Village Missionary Movement         கிராம மிஷனரி இயக்கம்

ಧೈನಂದಿನ ಧ್ಯಾನ(Kannada) – 15.03.2023
Share:

By Village Missionary Movement

Wednesday, 15-Mar-2023

ಧೈನಂದಿನ ಧ್ಯಾನ(Kannada) – 15.03.2023

 

ಕ್ರಿಸ್ತನ ಕೈಗಳು

 

“ಇಗೋ, ನನ್ನ ಅಂಗೈಗಳಲ್ಲಿ ನಿನ್ನನ್ನು ಚಿತ್ರಿಸಿದ್ದೇನೆ; ನಿನ್ನ ಪೌಳಿಗೋಡೆಗಳು ಸದಾ ನನ್ನ ಕಣ್ಣೆದುರಿನಲ್ಲಿವೆ." - ಯೆಶಾಯ 49:16

 

ಕೈಗಳು ಮೆದುಳು ಹಾಕುವ ಆಜ್ಞೆಗಳನ್ನೆಲ್ಲಾ ನಿರ್ವಹಿಸುತ್ತದೆ! ಗೆಳೆಯರೊಂದಿಗೆ ಹಸ್ತಲಾಘವ ಮಾಡಿ ಸಂತಸ ವ್ಯಕ್ತಪಡಿಸುತ್ತದೆ, ಪ್ರೀತಿಯಿಂದ ಕೈ ಚಾಚಿ ಅಪ್ಪಿಕೊಳ್ಳುವುದು, ಬರೆಯುವುದು ಹೀಗೆ ಎಲ್ಲಾ ಕೆಲಸಗಳನ್ನೂ ಮಾಡುತ್ತದೆ. ಎಲ್ಲವನ್ನು ಕೈಗಳು ಬಿಡುವಿಲ್ಲದೆ ಮಾಡುತ್ತಿವೆ. ಕೈಗಳು ಶುದ್ಧವಾಗಿರಬೇಕೆಂಬುದೇ ಸತ್ಯವೇದದ ಸಲಹೆ. ದಾವೀದನು ಉಲ್ಲೇಖಿಸುವಾಗ, “ಯೆಹೋವನ ಪರ್ವತವನ್ನು ಹತ್ತತಕ್ಕವನು ಯಾರು? ಆತನ ಪವಿತ್ರಸ್ಥಾನದಲ್ಲಿ ನಿಲ್ಲುವದಕ್ಕೆ ಎಂಥವನು ಯೋಗ್ಯನು? ಯಾವನು ಅಯೋಗ್ಯಕಾರ್ಯಗಳಲ್ಲಿ ಮನಸ್ಸಿಡದೆ ಮೋಸಪ್ರಮಾಣಮಾಡದೆ ಶುದ್ಧಹಸ್ತವೂ ನಿರ್ಮಲಮನಸ್ಸೂ ಉಳ್ಳವನೇ" ಎಂದು ಹೇಳುತ್ತಾರೆ.

 

