Village Missionary Movement         கிராம மிஷனரி இயக்கம்

ಧೈನಂದಿನ ಧ್ಯಾನ(Kannada) – 25.02.2023
Share:

By Village Missionary Movement

Saturday, 25-Feb-2023

ಧೈನಂದಿನ ಧ್ಯಾನ(Kannada) – 25.02.2023

 

ಸುಳ್ಳಿನಿಂದ ಉಂಟಾಗುವ ಶಿಕ್ಷೆ

 

"...ನೀನು ಸುಳ್ಳಾಡಿದ್ದು ಮನುಷ್ಯರಿಗಲ್ಲ, ದೇವರಿಗೆ ಆಡಿದಿ ಅಂದನು" - ಅಪೊಸ್ತಲ. 5:4

 

ಉತ್ತರದ ರಾಜ್ಯದಲ್ಲಿ ಒಬ್ಬ ಮಿಷನರಿ ಸೇವೆ ಮಾಡುತ್ತಿದ್ದರು. ಅವರು ಸಾಮಾನ್ಯ ಜನರಿಗೆ ಅಗತ್ಯ ಸಹಾಯವನ್ನು ಮಾಡುತ್ತಿದ್ದರು. ಇದನ್ನು ತಿಳಿದ ಕೆಲವರು ಆತನಿಗೆ ಸುಳ್ಳು ಹೇಳಿ ಹಣ ಪಡೆಯಲು ಯತ್ನಿಸಿದ್ದಾರೆ. ಅವರು ಮಿಷನರಿ ಹೋಗುವ ದಾರಿಯಲ್ಲಿ ಒಬ್ಬನನ್ನು ಸತ್ತಂತೆ ನಟಿಸಲು ಹೇಳಿದ್ದರು. ಆ ಮಿಷನರಿಯ ಬಳಿ ಇವನು ಅನಾಥ; ಇವನನ್ನು ಸಮಾಧಿ ಮಾಡಲು ತಮ್ಮ ಬಳಿ ಹಣವಿಲ್ಲ ಎಂದು ಹೇಳಿದರು. ಅವರು ಹಣವನ್ನು ಕೊಟ್ಟು, “ದೇವರೇ, ಈ ಆತ್ಮಕ್ಕೆ ಶಾಂತಿ ಸಿಗಲಿ” ಎಂದು ಪ್ರಾರ್ಥಿಸಿ "ಸರಿ, ಇವನನ್ನು ಸಮಾಧಿ ಮಾಡಿಬಿಡಿರಿ" ಎಂದು ಹೇಳಿಬಿಟ್ಟು ಹೊರಟುಹೋದರು. ಅವರು ಹೋದ ತಕ್ಷಣ ಸತ್ತಂತೆ ನಟಿಸುತ್ತಿದ್ದ ಅವನನ್ನು ಎಬ್ಬಿಸಿದರು. ಅವನು ಏಳಲೇ ಇಲ್ಲ; ಅವನು ಸತ್ತು ಹೋಗಿದ್ದನು. ಆ ಮಿಷನರಿ ಪ್ರಾರ್ಥಿಸಿದಂತೆ, ಅವನ ಆತ್ಮವು ಶಾಂತಿ ಹೊಂದಿತ್ತು. ನಿಜವಾದ ದೇವರ ಮನುಷ್ಯನಿಗೆ ಸುಳ್ಳು ಹೇಳಿದ್ದರಿಂದ ಬಂದ ಶಿಕ್ಷೆಯನ್ನು ನೋಡುದ್ರಾ?

 

ಇದರಂತೆಯೇ ಸತ್ಯವೇದದಲ್ಲಿ ಅನನೀಯ - ಸಪ್ಫೈರಳ ಘಟನೆ! ಅನನೀಯನು ಭೂಮಿಯನ್ನು ಮಾರಿ ಅದರಲ್ಲಿ ಒಂದು ಭಾಗವನ್ನು ಬಚ್ಚಿಟ್ಟುಕೊಂಡು ಒಂದು ಭಾಗವನ್ನು ತಂದು ಅಪೊಸ್ತಲರ ಪಾದಗಳ ಬಳಿಯಲ್ಲಿ ಇಟ್ಟನು. ಆಗ ಪೇತ್ರನು ಅನನೀಯನನ್ನು ನೋಡಿ, ಅನನೀಯನೇ "ಆ ಹೊಲವನ್ನು ಮಾರಿದ್ದು ಇಷ್ಟೇ ಹಣಕ್ಕೋ?" ಎಂದು ಕೇಳಿ "ಯಾಕೆ ಸುಳ್ಳು ಹೇಳಿದೆ? ಈ ಕಾರ್ಯವನ್ನು ನಿನ್ನ ಹೃದಯದಲ್ಲಿ ಯೋಚಿಸಿಕೊಂಡದ್ದು ಯಾಕೆ? ನೀನು ಸುಳ್ಳಾಡಿದ್ದು ಮನುಷ್ಯರಿಗಲ್ಲ, ದೇವರಿಗೆ ಆಡಿದಿ ಅಂದನು" ಈ ಮಾತುಗಳನ್ನು ಅನನೀಯನು ಕೇಳಿದ ಕೂಡಲೆ ಬಿದ್ದು ಪ್ರಾಣಬಿಟ್ಟನು. ನಂತರ ಪೇತ್ರನು ಅವನ ಹೆಂಡತಿಯಾದ, ಸಪ್ಫೈರಳನ್ನು ನೋಡಿ ನೀವು ಆ ಹೊಲವನ್ನು ಮಾರಿದ್ದು ಇಷ್ಟೇ ಹಣಕ್ಕೋ?" ನನಗೆ ಹೇಳು ಎಂದು ಕೇಳಲು ಆಕೆಯು "ಹೌದು" ಇಷ್ಟಕ್ಕೇ ಅಂದಳು. ಆಗ ಪೇತ್ರನು ಆಕೆಗೆ ನೀವಿಬ್ಬರೂ ಕರ್ತನ ಆತ್ಮನನ್ನು ಪರೀಕ್ಷಿಸುವದಕ್ಕೆ ಯಾಕೆ ಒಡಂಬಟ್ಟಿರಿ? ಅಂದನು. ಕೂಡಲೇ ಆ ಮಾತುಗಳನ್ನು ಕೇಳಿ ಅವಳು ಬಿದ್ದು ಪ್ರಾಣಬಿಟ್ಟಳು.

