Village Missionary Movement         கிராம மிஷனரி இயக்கம்

ಧೈನಂದಿನ ಧ್ಯಾನ(Kannada) – 08.03.2023
Share:

By Village Missionary Movement

Wednesday, 08-Mar-2023

ಧೈನಂದಿನ ಧ್ಯಾನ(Kannada) – 08.03.2023

 

ಹೆಣ್ಣಿಗೆ ಸಾಟಿ ಹೆಣ್ಣೇ!

 

“ಗುಣವತಿಯಾದ ಸತಿಯು ಎಲ್ಲಿ ಸಿಕ್ಕಾಳು? ಆಕೆಯು ಹವಳಕ್ಕಿಂತಲೂ ಬಹು ಅಮೂಲ್ಯಳು" - ಜ್ಞಾನೋಕ್ತಿ 31:10

 

ಪುರುಷನು ಒಬ್ಬಂಟಿಯಾಗಿರುವುದು ಒಳ್ಳೆಯದಲ್ಲ ಎಂದು ದೇವರು ಅವನಿಗೆ ತಕ್ಕ ಸಂಗಾತಿಯಾಗಿ ಮಹಿಳೆಯನ್ನು ಸೃಷ್ಟಿಸಿದರು. ತಾಯಿಯಾಗಿ, ಹೆಂಡತಿಯಾಗಿ, ಸಹೋದರಿಯಾಗಿ, ಮಗಳಾಗಿ, ಮೊಮ್ಮಗಳಾಗಿ ಹೀಗೆ ಅನೇಕ ಸಂಬಂಧಗಳಾಗಿ ದೇವರು ಕೊಟ್ಟ ಮಹಾನ್ ಕೊಡುಗೆ ಮಹಿಳೆಯರು.

 

ದೇವರಿಂದ ಅನನ್ಯ ಜೀವಿಗಳಾಗಿ ಸೃಷ್ಟಿಸಲ್ಪಟ್ಟ ಮಹಿಳೆಯರನ್ನು "ದೇಶದ ಕಣ್ಣುಗಳು" ಎಂದು ಪ್ರಶಂಸಿಸಲಾಗುತ್ತದೆ. ಇತ್ತೀಚಿನ ದಿನಗಳಲ್ಲಿ ಮಹಿಳೆಯರು ಅನೇಕ ವಿಶಿಷ್ಟ ಕ್ಷೇತ್ರಗಳಲ್ಲಿ ಮಿಂಚುತ್ತಿದ್ದಾರೆ.

 

ನಾವು ಅನೇಕ ಯಶಸ್ವಿ ಮಹಿಳೆಯರು ಮತ್ತು ಮಿಷನರಿ ಮಹಿಳೆಯರನ್ನು ತಿಳಿದಿದ್ದೇವೆ. ಇಂದಿನ ಸತ್ಯವೇದ ಭಾಗದಲ್ಲಿ ಕಾಣಲ್ಪಡುವ ಅಬೀಗೈಲಳೆಂಬ ಮಹಿಳೆಯ ಬಗ್ಗೆ ನಮಗೆ ತಿಳಿದಿದೆ. ಅಬೀಗೈಲ್

ಎಂದರೆ ಸಂತೋಷ ಎಂದರ್ಥ. ಆದರೆ ಅವಳಿಗೆ ದೊರೆತ ಗಂಡನಾದ ನಾಬಾಲನೋ ತುಂಬಾ ಕೋಪಿಷ್ಟ ಮೂರ್ಖ ಮತ್ತು ಹಣವಂತನೂ ಕೂಡ. ಆದರೆ ಆಕೆಯು ಬಹುಬುದ್ಧಿವಂತೆ ಎಂದು (1ಸಮು.25:3) ರಲ್ಲಿ ಹೇಳಲಾಗಿದೆ. ಅವಳು ನಾಬಾಲನ ಗುಣಕ್ಕೆ ವಿರುದ್ಧವಾಗಿರುವ ಸದ್ಗುಣಶೀಲಳಾಗಿ ಕಾಣಲ್ಪಟ್ಟಳು.

