Village Missionary Movement         கிராம மிஷனரி இயக்கம்

ಧೈನಂದಿನ ಧ್ಯಾನ(Kannada) – 05.03.2023 (Kids Special)
Share:

By Village Missionary Movement

Sunday, 05-Mar-2023

ಧೈನಂದಿನ ಧ್ಯಾನ(Kannada) – 05.03.2023 (Kids Special)

 

ಸಮಯವನ್ನು ವ್ಯರ್ಥ ಮಾಡಬೇಡ

 

"ಆದಕಾರಣ ಆ ದಿನವಾದರೂ ಗಳಿಗೆಯಾದರೂ ನಿಮಗೆ ಗೊತ್ತಿಲ್ಲವಾದದರಿಂದ ಎಚ್ಚರವಾಗಿರ್ರಿ" – ಮತ್ತಾಯ 25:13

 

ಅದೊಂದು ಸುಂದರ ಉದ್ಯಾನ. ಅಲ್ಲಿ ಅನೇಕ ಮರಗಳು ಮತ್ತು ಹೂವುಗಳು ನೋಡಲು ಸುಂದರವಾಗಿದ್ದವು. ಅದರಲ್ಲೂ ಆ ಮರಗಳಲ್ಲಿ ಹಕ್ಕಿಗಳು ಗೂಡುಕಟ್ಟುವುದನ್ನು ನೋಡಿದರೆ ಇನ್ನೂ ನೋಡುತ್ತಲೇ ಇರಬೇಕು ಅನಿಸುತ್ತದೆ. ಅದರಲ್ಲಿ ಒಂದು ಹಕ್ಕಿಯನ್ನು ನಾಯಕನನ್ನಾಗಿ ಆರಿಸಲಾಗಿತ್ತು ಅದು ಇತರ ಎಲ್ಲಾ ಪಕ್ಷಿಗಳನ್ನು ಮುನ್ನಡೆಸುತ್ತಾ ಬಂತು.

 

ಒಂದು ದಿನ ಈ ನಾಯಕತ್ವ ವಹಿಸಿದ್ದ ಹಕ್ಕಿಗೆ ಇಲ್ಲಿರುವ ಎಲ್ಲಾ ಪಕ್ಷಿಗಳಲ್ಲಿ ಯಾವುದು ಹೆಚ್ಚು ಎಚ್ಚರಿಕೆಯ ಹಕ್ಕಿ ಎಂದು ಕಂಡುಹಿಡಿಯುವ ಬಯಕೆಯಾಯಿತು. ಅದಕ್ಕಾಗಿ ಒಂದು ಸ್ಪರ್ಧೆಯನ್ನು ಘೋಷಿಸಿತು. ಆ ಸ್ಪರ್ಧೆ ಏನೆಂದರೆ ಎಲ್ಲಾ ಪಕ್ಷಿಗಳು ತಮ್ಮ ಗೂಡನ್ನು ಅಲಂಕರಿಸಬೇಕು. ಯಾವ ಗೂಡು ಸುಂದರವಾಗಿರುತ್ತದೋ ಅದರಲ್ಲಿ ಆ ನಾಯಕ ಹಕ್ಕಿ ಬಂದು ವಾಸಿಸುತ್ತದೆ. ಸಾಕಷ್ಟು ಬಹುಮಾನಗಳು ದೊರೆಯುತ್ತದೆ ಎಂದಿತು.

