By Village Missionary Movement
Sunday, 26-Feb-2023ಧೈನಂದಿನ ಧ್ಯಾನ(Kannada) – 26.02.2023 (Kids Special)
ರೀನಾ ಮತ್ತು ಕುರಿಮರಿ
"ಕಷ್ಟಾನುಭವವು ಹಿತಕರವಾಯಿತು; ಅದರಿಂದಲೇ ನಿನ್ನ ನಿಬಂಧನೆಗಳನ್ನು ಕಲಿತೆನು" - ಕೀರ್ತನೆ 119:71
Hello ಪುಟಾಣಿಗಳೇ, ನೀವು ಯಾರನ್ನು ಪ್ರೀತಿಸುತ್ತಿದ್ದೀರ ಮತ್ತು ನೀವು ಯಾವ ಉತ್ಪನ್ನಗಳ ಮೇಲೆ ಪ್ರೀತಿಯಿಂದಿದ್ದೀರ? ಕೆಲವರು ಬೆಕ್ಕಿನ ಮರಿಗಳನ್ನು ಇಷ್ಟಪಡುತ್ತಾರೆ, ಕೆಲವರು ನಾಯಿಮರಿಗಳನ್ನು ಇಷ್ಟಪಡುತ್ತಾರೆ. ಆದರೆ ಈ ಕಥೆಯಲ್ಲಿರುವ ರೀನಾಗೆ ಏನು ಇಷ್ಟ ಎಂದು ನೋಡೋಣ್ವಾ?
ರೀನಾ ಚೆನ್ನಾಗಿ ಓದುವಂತಹ ದೇವರಿಗೆ ಭಯಪಡುವಂತಹ ಮಗು. ಏನು ಮಾಡಿದರೂ ಪ್ರಾರ್ಥನೆ ಮಾಡದೆ ಮಾಡುವುದಿಲ್ಲ. ಅವಳು ತನ್ನ ಹೆತ್ತವರಿಗೆ ತುಂಬಾ ವಿಧೇಯಳಾಗಿರುತ್ತಾಳೆ. ಆಕೆಯ ಪೋಷಕರು ಒಂದು ಕುರಿಮರಿಯನ್ನು ತೆಗೆದುಕೊಂಡು ಅದನ್ನು ಮನೆಯಲ್ಲಿ ಸಾಕಲು ಪ್ರಾರಂಭಿಸಿದರು. ರೀನಾಗೆ ಆ ಕುರಿಮರಿ ತುಂಬಾ ಇಷ್ಟವಾಯಿತು. ಅದನ್ನು ಆಸೆಯಿಂದ ಬೆಳೆಸಿದಳು. ಕುಟುಂಬ ಪ್ರಾರ್ಥನೆಯ ಸಮಯದಲ್ಲಿ ಮತ್ತು ಮಲಗುವ ಸಮಯದಲ್ಲಿಯೂ ಅವಳು ಅದನ್ನು ತನ್ನ ಹತ್ತಿರದಲ್ಲೇ ಇಟ್ಟುಕೊಳ್ಳುತ್ತಿದ್ದಳು. ಕುರಿಮರಿಯ ಮೇಲಿನ ಪ್ರೀತಿಯಲ್ಲಿ, ಅವಳು ತನ್ನ ಪ್ರಾರ್ಥನೆಯನ್ನು ಮತ್ತು ಬೈಬಲ್ ಓದುವುದನ್ನು ಸ್ವಲ್ಪ ಸ್ವಲ್ಪವಾಗಿ ಕಡಿಮೆಮಾಡಿಬಿಟ್ಟಳು. ಪೋಷಕರು ಎಷ್ಟೇ ಗದರಿಸಿದರೂ ಕೇಳಲಿಲ್ಲ. ದಿನಗಳು ಕಳೆದವು. ರೀನಾ ಕೂಡ ಬೆಳೆದು ಕಾಲೇಜಿಗೆ ಹೋಗತೊಡಗಿದಳು. ಕುರಿಮರಿ ಕೂಡ ದೊಡ್ಡದಾಗಿ ಮಾರ್ಪಟ್ಟಿತು.
