Village Missionary Movement         கிராம மிஷனரி இயக்கம்

ಧೈನಂದಿನ ಧ್ಯಾನ(Kannada) – 27.02.2023
Share:

By Village Missionary Movement

Sunday, 26-Feb-2023

ಧೈನಂದಿನ ಧ್ಯಾನ(Kannada) – 27.02.2023

 

ಸೃಷ್ಟಿಯ ಮಹತ್ವ

 

"ನಮ್ಮ ಕರ್ತನಾದ ಯೆಹೋವನೇ, ನಿನ್ನ ನಾಮವು ಭೂಲೋಕದಲ್ಲೆಲ್ಲಾ ಎಷ್ಟೋ ಮಹಿಮೆಯುಳ್ಳದ್ದು. ಆಕಾಶಮಂಡಲದಲ್ಲಿ ನಿನ್ನ ವೈಭವವನ್ನು ಪ್ರಕಾಶಪಡಿಸಿದ್ದೀ" - ಕೀರ್ತನೆ 8:1

 

ಸುಮಾರು ನಲವತ್ತು ವರ್ಷಗಳ ಹಿಂದೆ, ನಾನು ಬ್ಯಾಂಕಿನಲ್ಲಿ ಕೆಲಸ ಮಾಡುತ್ತಿದ್ದಾಗ, ಒಂದು ತರಬೇತಿ ಕಾರ್ಯಕ್ರಮವನ್ನು ನಡೆಸಲಾಯಿತು. ಇದರಲ್ಲಿ ಭಾರತದಾದ್ಯಂತ ಅನೇಕ ಜನರು ಭಾಗವಹಿಸಿದ್ದರು. ಚೆನ್ನೈ ಕಡಲತೀರದ ಉದ್ದಕ್ಕೂ ನಮಗೆ ಕೊಠಡಿಗಳನ್ನು ಕಾಯ್ದಿರಿಸಲಾಗಿತ್ತು. ಅಲ್ಲಿಗೆ ಬಂದವರಲ್ಲಿ ಕೆಲವರು ಉತ್ತರ ಭಾರತದ ಮಧ್ಯ ಭಾಗದವರು. ಅವರು ಹಿಂದೆಂದೂ ಸಮುದ್ರವನ್ನು ನೋಡಿರಲಿಲ್ಲ. ಟಿವಿಯೂ ಬಳಕೆಯಲ್ಲಿಲ್ಲದ ಕಾಲ. ಆದ್ದರಿಂದ ಅವರು ಸಮುದ್ರವನ್ನು ನೋಡಿ ಆಶ್ಚರ್ಯಚಕಿತರಾದರು. ಅವರು ಮುಂಜಾನೆ ಎದ್ದು ನಡೆದು ಸಮುದ್ರದ ಅದ್ಭುತ ಸೌಂದರ್ಯ, ಸೂರ್ಯೋದಯದ ಸೌಂದರ್ಯ, ಆಕಾಶದ ವರ್ಣರಂಜಿತ ದೃಶ್ಯಗಳು, ಬೆರಗುಗೊಳಿಸುವ ಸಮುದ್ರದ ಅಲೆಗಳು ಮತ್ತು ದಡದಲ್ಲಿ ಅಪ್ಪಳಿಸುವ ಸೌಂದರ್ಯವನ್ನು ನೋಡಿ ಆಶ್ಚರ್ಯಚಕಿತರಾದರು. ಅದಕ್ಕೂ ಮೊದಲು ನಾನು ಸಮುದ್ರವನ್ನು ಆಗಾಗ ನೋಡಿದ್ದರೂ ಅವರು ಹೇಳಿದ ನಂತರವೇ ಅದರ ಸೊಬಗು ಇನ್ನೂ ಹೆಚ್ಚಾಗಿ ಕಂಡಿತು.