 

ಕುರಿಗಳ ಉಣ್ಣೆಯನ್ನು ಕತ್ತರಿಸುವ ದಿನದಂದು ಜನರಿಗೆ ಔತಣವನ್ನು ನೀಡುವುದು ಬಹುಮಾನ ನೀಡುವುದು ವಾಡಿಕೆಯಾಗಿತ್ತು. ಅರಣ್ಯದಲ್ಲಿದ್ದ ದಾವೀದನು ಕುರಿಗಳ ಉಣ್ಣೆಯನ್ನು ಕತ್ತರಿಸಲು ನಾಬಾಲನು ಬಂದಿರುವುದನ್ನು ತಿಳಿದು ಅವನನ್ನು ಅಭಿನಂದಿಸಲು ಮತ್ತು ಅವನ ಬಳಿ ಸಹಾಯವನ್ನು ಕೇಳಲು 10 ಯುವಕರನ್ನು ಕಳುಹಿಸಿದನು. ಆದರೆ ನಾಬಾಲನು ತನ್ನ ದುಷ್ಟ ಸ್ವಭಾವದಲ್ಲಿ ಅವರನ್ನು ಧಿಕ್ಕರಿಸಿ ಸುಮ್ಮನೆ ಕಳುಹಿಸಿಬಿಟ್ಟನು. ದಾವೀದನು ತುಂಬಾ ಕೋಪಗೊಂಡು ನಾಬಾಲನನ್ನು ಎದುರಿಸಲು ನಿರ್ಧರಿಸಿರುವುದನ್ನು ತಿಳಿದುಕೊಂಡ ಅಬೀಗೈಲ್ ತೀವ್ರವಾದ ಧೈರ್ಯದೊಂದಿಗೆ ಕಾಣಿಕೆಗಳೊಂದಿಗೆ ದಾವೀದನನ್ನು ಮತ್ತು ಅವನ ಜನರನ್ನು ಭೇಟಿಯಾಗಲು ಹೋದಳು. ದಾವೀದನನ್ನು ಕಂಡ ಕೂಡಲೆ ಸಾಷ್ಟಾಂಗವಾಗಿ ನಮಸ್ಕರಿಸಿ ಕ್ಷಮಾಪಣೆಯನ್ನು ಕೇಳಿದಳು. (ವಚನ 28) ಮುಯ್ಯಿತೀರಿಸುವುದರಿಂದುಂಟಾಗುವ ಪಶ್ಚಾತ್ತಾಪ ಮನೋವ್ಯಥೆ ಒಳ್ಳೇದಲ್ಲ ಎಂಬುದನ್ನು ಸ್ಪಷ್ಟವಾಗಿ ಎತ್ತಿ ತೋರಿಸುತ್ತಾಳೆ. (ವಚನ 31) ಅಬೀಗೈಲಳ ತಾಳ್ಮೆ ಮತ್ತು ಬುದ್ಧಿವಂತಿಕೆಯ ಮಾತುಗಳು ದಾವೀದನ ಹೃದಯವನ್ನು ಮುಟ್ಟಿದವು. ಅವಳು ಆಶೀರ್ವಾದ ಮತ್ತು ಶಾಂತಿಯಿಂದ ಹಿಂದಿರುಗಿದಳು (ವಚನ 35).