ಒಂದು ದಿನ ಕಾಲೇಜಿಗೆ ಹೋಗಿದ್ದ ರೀನಾ ಬ್ಯಾಗ್ ಎಸೆದು ಕೈಯಲ್ಲಿ ಕುರಿಯನ್ನು ಕೈಯಲ್ಲಿ ಹಿಡಿದು ಹೊಲಕ್ಕೆ ಹೋದಳು. ಅಲ್ಲಿ ಸಾಕಷ್ಟು ಕುರಿಗಳು ಇದ್ದುದರಿಂದ ಆಕೆ ಕೈಯಲ್ಲಿ ಹಿಡಿದಿದ್ದ ಹಗ್ಗ ತುಂಡಾಗಿ ಕುರಿ ಓಡಿಹೋಯಿತು. ಅವಳು ಇದ್ದಕ್ಕಿದ್ದಂತೆ ಕೆಳಗೆ ಬಿದ್ದಳು. ಅದು ಹಿಂಡಿನೊಳಗೆ ಪ್ರವೇಶಿಸಿದಾಗ, ಕುರುಬನು ಆ ಕುರಿಯನ್ನು ಓಡಿಸಿದನು. ಕುರಿ ಮನೆಗೆ ಹೊರಟುಹೋಯಿತು. ರೀನಾ ನಾಪತ್ತೆಯಾಗಿದ್ದಳು. ಪೋಷಕರು ಗದ್ದೆಗೆ ಹೋಗಿ ನೋಡಿದಾಗ ಕೈ ಮುರಿದು ಏಳಲು ಸಾಧ್ಯವಾಗದೇ ಬಿದ್ದಿದ್ದಳು. ಪೋಷಕರು ಆಕೆಯನ್ನು ಎತ್ತಿಕೊಂಡು ಹೋಗಿ ಕೈಗೆ ಕಟ್ಟು ಕಟ್ಟಿಸಿಕೊಂಡು ಮನೆಗೆ ಕರೆತಂದರು. ನೋವಿನಿಂದ ಹಾಸಿಗೆಯ ಮೇಲೆ ಮಲಗಿ ಯೋಚಿಸತೊಡಗಿದಳು. ಈ ಕುರಿ ಬರುವ ಮೊದಲು ನಾನು ಯೇಸಪ್ಪನಿಗೆ ಎಷ್ಟು ಹತ್ತಿರದಲ್ಲಿ ಜೀವಿಸುತ್ತಿದ್ದೆ. ಎಷ್ಟು ಚೆನ್ನಾಗಿ ಓದುತ್ತಿದ್ದೆ. ಈಗ ಈ ಕುರಿ ನನ್ನನ್ನು ಮತ್ತು ಯೇಸಪ್ಪನನ್ನು ಬೇರ್ಪಡಿಸಿದೆ. ನನ್ನ ಕೈ ಮುರಿದು ಹೋಗದೇ ಇದ್ದಿದ್ದರೆ ಬಹುಶಃ ನಾನು ಯೇಸಪ್ಪನಿಂದ ಇನ್ನೂ ದೂರ ಹೋಗಿಬಿಡುತ್ತಿದ್ದೆ. ಯೇಸಪ್ಪ ನನ್ನನ್ನು ಪ್ರೀತಿಸುತ್ತಿರುವುದರಿಂದ ನನಗೆ ಒಳ್ಳೆಯ ಪಾಠವನ್ನು ಕಲಿಸಿಕೊಟ್ಟಿದ್ದಾರೆ. ಇನ್ನು ಮೇಲೆ ನಾನು ಯೇಸಪ್ಪನಿಗಿಂತ ಹೆಚ್ಚು ಯಾರನ್ನೂ ಪ್ರೀತಿಸುವುದಿಲ್ಲ ಎಂದು ಅವಳು ತನ್ನ ಹೃದಯದಲ್ಲಿ ನಿರ್ಧರಿಸಿದಳು.
ತಮ್ಮ, ತಂಗಿ! ನೀನು ಕೂಡ ಈ ರೀನಾಳಂತೆ ಯೇಸಪ್ಪನನ್ನು ಬಿಟ್ಟು ತುಂಬಾ ದೂರ ಹೋಗಿದ್ದೀಯಾ? ಯೇಸಪ್ಪನಿಗೆ ಇದು ಇಷ್ಟವಿಲ್ಲ. ಏಕೆಂದರೆ ಯೇಸಪ್ಪ ನಿನ್ನನ್ನು ತುಂಬಾ ಪ್ರೀತಿಸುತ್ತಾರೆ. ಆದ್ದರಿಂದ ಈ ರೀನಾಳಂತೆ ಮತ್ತೆ ಯೇಸಪ್ಪನ ಬಳಿಗೆ ಓಡಿ ಬಾ, ಇಲ್ಲವಾದರೆ ಹೊಡೆತ ಬೀಳುತ್ತದೆ. ಓಕೇನಾ...
- S. ಸಾರಾಳ್ ಸುಭಾಷ್
*Whatsapp*
ಈ ಧ್ಯಾನ ಸಂದೇಶವನ್ನು ತಮಿಳು, ಇಂಗ್ಲಿಷ್, ಹಿಂದಿ, ಮಲಯಾಳಂ, ತೆಲುಗು, ಕನ್ನಡ, ಪಂಜಾಬಿ ಮತ್ತು ಒರಿಯಾ ಭಾಷೆಗಳಲ್ಲಿ ವಾಟ್ಸಾಪ್‌ನಲ್ಲಿ ಪಡೆದುಕೊಳ್ಳಲು *+91 94440 11864* ಈ ಸಂಖ್ಯೆಯನ್ನು ಸಂಪರ್ಕಿಸಿ.
www.vmm.org.in
ಈಮೈಲ್:- info@vmm.org.in
Android App: https://play.google.com/store/apps/details?id=com.infobells.vmmorgin
ವಿಲೇಜ್ ಮಿಷಿನರಿ ಮೊಮೆಂಟ್ ವಿರುಧುನಗರ್, ಇಂಡಿಯಾ-626001
ಪ್ರಾರ್ಥನಾ ಅವಶ್ಯಕತೆಗಾಗಿ :- +91 93455 40482