Village Missionary Movement         கிராம மிஷனரி இயக்கம்

ಧೈನಂದಿನ ಧ್ಯಾನ(Kannada) – 02.03.2023
Share:

By Village Missionary Movement

Thursday, 02-Mar-2023

ಧೈನಂದಿನ ಧ್ಯಾನ(Kannada) – 02.03.2023

 

ಕ್ರಿಸ್ತನಿಗೆ ಗುಲಾಮ

 

"ಪೂರ್ಣಾಂಗವಾದ ನಿಷ್ಕಳಂಕ ಯಜ್ಞದ ಕುರಿಯ ರಕ್ತದಿಂದಲೋ ಎಂಬಂತೆ ಕ್ರಿಸ್ತನ ಅಮೂಲ್ಯವಾದ ರಕ್ತದಿಂದಲೇ ಎಂದು ಬಲ್ಲಿರಲ್ಲವೇ" - 1 ಪೇತ್ರ 1:19

 

ಗುಲಾಮರ ವ್ಯಾಪಾರ ಜೋರಾಗಿ ನಡೆಯುತ್ತಿದ್ದ ಕಾಲದಲ್ಲಿ ಒಬ್ಬ ಆಂಗ್ಲ ವ್ಯಾಪಾರಿ ಗುಲಾಮರನ್ನು ಹೊತ್ತ ಹಡಗಿನಲ್ಲಿ ಪ್ರಯಾಣಿಸುತ್ತಿದ್ದ. ಒಂದು ದಿನ ಅವನು ಒಬ್ಬ ಗುಲಾಮನನ್ನು ನೋಡಿದನು. ಅವನ ಬಗ್ಗೆ ತಿಳಿಯುತ್ತಾ ತಿಳಿಯುತ್ತಾ, ಆ ಗುಲಾಮನ ಬಗ್ಗೆ ಅಪಾರವಾದ ಸಹಾನುಭೂತಿ ಮತ್ತು ಪ್ರೀತಿ ಏರ್ಪಟ್ಟಿತು. ಆ ಗುಲಾಮನ ಬಗ್ಗೆ ಗುಲಾಮ ವ್ಯಾಪಾರಿಯ ಬಳಿ ಕೇಳಿದಾಗ, ಅವನ ಬೆಲೆ ಅವನ ಪ್ರಯಾಣದ ವೆಚ್ಚಕ್ಕಿಂತ ಹೆಚ್ಚು. ಹಾಗಿದ್ದರೂ ಆ ಬೆಲೆ ಕೊಟ್ಟು ಗುಲಾಮನನ್ನು ಕೊಂಡುಕೊಂಡನು. ಗುಲಾಮನು ತನ್ನನ್ನು ತನಗೆ ದಾಸನಾಗಲು ಕೊಂಡುಕೊಂಡೆನೆಂದು ತಪ್ಪಾಗಿ ಭಾವಿಸಿ, ಅತೀವ ಕೋಪ ಮತ್ತು ಸಂಕಟದಿಂದ ಅವನನ್ನು ಶಪಿಸಿದನು. ಆದರೆ ಆಂಗ್ಲ ವ್ಯಾಪಾರಿಯು ಬಹಳ ಪ್ರೀತಿಯಿಂದ, "ಮಗನೇ, ನಿನ್ನನ್ನು ಮುಕ್ತಗೊಳಿಸಲು ನಾನು ನಿನ್ನನ್ನು ಹೆಚ್ಚಿನ ಬೆಲೆಗೆ ಖರೀದಿಸಿದೆ" ಎಂದು ಹೇಳಿದನು. ವಿಸ್ಮಯ ಮತ್ತು ಸಂತೋಷದಿಂದ, ಗುಲಾಮನು ಅವನ ಪಾದಗಳಿಗೆ ಬಿದ್ದು ಅಳುತ್ತಾ, "ಅಯ್ಯಾ, ನೀವು ನನ್ನ ಹೃದಯವನ್ನು ವಶಪಡಿಸಿಕೊಂಡಿದ್ದೀರಿ, ಮತ್ತು ನನ್ನ ಜೀವನದುದ್ದಕ್ಕೂ ನಾನು ನಿಮಗೆ ಸೇವೆ ಸಲ್ಲಿಸುತ್ತೇನೆ" ಅಂದನು.

 

