಲ್ಲಿ ಬಂಧಿಸಿ ಮರಣದಂಡನೆಗೆ ನೇಮಿಸಲಾಯಿತು. ಆ ಸಮಯದಲ್ಲಿ ದೇವರ ಸೇವಕರೊಬ್ಬರು ಹೋಗಿ ಯೇಸುವಿನ ಪ್ರೀತಿಯನ್ನು ಅವನಿಗೆ ತಿಳಿಸಿದರು. “ಮಗನೇ, ಈ ಲೋಕ ನಿನ್ನನ್ನು ಕೊಲೆಗಾರನೆಂದು ಎಣಿಸಿ ತಿರಸ್ಕರಿಸಿ ತಳ್ಳಬಹುದು. ಮರಣದ ನಂತರ ನಿನ್ನ ಆತ್ಮದ ಪರಿಸ್ಥಿತಿ ಏನು? ನಿನ್ನನ್ನು ನಿರ್ಮಿಸಿದವರು, ನಿನ್ನನ್ನು ಹುಡುಕಿಕೊಂಡು ಬಂದವರು, ಶಿಲುಬೆಯಲ್ಲಿ ನಿನಗಾಗಿ ರಕ್ತವನ್ನು ಸುರಿಸಿದವರೂ ಆಗಿರುವ ಯೇಸು ನಿನ್ನನ್ನು ಪ್ರೀತಿಸುತ್ತಿದ್ದಾರೆ” ಎಂದು ಹೇಳಿದಾಗ ಅವನ ಕಣ್ಣುಗಳಲ್ಲಿ ಕಣ್ಣೀರು ಸುರಿಯಿತು. ಅವನು ಅಂದು ತನ್ನ ಹೃದಯವನ್ನು ಕರ್ತನಿಗೆ ಒಪ್ಪಿಸಿಕೊಟ್ಟನು. ಅವನೊಳಗೆ ದೊಡ್ಡ ಸಮಾಧಾನವುಂಟಾಯಿತು. ಶಿಕ್ಷೆಯನ್ನು ಪೂರೈಸಬೇಕಾದ ದಿನವೂ ಬಂತು. ಕೊನೆಯದಾಗಿ ತಾನು ಕಲಿತುಕೊಂಡಿದ್ದ ಹಾಡನ್ನು ಹಾಡಿಕೊಂಡೇ ಸಂತೋಷವಾಗಿ ತನ್ನ ಶಿಕ್ಷೆಯನ್ನು ಸ್ವೀಕರಿಸಲು ಹೋದನು.

 

‘‘ಯೇಸು ಪ್ರೀತಿಸುತ್ತಿದ್ದಾರೆ, ಯೇಸು ಪ್ರೀತಿಸುತ್ತಿದ್ದಾರೆ

ಯೇಸು ನನ್ನನ್ನೂ ಪ್ರೀತಿಸಲು ನಾನು ಮಾಡಿದ ಪುಣ್ಯವೇನೋ?

ನೀಚನು ನಾನು ನನ್ನನ್ನೇ ಯೇಸು ಪ್ರೀತಿಸುತ್ತಿದ್ದಾರೆ

ಇದನ್ನು ಅರಿತು ಅವರ ಪ್ರೀತಿಯ ಹಸ್ತದೊಳಗೆ ಆತುರವಾಗಿ ಹಾರುತ್ತೇನೆ’’

 

ಸತ್ಯವೇದದ ಮೊದಲ ಪುಟದಿಂದ ಕೊನೆಯ ಪುಟದವರೆಗೆ ದೇವರ ಪ್ರೀತಿಯನ್ನು ನಾವು ಕಾಣಬಹುದು. ಶಿಲುಬೆಯಲ್ಲಿ ಆತನ ತ್ಯಾಗದ ಪ್ರೀತಿಯನ್ನು ನೋಡುತ್ತೇವೆ. ಅದು ಕಲ್ಲಿನಂತಹ ಮನಸ್ಸನ್ನೂ ಕರಗುವಂತೆ ಮಾಡುವ ಕಲ್ವಾರಿಯ ಪ್ರೀತಿ. ಭೂಮಿಯಲ್ಲಿ ಯೇಸುಕ್ರಿಸ್ತನು ಮಾನವನಾಗಿ ಬಂದಾಗ ಎಲ್ಲರನ್ನೂ ಪ್ರೀತಿಸಿದರು. ಕೆಲವರು ಆತನ ಪ್ರೀತಿಗೆ ಪ್ರತಿಕ್ರಿಯಿಸಿದರು. ಲೂಕ 10 ನೇ ಅಧ್ಯಾಯದಲ್ಲಿ ಮಾರ್ಥಳು ಮತ್ತು ಮರಿಯಳು ಅವರನ್ನು ತಮ್ಮ ಮನೆಯಲ್ಲಿ ಸ್ವೀಕರಿಸಿದರು ಎಂದು ಓದುತ್ತೇವೆ. ಲಾಜರನು ಆತನ ಸ್ನೇಹಿತನು ಎಂದು ಕರೆಯಲ್ಪಟ್ಟನು. ಲಾಜರನು ಅನಾರೋಗ್ಯದಿಂದ ಮರಣಿಸಿದಾಗ ‘‘ಯೇಸು ಕಣ್ಣೀರಿಟ್ಟರು’’ (ಯೋಹಾನ 11:35) ಎಂದು ಓದುತ್ತೇವೆ. ಅವರ ಮನೋದುಂಖವು ಅವನನ್ನು ಜೀವಂತವಾಗಿ ಎಬ್ಬಿಸಿತು.

