Village Missionary Movement         கிராம மிஷனரி இயக்கம்

ಧೈನಂದಿನ ಧ್ಯಾನ(Kannada) – 12.03.2023
Share:

By Village Missionary Movement

Sunday, 12-Mar-2023

ಧೈನಂದಿನ ಧ್ಯಾನ(Kannada) – 12.03.2023

 

ಉಪಕಾರಕ್ಕೆ ಪ್ರತಿಫಲ ಉಂಟು

 

“ಒಳ್ಳೇದನ್ನು ಮಾಡುವದರಲ್ಲಿ ಬೇಸರಗೊಳ್ಳದೆ ಇರೋಣ. ಯಾಕಂದರೆ ಮನಗುಂದದಿದ್ದರೆ ತಕ್ಕ ಸಮಯದಲ್ಲಿ ಬೆಳೆಯನ್ನು ಕೊಯ್ಯುವೆವು" - ಗಲಾತ್ಯ 6:9

 

ಹಲೋ ಪುಟಾಣಿಗಳೇ! ಹೇಗಿದ್ದೀರ, ಊಟ ಆಯ್ತಾ? ಚೆನ್ನಾಗಿ ನಿದ್ದೆ ಮಾಡುದ್ರಾ? ಹೌದು, ಸರಿಯಾದ ಸಮಯಕ್ಕೆ ಊಟ ಮಾಡಬೇಕು. ರಾತ್ರಿ ಹೊತ್ತು ಹೆಚ್ಚು ಸಮಯ ವ್ಯರ್ಥ ಮಾಡದೇ ಬೇಗ ಮಲಗಬೇಕು. ಆಗ ಮಾತ್ರವೇ ಜಮ್ ಅಂಥಾ ಶಾಲೆಗೆ ಹೋಗೋಕೆ ಸಾಧ್ಯ.

 

ಓಕೆ. ಈಗ ಕಥೆ ಕೇಳೋಣ್ವಾ? ರೋಸ್ ಮೇರಿ ಟೀಚರ್ ಆರನೇ ತರಗತಿಯವರಿಗೆ ಕ್ಲಾಸ್ ಟೀಚರ್ ಆಗಿದ್ದರು. ಅವರು ಅಧ್ಯಯನಕ್ಕಾಗಿ ಮಾತ್ರವಲ್ಲದೆ ಜೀವನಕ್ಕೂ ಒಳ್ಳೆಯದನ್ನು ಕಲಿಸುತ್ತಿದ್ದರು. ನಿಮಗೆ ಪರಿಚಯವಿಲ್ಲದ ವ್ಯಕ್ತಿಯೋ ಅಥವಾ ನಿಮಗೆ ತಿಳಿಯದ ಯಾರೋ ಒಬ್ಬರು ನಿಮ್ಮನ್ನು ಮುಟ್ಟಿ ಮಾತನಾಡಿದರೆ ಅಥವಾ ನಿಮ್ಮನ್ನು ಮಡಿಲಲ್ಲಿ ಕೂರಿಸಿಕೊಂಡು ಮಾತನಾಡಿದರೆ, ನೀವು ಅದನ್ನು ಅವೈಡ್ ಮಾಡಬೇಕು ಎಂದು ಹೇಳಿಕೊಡುವುದು ಮಾತ್ರವಲ್ಲದೇ ಸಾಕಷ್ಟು ಗೇಮ್ ಗಳನ್ನು ಸಹ ಇಡುತ್ತಿದ್ದರು. ಎಲ್ಲಾ ಮಕ್ಕಳಿಗೂ ಆ ಟೀಚರ್ ಅಂದರೆ ತುಂಬಾ ಇಷ್ಟ. ಅಂದು ಆಟದ ಸಮಯ ಬಂತು. ಎಲ್ಲರಿಗೂ ಒಂದೇ ಸಂತೋಷ. ರೋಸ್ ಮೇರಿ ಟೀಚರ್ ಎಲ್ಲರಿಗೂ ಬಲೂನ್ ನೀಡಿದರು. ನಿಮಗೂ ಬಲೂನ್‌ ಅಂದರೆ ತುಂಬಾ ಇಷ್ಟ ಅಲ್ವಾ. ಟೀಚರ್ ಎಲ್ಲರಿಗೂ ಬಲೂನ್ ಊದಲು ಹೇಳಿದಾಗ ಎಲ್ಲರೂ ಊದಿ ಗಂಟು ಹಾಕಿದರಂತೆ . ಈಗ ಎಲ್ಲರೂ ಬಲೂನ್ ಮೇಲೆ ನಿಮ್ಮ ಹೆಸರನ್ನು ಬರೆಯಿರಿ ಎಂದರು. ಎಲ್ಲರೂ ಸ್ಪೀಡ್ ಆಗಿ ಅವರವರ ಹೆಸರನ್ನು ಬರೆದು ಮುಗಿಸಿದರು.

