Village Missionary Movement         கிராம மிஷனரி இயக்கம்

ಧೈನಂದಿನ ಧ್ಯಾನ(Kannada) – 06.03.2023
Share:

By Village Missionary Movement

Sunday, 05-Mar-2023

ಧೈನಂದಿನ ಧ್ಯಾನ(Kannada) – 06.03.2023

 

ಮೊಣಕಾಲಿನ ಪ್ರಾರ್ಥನೆ

 

"...ಅವನು ಮೊದಲು ಮಾಡುತ್ತಿದ್ದ ಪ್ರಕಾರವೇ ದಿನಕ್ಕೆ ಮೂರು ಸಾರಿ ಮೊಣಕಾಲೂರಿ ತನ್ನ ದೇವರ ಸನ್ನಿಧಿಯಲ್ಲಿ ಪ್ರಾರ್ಥನೆಯನ್ನೂ ಸ್ತೋತ್ರವನ್ನೂ ಸಲ್ಲಿಸಿ ದನು" - ದಾನಿಯೇಲನು. 6:10

 

ಒಂದು ಮಿಷನರಿ ಸಂಸ್ಥೆಯು ನಿರ್ದಿಷ್ಟ ಪಟ್ಟಣಕ್ಕೆ ಸೇವೆ ಸಲ್ಲಿಸಲು ಒಬ್ಬ ಮಿಷನರಿಯನ್ನು ಕಳುಹಿಸಿತು. ಅವರು ಉತ್ಸುಕನಾಗಿ ಹೋಗಿ ಊರೂರು ಸುತ್ತಿ ನೋಡಿದರು. ಒಂದೆರೆಡು ದಿನಗಳಲ್ಲಿ ತಮ್ಮ ಸೇವೆಯನ್ನು ಆರಂಭಿಸಿದರು. ತಿಂಗಳುಗಳು ಉರುಳಿದವು. ಅವರ ಬೋಧನೆಗಳನ್ನು ಯಾರೂ ಕೇಳಲಿಲ್ಲ. ಜನರು ತುಂಬಾ ಒರಟು ಮತ್ತು ಬುದ್ಧಿಮಾಂದ್ಯ ರೀತಿಯಲ್ಲಿ ವಾಸಿಸುತ್ತಿದ್ದರು. ದಿನವೂ ದಣಿವರಿಯದೆ ದುಡಿದರೂ ಒಂದಿಷ್ಟು ಜನರನ್ನು ಸಹ ಮಾರ್ಪಡಿಸಲ ಸಾಧ್ಯವಾಗಲಿಲ್ಲ. ಹಾಗಾಗಿ ತುಂಬಾ ನಿರಾಶೆಯಿಂದ ನನ್ನ ಪ್ರಯತ್ನವೆಲ್ಲ ವ್ಯರ್ಥವಾಯಿತು ಎಂದುಕೊಂಡು ನಗರದ ಇನ್ನೊಂದು ಭಾಗಕ್ಕೆ ಬಂದರು.

 