 

ಈ ಲೋಕದಲ್ಲಿ ಹಲವು ವಿಧವಾದ ಪ್ರೀತಿ ಇದೆ. ಕೆಲವು ಪ್ರೀತಿ ಮೋಸವಾದ ಪ್ರೀತಿ, ಸ್ವಾರ್ಥವಾದ ಪ್ರೀತಿ, ಮಾಯಜಾಲವಾದ ಪ್ರೀತಿ. ಆದರೆ ಕಲ್ವಾರಿ ಪ್ರೀತಿಯು ಮಹಾ ತ್ಯಾಗಮಯವಾದ ಪ್ರೀತಿ, ಪರಿಶುದ್ಧವಾದ ಮನಮರಗುವ ಪ್ರೀತಿ, ನಿಜವಾದ ಪ್ರೀತಿ. ಪ್ರೀತಿಯ ದೇವರ ಮಗುವೇ! ಪ್ರೀತಿಯಿಲ್ಲದ ಈ ಲೋಕದಲ್ಲಿ ನೀನು ಅನಾಥೆಯಂತೆ ಇದ್ದೀಯಾ? ಆ ಕಲ್ವಾರಿ ಶಿಲುಬೆಯನ್ನು ದೃಷ್ಟಿಸಿ ನೋಡು. ಅಲ್ಲಿ ಅವರು ತನ್ನ ಅಮೂಲ್ಯವಾದ ರಕ್ತವನ್ನು ಸುರಿಸಿ ನಿನ್ನನ್ನು ಪ್ರೀತಿಸುತ್ತಿದ್ದಾರೆ. ಕಿರಿಮಗನ ಹಾಗೆ ಹಿಂಜಾರಿಹೋದ ಪರಿಸ್ಥಿತಿಯಲ್ಲಿದ್ದರೂ ಇನ್ನೂ ಯೇಸು ನಿನ್ನನ್ನು ಪ್ರೀತಿಸುತ್ತಿದ್ದಾರೆ. ಅವರಿಗೆ ಇಂದು ನಿನ್ನ ಜೀವನವನ್ನು ಸಮರ್ಪಿಸುತ್ತೀಯಾ? ಯೇಸುಕ್ರಿಸ್ತನಾಗಿರುವ ಆತನಲ್ಲಿ ಆತನ ರಕ್ತದ ಮೂಲಕ, ಪಾಪ ಕ್ಷಮಾಪಣೆ ಎಂಬ ವಿಮೋಚನೆಯು ನಮಗೆ ಉಂಟಾಗಿದೆ.

- Mrs. ಜೆಪಕ್ಕನಿ ಶೇಖರ್

 

ಪ್ರಾರ್ಥನಾ ಅಂಶ:

ನಮ್ಮ ಮುಖ್ಯ ಕಚೇರಿಯಲ್ಲಿ ಹಸಿದವರಿಗೆ ಆಹಾರ ನೀಡುವ ಯೋಜನೆಯ ಮೂಲಕ ಆದರಿಸಲ್ಪಡುತ್ತಿರುವ ವ್ಯಕ್ತಿಗಳು ಯೇಸುವಿನ ಪ್ರೀತಿಯನ್ನು ರುಚಿ ನೋಡುವಂತೆ ಪ್ರಾರ್ಥಿಸಿರಿ.

 

*Whatsapp*

ಈ ಧ್ಯಾನ ಸಂದೇಶವನ್ನು ತಮಿಳು, ಇಂಗ್ಲಿಷ್, ಹಿಂದಿ, ಮಲಯಾಳಂ, ತೆಲುಗು, ಕನ್ನಡ, ಪಂಜಾಬಿ ಮತ್ತು ಒರಿಯಾ ಭಾಷೆಗಳಲ್ಲಿ ವಾಟ್ಸಾಪ್‌ನಲ್ಲಿ ಪಡೆದುಕೊಳ್ಳಲು *+91 94440 11864* ಈ ಸಂಖ್ಯೆಯನ್ನು ಸಂಪರ್ಕಿಸಿ.

 

www.vmm.org.in

ಈಮೈಲ್:- info@vmm.org.in

Android App: https://play.google.com/store/apps/details?id=com.infobells.vmmorgin

        

ವಿಲೇಜ್ ಮಿಷಿನರಿ ಮೊಮೆಂಟ್ ವಿರುಧುನಗರ್, ಇಂಡಿಯಾ-626001

ಪ್ರಾರ್ಥನಾ ಅವಶ್ಯಕತೆಗಾಗಿ :- +91 93455 40482



hacklink satın al grandpashabet grandpashabet grandpashabet grandpashabet giriş grandpashabet grandpashabet güncel giriş grandpashabet grandpashabet güncel grandpashabet grandpashabet giriş grandpashabet giriş grandpashabet grandpashabet grandpashabet grandpashabet holiganbet giriş holiganbet giriş matbet holiganbet sahabet onwin casibom giriş casibom casibom giriş casibom matbet matbet giriş jojobet superbetin superbetin giriş betsmove betsmove giriş holiganbet holiganbet giriş jasminbet jasminbet giriş kargabet kargabet giriş matbet matbet giriş norabahis norabahis giriş piabellacasino piabellacasino giriş supertotobet supertotobet giriş marsbahis casibom casibom giriş holiganbet holiganbet giriş jojobet jojobet giriş holiganbet casibom çarkbet vizebet vizebet giriş alobet alobet giriş amgbahis amgbahis giriş sweet bonanza grandpashabet grandpashabet jojobet gameofbet