 

ಇದನ್ನು ಕೇಳಿ ಎಲ್ಲಾ ಪಕ್ಷಿಗಳು ಬಹಳ ಸಂತೋಷಪಟ್ಟವು. ನಾಯಕ ಬಂದು ನಮ್ಮ ಗೂಡಿನಲ್ಲಿ ವಾಸಿಸಿದರೆ ಎಷ್ಟು ಹೆಮ್ಮೆಯಾಗಿರುತ್ತದೆ ಎಂದು ಯೋಚಿಸಿ, ಎಲ್ಲಾ ಪಕ್ಷಿಗಳು ವಸ್ತುಗಳನ್ನು ಸಂಗ್ರಹಿಸಲು ಹಾರಿದವು. ಅವು ತಮ್ಮ ಗೂಡುಗಳನ್ನು ಬಣ್ಣದ ಕಾಗದ, ಸುಂದರವಾದ ಮಣಿಗಳು ಮತ್ತು ಮುತ್ತುಗಳಂತಹ ವಿವಿಧ ವಸ್ತುಗಳಿಂದ ಅಲಂಕರಿಸಿದವು. ರೇಮಾ ಎಂಬ ಕಾಗೆಯೂ ಇತ್ತು. ಅದು ಎಲ್ಲರಿಗಿಂತ ಹೆಚ್ಚು ವಸ್ತುಗಳನ್ನು ಸಂಗ್ರಹಿಸಿತ್ತು. ನನ್ನ ಗೂಡು ಈ ಎಲ್ಲ ವಸ್ತುಗಳಿಂದ ಅಲಂಕರಿಸಿದರೆ ಎಷ್ಟು ಸುಂದರವಾಗಿ ಕಾಣುತ್ತದೆ ಎಂದು ರೇಮಾ ಯೋಚಿಸಿತು. ನಾಯಕ ನನ್ನ ಮನೆಯಲ್ಲೇ ಖಂಡಿತವಾಗಿಯೂ ಇರುತ್ತಾರೆ ಎಂಬ ಭರವಸೆಯೊಂದಿಗೆ ತುಂಬಾ ಸಂತೋಷದಿಂದ ಮಲಗಿತು. ಮರುದಿನ ಬೆಳಿಗ್ಗೆ ಎದ್ದು ಇಂದೇ ಒಂದಿಷ್ಟು ಸಾಮಾನುಗಳನ್ನು ಸೇರಿಸಿದರೆ ಚೆನ್ನಾಗಿರುತ್ತದೆ ಎಂದುಕೊಂಡು ಹಾರಿಹೋಗಿ ಅನೇಕ ಸಾಕಷ್ಟು ಸಾಮಾನುಗಳೊಂದಿಗೆ ಸಾಯಂಕಾಲ ಗೂಡಿಗೆ ಬಂದು ಸೇರಿತು. ತಾನು ತಂದಿದ್ದ ಸಾಮಾನುಗಳನ್ನೆಲ್ಲ ನೋಡಿ ಖುಷಿಪಟ್ಟು ಆಯಾಸವಾಗಿದ್ದದರಿಂದ ನಾಳೆ ಅಲಂಕರಿಸೋಣ ಅಂದುಕೊಂಡು ನಿದ್ದೆಗೆ ಜಾರಿತು. ರೇಮಾ ಬೆಳಿಗ್ಗೆ ಎದ್ದಾಗ ನಾಯಕ ಪಕ್ಷಿ ಮತ್ತು ಇತರ ಕೆಲವು ಪಕ್ಷಿಗಳು ಗೂಡಿನ ಭೇಟಿಗೆ ಬಂದವು. ಗೂಡು ಅಲಂಕರಿಸದಿರುವುದನ್ನು ಕಂಡು ಮತ್ತೊಂದು ಗೂಡಿಗೆ ತೆರಳಿದವು. ರೇಮಾ ಗೊಳೋ ಎಂದು ಅಳತೊಡಗಿತು. ಇನ್ನು ಅಳುವುದರಿಂದ ಏನು ಪ್ರಯೋಜನ? ಗೂಡಿನ ಅಲಂಕಾರ ಮಾಡದೆ ನಾಳೆ ನೋಡಿಕೊಳ್ಳಬಹುದು ಎಂದು ಮುಂದೂಡಿದ್ದರಿಂದ ಎಲ್ಲವೂ ವ್ಯರ್ಥವಾಯಿತೇ, ನಾಯಕ ನನ್ನ ಮನೆಯಲ್ಲಿ ಇರಲು ಸಾಧ್ಯವಾಗಲಿಲ್ಲವೇ ಎಂದು ಅಳಲು ತೋಡಿಕೊಂಡಿತು.

