Village Missionary Movement         கிராம மிஷனரி இயக்கம்

ಧೈನಂದಿನ ಧ್ಯಾನ(Kannada) – 01.03.2023
Share:

By Village Missionary Movement

Tuesday, 28-Feb-2023

ಧೈನಂದಿನ ಧ್ಯಾನ(Kannada) – 01.03.2023

 

ಓಟವನ್ನು ನಿಲ್ಲಿಸಬೇಡ

 

"...ನೀನು ಕಾಲಾಳುಗಳ ಸಂಗಡ ಓಡಿ ಆಯಾಸಗೊಂಡಿದ್ದರೆ ಕುದುರೆಗಳೊಂದಿಗೆ ಓಡಿ ಹೇಗೆ ಮುಂದಾಗುವಿ?..." - ಯೆರೆಮಿಾಯ 12:5

 

ಹೆರಾಲ್ಡ್ ಅಬ್ರಹಾಂ ಇಂಗ್ಲೆಂಡ್‌ನ ಶ್ರೇಷ್ಠ ಓಟಗಾರ. ಅವರು 100 ಮೀಟರ್ ಓಟದಲ್ಲಿ ಬಹಳ ಪ್ರವೀಣರಾಗಿದ್ದರು. ಮತ್ತು ಅವರು ಎಲ್ಲಾ ಸ್ಪರ್ಧೆಗಳಲ್ಲಿ ಜಯಶಾಲಿಯಾಗಬೇಕೆಂಬ ಗುರಿ ಹೊಂದಿದ್ದರು. ಆ ದಿನಗಳಲ್ಲಿ ಅವರ ಪ್ರತಿಸ್ಪರ್ಧಿ ಎರಿಕ್ ಲಿಡ್ಲ್ ಎಂಬ ಓಟಗಾರ. ಎರಿಕ್ 400 ಮೀಟರ್ ಓಟದಲ್ಲಿ ಬಹಳ ಪ್ರವೀಣ. 1924 ರಲ್ಲಿ ಪ್ಯಾರಿಸ್‌ನಲ್ಲಿ ನಡೆದ ಒಲಿಂಪಿಕ್ಸ್‌ಗಾಗಿ ಇಬ್ಬರೂ ಕಠಿಣ ತರಬೇತಿ ಪಡೆದರು. ಎರಿಕ್ ಲಿಡ್ಲ್ ಒಲಿಂಪಿಕ್ಸ್‌ನಲ್ಲಿ 100 ಮೀಟರ್ ಹೀಟ್ಸ್‌ನಲ್ಲಿ ಹೆರಾಲ್ಡ್ ಅವರನ್ನು ಹಿಂದಿಕ್ಕಿದರು. ಇದರಿಂದ ಬೇಸರಗೊಂಡ ಹೆರಾಲ್ಡ್ ಇನ್ನು ಮುಂದೆ ಓಡುವುದಿಲ್ಲ ಎಂದು ನಿರ್ಧರಿಸಿದರು. ಇದನ್ನು ನೋಡಿದ ಅವರ ಸ್ನೇಹಿತರೊಬ್ಬರು ಹೆರಾಲ್ಡ್ ನನ್ನು ಧೈರ್ಯಪಡಿಸಿ ಮಾತನಾಡಲು ಪ್ರಯತ್ನಿಸಿದರು. ಅವನೋ ಕೋಪದಿಂದ, "ನಾನು ಗೆಲ್ಲುವುದಕ್ಕಾಗಿಯೇ ಓಡುತ್ತಿದ್ದೇನೆ. “ನಾನು ಗೆಲ್ಲಲು ಸಾಧ್ಯವಿಲ್ಲ ಅಂದಮೇಲೆ ಓಡೋದೂ ಇಲ್ಲ" ಎಂದು ಆವೇಶದಿಂದ ಉತ್ತರಿಸಿದರು. ಹೆರಾಲ್ಡ್‌ನ ಸ್ನೇಹಿತ ಅವನನ್ನು ಬುದ್ಧಿವಂತಿಕೆಯಿಂದ ನೋಡುತ್ತಾ ಹೀಗೆ ಹೇಳಿದರು, "ನೀನು ಓಡದೇ ಹೋದರೆ, ನೀನು ಇನ್ನೆಂದೂ ಗೆಲ್ಲಲು ಸಾಧ್ಯವಿಲ್ಲ" ಎಂದು ಹೇಳಿದರು. ಹೆರಾಲ್ಡ್ ಅವರ ಮಾತಿನ ಅರ್ಥವನ್ನು ತಿಳಿದು ಗ್ರಹಿಸಿದನು. 

