Village Missionary Movement         கிராம மிஷனரி இயக்கம்

ಧೈನಂದಿನ ಧ್ಯಾನ(Kannada) – 13.03.2023
Share:

By Village Missionary Movement

Monday, 13-Mar-2023

ಧೈನಂದಿನ ಧ್ಯಾನ(Kannada) – 13.03.2023

 

ಭಾರವಾದ ಶಿಲುಬೆ

 

"...ಯಾವನಿಗಾದರೂ ನನ್ನ ಹಿಂದೆ ಬರುವದಕ್ಕೆ ಮನಸ್ಸಿದ್ದರೆ ಅವನು ತನ್ನನ್ನು ನಿರಾಕರಿಸಿ ತನ್ನ ಶಿಲುಬೆಯನ್ನು ಹೊತ್ತುಕೊಂಡು ನನ್ನ ಹಿಂದೆ ಬರಲಿ" - ಮಾರ್ಕನು 8:34

 

ಒಂದು ದಿನ ರಾತ್ರಿ ಪೀಟರ್ ಭಾರವಾದ ಹೃದಯದಿಂದ ಮಲಗಲು ಹೋದನು. ಆ ರಾತ್ರಿ ಅವನಿಗೆ ಒಂದು ಕನಸು ಬಿತ್ತು. ಅದರಲ್ಲಿ ತಾನು ಒಂದು ಶಿಲುಬೆಯನ್ನು ಹೊತ್ತುಕೊಂಡು ಅಳುತ್ತಾ ಹೋಗುತ್ತಿದ್ದಾನೆ. ದಾರಿಯಲ್ಲಿ ಎರಡು ದೊಡ್ಡ ಪರ್ವತಗಳ ನಡುವೆ ಸೇತುವೆಯಾಗಿ ಹಾಕಿದ್ದ ಒಂದು ದೊಡ್ಡ ಶಿಲುಬೆಯ ಮಾರ್ಗವಾಗಿ ಹೋಗಿ ಮುಂದಿನ ಪರ್ವತಕ್ಕೆ ಹೋಗಿ ಸೇರಿದನು.

 

ಈ ಭಾರವಾದ ಶಿಲುಬೆಯನ್ನು ತನ್ನಿಂದ ಹೊರಲು ಸಾಧ್ಯವಾಗಲಿಲ್ಲವೇ, ಯಾಕೆ ಈ ಲೋಕದಲ್ಲಿ ಹುಟ್ಟಿದೆ. ಯಾಕೆ ಈ ಶಿಲುಬೆ? ಎಂದು ಹಲವು ಪ್ರಶ್ನೆಗಳೊಂದಿಗೆ ನಡೆಯುತ್ತಿದ್ದ ಅವನ ಕಿವಿಯಲ್ಲಿ ಒಂದು ಪ್ರೀತಿಯ ಧ್ವನಿ ಕೇಳಿಸಿತು. “ಪೀಟರ್! ಈ ಪರ್ವತದಲ್ಲಿ ಅಗೋ ಅಲ್ಲಿ ಕಾಣುತ್ತಿದೆ ನೋಡು! ಆ ದೊಡ್ಡ ಕೋಣೆ ಅಲ್ಲಿ ನಿನ್ನ ಶಿಲುಬೆಯನ್ನು ತೆಗೆದುಕೊಂಡು ಹೋಗಿ ಇಡು" ಎಂದಿತು. ಅವನು ಚಿಂತನಶೀಲನಾಗಿ ಆ ಕೋಣೆಗೆ ಹೋಗಿ ಒಳಗೆ ನೋಡಿದಾಗ, ಆ ಕೋಣೆಯಲ್ಲಿ ಅನೇಕ ಶಿಲುಬೆಗಳು ಇರುವುದನ್ನು ಕಂಡನು.

 

ಅವನಿಗೆ ಮತ್ತೆ ಅದೇ ಧ್ವನಿ ಕೇಳಲು ಪ್ರಾರಂಭಿಸಿತು. “ಪರ್ವತಗಳ ನಡುವೆ ನೀನು ಹಾದುಬರಲು ಸೇತುವೆಯಾಗಿ ಇಟ್ಟಿದ್ದ ಆ ಶಿಲುಬೆ ನಾನು ಹೊತ್ತದ್ದು. ನೀನು ಅದನ್ನು ಸುಲಭವಾಗಿ ದಾಟಲಿಲ್ಲವೇ? ಈಗ ಈ ಕೋಣೆಯಲ್ಲಿರುವ ಇತರ ಶಿಲುಬೆಗಳೊಂದಿಗೆ ನಿನ್ನ ಶಿಲುಬೆಯನ್ನು ಹೋಲಿಸಿ ನೋಡು. ಯಾವುದು ದೊಡ್ಡದಾಗಿದೆ?" ಅವನು ನೋಡಿದಾಗ ಎಲ್ಲಾ ಶಿಲುಬೆಗಳಲ್ಲಿ ಇವನ ಶಿಲುಬೆ ತುಂಬಾ ಚಿಕ್ಕದಾಗಿರುವುದನ್ನು ಕಂಡು, ನಾಚಿಕೆಯಿಂದ ತಲೆ ತಗ್ಗಿಸಿದನು. ಆಗಲೇ ಅದು ಯೇಸುವಿನ ಧ್ವನಿ ಎಂದು ಅರಿವಾಯಿತು.

