Village Missionary Movement         கிராம மிஷனரி இயக்கம்

ಧೈನಂದಿನ ಧ್ಯಾನ(Kannada) – 09.03.2023
Share:

By Village Missionary Movement

Thursday, 09-Mar-2023

ಧೈನಂದಿನ ಧ್ಯಾನ(Kannada) – 09.03.2023

 

ಮಹಾತ್ಯಾಗ

 

"ಸ್ವಂತ ಮಗನನ್ನು ಉಳಿಸಿಕೊಳ್ಳದೆ ಆತನನ್ನು ನಮ್ಮೆಲ್ಲರಿಗೋಸ್ಕರ ಒಪ್ಪಿಸಿಕೊಟ್ಟನಲ್ಲಾ; ಮಗನನ್ನು ಕೊಟ್ಟ ಮೇಲೆ ಸಮಸ್ತವನ್ನೂ ನಮಗೆ ದಯಪಾಲಿಸದೆ ಇರುವನೇ?" - ರೋಮಾ 8:32

 

ರೋಮಾ ಬರಹಗಾರ ಬ್ಲೇಮಿ ಎಲ್ಡರ್ ಎಂಬವರು 99 ಅಡಿ ಎತ್ತರದ ಕಲ್ಲಿನ ಸ್ತಂಭವನ್ನು ಸ್ಥಾಪಿಸಿದ ವಿಧಾನವನ್ನು ಬರೆದಿದ್ದಾರೆ. ಅತ್ಯಂತ ಭಾರವಾದ ಕಲ್ಲಿನ ಕಂಬವನ್ನು ಮೇಲಕ್ಕೆತ್ತಲು 20,000 ಸೇವಕರನ್ನು ಬಳಸಲಾಯಿತು. ಇದು ಬಹಳ ಎಚ್ಚರಿಕೆಯಿಂದ ಮತ್ತು ಜವಾಬ್ದಾರಿಯಿಂದ ಮಾಡಬೇಕಾದ ಕೆಲಸ. ಇದರಲ್ಲಿ ನಿರ್ಲಕ್ಷ್ಯ ತೋರಿದರೆ ಆ ಕಲ್ಲಿನ ಸ್ತುತಿ ಒಡೆದುಹೋಗುತ್ತದೆ. ಇದಕ್ಕಾಗಿ ಹಲವು ವರ್ಷಗಳು ಪಟ್ಟ ಪ್ರಯಾಸ ವ್ಯರ್ಥವಾಗುತ್ತದೆ ಎಂದು ಭಾವಿಸಿದ ಆ ದೇಶದ ಅರಸನು ಈ ಕೆಲಸವನ್ನು ನೋಡಿಕೊಳ್ಳುವ ಇಂಜಿನಿಯರ್ ನಿಷ್ಕಾಳಜಿಯಿಂದ ಸರಿಯಾಗಿ ಕೆಲಸ ಮಾಡಬೇಕಾದರೆ ಅವರ ಮಗನನ್ನು ಆ ಕಲ್ಲಿನ ಕಂಬದ ತುದಿಗೆ ಕಟ್ಟಿಹಾಕಿದರೆ ತನ್ನ ಮಗನನ್ನು ಕಾಪಾಡಿಕೊಳ್ಳುವ ಉದ್ದೇಶದಿಂದ ಎಚ್ಚರಿಕೆಯಿಂದ ಕೆಲಸ ಮಾಡಿ ಮುಗಿಸುತ್ತಾರೆ ಅಂದರು. ಅಂತೆಯೇ ಇಂಜಿನಿಯರ್ ಮಗನನ್ನು ಕಂಬದ ಮೇಲ್ಭಾಗಕ್ಕೆ ಕಟ್ಟಿದರು. ಆ ತಂದೆ ತನ್ನ ಮಗನು ಬಿದ್ದುಹೋಗಬಾರದೆಂಬ ಉದ್ದೇಶದಿಂದ ಅತ್ಯಂತ ಜಾಗರೂಕತೆಯಿಂದ ಕೆಲಸ ಮುಗಿಸಿದರು. ಆದರೆ ತಂದೆಯಾದ ದೇವರು, ತನ್ನ ಸ್ವಂತ ಮಗನೆಂದೂ ನೋಡದೇ ನಮಗಾಗಿ ಅವರನ್ನು ಯಜ್ಞವಾಗಿ ಒಪ್ಪಿಸಿಕೊಟ್ಟರು.