 

ನೀವು ಈಗ ಏನು ಮಾಡಲಿದ್ದೀರ ಎಂದು ನಿಮಗೆ ಗೊತ್ತಾ? ಎಂದು ಕೇಳಿದಾಗ ಎಲ್ಲರೂ ಸೈಲೆಂಟಾಗಿ ಗಮನಿಸಿದರು. ಎಲ್ಲರಿಗೂ ಗೆಲ್ಲಲು ಆಸೆ ಇರುತ್ತೆ ಅಲ್ವಾ? ನಿಮ್ಮ ಬಲೂನ್‌ನ ಗಂಟು ತೆಗೆದು ಎಲ್ಲರ ಬಲೂನ್ ಅನ್ನು ಈ ಮೇಜಿನ ಮೇಲೆ ಇಡಿರಿ ಎಂದು ಶಿಕ್ಷಕರು ಹೇಳಿದಾಗ, ಬಲೂನ್ ಗಳಲ್ಲಿನ ಗಾಳಿ ಪುಸ್ ಎಂದು ಹೋದ ಹಾಗೆ ಅವರ ಮುಖಗಳೂ ಪುಸ್ ಅಂತ ಆಗೋಯ್ತು. ಈಗಲೇ ಇಂಟ್ರೆಸ್ಟಿಂಗ್ ಆಗಿ ಇರುತ್ತೆ. ಗಾಳಿಯಲ್ಲಿ ಅಲ್ಲಲ್ಲಿ ಚದರಿಹೋಗಿರುವ ಬಲೂನ್ ಗಳಲ್ಲಿ ನಿಮ್ಮ ಹೆಸರು ಬರೆದಿರುವ ಬಲೂನ್ ಅನ್ನು ಹುಡುಕಿ ತೆಗೆಯಿರಿ ಎಂದು ಹೇಳಿದಾಗ ಬೇರೆ ಹೆಸರಿನ ಬಲೂನ್ ಗಳನ್ನು ನೋಡಿ ಕೆಳಗೆ ಅಲ್ಲೇ ಕೆಳಗೆ ಬಿಸಾಡಿದರಂತೆ. ಟೀಚರ್ ಒಂದು ಐಡಿಯಾ ಕೊಟ್ಟರು. ಬೇರೆ ವಿದ್ಯಾರ್ಥಿಗಳ ಹೆಸರಿನ ಬಲೂನ್ ಸಿಕ್ಕಿದರೆ ಅದು ಅವರಿಗೆ ಕೊಟ್ಟು ಬಿಡಿ. ಪ್ರತಿಯೊಬ್ಬರೂ ಹೀಗೆ ಮಾಡಿದಾಗ, ಅವರವರ ಬಲೂನ್ ಅವರವರ ಕೈಗೆ ಬಂತು. ಎಲ್ಲಾ ವಿದ್ಯಾರ್ಥಿಗಳು ಸೂಪರ್ ಟೀಚರ್ ಎಂದು ಚಪ್ಪಾಳೆ ತಟ್ಟಿದರು. ಇತರರಿಗೆ ಬೇಕಾದುದನ್ನು ನೀವು ಮಾಡಿದರೆ, ನಿಮಗೆ ಬೇಕಾದದ್ದು ಸಿಕ್ಕಿಬಿಡುತ್ತದೆ ಎಂಬ ಅದ್ಭುತವಾದ ಜೀವನ ಪಾಠವನ್ನು ರೋಸ್ ಮೇರಿ ಟೀಚರ್ ಕಲಿಸಿದ್ದು ಇಂದು ನಮಗೆ ಉಪಯುಕ್ತವಾಗಿದೆಯಲ್ಲವೇ? ರೋಸ್‌ ಮೇರಿ ಟೀಚರ್‌ಗಾಗಿ Thank you ಜೀಸಸ್ ಎಂದು ಹೇಳೋಣವಾ? Very good. 

 

ಏನು ಪುಟಾಣಿಗಳೇ! ಇತರರಿಗೆ ಸಹಾಯ ಮಾಡಲು ಆಸೆಯಿಂದಿದ್ದೀರಾ? ಜೀಸಸ್ ಸಹ ನಿಮಗೆ ಸಹಾಯ ಮಾಡಲು ಸಿದ್ಧರಾಗಿದ್ದಾರೆ, ಎಲ್ಲರಿಗೂ ಸಂತೋಷ ಅಲ್ವಾ ಪುಟಾಣಿಗಳೇ.

- Sis. ದೆಬೋರಾಳ್

 

*Whatsapp*

ಈ ಧ್ಯಾನ ಸಂದೇಶವನ್ನು ತಮಿಳು, ಇಂಗ್ಲಿಷ್, ಹಿಂದಿ, ಮಲಯಾಳಂ, ತೆಲುಗು, ಕನ್ನಡ, ಪಂಜಾಬಿ ಮತ್ತು ಒರಿಯಾ ಭಾಷೆಗಳಲ್ಲಿ ವಾಟ್ಸಾಪ್‌ನಲ್ಲಿ ಪಡೆದುಕೊಳ್ಳಲು *+91 94440 11864* ಈ ಸಂಖ್ಯೆಯನ್ನು ಸಂಪರ್ಕಿಸಿ.

 

www.vmm.org.in

ಈಮೈಲ್:- info@vmm.org.in

Android App: https://play.google.com/store/apps/details?id=com.infobells.vmmorgin

        

ವಿಲೇಜ್ ಮಿಷಿನರಿ ಮೊಮೆಂಟ್ ವಿರುಧುನಗರ್, ಇಂಡಿಯಾ-626001

ಪ್ರಾರ್ಥನಾ ಅವಶ್ಯಕತೆಗಾಗಿ :- +91 93455 40482



hacklink satın al