 

ನಾವು ಕೂಡ ನಮ್ಮ ದೈನಂದಿನ ಜೀವನದಲ್ಲಿ ಶೋಧನೆಗಳು, ಹೋರಾಟಗಳು, ಗೊಂದಲಗಳು, ಇಕ್ಕಟ್ಟುಗಳು ಮತ್ತು ಒಡಕುಗಳು ಬರುವಾಗ, ನಮಗೆ ಮಾತ್ರವೇ ಇಷ್ಟೊಂದು ಭಾರ ಅಂದುಕೊಂಡು ವೇದನೆಪಟ್ಟು ದೇವರ ಮೇಲಿರುವ ನಂಬಿಕೆಯನ್ನು ಕಳೆದುಕೊಳ್ಳಲು ಪ್ರಾರಂಭಿಸುತ್ತೇವೆ. ಆತನು ಈಗಾಗಲೇ ನಮ್ಮ ಎಲ್ಲಾ ಭಾರಗಳನ್ನು ಶಿಲುಬೆಯ ಮೇಲೆ ಹೊತ್ತು ತೀರಿಸಿಬಿಟ್ಟರು. ತಂದೆಯ ಬಳಿಗೆ ಪ್ರವೇಶಿಸುವ ಮಾರ್ಗವನ್ನೂ ಸಿದ್ದಮಾಡಿಬಿಟ್ಟರು. "ಆದದರಿಂದ ನಾವು ಕರುಣೆಯನ್ನು ಹೊಂದುವಂತೆಯೂ ಆತನ ದಯೆಯಿಂದ ಸಮಯೋಚಿತವಾದ ಸಹಾಯವು ನಮಗೆ ದೊರೆಯುವಂತೆಯೂ ಧೈರ್ಯದಿಂದ ಕೃಪಾಸನದ ಮುಂದೆ ಬರೋಣ." (ಇಬ್ರಿಯ 4:16)

 

ಪೀಟರ್ ನ ಹಾಗೆ ಇರದೆ ಭಾರವಾದ ಶಿಲುಬೆ ಎಂದು ನೆನೆಸದೇ, ನನ್ನ ಶಿಲುಬೆಯ ಭಾರವನ್ನು ನನ್ನ ಯೇಸು ಹೊತ್ತುಕೊಂಡು ನನ್ನನ್ನು ಬಿಡುಗಡೆ ಮಾಡಿದ್ದಾರೆ ಎಂಬ ದೃಢತೆಯೊಂದಿಗೆ ನಮಗೆ ನೇಮಿಸಿರುವ ನಂಬಿಕೆಯ ಓಟದಲ್ಲಿ ತಾಳ್ಮೆಯಿಂದ ಓಡಲು ದೇವರು ಕೃಪೆ ತೋರಿಸಲಿ. ಆಮೆನ್.

- Mrs. ಜಯಂತಿ ಭಾಗ್ಯನಾಥನ್

 

ಪ್ರಾರ್ಥನಾ ಅಂಶ:

ಆಂಧ್ರ, ಒಡಿಶಾ, ಕರ್ನಾಟಕ ಮತ್ತು ಛತ್ತೀಸ್‌ಗಢದಲ್ಲಿನ ಸೇವಾಕ್ಷೇತ್ರಗಳ ಸೇವೆಯನ್ನು ದೇವರು ಆಶೀರ್ವದಿಸುವಂತೆ ಪ್ರಾರ್ಥಿಸಿರಿ.

 

*Whatsapp*

ಈ ಧ್ಯಾನ ಸಂದೇಶವನ್ನು ತಮಿಳು, ಇಂಗ್ಲಿಷ್, ಹಿಂದಿ, ಮಲಯಾಳಂ, ತೆಲುಗು, ಕನ್ನಡ, ಪಂಜಾಬಿ ಮತ್ತು ಒರಿಯಾ ಭಾಷೆಗಳಲ್ಲಿ ವಾಟ್ಸಾಪ್‌ನಲ್ಲಿ ಪಡೆದುಕೊಳ್ಳಲು *+91 94440 11864* ಈ ಸಂಖ್ಯೆಯನ್ನು ಸಂಪರ್ಕಿಸಿ.

 

www.vmm.org.in

ಈಮೈಲ್:- info@vmm.org.in

Android App: https://play.google.com/store/apps/details?id=com.infobells.vmmorgin

        

ವಿಲೇಜ್ ಮಿಷಿನರಿ ಮೊಮೆಂಟ್ ವಿರುಧುನಗರ್, ಇಂಡಿಯಾ-626001

ಪ್ರಾರ್ಥನಾ ಅವಶ್ಯಕತೆಗಾಗಿ :- +91 93455 40482



hacklink satın al