ದೇವರ ಮಗುವೇ ಯೇಸುವಿನ ಕೈಗಳನ್ನು ಸ್ವಲ್ಪ ಧ್ಯಾನಿಸುತ್ತೀಯ! ಅವರ ಕೈಗಳು ಮೃದುವಾದ ಕೈಗಳು. ಆದರೂ ಕಠಿಣ ಪರಿಶ್ರಮಕ್ಕೆ ಹೆದರದ ಕೈಗಳು. ಸಂತೋಷದಿಂದ ಮರಗೆಲಸ ಮಾಡಿದ ಕೈಗಳು. ನಮ್ಮ ಕೆಲಸವನ್ನು ಸತ್ಯ ಮತ್ತು ಸಮಗ್ರತೆಯಿಂದ ಮಾಡಲು ನಮ್ಮನ್ನು ಪ್ರೋತ್ಸಾಹಿಸುವ ಕೈಗಳು. ಯೇಸುವಿನ ತೋಳುಗಳು ಚಿಕ್ಕ ಮಕ್ಕಳನ್ನು ಅಪ್ಪಿಕೊಂಡ ತೋಳುಗಳಾಗಿವೆ. ಯಾಯೀರನ ಮಗಳ ಕೈ ಹಿಡಿದು; ಅಮ್ಮಣ್ಣೀ, ಎದ್ದೇಳು ಎಂದು ಹೇಳಿ ಜೀವ ನೀಡಿದ ಕೈಗಳು, ಪೇತ್ರನ ಅತ್ತೆಯನ್ನು, ಕುಷ್ಠರೋಗಿಗಳನ್ನು ಮತ್ತು ಅಸಂಖ್ಯಾತ ರೋಗಿಗಳನ್ನು ಗುಣಪಡಿಸಿದ ದೈವೀಕ ಶಕ್ತಿಯುಳ್ಳ ಕೈಗಳು. ಹೌದು! ಯೇಸುವಿನ ಕೈಯಿಂದ ಹೊರಡುವ ಸಹಾನುಭೂತಿ ಎಷ್ಟು ಆಳವಾಗಿದೆ. ಎಷ್ಟು ಇಂಪಾಗಿದೆ.

 

ಕಲ್ವಾರಿಯ ಮಾರ್ಗದಲ್ಲಿ ಯೇಸುವಿನ ಕೈಗಳು ಶಿಲುಬೆಯನ್ನು ಹೊರಬೇಕಾಯಿತು. ಅವರ ಕೈಗಳಿಂದ ಆ ಭಾರವನ್ನು ತಡೆದುಕೊಳ್ಳಲಾಗಲಿಲ್ಲ. ಅವರು ತನ್ನ ಬಲವಿರುವವರೆಗೂ ಭಾರವಾದ ಶಿಲುಬೆಯನ್ನು ತನ್ನ ಕೈಗಳಲ್ಲಿ ಹೊತ್ತುಕೊಂಡು ಯೆರೂಸಲೇಮಿನ ಬೀದಿಗಳಲ್ಲಿ ಎಡವಿ ಎಡವಿ ನಡೆದರು. ಅಷ್ಟು ಮಾತ್ರವೇನಾ? ಅವರ ಕೈಗಳನ್ನು ಶಿಲುಬೆಯ ಮರಕ್ಕೆ ಸೇರಿಸಿ ಬಹು ಕಠಿಣವಾದ ಮೊಳೆಗಳಿಂದ ಹೊಡೆದರು. ಒಂದು ಮುಳ್ಳು ನಮ್ಮ ಕೈಗೆ ಚುಚ್ಚಿಕೊಂಡರೇನೆ ನಾವು ಎಷ್ಟು ಸಂಕಟಪಡುತ್ತೇವೆ. ಅವು ಕೈಗಳೊಳಗೆ ಇಳಿಯುವಾಗ ತಾಳ್ಮೆಯಿಂದ ಸಹಿಸಿಕೊಂಡರು. ಕೈಯಲ್ಲಿರುವ ನರಗಳೆಲ್ಲ ವಿಪರೀತ ನೋವಿನಿಂದ ಸಹಿಸಲಾಗದೆ ತುಂಬಾ ನೋವನ್ನನುಭವಿಸಿರಬಹುದು. ನೋವು ತಲೆಯವರೆಗೂ ತಲುಪಿ ಇಡೀ ಮೆದುಳು ಸಂಕಟಪಟ್ಟಿರಬಹುದು. ಯಾಕೆ ಅವರು ಕೈಗೆ ಮೊಳೆ ಹೊಡೆಯಲು ಒಪ್ಪಿಸಿಕೊಟ್ಟರು?

