Village Missionary Movement         கிராம மிஷனரி இயக்கம்

ಧೈನಂದಿನ ಧ್ಯಾನ(Kannada) – 07.03.2023
Share:

By Village Missionary Movement

Tuesday, 07-Mar-2023

ಧೈನಂದಿನ ಧ್ಯಾನ(Kannada) – 07.03.2023

 

ವ್ಯರ್ಥ ಭಕ್ತಿ

 

“ಪಾಪಗಳನ್ನು ಹೋಗಲಾಡಿಸುವದಕ್ಕಾಗಿ ಕ್ರಿಸ್ತನು ಪ್ರತ್ಯಕ್ಷನಾದನೆಂಬದು ನಿಮಗೆ ಗೊತ್ತಾಗಿದೆ; ಆತನಲ್ಲಿ ಪಾಪವಿಲ್ಲ" - 1 ಯೋಹಾನ 3:5

 

ಬಹಳ ಭಕ್ತಿಯಿಂದ ಇದ್ದ ತಂದೆಯೊಬ್ಬರು ಸತ್ತು ಹಲವು ವರ್ಷಗಳಾಗಿತ್ತು. ಅವರ ಮಗನಿಗೆ ತಂದೆಯನ್ನು ನೆನೆಪಿಸಿಕೊಂಡಾಗೆಲ್ಲಾ ಕಣ್ಣೀರು ಬರುತ್ತಿತ್ತು. ಅವರು ಯಾವಾಗಲೂ ತನ್ನ ತಂದೆಯನ್ನು ಹೊಗಳುತ್ತಾ ಮಾತಾಡುತ್ತಿದ್ದರು. ತನ್ನ ತಂದೆ ಬಳಸುತ್ತಿದ್ದ ಹಳೆಯ ಬೈಕ್ ಒಂದನ್ನು ತುಂಬಾ ದೊಡ್ಡ ಸಂಪತ್ತು ಎಂದು ಪರಿಗಣಿಸಿ ಅದನ್ನು ಇಂದಿನವರೆಗೂ ಜೋಪಾನವಾಗಿ ನೋಡಿಕೊಳ್ಳುತ್ತಿದ್ದಾರೆ. ತನ್ನ ತಂದೆ ಎಷ್ಟೊಂದು ಕಷ್ಟಗಳನ್ನು ಹಿಂಸೆಗಳನ್ನು ಅನುಭವಿಸಿ ತಮ್ಮನ್ನು ಸಾಕಿದರು ಎಂಬುದನ್ನು ಕಥೆ-ಕಥೆಯಾಗಿ ಹೇಳುತ್ತಿದ್ದರು. ಆದರೆ ದುಡಿಮೆಯಿಲ್ಲದೆ ತಂದೆ ದುಡಿದ ದುಡ್ಡಿನಿಂದಲೇ ಜೀವನ ಸಾಗಿಸುತ್ತಿದ್ದಾರೆ. ಅವರಿಗೆ ಕೆಟ್ಟ ಅಭ್ಯಾಸಗಳೂ ಇವೆ. ಆದರೆ ಈ ಮಗನಿಗೆ ತನ್ನ ತಂದೆಯಲ್ಲಿ ಕಂಡುಬರುವ ಒಂದು ಒಳ್ಳೆಯ ಗುಣವೂ ಇಲ್ಲ. ತನ್ನ ತಂದೆಯ ಕಷ್ಟದ ಬದುಕನ್ನು ಭಕ್ತಿಯಿಂದ ಸ್ಮರಿಸುತ್ತಾ ತನ್ನನ್ನು ಕಷ್ಟಪಟ್ಟು ಬೆಳೆಸಿದ್ದು ಯಾಕೆ ಎಂದು ಯೋಚಿಸಲಿಲ್ಲ.

 

ಕರ್ತನಾದ ಯೇಸು, ಪಾಪಗಳನ್ನು ಹೋಗಲಾಡಿಸುವದಕ್ಕಾಗಿ ಪ್ರತ್ಯಕ್ಷನಾದನು (1 ಯೋಹಾನ 3:5) ಎಂಬುದನ್ನು ಮರೆತು ನಾವು ಯೇಸುವಿನ ಮರಣದ ಪಾಡುಗಳನ್ನು ನೆನೆಸಿ ಮನಮರುಗುತ್ತೇವೆ. ಕಣ್ಣೀರು ಸುರಿಸುತ್ತಲೇ ಎಲ್ಲಾ ಸಂದೇಶಗಳನ್ನು ಕೇಳುತ್ತೇವೆ‌. ಈ ಲೆಂಟ್ ದಿನಗಳಲ್ಲಿ ಯೇಸುಕ್ರಿಸ್ತನು ಅನುಭವಿಸಿದ ಪಾಡುಗಳನ್ನೆಲ್ಲಾ ಕಥೆ-ಕಥೆಯಾಗಿ ಮಾತಾಡುವುದರಿಂದ, ಚಿಂತಾಕ್ರಾಂತವಾದ ಮುಖದೊಂದಿಗೆ ಆ ಕಾರ್ಯಗಳನ್ನೆಲ್ಲಾ ಕೇಳಲು ಹೆಚ್ಚಾಗಿ ಗಮನಹರಿಸುತ್ತೇವೆ. ಈ ದಿನಗಳಲ್ಲಿ ಶಿಲುಬೆಯ ಚಿಹ್ನೆಗಳು ಹೆಚ್ಚು ಮಹತ್ವದ್ದಾಗಿವೆ.