 

ತಮ್ಮ ತಂಗಿ, ಅದೇ ರೀತಿ, ನಮ್ಮ ದೇಹವಾದ ದೇವಾಲಯವನ್ನು ಅಲಂಕರಿಸಲು ನಮಗೆ ಪ್ರಾರ್ಥನೆ ಮತ್ತು ಸತ್ಯವೇದ ಧ್ಯಾನ ಬಹಳ ಮುಖ್ಯ. ನಾಳೆ ನೋಡಿಕೊಳ್ಳಬಹುದು ಎಂದು ನಾವು ದಿನಗಳನ್ನು ಮುಂದೂಡುತ್ತಿದ್ದರೆ, ಯೇಸಪ್ಪ ನಮ್ಮ ಹೃದಯದಲ್ಲಿ ನೆಲೆಸಲು ಸಾಧ್ಯವಾಗುವುದಿಲ್ಲ ಮತ್ತು ಯೇಸಪ್ಪ ಬಂದಾಗ, ಕೈಬಿಡಲ್ಪಟ್ಟ ಜನವಾಗಿ ಕಾಣಲ್ಪಡುತ್ತೀಯ. ಆದ್ದರಿಂದ ಇಂದಿನಿಂದ ಪ್ರಾರ್ಥನೆ ಮಾಡಿ, ಸತ್ಯವೇದವನ್ನು ಓದಿ, ಹೃದಯವನ್ನು ಶುದ್ಧೀಕರಿಸಿಕೊಂಡು ಯೇಸಪ್ಪ ಬಂದು ಜೀವಿಸಲು ಇಂದೇ ಸ್ಥಳ ಕೊಡು Ok ನಾ.

- Mrs. ಸಾರಾ ಸುಭಾಷ್

 

*Whatsapp*

ಈ ಧ್ಯಾನ ಸಂದೇಶವನ್ನು ತಮಿಳು, ಇಂಗ್ಲಿಷ್, ಹಿಂದಿ, ಮಲಯಾಳಂ, ತೆಲುಗು, ಕನ್ನಡ, ಪಂಜಾಬಿ ಮತ್ತು ಒರಿಯಾ ಭಾಷೆಗಳಲ್ಲಿ ವಾಟ್ಸಾಪ್‌ನಲ್ಲಿ ಪಡೆದುಕೊಳ್ಳಲು *+91 94440 11864* ಈ ಸಂಖ್ಯೆಯನ್ನು ಸಂಪರ್ಕಿಸಿ.

 

www.vmm.org.in

ಈಮೈಲ್:- info@vmm.org.in

Android App: https://play.google.com/store/apps/details?id=com.infobells.vmmorgin

        

ವಿಲೇಜ್ ಮಿಷಿನರಿ ಮೊಮೆಂಟ್ ವಿರುಧುನಗರ್, ಇಂಡಿಯಾ-626001

ಪ್ರಾರ್ಥನಾ ಅವಶ್ಯಕತೆಗಾಗಿ :- +91 93455 40482



hacklink satın al casibom jojobet jojobet giriş deneme bonusu deneme bonusu veren siteler matbet matbet giriş matbet güncel giriş betsat betsat giriş betsat güncel giriş perabet perabet giriş perabet güncel giriş kingroyal kingroyal giriş kingroyal güncel giriş vaycasino vaycasino giriş vaycasino güncel giriş deneme bonusu deneme bonusu veren siteler holiganbet holiganbet giriş Superbetin superbetin giriş superbetin güncel giriş süperbetin aresbet aresbet giriş perabet perabet giriş milanbahis milanbahis giriş milanbahis milanbahis giriş holiganbet holiganbet giriş holiganbet holiganbet giriş jojobet jojobet giriş alobet alobet giriş casibom casibom giriş milanbahis milanbahis giriş casibom giriş casibom casibom jojobet jojobet giriş bahsegel