Village Missionary Movement         கிராம மிஷனரி இயக்கம்

ಧೈನಂದಿನ ಧ್ಯಾನ(Kannada) – 28.02.2023
Share:

By Village Missionary Movement

Monday, 27-Feb-2023

ಧೈನಂದಿನ ಧ್ಯಾನ(Kannada) – 28.02.2023

 

ದೇವರ ಆಯ್ಕೆ

 

"ಇದಲ್ಲದೆ ದೇವರು ಇರುವವುಗಳನ್ನು ಇಲ್ಲದಂತಾಗಿ ಮಾಡುವ ಹಾಗೆ ಈ ಲೋಕದ ಹೀನವಾದವರನ್ನೂ ಅಸಡ್ಡೆಯಾದವರನ್ನೂ ಆರಿಸಿಕೊಂಡದ್ದಲ್ಲದೆ ಗಣನೆಗೆ ಬಾರದವರನ್ನೂ ಆರಿಸಿಕೊಂಡಿದ್ದಾನೆ" - 1 ಕೊರಿಂಥ 1:28

 

ಸರ್ವಶಕ್ತನಾದ ಯೇಸು ಕ್ರಿಸ್ತನ ಇಂಪಾದ ಹೆಸರಿನಲ್ಲಿ ನಿಮಗೆ ನನ್ನ ಪ್ರೀತಿಯ ಶುಭಾಶಯಗಳು! ನಾನು ನನ್ನ ಕುಟುಂಬದಲ್ಲಿ ಮೂವರು ಸಹೋದರರೊಂದಿಗೆ ನಾಲ್ಕನೇ ಮಗಳಾಗಿ ಜನಿಸಿದೆ. ಗಂಡು ಮಗುವಿನ ನಿರೀಕ್ಷೆಯಲ್ಲಿದ್ದ ನನ್ನ ಹೆತ್ತವರಿಗೆ ನನ್ನ ಜನ್ಮವು ತುಂಬಾ ನಿರಾಶಾದಾಯಕವಾಗಿತ್ತು. ಹಾಗಾಗಿ ನನ್ನ ತಂದೆ ತಾಯಿಯ ಪ್ರೀತಿ ಸಿಗಲಿಲ್ಲ. ಪ್ರೀತಿಯ ಹುಡುಕಾಟದಲ್ಲಿ ಈ ಪ್ರಪಂಚದ ಮಾಯಾ ಜಾಲಗಳಲ್ಲಿ ಸಿಕ್ಕಿ ಮೋಸ ಹೋದೆ. ನನ್ನ ಹದಿಹರೆಯದ ವರ್ಷಗಳಲ್ಲಿ ನಾನು ಅಧ್ಯಯನದಲ್ಲಿ ಆಸಕ್ತಿ ಹೊಂದಿದ್ದೆ. ನನ್ನ ಪೋಷಕರು ನನ್ನನ್ನು ಕೆಲಸಕ್ಕೆ ಕಳುಹಿಸಿದರು. ಅದರಲ್ಲೂ ನನಗೆ ಸಂತೋಷವಿರಲಿಲ್ಲ. ಆದಾಗ್ಯೂ, ನನ್ನ ಎಲ್ಲಾ ದುಃಖದ ಸಮಯದಲ್ಲಿ ಸತ್ಯವೇದವೇ ನನಗೆ ಆದರಣೆಯನ್ನುಂಟು ಮಾಡುವ ನಿಧಿಯಾಗಿತ್ತು. "ನನ್ನ ಕಷ್ಟದ ಸಮಯದಲ್ಲೆಲ್ಲಾ ಏಕೆ ನನಗೆ ಮಾತ್ರ ಇಷ್ಟೊಂದು ನೋವು?" ಎಂದು ದೇವರ ಬಳಿ ಪ್ರಶ್ನೆ ಮಾಡುತ್ತಿದ್ದೆ. ಅವರು ಕೂಡ "ತಂದೆಯು ತಾನು ಪ್ರೀತಿಸುವ ಮಗನನ್ನೇ ಶಿಕ್ಷಿಸುತ್ತಾರೆ" ಎಂದು ಉತ್ತರ ಕೊಡುತ್ತಿದ್ದರು. ಸ್ವಲ್ಪ ದಿನಗಳ ನಂತರ, ಸಂತೋಷವೇ ಇಲ್ಲದ ನನ್ನ ಜೀವನದಲ್ಲಿ ದೇವರು ಸಂತೋಷವನ್ನು ತಂದರು. ನನಗೆ ಒಳ್ಳೆಯ ಗಂಡನನ್ನು, ಇಬ್ಬರು ಮಕ್ಕಳನ್ನು ಮತ್ತು ಉತ್ತಮ ಸಂಬಂಧಗಳನ್ನು ನೀಡಿ ನನ್ನನ್ನು ಅವರಿಗೆ ಸಾಕ್ಷಿಯನ್ನಾಗಿ ಮಾರ್ಪಡಿಸಿದರು. ಆದ್ದರಿಂದ ಇನ್ನೂ ಹೆಚ್ಚಾಗಿ ಆತನ ಚಿತ್ತವನ್ನು ಮಾಡಲು, ನಾನು ನನ್ನ ಕುಟುಂಬವು ಒಟ್ಟಾಗಿ ಸೇರಿ ಸೇವೆ ಮಾಡಲು ನಮ್ಮನ್ನು ಸಮರ್ಪಿಸಿಕೊಂಡೆವು.