 

ಲೆಂಟ್ ದಿನಗಳನ್ನು ಅನುಸರಿಸುತ್ತಿರುವ ನಾವು, ಯೇಸು ಏತಕ್ಕಾಗಿ ಪಾಡುಗಳನ್ನು ಅನುಭವಿಸಿದರು? ಏತಕ್ಕಾಗಿ ಆತನನ್ನು ಶಿಲುಬೆಗೇರಿಸಲಾಯಿತು? ಏತಕ್ಕಾಗಿ ಅವಮಾನಗಳನ್ನು ಸಹಿಸಿಕೊಂಡರು? ಈ ಎಲ್ಲಾ ವಿಷಯಗಳನ್ನು ಪರಿಗಣಿಸಿ, ಮಾನಸಿಕ ದುಃಖದಿಂದ ನಾವು ಭಕ್ತಿಯನ್ನು ವ್ಯಕ್ತಪಡಿಸುತ್ತಿದ್ದೇವೆಯೇ? ನಾವು ಪಾಪಕ್ಷಮಾಪಣೆ ಹೊಂದಲು, ಪಾಪದಿಂದ ಬಿಡುಗಡೆ ಹೊಂದಲು ಯೇಸು ಶಿಲುಬೆಯಲ್ಲಿ ಪಾಡುಗಳನ್ನು ಸಹಿಸಿಕೊಂಡರು. ನಾವು ದೇವರ ಮಕ್ಕಳಾಗಿ ಮಾರ್ಪಟ್ಟು, ಪರಿಶುದ್ಧವಾದ ಜೀವನವನ್ನು ನಡೆಸಲು ಅವರು ತನ್ನ ರಕ್ತವನ್ನು ಸುರಿಸಿದರು. ಯೇಸುವಿನ ಗುಣಲಕ್ಷಣಗಳು ನಮ್ಮಲ್ಲಿ ಕಾಣಲ್ಪಡುವುದಕ್ಕಾಗಿ ಅವರು ಬಹಳ ಕಷ್ಟಗಳನ್ನು ಅನುಭವಿಸಿದರು ಇವುಗಳನ್ನೆಲ್ಲಾ ನಾವು ಯೋಚಿಸಿ, ನಿಜವಾದ ಮಾನಸಾಂತರವನ್ನು ಹೊಂದಿ ಉನ್ನತವಾದ ಜೀವನವನ್ನು ಜೀವಿಸದಿದ್ದರೆ ಲೆಂಟ್ ದಿನಗಳ ಭಕ್ತಿ ವ್ಯರ್ಥವೇ ತಾನೇ. 

- Mrs. ಶಕ್ತಿ ಶಂಕರ್ ರಾಜ್

 

ಪ್ರಾರ್ಥನಾ ಅಂಶ:

ಗ್ರಾಮೀಣ ಟಿವಿಯಲ್ಲಿ ಕೆಲಸ ಮಾಡಲು ಸಮರ್ಪಿತ ಟೆಕ್ನೀಷಿಯನ್ ಗಳು ಸಿಗುವಂತೆ ಪ್ರಾರ್ಥಿಸಿರಿ.

 

*Whatsapp*

ಈ ಧ್ಯಾನ ಸಂದೇಶವನ್ನು ತಮಿಳು, ಇಂಗ್ಲಿಷ್, ಹಿಂದಿ, ಮಲಯಾಳಂ, ತೆಲುಗು, ಕನ್ನಡ, ಪಂಜಾಬಿ ಮತ್ತು ಒರಿಯಾ ಭಾಷೆಗಳಲ್ಲಿ ವಾಟ್ಸಾಪ್‌ನಲ್ಲಿ ಪಡೆದುಕೊಳ್ಳಲು *+91 94440 11864* ಈ ಸಂಖ್ಯೆಯನ್ನು ಸಂಪರ್ಕಿಸಿ.

 

www.vmm.org.in

ಈಮೈಲ್:- info@vmm.org.in

Android App: https://play.google.com/store/apps/details?id=com.infobells.vmmorgin

        

ವಿಲೇಜ್ ಮಿಷಿನರಿ ಮೊಮೆಂಟ್ ವಿರುಧುನಗರ್, ಇಂಡಿಯಾ-626001

ಪ್ರಾರ್ಥನಾ ಅವಶ್ಯಕತೆಗಾಗಿ :- +91 93455 40482



hacklink satın al casibom jojobet jojobet giriş deneme bonusu deneme bonusu veren siteler matbet matbet giriş matbet güncel giriş betsat betsat giriş betsat güncel giriş perabet perabet giriş perabet güncel giriş kingroyal kingroyal giriş kingroyal güncel giriş vaycasino vaycasino giriş vaycasino güncel giriş deneme bonusu deneme bonusu veren siteler holiganbet holiganbet giriş Superbetin superbetin giriş superbetin güncel giriş süperbetin aresbet aresbet giriş perabet perabet giriş milanbahis milanbahis giriş milanbahis milanbahis giriş holiganbet holiganbet giriş holiganbet holiganbet giriş jojobet jojobet giriş alobet alobet giriş casibom casibom giriş milanbahis milanbahis giriş casibom giriş casibom casibom jojobet jojobet giriş bahsegel