 

ಪ್ರಿಯರೇ! ನಮ್ಮ ಸುತ್ತಲಿರುವ ದೇವರ ಸೃಷ್ಟಿಯನ್ನು ಕೃತಜ್ಞತೆಯ ಹೃದಯದಿಂದ ನೋಡಿದ ಅನುಭವ ನಮಗಿದೆಯೇ? ಅರಸನಾದ ದಾವೀದನು ಕುರುಬನಾಗಿ ತನ್ನ ತಂದೆಯ ಕುರಿಗಳನ್ನು ಮೇಯಿಸುತ್ತಿದ್ದ ಕಾಲದಲ್ಲಿ, ಅವರು ದೇವರನ್ನು ಹುಡುಕುತ್ತಾ, ಆತನನ್ನು ಧ್ಯಾನಿಸಿ ಆನಂದಿಸುವ ಅನುಭವವನ್ನು ಹೊಂದಿದ್ದರು. ಕೀರ್ತನೆ 8:1 ರಲ್ಲಿ, "ನಮ್ಮ ಕರ್ತನಾದ ಯೆಹೋವನೇ, ನಿನ್ನ ನಾಮವು ಭೂಲೋಕದಲ್ಲೆಲ್ಲಾ ಎಷ್ಟೋ ಮಹಿಮೆಯುಳ್ಳದ್ದು!" ಎಂದು ಹೆಮ್ಮೆಯಿಂದ ಹೇಳುತ್ತಾರೆ. ಮೂರನೆಯ ವಚನದಲ್ಲಿ ದೇವರು ಸೃಷ್ಟಿಸಿದ ಆಕಾಶ, ಚಂದ್ರ, ನಕ್ಷತ್ರಗಳನ್ನು ನೋಡಿ ಭ್ರಮಿಸಿ, ಇಷ್ಟನೆಲ್ಲಾ ಸೃಷ್ಟಿಸಿದ ಮಹಾದೇವರು ತನ್ನನ್ನೂ ವಿಚಾರಿಸುತ್ತಾರಲ್ಲಾ ಅಂದುಕೊಂಡು ದೇವರನ್ನು ಸ್ತುತಿಸುತ್ತಾರೆ.

 

ನೀವು ಎಂದಾದರೂ ನಕ್ಷತ್ರಗಳು, ಚಂದ್ರ ಅಥವಾ ಸಾಗರವನ್ನು ನೋಡಿದ್ದೀರಾ ಮತ್ತು ಅವುಗಳನ್ನು ಸೃಷ್ಟಿಸಿದ ದೇವರು ಹೇಗಿದ್ದಾರೆ ಎಂದು ಯೋಚಿಸಿದ್ದುಂಟಾ? ಇಂತಹ ಒಂದು ಹೃದಯವಿಲ್ಲದಿದ್ದರೆ ನಾವು ದೈನಂದಿನ ಕೆಲಸಗಳಲ್ಲಿ ಮಗ್ನರಾಗಿ, ದೇವರ ಮಹಿಮೆಯನ್ನು ಧ್ಯಾನಿಸಲು ಶಕ್ತಿಹೀನರಾಗಿ, ಕೃತಜ್ಞತೆ ಇಲ್ಲದ ಹೃದಯವುಳ್ಳವರಾಗಿ ಮಾರ್ಪಡಬಹುದು. ಇವೆಲ್ಲವೂ ಸಾಮಾನ್ಯ ಸಂಗತಿಗಳೆಂದು ನಮ್ಮ ಸುತ್ತಲಿರುವ, ಕಂಡುಕೊಳ್ಳದೇ ಬಿಟ್ಟ ದೇವರ ಕ್ರಿಯೆಗಳನ್ನು ಯೋಚಿಸಿ ನೋಡೋಣ. ನಮ್ಮಲ್ಲಿಲ್ಲದ ಯಾವುದೋ ಒಂದು ವಿಷಯದ ಬಗ್ಗೆ ಚಿಂತಿಸದೆ, ನಮಗಾಗಿ ದೇವರು ಸೃಷ್ಟಿಸಿರುವ ದೊಡ್ಡ ಮಹತ್ವಗಳನ್ನು ಆಸೆಯಿಂದ ನೋಡುತ್ತಾ ದೇವರನ್ನು ಸ್ತುತಿಸಲು ಕಲಿತುಕೊಂಡರೆ ಚೆನ್ನಾಗಿರುತ್ತದೆ. 