 

ಪ್ರವಾದಿಯಾದ ಯೆಶಾಯನ ಮೂಲಕ ಇಗೋ, ನಿನ್ನನ್ನು ನನ್ನ ಅಂಗೈಗಳಲ್ಲಿ ಚಿತ್ರಿಸಿದ್ದೇನೆ ಎಂದು ಹೇಳಿದರು. ಓ ದೇವರ ಮಗುವೇ! ನಿಮ್ಮ ಭವಿಷ್ಯ ಅವರ ಕೈಯಲ್ಲಿದೆ. ನಿನ್ನನ್ನು ಯಾವಾಗಲೂ ಗಮನಿಸುತ್ತಿರುವುದಕ್ಕಾಗಿ ನಿನ್ನನ್ನು ತನ್ನ ಕೈಗಳಲ್ಲಿ ಚಿತ್ರಿಸಿಕೊಂಡಿದ್ದಾರೆ. ಹೌದು! ದೇವರ ಪ್ರೀತಿ ಎಷ್ಟು ಉನ್ನತವಾಗಿದೆ!

- Mrs. ಗ್ರೇಸ್ ಜೀವಮಣಿ

 

ಪ್ರಾರ್ಥನಾ ಅಂಶ:

ಗುಣಪಡಿಸುವ ಆರಾಧನೆಯಲ್ಲಿ ಭಾಗವಹಿಸುವ ವ್ಯಕ್ತಿಗಳ ಪ್ರಾಣ, ಆತ್ಮ, ಶರೀರದಲ್ಲಿ ಬಿಡುಗಡೆ ಉಂಟಾಗುವಂತೆ ಪ್ರಾರ್ಥಿಸಿರಿ.

 

*Whatsapp*

ಈ ಧ್ಯಾನ ಸಂದೇಶವನ್ನು ತಮಿಳು, ಇಂಗ್ಲಿಷ್, ಹಿಂದಿ, ಮಲಯಾಳಂ, ತೆಲುಗು, ಕನ್ನಡ, ಪಂಜಾಬಿ ಮತ್ತು ಒರಿಯಾ ಭಾಷೆಗಳಲ್ಲಿ ವಾಟ್ಸಾಪ್‌ನಲ್ಲಿ ಪಡೆದುಕೊಳ್ಳಲು *+91 94440 11864* ಈ ಸಂಖ್ಯೆಯನ್ನು ಸಂಪರ್ಕಿಸಿ.

 

www.vmm.org.in

ಈಮೈಲ್:- info@vmm.org.in

Android App: https://play.google.com/store/apps/details?id=com.infobells.vmmorgin

        

ವಿಲೇಜ್ ಮಿಷಿನರಿ ಮೊಮೆಂಟ್ ವಿರುಧುನಗರ್, ಇಂಡಿಯಾ-626001

ಪ್ರಾರ್ಥನಾ ಅವಶ್ಯಕತೆಗಾಗಿ :- +91 93455 40482



hacklink satın al grandpashabet grandpashabet grandpashabet grandpashabet giriş grandpashabet grandpashabet güncel giriş grandpashabet grandpashabet güncel grandpashabet grandpashabet giriş grandpashabet giriş grandpashabet grandpashabet grandpashabet grandpashabet holiganbet giriş jojobet giriş holiganbet güncel giriş holiganbet giriş sahabet onwin casibom giriş casibom casibom giriş casibom matbet matbet giriş casibom casibom giriş amgbahis amgbahis giriş casibom casibom giriş jojobet jojobet giriş perabet perabet giriş holiganbet holiganbet giriş matbet matbet giriş superbetin superbetin giriş supertotobet supertotobet giriş superbetin superbetin giriş supertotobet supertotobet giriş imajbet imajbet giriş perabet perabet giriş coinbar coinbar giriş klasbahis klasbahis giriş ngsbahis ngsbahis giriş matbet matbet giriş mavibet mavibet giriş nakitbahis nakitbahis giriş marsbahis marsbahis giriş interbahis interbahis giriş mariobet mariobet giriş betpas betpas giriş artemisbet artemisbet giriş betsmove betsmove giriş restbet restbet giriş egebet egebet giriş https://yourfilterconnection.com/ grandpashabet