Village Missionary Movement         கிராம மிஷனரி இயக்கம்

ಧೈನಂದಿನ ಧ್ಯಾನ(Kannada) – 17.03.2023
Share:

By Village Missionary Movement

Friday, 17-Mar-2023

ಧೈನಂದಿನ ಧ್ಯಾನ(Kannada) – 17.03.2023

 

ಹಿಂಬಾಲಿಸು

 

‘’...ಪ್ರತಿಯೊಬ್ಬನು ನೂರರಷ್ಟು ಹೊಂದಿಕೊಳ್ಳುವನು; ಮತ್ತು ನಿತ್ಯಜೀವವನ್ನು ಬಾಧ್ಯ ವಾಗಿ ಹೊಂದುವನು."

- ಮತ್ತಾಯ 19:29

 

ಒಂದು ತರಗತಿಯಲ್ಲಿ ಒಬ್ಬ ವಿದ್ಯಾರ್ಥಿ ಯಾವಾಗಲೂ ಹೆಮ್ಮೆಯಿಂದ ತನ್ನಷ್ಟಕ್ಕೆ ತಾನೇ ನನಗೆ ಎಲ್ಲಾ ಗೊತ್ತು ಎಂದು, ಶಿಕ್ಷಕರನ್ನು ಕೊರತೆ ಹೇಳುತ್ತಲೇ ಇರುತ್ತಾನೆ. ಒಮ್ಮೆ ಅವನನ್ನು ನೋಡಿ ಶಿಕ್ಷಕ ಕಪ್ಪುಹಲಗೆಯಲ್ಲಿ 1000 ಎಂದು ಬರೆದು ಓದು ಎಂದರು. ಅವನೋ ಎದ್ದು ಒಂದು ಸಾವಿರ ಎಂದನು. ಮತ್ತೆ ಇನ್ನೊಂದು ಸೊನ್ನೆಯನ್ನು ಸೇರಿಸಿ ಇದನ್ನು ಓದು ಎಂದರು. ಅವನು ಹತ್ತು ಸಾವಿರ ಎಂದನು. ಮತ್ತೆ ಇನ್ನೊಂದು ಸೊನ್ನೆಯನ್ನು ಒಂದರ ಹಿಂದೆ ಸೇರಿಸಿ ಈಗ ಓದು ಎಂದರು ಅವನು ಹತ್ತು ಸಾವಿರವೇ ಎಂದನು. ತಕ್ಷಣ ಶಿಕ್ಷಕ, “ಕಡಿಮೆ ಮೌಲ್ಯದ ಅಂಕೆ ಮೌಲ್ಯಯುತವಾದ ಎಣಿಕೆಗೆ ನಂತರ ನಿರಂತರವಾಗಿ ಬರುತ್ತಿರುವಾಗ ಅದರ ಮೌಲ್ಯ ಹೆಚ್ಚಾಗುತ್ತದೆ. ಅದೇ ಅಂಕೆ ಮುಂದೆ ಹೋಗಲು ಪ್ರಯತ್ನಿಸುವಾಗ ಅದರ ಮೌಲ್ಯವು ಕಡಿಮೆಯಾಗುತ್ತದೆ. ಇದರಂತೆಯೇ ಶಿಕ್ಷಕ ಮತ್ತು ವಿದ್ಯಾರ್ಥಿಗಳ ಸಂಬಂಧ’’ ಎಂದರು.

 