 

ನಾವು ಸ್ಪರ್ಧಾತ್ಮಕ ಜಗತ್ತಿನಲ್ಲಿ ಬದುಕುತ್ತಿದ್ದೇವೆ. ನಮ್ಮ ವೈಫಲ್ಯದ ಕ್ಷಣಗಳಿಂದ ನಾವು ತುಂಬಾ ದುರ್ಬಲರಾಗತ್ತಿದ್ದೇವೆ. ಹೆರಾಲ್ಡ್ ನಂತೆ "ಇನ್ನು ಮುಂದೆ ನಾನು ಕೂಡ ಹೀಗೇ" ಎನ್ನುವ ದಯನೀಯ ಸ್ಥಿತಿಗೆ ಇಳಿದಿದ್ದೇವೆ. ಆದರೆ ಇದು ಸರಿಯಾದ ವಿಧಾನವಲ್ಲ. ನೀವು ಸೋಲನ್ನು ಎದುರಿಸದಿದ್ದರೆ, ಅದರಿಂದ ಮತ್ತೆ ಹೊರಬರುವುದು ಹೇಗೆ? ಇದರಿಂದ ನಾನೇನು ಕಲಿತೆ? ಎಂದು ಸ್ವಲ್ಪ ನಿಧಾನಿಸಿ ಅರಿತುಕೊಳ್ಳುವುದು ಬಹಳ ಪ್ರಾಮುಖ್ಯ.

 

ಕ್ರೈಸ್ತ ಜೀವನದ ನಮ್ಮ ಆಧ್ಯಾತ್ಮಿಕ ಓಟದಲ್ಲಿ ದಣಿವರಿಯಿಲ್ಲದೆ ಓಡಲು ದೇವರು ನಮ್ಮನ್ನು ಪ್ರೋತ್ಸಾಹಿಸುತ್ತಿದ್ದಾರೆ. ಎಲೀಯನಂತೆ, "ಸಾಕು, ಕರ್ತನೇ" ಎಂದು ಹೇಳುವ ಸನ್ನಿವೇಶಗಳು ನಮ್ಮ ಸುತ್ತಲೂ ಇರಬಹುದು. ಆದರೆ ದೇವರು ನಮ್ಮನ್ನು ನೋಡಿ, "ಎದ್ದೇಳು, ನೀನು ನಿನ್ನ ಶಕ್ತಿ ಮೀರುವಷ್ಟು ಪ್ರಯಾಣಮಾಡಬೇಕಾಗಿದೆ ಅಂದನು. "ನಿಮಗೆ ದೊರಕಿರುವ ಬಿರುದನ್ನು ಅಪಹರಿಸುವದಕ್ಕೆ ಅವಕಾಶಕೊಡಬೇಡಿರಿ

(ಕೊಲೊ. 2:19). ನಮ್ಮನ್ನು ನೋಡಿ ದೇವರು ಹೇಳುತ್ತಿದ್ದಾರೆ, "ನಂಬಿಕೆಯಿಂದ ಓಟವನ್ನು ಮುಂದುವರೆಸಿರಿ" ಎಂದು. ಹೌದು, ನಾನು ವ್ಯರ್ಥವಾಗಿ ಓಡಲಿಲ್ಲ ಮತ್ತು ವ್ಯರ್ಥವಾಗಿ ಶ್ರಮಿಸಲಿಲ್ಲ ಎಂಬ ಸಂತೋಷ ಕ್ರಿಸ್ತನ ದಿನದಲ್ಲಿ ನಮಗುಂಟಾಗುತ್ತದೆ. ಆಮೆನ್!

- P. ಜೇಕಬ್ ಶಂಕರ್

 

ಪ್ರಾರ್ಥನಾ ಅಂಶ:

ಈ ತಿಂಗಳು ಪೂರ್ತಿಯಾಗಿ ನಡೆಯುವಂತಹ ಸೇವೆಗಳಲ್ಲಿ ದೇವರ ಹಸ್ತವು ಜೊತೆ ಇದ್ದು ನಡೆಸುವಂತೆ ಪ್ರಾರ್ಥಿಸಿರಿ.

 

*Whatsapp*

ಈ ಧ್ಯಾನ ಸಂದೇಶವನ್ನು ತಮಿಳು, ಇಂಗ್ಲಿಷ್, ಹಿಂದಿ, ಮಲಯಾಳಂ, ತೆಲುಗು, ಕನ್ನಡ, ಪಂಜಾಬಿ ಮತ್ತು ಒರಿಯಾ ಭಾಷೆಗಳಲ್ಲಿ ವಾಟ್ಸಾಪ್‌ನಲ್ಲಿ ಪಡೆದುಕೊಳ್ಳಲು *+91 94440 11864* ಈ ಸಂಖ್ಯೆಯನ್ನು ಸಂಪರ್ಕಿಸಿ.

 

www.vmm.org.in

ಈಮೈಲ್:- info@vmm.org.in

Android App: https://play.google.com/store/apps/details?id=com.infobells.vmmorgin

        

ವಿಲೇಜ್ ಮಿಷಿನರಿ ಮೊಮೆಂಟ್ ವಿರುಧುನಗರ್, ಇಂಡಿಯಾ-626001

ಪ್ರಾರ್ಥನಾ ಅವಶ್ಯಕತೆಗಾಗಿ :- +91 93455 40482



hacklink satın al