 

ದೇವರು ನಮ್ಮನ್ನು ಆಶೀರ್ವದಿಸಲು ಬಯಸುತ್ತಾರೆ ಹೊರತು ನಾಶಮಾಡಲು ಅಲ್ಲ. ಆದರೆ ನಾವು ಧೈರ್ಯದಿಂದ ದೇವರ ಮನುಷ್ಯರಿಗೆ ಸುಳ್ಳು ಹೇಳುವುದು, ಅದು ದೇವರ ವಿರುದ್ಧ ಸುಳ್ಳು ಹೇಳುವುದಕ್ಕೆ ಸಮ. ನಾವು ದೇವರ ಬಳಿ ಮತ್ತು ಮನುಷ್ಯರ ಬಳಿ ಸತ್ಯವನ್ನೇ ಮಾತಾಡೋಣ. ನಮಗೆ ಬರಲಿರುವ ಶಿಕ್ಷೆಯಿಂದ ಪಾರಾಗೋಣ. ದೇವರು ತಾನೇ ನಮ್ಮನ್ನು ಆಶೀರ್ವದಿಸಲಿ. ಆಮೆನ್.

- Bro. ರೂಬೆನ್ ಕ್ರಿಸ್ಟಿ

 

ಪ್ರಾರ್ಥನಾ ಅಂಶ:

ನಮ್ಮ ಸೇವಾ ಕ್ಷೇತ್ರಗಳಿಗೆ ಹೊಸ ದ್ವಿಚಕ್ರ ವಾಹನಗಳು ತುರ್ತಾಗಿ ಅಗತ್ಯವಿದೆ. ಸಹಾಯ ಮಾಡುವ ಹೃದಯಗಳು ಎದ್ದೇಳುವಂತೆ ಪ್ರಾರ್ಥಿಸಿರಿ.

 

*Whatsapp*

ಈ ಧ್ಯಾನ ಸಂದೇಶವನ್ನು ತಮಿಳು, ಇಂಗ್ಲಿಷ್, ಹಿಂದಿ, ಮಲಯಾಳಂ, ತೆಲುಗು, ಕನ್ನಡ, ಪಂಜಾಬಿ ಮತ್ತು ಒರಿಯಾ ಭಾಷೆಗಳಲ್ಲಿ ವಾಟ್ಸಾಪ್‌ನಲ್ಲಿ ಪಡೆದುಕೊಳ್ಳಲು *+91 94440 11864* ಈ ಸಂಖ್ಯೆಯನ್ನು ಸಂಪರ್ಕಿಸಿ.

 

www.vmm.org.in

ಈಮೈಲ್:- info@vmm.org.in

Android App: https://play.google.com/store/apps/details?id=com.infobells.vmmorgin

        

ವಿಲೇಜ್ ಮಿಷಿನರಿ ಮೊಮೆಂಟ್ ವಿರುಧುನಗರ್, ಇಂಡಿಯಾ-626001

ಪ್ರಾರ್ಥನಾ ಅವಶ್ಯಕತೆಗಾಗಿ :- +91 93455 40482



hacklink satın al meritking meritking giriş meritking güncel giriş perabet perabet perabet giriş deneme bonusu deneme bonusu veren siteler Vdcasino vaycasino vaycasino giriş vaycasino güncel giriş matbet matbet giriş matbet güncel giriş matbet matbet giriş matbet güncel giriş betsmove betsmove giriş betsmove güncel giriş betsat betsat giriş betsat güncel giriş perabet perabet giriş perabet güncel giriş dumanbet giriş dumanbet dumanbet güncel giriş kingroyal kingroyal giriş kingroyal güncel giriş marsbahis marsbahis giriş marsbahis güncel giriş kingroyal kingroyal giriş kingroyal güncel giriş meritking meritking giriş meritking güncel giriş meritbet meritbet giriş meritbet güncel giriş nakitbahis nakitbahis giriş nakitbahis güncel giriş vaycasino vaycasino giriş vaycasino güncel giriş Holiganbet holiganbet giriş holiganbet güncel giriş bahissenin bahissenin giriş bahissenin güncel giriş bayconticasino bayconticasino giriş bayconticasino güncel giriş imajbet imajbet giriş imajbet güncel giriş prizmabet prizmabet giriş pashagaming pashagaming giriş pashagaming güncel giriş interbahis interbahis giriş interbahis güncel giriş jojobet superbetin matbet jojobet marsbahis marsbahis güncel marsbahis güncel giriş deneme bonusu deneme bonusu veren siteler bahsegel vaycasino vaycasino giriş perabet perabet giriş holiganbet holiganbet giriş holiganbet holiganbet giriş holiganbet holiganbet giriş jojobet jojobet giriş Superbetin superbetin giriş superbetin güncel giriş süperbetin