ಇದರಂತೆ ಮಣ್ಣಾಗಿರುವ ನಾವು ಕೂಡ ಸರ್ವಶಕ್ತನನ್ನು ಹಿಂಬಾಲಿಸುತ್ತಾ ನಿರಂತರವಾಗಿ ಸಾಗುವಾಗ ನಮ್ಮ ಮೌಲ್ಯ ಹೆಚ್ಚಾಗುತ್ತದೆ. ಪೇತ್ರನು ನಿಮ್ಮನ್ನು ಹಿಂಬಾಲಿಸಿದೆವಲ್ಲಾ ನಮಗೆ ಏನು ದೊರೆಯುತ್ತದೆ ಎಂದು ಕೇಳಿದಾಗ ನೀವೂ ಸಹ ನನ್ನಂತೆಯೇ ಸಿಂಹಾಸನದ ಮೇಲೆ ಕುಳಿತು ನ್ಯಾಯತೀರಿಸುತ್ತೀರ ಎನ್ನುವುದರ ಜೊತೆಗೆ ನೂರರಷ್ಟು ಫಲವನ್ನು ಪಡೆಯುತ್ತೀರ ಎಂದರು. ಇನ್ನಷ್ಟು ಅವರನ್ನು ಹಿಂಬಾಲಿಸುವಾಗ ನಿತ್ಯಜೀವವನ್ನು ಸಹ ಸ್ವತಂತ್ರಿಸಿಕೊಳ್ಳಬಹುದು ಎಂದರು. ಆದರೆ ಲೂಷಿಫರ್ ಕ್ರಿಸ್ತನಿಗಿಂತ ಮುಂದೆ ಹೋಗಬೇಕೆಂದು ನೆನೆಸಿದನು. ಪರಲೋಕದಿಂದ ತಳ್ಳಲ್ಪಟ್ಟನು. ಇಂದು ನಾವು ಅವರನ್ನು ಹಿಂಬಾಲಿಸುವಾಗ ನಿತ್ಯಜೀವವನ್ನು ಸ್ವತಂತ್ರಿಸಿಕೊಳ್ಳುವದರೊಂದಿಗೆ ನೂರರಷ್ಟು ಫಲವನ್ನು ಸಹ ಪಡೆಯುತ್ತೇವೆ. ಲೋಕಕ್ಕೆ ಬೆಳಕಾಗಿರುವ ಅವರನ್ನು ಹಿಂಬಾಲಿಸುವಾಗ ಸೂರ್ಯನಿಂದ ಬೆಳಕನ್ನು ಪಡೆದು ಚಂದ್ರನು ಬೆಳಕನ್ನು ಕೊಡುವ ಹಾಗೆ ನಾವು ಕೂಡ ಮನುಷ್ಯರ ಮುಂದೆ ಬೆಳಕು ಕೊಡುವವರಾಗಿರೋಣ. ನಮ್ಮ ಬೆಳಕಿನ ಕಡೆಗೆ ಜನಾಂಗಗಳು, ನಮ್ಮ ಬೆಳಕಿನ ಕಡೆಗೆ ರಾಜರುಗಳು ನಡೆದು ಬರುತ್ತಾರೆ. ಅದಕ್ಕೆ ನಾವು ಮಾಡಬೇಕಾಗಿರುವುದು ಒಂದೇ ಒಂದು. ಕ್ರಿಸ್ತನನ್ನು ಮುಂದಿಟ್ಟು ಅವರ ಹಿಂದೆ ನಾವು ನಡೆಯಬೇಕು. ನನಗೆ ಎಲ್ಲಾ ಗೊತ್ತು ಎಂದು ಹೇಳಿ ತಿಳುವಳಿಕೆ ಎಂಬ ಕ್ರಿಸ್ತನನ್ನು ಹಿಂದೆ ಇಟ್ಟು ನಾವು ಮುನ್ನಡೆಯಬಾರದು.

 

ಪ್ರಿಯರಾದವರೇ, ನಿಮ್ಮ ಜೀವನ ಹೇಗಿದೆ? ಬೆಳಕಾಗಿ, ಮೌಲ್ಯಯುತವಾಗಿ ಇದೆಯೇ? ಕಾರಣ, ಕ್ರಿಸ್ತನು ನಿಮ್ಮನ್ನು ತನ್ನ ಹತ್ತಿರ ಇಟ್ಟುಕೊಂಡಿರುವುದರಿಂದಲೇ! ನಿಮ್ಮ ಬಲಪಾರ್ಶ್ವದಲ್ಲಿ ದೇವರು ಇರುವುದರಿಂದಲೇ ಎಂಬುದನ್ನು ಮರೆಯಬೇಡಿರಿ! ಕಾರ್ಗತ್ತಲಾದ ಮೌಲ್ಯವಿಲ್ಲದ ಜೀವನ ನಿಮ್ಮದಾಗಿದೆಯಾ? ಇಂದೇ ರಕ್ಷಕನಾದ ಯೇಸುವನ್ನು ಮೊದಲಿನಲ್ಲಿಟ್ಟು ಹಿಂದೆ ಹೋಗಿರಿ, ನಿಮ್ಮ ಜೀವನವು ಬೆಳಕಾಗುತ್ತದೆ. ನೂರರಷ್ಟು ಫಲಗಳೊಂದಿಗೆ ನಿತ್ಯಜೀವವನ್ನೂ ಪಡೆಯುತ್ತೀರ.