 

ಸತ್ಯವೇದದಲ್ಲಿಯೂ ಸಹ, ದಾವೀದನೆಂಬ ದೇವರ ಮನುಷ್ಯನು ತನ್ನ ಸಹೋದರರ ಮಧ್ಯದಲ್ಲಿ ಮರೆಯಲ್ಪಟ್ಟವರಾಗಿದ್ದರು ಮತ್ತು ತಂದೆಯೇ ಅವರನ್ನು ಕುರಿಗಳನ್ನು ಮೇಯಿಸಲು ಕಳುಹಿಸಿದರು. ಆದರೆ ಅವರು ಆ ಸ್ಥಳದಲ್ಲೂ ದೇವರೊಂದಿಗೆ ಜೀವಿಸುತ್ತಾ, ಸ್ತುತಿಸುತ್ತಾ, ಪ್ರಾರ್ಥಿಸುತ್ತಾ ಇದ್ದುದರಿಂದ ತನ್ನ ಮುಂದೆ "ಗೋಲಿಯಾತ್" ನಿಂತರೂ ಅವರು ಭಯಪಡದೆ ನಿರ್ಭಯವಾಗಿ ಯುದ್ಧ ಮಾಡಿ ಯಶಸ್ವಿಯಾದರು. ಅಷ್ಟೇ ಅಲ್ಲ, ಸಕಲ ಇಸ್ರಾಯೇಲ್ ಜನರಿಗೆ ಅರಸನಾಗಿ ಅಭಿಷೇಕಿಸಲ್ಪಟ್ಟು ಉನ್ನತೀಕರಿಸಲ್ಪಟ್ಟರು. ಈ ಇಡೀ ಭೂಮಿಯನ್ನು ಸೃಷ್ಟಿ ಮಾಡಿದ ದೇವರೇ, "ದಾವೀದನು ನನ್ನ ಹೃದಯಕ್ಕೆ ಒಪ್ಪುವವನು" ಎಂದು ಸಾಕ್ಷಿ ಹೇಳಿದರು.

 

ನಾವೂ ಸಹ ಇಂದು ಇತರರಿಂದ ನಿರ್ಲಕ್ಷಿಸಲ್ಪಟ್ಟವರಾಗಿ, ತಿರಸ್ಕರಿಸಲ್ಪಟ್ಟವರಾಗಿ ಮತ್ತು ಯಾವುದಕ್ಕೂ ಪ್ರಯೋಜನವಿಲ್ಲದವರು ಎಂದು ಕೂಡ ಕರೆಯಲ್ಪಡುವವರಾಗಿರಬಹುದು. ಆದರೆ, "ನಿಜವಾದ ಬೆಳಕು ಲೋಕಕ್ಕೆ ಬರುವದಾಗಿತ್ತು; ಆ ಬೆಳಕೇ ಪ್ರತಿ ಮನುಷ್ಯನಿಗೂ ಬೆಳಕನ್ನು ಕೊಡುವಂಥದು (ಯೋಹಾನ 1:9) ಎಂಬ ವಾಕ್ಯದಂತೆ ಇಂದು ನಮ್ಮನ್ನು ಇಡೀ ಜಗತ್ತಿಗೆ ಬೆಳಕನ್ನು ನೀಡುವ ದೀಪವನ್ನಾಗಿ ಮಾರ್ಪಡಿಸಲು ಯೇಸು ಇದ್ದಾರೆ. ತನ್ನನ್ನು ಹುಡುಕುವವರನ್ನು ಆತನು ಎಂದಿಗೂ ಕೈಬಿಡುವುದಿಲ್ಲ. ನಮ್ಮ ಹೃದಯವನ್ನು ಯೇಸುವಿಗೆ ಕೊಟ್ಟರೆ ಸಾಕು. ಸತ್ಯವೇದದಲ್ಲಿ, “ಮನುಷ್ಯರು ನೋಡುವ ಪ್ರಕಾರ ನಾನು ನೋಡುವುದಿಲ್ಲ; ಮನುಷ್ಯನು ಮುಖವನ್ನು ನೋಡುತ್ತಾನೆ; "ಕರ್ತನೋ ಹೃದಯವನ್ನು ನೋಡುತ್ತಾರೆ" ಎಂದು ದೇವರು ಹೇಳುತ್ತಿದ್ದಾರೆ. ಹೌದು, ಹೃದಯವನ್ನು ನೋಡುವ ಯೇಸುವಿನ ಹೃದಯಕ್ಕೆ ತಕ್ಕವರಾಗಿ ನಾವು ಬದುಕಿದರೆ ಸಾಕು. ದೇವರು ನಮ್ಮನ್ನೂ ಆಶೀರ್ವದಿಸಿ ಮೇಲಕ್ಕೆತ್ತುವುದು ಖಚಿತ.