ಈ ಲೆಂಟು ದಿನಗಳಲ್ಲಿ ನಮ್ಮನ್ನು ನಾವು ಪರೀಕ್ಷಿಸಿಕೊಳ್ಳೋಣ. ದೆವ್ವ, ಪಾಪ, ಶಾಪ ಮತ್ತು ನರಕದಿಂದ ನಮ್ಮನ್ನು ಮುಕ್ತಗೊಳಿಸಲು ಉಚಿತವಾಗಿ ತನ್ನ ಸ್ವಂತ ರಕ್ತವನ್ನು ಸುರಿಸಿ ತನ್ನ ಪ್ರಾಣವನ್ನು ನೀಡಿದ ರಕ್ಷಕನಾದ ಯೇಸುವಿನ ಕರೆ ಮತ್ತು ಪ್ರೀತಿಯನ್ನು ಅರಿಯದೇ ಎಷ್ಟು ಬಾರಿ ಇದ್ದೆವು? ನಾನು ಇನ್ನು ಮುಂದೆ ನಿಮಗೇ ಗುಲಾಮ ಎಂದು ಹೇಳಿ ನಾವು ನಮ್ಮ ಪ್ರಾಣ, ಆತ್ಮ ಮತ್ತು ಶರೀರವನ್ನು ಅರ್ಪಿಸುವುದರ ಹೊರತಾಗಿ, ಬೇರೆ ಹೇಗೆ ಅವರ ಕರೆಯನ್ನು ಪ್ರೀತಿಯನ್ನು ಸ್ವೀಕರಿಸುವುದು?

 

ಒಬ್ಬ ಗುಲಾಮನು ಸ್ವಯಂ ಚಿತ್ತವನ್ನು ಮಾಡಲು ಸಾಧ್ಯವಿಲ್ಲ. ಯಜಮಾನನ ಚಿತ್ತವನ್ನು ಮಾತ್ರ ಮಾಡಲು ಸಾಧ್ಯ. ಹೀಗೆ ತನ್ನ ಸ್ವಾರ್ಥವನ್ನು ತ್ಯಜಿಸಿ, ಪಾಡುಗಳನ್ನು ಸಹಿಸಿಕೊಳ್ಳಬೇಕು. ತನ್ನ ಜೀವನದುದ್ದಕ್ಕೂ ತನ್ನ ಯಜಮಾನನನ್ನೇ ಸೇವಿಸಬೇಕು. ನಾವು ಸಹ ಕ್ರಿಸ್ತನ ಗುಲಾಮರಾಗಿ ಆತನ ಮಾತಿಗೆ ವಿಧೇಯರಾಗಿ, ಆತನ ಚಿತ್ತವನ್ನು ಮಾಡಲು, ಸ್ವಾರ್ಥವನ್ನು ತ್ಯಜಿಸಲು ಪಾಡುಗಳನ್ನು ಸಹಿಸಲು ಮತ್ತು ನಮ್ಮ ಜೀವನದುದ್ದಕ್ಕೂ ಆತನನ್ನೇ ಸೇವಿಸಲು ನಮ್ಮನ್ನು ಈ ಲೆಂಟ್ ದಿನಗಳಲ್ಲಿ ಸಮರ್ಪಿಸಲು ಕೃಪೆ ತೋರಿಸಲಿ!

- Mrs. ಗೀತಾ ರಿಚರ್ಡ್

 

ಪ್ರಾರ್ಥನಾ ಅಂಶ:

ನಮ್ಮ ಸೇವಕರ ಪ್ರಯಾಣಗಳಲ್ಲಿ ದೇವರು ಸುರಕ್ಷತೆಯನ್ನು ದಯಪಾಲಿಸುವಂತೆ ಪ್ರಾರ್ಥಿಸಿರಿ.

 

*Whatsapp*

ಈ ಧ್ಯಾನ ಸಂದೇಶವನ್ನು ತಮಿಳು, ಇಂಗ್ಲಿಷ್, ಹಿಂದಿ, ಮಲಯಾಳಂ, ತೆಲುಗು, ಕನ್ನಡ, ಪಂಜಾಬಿ ಮತ್ತು ಒರಿಯಾ ಭಾಷೆಗಳಲ್ಲಿ ವಾಟ್ಸಾಪ್‌ನಲ್ಲಿ ಪಡೆದುಕೊಳ್ಳಲು *+91 94440 11864* ಈ ಸಂಖ್ಯೆಯನ್ನು ಸಂಪರ್ಕಿಸಿ.

 

www.vmm.org.in

ಈಮೈಲ್:- info@vmm.org.in

Android App: https://play.google.com/store/apps/details?id=com.infobells.vmmorgin

        

ವಿಲೇಜ್ ಮಿಷಿನರಿ ಮೊಮೆಂಟ್ ವಿರುಧುನಗರ್, ಇಂಡಿಯಾ-626001

ಪ್ರಾರ್ಥನಾ ಅವಶ್ಯಕತೆಗಾಗಿ :- +91 93455 40482



hacklink satın al casibom jojobet jojobet giriş deneme bonusu deneme bonusu veren siteler matbet matbet giriş matbet güncel giriş betsat betsat giriş betsat güncel giriş perabet perabet giriş perabet güncel giriş kingroyal kingroyal giriş kingroyal güncel giriş vaycasino vaycasino giriş vaycasino güncel giriş deneme bonusu deneme bonusu veren siteler holiganbet holiganbet giriş Superbetin superbetin giriş superbetin güncel giriş süperbetin aresbet aresbet giriş perabet perabet giriş milanbahis milanbahis giriş milanbahis milanbahis giriş holiganbet holiganbet giriş holiganbet holiganbet giriş jojobet jojobet giriş alobet alobet giriş casibom casibom giriş milanbahis milanbahis giriş casibom giriş casibom casibom jojobet jojobet giriş bahsegel