- Mrs. ಅನ್ಬುಜ್ಯೋತಿ ಸ್ಟಾಲಿನ್

 

ಪ್ರಾರ್ಥನಾ ಅಂಶ:

ವಿದ್ಯಾರ್ಥಿಗಳ ಮಧ್ಯದಲ್ಲಿ ನಡೆಯುವ ‘‘ಸ್ಕೂಲ್ ಮಿಷನ್’’ ಸೇವೆಯ ಮೂಲಕ ಅನೇಕ ಚಿಕ್ಕಮಕ್ಕಳು ದೇವರ ಪ್ರೀತಿಯನ್ನು ರುಚಿನೋಡುವಂತೆ ಪ್ರಾರ್ಥಿಸಿರಿ.

 

*Whatsapp*

ಈ ಧ್ಯಾನ ಸಂದೇಶವನ್ನು ತಮಿಳು, ಇಂಗ್ಲಿಷ್, ಹಿಂದಿ, ಮಲಯಾಳಂ, ತೆಲುಗು, ಕನ್ನಡ, ಪಂಜಾಬಿ ಮತ್ತು ಒರಿಯಾ ಭಾಷೆಗಳಲ್ಲಿ ವಾಟ್ಸಾಪ್‌ನಲ್ಲಿ ಪಡೆದುಕೊಳ್ಳಲು *+91 94440 11864* ಈ ಸಂಖ್ಯೆಯನ್ನು ಸಂಪರ್ಕಿಸಿ.

 

www.vmm.org.in

ಈಮೈಲ್:- info@vmm.org.in

Android App: https://play.google.com/store/apps/details?id=com.infobells.vmmorgin

        

ವಿಲೇಜ್ ಮಿಷಿನರಿ ಮೊಮೆಂಟ್ ವಿರುಧುನಗರ್, ಇಂಡಿಯಾ-626001

ಪ್ರಾರ್ಥನಾ ಅವಶ್ಯಕತೆಗಾಗಿ :- +91 93455 40482



hacklink satın al meritking meritking giriş meritking güncel giriş perabet perabet perabet giriş deneme bonusu deneme bonusu veren siteler Vdcasino vaycasino vaycasino giriş vaycasino güncel giriş matbet matbet giriş matbet güncel giriş matbet matbet giriş matbet güncel giriş betsmove betsmove giriş betsmove güncel giriş betsat betsat giriş betsat güncel giriş perabet perabet giriş perabet güncel giriş dumanbet giriş dumanbet dumanbet güncel giriş kingroyal kingroyal giriş kingroyal güncel giriş marsbahis marsbahis giriş marsbahis güncel giriş kingroyal kingroyal giriş kingroyal güncel giriş meritking meritking giriş meritking güncel giriş meritbet meritbet giriş meritbet güncel giriş nakitbahis nakitbahis giriş nakitbahis güncel giriş dumanbet dumanbet giriş dumanbet güncel giriş Holiganbet holiganbet giriş holiganbet güncel giriş bahissenin bahissenin giriş bahissenin güncel giriş bayconticasino bayconticasino giriş bayconticasino güncel giriş imajbet imajbet giriş imajbet güncel giriş prizmabet prizmabet giriş pashagaming pashagaming giriş pashagaming güncel giriş interbahis interbahis giriş interbahis güncel giriş jojobet superbetin matbet jojobet marsbahis marsbahis güncel marsbahis güncel giriş deneme bonusu deneme bonusu veren siteler bahsegel vaycasino vaycasino giriş perabet perabet giriş holiganbet holiganbet giriş holiganbet holiganbet giriş holiganbet holiganbet giriş jojobet jojobet giriş Superbetin superbetin giriş superbetin güncel giriş süperbetin