ಅಲ್ಲಿ ರಸ್ತೆಯ ಬಳಿ ಕಲ್ಲು ಒಡೆಯುತ್ತಿದ್ದ ಒಬ್ಬ ವ್ಯಕ್ತಿಯನ್ನು ನೋಡಿದರು. ಅವರು ದೊಡ್ಡ ದೊಡ್ಡ ಕಲ್ಲುಗಳನ್ನು ಸುತ್ತಿಗೆಯಿಂದ ಒಡೆಯುತ್ತಿದ್ದರು. ಕೆಲಸಗಾರನ ಬಳಿಗೆ ಆ ಸೇವಕರು ಹೋಗಿ, “ಅಯ್ಯಾ, ನೀವು ಇಷ್ಟು ದೊಡ್ಡ ಗಟ್ಟಿಯಾದ ಬಂಡೆಗಳನ್ನು ಒಡೆಯಲು ಹೇಗೆ ಸಾಧ್ಯವಾಗುತ್ತಿದೆ?” ಎಂದು ಕೇಳಿದರು. ಅದಕ್ಕೆ ಆ ಕಲ್ಲು ಒಡೆಯುವವರು “ಅಯ್ಯಾ, ಗಟ್ಟಿಯಾದ ಬಂಡೆಯನ್ನು ಒಡೆಯುವಾಗ, ನೀವು ನಿಮ್ಮ ಮೊಣಕಾಲುಗಳ ಮೇಲೆ ನಿಂತು ಅದನ್ನು ಒಡೆಯಬೇಕು. ನಾವು ಮೊಣಕಾಲುಗಳ ಮೇಲೆ ನಿಂತಾಗ ನಮ್ಮ ಶಕ್ತಿ ಹೆಚ್ಚಾಗುತ್ತದೆ. ಆಗ ಎಂಥಾ ದೊಡ್ಡ ಕಠಿಣವಾದ ಬಂಡೆಯನ್ನಾದರೂ ಒಡೆದುಬಿಡಬಹುದು" ಎಂದರು. ದೇವರು ಆತನ ಮೂಲಕ ತನ್ನೊಂದಿಗೆ ಮಾತನಾಡುತ್ತಿದ್ದಾರೆ ಎಂದು ಸೇವಕನಿಗೆ ಕ್ಷಣಾರ್ಧದಲ್ಲಿ ಅರ್ಥವಾಯಿತು. ಅವರು ಸಂಭ್ರಮದಿಂದ ಮನೆಗೆ ಹಿಂದಿರುಗಿದರು. ಅಂದಿನಿಂದ ಅವರು ಅನೇಕ ಗಂಟೆಗಳ ಕಾಲ ಮೊಣಕಾಲುಗಳಿಂದ ಪ್ರಾರ್ಥಿಸಿದರು ಮತ್ತು ಯಶಸ್ವಿಯಾದರು.

  

ಸತ್ಯವೇದದಲ್ಲಿಯೂ ಮೊಣಕಾಲೂರಿ ಪ್ರಾರ್ಥಿಸಿ ಗೆದ್ದ ಒಬ್ಬ ದೇವಪುರುಷನ ಬಗ್ಗೆ ನಮಗೆ ಗೊತ್ತು. ಅವರೇ ದಾನಿಯೇಲನು. ಈ ದಾನಿಯೇಲನಿಗೆ ವಿರುದ್ಧವಾಗಿ ಪತ್ರದಲ್ಲಿ ಸಹಿ ಹಾಕಿದರೂ, ಅಲ್ಲಿ ತಾನು ಮೊದಲು ಮಾಡುತ್ತಿದ್ದಂತೆಯೇ ದಿನಕ್ಕೆ ಮೂರು ಬಾರಿ ಪ್ರಾರ್ಥನೆಯಲ್ಲಿ ತನ್ನ ದೇವರ ಮುಂದೆ ಮೊಣಕಾಲೂರಿ ಸ್ತೋತ್ರ ಸಲ್ಲಿಸಿದನು. ದಾನಿಯೇಲನ ಮೊಣಕಾಲು ಪ್ರಾರ್ಥನೆಯು ಅವನನ್ನು ಸಿಂಹಗಳ ಗವಿಯಿಂದ ರಕ್ಷಿಸಿತು. ಅವರ ಮೊಣಕಾಲಿನ ಪ್ರಾರ್ಥನೆ ಸಿಂಹಗಳ ಬಾಯಿಯನ್ನು ಕಟ್ಟಿಹಾಕಿತು. ದಾನಿಯೇಲನ ವಿಜಯವು ಅವರ ಮೊಣಕಾಲಿನ ಪ್ರಾರ್ಥನೆಯೇ ಆಗಿತ್ತು. ಹೌದು, ಮೊಣಕಾಲೂರುವುದೇ ಯಶಸ್ಸಿನ ಗುಟ್ಟು! ಸತ್ಯವೇದದಲ್ಲಿ, ಎಲೀಯ, ಪೌಲ ಮತ್ತು ಎಸ್ತೇರ್ ಇವರೆಲ್ಲರೂ ಮೊಣಕಾಲೂರಿ ಪ್ರಾರ್ಥಿಸಿ ಯಶಸ್ಸನ್ನು ಕಂಡುಕೊಂಡವರು. ನಾವು ಕೂಡ ನಮ್ಮ ಮೊಣಕಾಲುಗಳ ಮೇಲೆ ನಿಂತು ನಮ್ಮ ಹೃದಯವನ್ನು ಸುರಿಯುವಾಗ, ನಾವು ಬಹು ಬಲವನ್ನು ಹೊಂದಬಹುದು. ಏಕೆಂದರೆ ನಮ್ಮ ಪ್ರಯತ್ನಗಳು ವಿಫಲವಾಗಬಹುದು. ಆದರೆ ಮೊಣಕಾಲಿನ ಪ್ರಾರ್ಥನೆ ಎಂದಿಗೂ ವಿಫಲವಾಗುವುದಿಲ್ಲ. ಅದೇ ರೀತಿ ನಮ್ಮ ಮೊಣಕಾಲುಗಳು ಸವೆದು ಕಪ್ಪಾಗುವುದರಿಂದ ನಮ್ಮ ಮುಖ ಹೊಳೆಯುತ್ತದೆ. ಮೊಣಕಾಲಿನ ಪ್ರಾರ್ಥನೆಯು ಅನೇಕ ಎಡವುವ ಕಲ್ಲುಗಳನ್ನು ಮುರಿದು ಯಶಸ್ಸನ್ನು ಕಾಣುವಂತೆ ಮಾಡುತ್ತದೆ.