 

ಯೇಸುಕ್ರಿಸ್ತನನ್ನು ಶಿಲುಬೆಗೇರಿಸಿದರೂ ಆತನನ್ನು ರಕ್ಷಿಸಲು ತಂದೆ ಯೋಚಿಸಲಿಲ್ಲ. ಲೋಕದ ಪಾಪಗಳನ್ನು ಭರಿಸಲೇ ಬೇಕು ಎಂದುಕೊಂಡು ಮುಖ ಮರೆಮಾಡಿಕೊಂಡರು. ಯೇಸು ನಮಗಾಗಿ ಶಿಲುಬೆಯ ಮೇಲೆ ಮರಣಹೊಂದಿದರು. ತಂದೆಯು ತನ್ನ ಸ್ವಂತ ಮಗನಿಗಿಂತ ಹೆಚ್ಚಾಗಿ ನಮ್ಮನ್ನು ಪ್ರೀತಿಸಿದರು. ಅದಕ್ಕಾಗಿಯೇ ಅವರು ಅಂತಹ ದೊಡ್ಡ ತ್ಯಾಗವನ್ನು ಮಾಡಿದರು ಮತ್ತು ಮರದ ಮೇಲೆ ಎತ್ತಲ್ಪಟ್ಟವನು ಯಾವನೋ ಅವನು ಶಾಪಗ್ರಸ್ತನು. ಆದುದರಿಂದ ತಂದೆಯು ಯೇಸು ಕ್ರಿಸ್ತನನ್ನು ನಮಗೆ ಶಾಪವನ್ನಾಗಿ ಮಾಡಿದರು.

 

ಹೌದು, ಪ್ರಿಯರೇ, ಆ ಯೇಸುವನ್ನು ನಮ್ಮ ಹೃದಯದಲ್ಲಿ ಸ್ವೀಕರಿಸೋಣ. ತನ್ನ ಸ್ವಂತ ಮಗನನ್ನೇ ನಮಗಾಗಿ ಕೊಟ್ಟವರು ಅವರೊಂದಿಗೆ ಉಳಿದ ಎಲ್ಲವನ್ನೂ ನಮಗೆ ಕೊಡುತ್ತಾರೆ. ನಮಗಾಗಿ ತನ್ನನ್ನೇ ತ್ಯಾಗ ಮಾಡಿದ ಯೇಸುವಿಗೆ ನಾವೇನು ಮಾಡಲಿದ್ದೇವೆ? ನಾನು ನಿನಗಾಗಿ ಸತ್ತೆ! ನೀನು ನನಗಾಗಿ ಏನು ಮಾಡಿದ್ದೀಯ? ಎಂದು ಶಿಲುಬೆಯಲ್ಲಿ ನೇತಾಡುತ್ತಾ ನಮ್ಮೊಂದಿಗೆ ಮಾತನಾಡುತ್ತಿದ್ದಾರೆ. ಇದನ್ನು ಓದುತ್ತಿರುವ ನಿಮ್ಮ ತ್ಯಾಗವೇನು?

- Mrs. ನಿರೋಶಾ ಆಲ್ವಿನ್

 

ಪ್ರಾರ್ಥನಾ ಅಂಶ:

ನಮ್ಮ ಕ್ಯಾಂಪಸ್‌ನಲ್ಲಿ ನಡೆಯುತ್ತಿರುವ ನಿರ್ಮಾಣ ಕಾರ್ಯಗಳಿಗೆ ಅಗತ್ಯವಾಗಿರುವ ಆರ್ಥಿಕ ಸಹಾಯಕ್ಕಾಗಿ ಪ್ರಾರ್ಥಿಸಿರಿ.

 

*Whatsapp*

ಈ ಧ್ಯಾನ ಸಂದೇಶವನ್ನು ತಮಿಳು, ಇಂಗ್ಲಿಷ್, ಹಿಂದಿ, ಮಲಯಾಳಂ, ತೆಲುಗು, ಕನ್ನಡ, ಪಂಜಾಬಿ ಮತ್ತು ಒರಿಯಾ ಭಾಷೆಗಳಲ್ಲಿ ವಾಟ್ಸಾಪ್‌ನಲ್ಲಿ ಪಡೆದುಕೊಳ್ಳಲು *+91 94440 11864* ಈ ಸಂಖ್ಯೆಯನ್ನು ಸಂಪರ್ಕಿಸಿ.

 

www.vmm.org.in

ಈಮೈಲ್:- info@vmm.org.in

Android App: https://play.google.com/store/apps/details?id=com.infobells.vmmorgin

        

ವಿಲೇಜ್ ಮಿಷಿನರಿ ಮೊಮೆಂಟ್ ವಿರುಧುನಗರ್, ಇಂಡಿಯಾ-626001

ಪ್ರಾರ್ಥನಾ ಅವಶ್ಯಕತೆಗಾಗಿ :- +91 93455 40482



hacklink satın al