 

ನನ್ನ ಪ್ರಿಯರಾದವರೇ, ಅಬೀಗೈಲಳಂತೆ ನಾವು ಕೂಡ ನಮ್ಮ ಮನೆಯಲ್ಲಿ, ಕೆಲಸದ ಸ್ಥಳಗಳಲ್ಲಿ ಎಲ್ಲರೊಂದಿಗೆ ಹೊಂದಿಕೊಂಡು ಹೋಗುವ ಮನಸ್ಥಿತಿಯೊಂದಿಗೆ ಸಂಯಮ, ಧೈರ್ಯ, ತಾಳ್ಮೆ ಮತ್ತು ಸಾಮರಸ್ಯದಿಂದ ಕೂಡಿದ ಒಳ್ಳೆಯ ಮಾತುಗಳೊಂದಿಗೆ ಜೀವಿಸೋಣ. ಹೆಣ್ಣಿಗೆ ಸಾಟಿ ಹೆಣ್ಣೇ! ಎಲ್ಲರಿಗೂ ಮಹಿಳಾ ದಿನಾಚರಣೆಯ ಶುಭಾಶಯಗಳು!

- Mrs. ಸರೋಜಾ ಮೋಹನ್ ದಾಸ್

 

ಪ್ರಾರ್ಥನಾ ಅಂಶ:

ಮೋಕ್ಷ ಪ್ರಯಾಣ ಮತ್ತು ನಮ್ಮ ಎಲ್ಲಾ ಪತ್ರಿಕಾ ಸೇವೆಗಳಲ್ಲಿ ದೇವರ ಹಸ್ತವು ಜೊತೆಯಿರುವಂತೆ ಪ್ರಾರ್ಥಿಸಿರಿ.

 

*Whatsapp*

ಈ ಧ್ಯಾನ ಸಂದೇಶವನ್ನು ತಮಿಳು, ಇಂಗ್ಲಿಷ್, ಹಿಂದಿ, ಮಲಯಾಳಂ, ತೆಲುಗು, ಕನ್ನಡ, ಪಂಜಾಬಿ ಮತ್ತು ಒರಿಯಾ ಭಾಷೆಗಳಲ್ಲಿ ವಾಟ್ಸಾಪ್‌ನಲ್ಲಿ ಪಡೆದುಕೊಳ್ಳಲು *+91 94440 11864* ಈ ಸಂಖ್ಯೆಯನ್ನು ಸಂಪರ್ಕಿಸಿ.

 

www.vmm.org.in

ಈಮೈಲ್:- info@vmm.org.in

Android App: https://play.google.com/store/apps/details?id=com.infobells.vmmorgin

        

ವಿಲೇಜ್ ಮಿಷಿನರಿ ಮೊಮೆಂಟ್ ವಿರುಧುನಗರ್, ಇಂಡಿಯಾ-626001

ಪ್ರಾರ್ಥನಾ ಅವಶ್ಯಕತೆಗಾಗಿ :- +91 93455 40482



hacklink satın al holiganbet giriş matbet holiganbet holiganbet giriş casibom giriş casibom casibom giriş casibom matbet matbet giriş imajbet imajbet giriş perabet perabet giriş coinbar coinbar giriş klasbahis klasbahis giriş supertotobet giriş supertotobet jojobet giriş jojobet casibom casibom giriş jojobet giriş jojobet interbahis interbahis giriş mariobet mariobet giriş betpas betpas giriş artemisbet artemisbet giriş marsbahis giriş marsbahis restbet restbet giriş egebet egebet giriş Hiltonbet Hiltonbet giriş jojobet alobet alobet giriş betcio betcio giriş grandpashabet grandpashabet giriş superbetin superbetin giriş perabet perabet giriş pashagaming tarafbet editörbet perabet perabet giriş grandbetting hitbet xslot betkom giriş betkanyon giriş perabet perabet giriş Hiltonbet Hiltonbet giriş grandpashabet grandpashabet giriş grandpashabet güncel giriş grandpashabet grandpashabet giriş grandpashabet giriş güncel jojobet jojobet giriş holiganbet holiganbet giriş casibom casibom giriş jojobet jojobet giriş alobet alobet giriş marsbahis marsbahis giriş milanobet jojobet jojobet jojobet jojobet jojobet holiganbet palacebet holiganbet romabet teosbet betgit cratosroyalbet cratosroyalbet gameofbet