- T. ಶಂಕರ್ ರಾಜ್

  

ಪ್ರಾರ್ಥನಾ ಅಂಶ:

ನಮ್ಮ ಮಾಧ್ಯಮ ಸೇವೆಯ ಮೂಲಕ ಹೇರಳವಾದ ಆತ್ಮಗಳ ಸುಗ್ಗಿಯು ಕಾಣಲ್ಪಡುವಂತೆ ಪ್ರಾರ್ಥಿಸಿರಿ.

 

*Whatsapp*

ಈ ಧ್ಯಾನ ಸಂದೇಶವನ್ನು ತಮಿಳು, ಇಂಗ್ಲಿಷ್, ಹಿಂದಿ, ಮಲಯಾಳಂ, ತೆಲುಗು, ಕನ್ನಡ, ಪಂಜಾಬಿ ಮತ್ತು ಒರಿಯಾ ಭಾಷೆಗಳಲ್ಲಿ ವಾಟ್ಸಾಪ್‌ನಲ್ಲಿ ಪಡೆದುಕೊಳ್ಳಲು *+91 94440 11864* ಈ ಸಂಖ್ಯೆಯನ್ನು ಸಂಪರ್ಕಿಸಿ.

 

www.vmm.org.in

ಈಮೈಲ್:- info@vmm.org.in

Android App: https://play.google.com/store/apps/details?id=com.infobells.vmmorgin

        

ವಿಲೇಜ್ ಮಿಷಿನರಿ ಮೊಮೆಂಟ್ ವಿರುಧುನಗರ್, ಇಂಡಿಯಾ-626001

ಪ್ರಾರ್ಥನಾ ಅವಶ್ಯಕತೆಗಾಗಿ :- +91 93455 40482



hacklink satın al casibom jojobet jojobet giriş deneme bonusu deneme bonusu veren siteler matbet matbet giriş matbet güncel giriş betsat betsat giriş betsat güncel giriş perabet perabet giriş perabet güncel giriş kingroyal kingroyal giriş kingroyal güncel giriş vaycasino vaycasino giriş vaycasino güncel giriş deneme bonusu deneme bonusu veren siteler holiganbet holiganbet giriş Superbetin superbetin giriş superbetin güncel giriş süperbetin aresbet aresbet giriş perabet perabet giriş milanbahis milanbahis giriş milanbahis milanbahis giriş holiganbet holiganbet giriş holiganbet holiganbet giriş jojobet jojobet giriş alobet alobet giriş casibom casibom giriş milanbahis milanbahis giriş casibom giriş casibom casibom jojobet jojobet giriş bahsegel