- Mrs. ಜ್ಞಾನಸೆಲ್ವಂ ಸೆಲ್ವರಾಜ್

 

ಪ್ರಾರ್ಥನಾ ಅಂಶ:

7000 ಮಿಷನರಿಗಳು 1 ಲಕ್ಷ ಹಳ್ಳಿಗಳು ಎಂಬ ಗುರಿಯನ್ನು ತಲುಪಲು ದೇವರು ಸಹಾಯ ಮಾಡುವಂತೆ ಪ್ರಾರ್ಥಿಸಿರಿ.

 

*Whatsapp*

ಈ ಧ್ಯಾನ ಸಂದೇಶವನ್ನು ತಮಿಳು, ಇಂಗ್ಲಿಷ್, ಹಿಂದಿ, ಮಲಯಾಳಂ, ತೆಲುಗು, ಕನ್ನಡ, ಪಂಜಾಬಿ ಮತ್ತು ಒರಿಯಾ ಭಾಷೆಗಳಲ್ಲಿ ವಾಟ್ಸಾಪ್‌ನಲ್ಲಿ ಪಡೆದುಕೊಳ್ಳಲು *+91 94440 11864* ಈ ಸಂಖ್ಯೆಯನ್ನು ಸಂಪರ್ಕಿಸಿ.

 

www.vmm.org.in

ಈಮೈಲ್:- info@vmm.org.in

Android App: https://play.google.com/store/apps/details?id=com.infobells.vmmorgin

        

ವಿಲೇಜ್ ಮಿಷಿನರಿ ಮೊಮೆಂಟ್ ವಿರುಧುನಗರ್, ಇಂಡಿಯಾ-626001

ಪ್ರಾರ್ಥನಾ ಅವಶ್ಯಕತೆಗಾಗಿ :- +91 93455 40482



hacklink satın al holiganbet giriş matbet holiganbet holiganbet giriş casibom giriş casibom casibom giriş casibom matbet matbet giriş imajbet imajbet giriş perabet perabet giriş coinbar coinbar giriş klasbahis klasbahis giriş supertotobet giriş supertotobet jojobet giriş jojobet casibom casibom giriş jojobet giriş jojobet interbahis interbahis giriş mariobet mariobet giriş betpas betpas giriş artemisbet artemisbet giriş marsbahis giriş marsbahis restbet restbet giriş egebet egebet giriş Hiltonbet Hiltonbet giriş jojobet alobet alobet giriş betcio betcio giriş grandpashabet grandpashabet giriş superbetin superbetin giriş perabet perabet giriş pashagaming tarafbet editörbet perabet perabet giriş grandbetting hitbet xslot betkom giriş betkanyon giriş perabet perabet giriş Hiltonbet Hiltonbet giriş grandpashabet grandpashabet giriş grandpashabet güncel giriş grandpashabet grandpashabet giriş grandpashabet giriş güncel jojobet jojobet giriş holiganbet holiganbet giriş casibom casibom giriş jojobet jojobet giriş alobet alobet giriş marsbahis marsbahis giriş milanobet jojobet grandpashabet jojobet casinoroyal jojobet holiganbet ibizabet holiganbet amkbet sonbahis betgit cratosroyalbet cratosroyalbet tlcasino