- Mrs. ಭುವನಾ ಧನಪಾಲನ್

 

ಪ್ರಾರ್ಥನಾ ಅಂಶ: 

ತಮಿಳುನಾಡಿನಲ್ಲಿ ಆಲಯಗಳಿಲ್ಲದ ಸಾವಿರ ಹಳ್ಳಿಗಳಲ್ಲಿ ಸಭೆಗಳು ಕಟ್ಟಲ್ಪಡುವಂತೆ ಪ್ರಾರ್ಥಿಸಿರಿ.

 

*Whatsapp*

ಈ ಧ್ಯಾನ ಸಂದೇಶವನ್ನು ತಮಿಳು, ಇಂಗ್ಲಿಷ್, ಹಿಂದಿ, ಮಲಯಾಳಂ, ತೆಲುಗು, ಕನ್ನಡ, ಪಂಜಾಬಿ ಮತ್ತು ಒರಿಯಾ ಭಾಷೆಗಳಲ್ಲಿ ವಾಟ್ಸಾಪ್‌ನಲ್ಲಿ ಪಡೆದುಕೊಳ್ಳಲು *+91 94440 11864* ಈ ಸಂಖ್ಯೆಯನ್ನು ಸಂಪರ್ಕಿಸಿ.

 

www.vmm.org.in

ಈಮೈಲ್:- info@vmm.org.in

Android App: https://play.google.com/store/apps/details?id=com.infobells.vmmorgin

        

ವಿಲೇಜ್ ಮಿಷಿನರಿ ಮೊಮೆಂಟ್ ವಿರುಧುನಗರ್, ಇಂಡಿಯಾ-626001

ಪ್ರಾರ್ಥನಾ ಅವಶ್ಯಕತೆಗಾಗಿ :- +91 93455 40482



hacklink satın al meritking meritking giriş meritking güncel giriş perabet perabet perabet giriş deneme bonusu deneme bonusu veren siteler Vdcasino vaycasino vaycasino giriş vaycasino güncel giriş matbet matbet giriş matbet güncel giriş matbet matbet giriş matbet güncel giriş betsmove betsmove giriş betsmove güncel giriş betsat betsat giriş betsat güncel giriş perabet perabet giriş perabet güncel giriş dumanbet giriş dumanbet dumanbet güncel giriş kingroyal kingroyal giriş kingroyal güncel giriş marsbahis marsbahis giriş marsbahis güncel giriş kingroyal kingroyal giriş kingroyal güncel giriş meritking meritking giriş meritking güncel giriş meritbet meritbet giriş meritbet güncel giriş nakitbahis nakitbahis giriş nakitbahis güncel giriş vaycasino vaycasino giriş vaycasino güncel giriş Holiganbet holiganbet giriş holiganbet güncel giriş bahissenin bahissenin giriş bahissenin güncel giriş bayconticasino bayconticasino giriş bayconticasino güncel giriş imajbet imajbet giriş imajbet güncel giriş prizmabet prizmabet giriş pashagaming pashagaming giriş pashagaming güncel giriş interbahis interbahis giriş interbahis güncel giriş jojobet superbetin matbet jojobet marsbahis marsbahis güncel marsbahis güncel giriş deneme bonusu deneme bonusu veren siteler bahsegel vaycasino vaycasino giriş perabet perabet giriş holiganbet holiganbet giriş holiganbet holiganbet giriş holiganbet holiganbet giriş jojobet jojobet giriş Superbetin superbetin giriş superbetin güncel giriş süperbetin