Village Missionary Movement         கிராம மிஷனரி இயக்கம்

ಧೈನಂದಿನ ಧ್ಯಾನ(Kannada) – 24.02.2023
Share:

By Village Missionary Movement

Friday, 24-Feb-2023

ಧೈನಂದಿನ ಧ್ಯಾನ(Kannada) – 24.02.2023

 

ಎಂದೂ ಕೈಬಿಡದ ತಂದೆ

 

"...ನಾನು ನಿನ್ನ ಸಂಗಡ ಇದ್ದು... ನಾನು ನಿನಗೆ ಹೇಳಿದ್ದನ್ನೆಲ್ಲಾ ನೆರವೇರಿಸಿದ ಹೊರತು ಬಿಡುವದಿಲ್ಲ ಅಂದನು." - ಆದಿ. 28:15

 

ನನ್ನ ಹೆಸರು ಬಾನು. ನಾನು ಬೈಬಲ್ ಕಾಲೇಜಿನಲ್ಲಿ ಉಳಿದು ಓದುತ್ತಿದ್ದೇನೆ. ಒಂದು ದಿನ ನನ್ನ ತಾಯಿಯೊಂದಿಗೆ ಫೋನ್‌ನಲ್ಲಿ ಮಾತನಾಡುವಾಗ ಅವರು ಹೇಳಿದರು, “ನನ್ನ ಕಾಲಿನ ಗಾಯ ಎರಡು ವಾರಗಳು ಕಳೆದರೂ ವಾಸಿಯಾಗಿಲ್ಲ. ಸಕ್ಕರೆ ವ್ಯಾಧಿಯ ಕಾರಣದಿಂದಾಗಿ ಅದು ದೊಡ್ಡದಾಗುತ್ತಲೇ ಇದೆ. ಕೀವು ಸೋರುತ್ತಲೇ ಇದೆ. ತಪಾಸಣೆಗಾಗಿ ನಾಳೆ ಆಸ್ಪತ್ರೆಗೆ ಹೋಗುತ್ತೇನೆ. ತುಂಬಾ ಭಯವಾಗುತ್ತಿದೆ” ಎಂದು ತಾಯಿ ಹೇಳಿದರು. ನಾನು ಕರ್ತನ ಸಮ್ಮುಖದಲ್ಲಿ ಬಹಳ ಕಣ್ಣೀರಿನಿಂದ, “ದೇವರೇ! ನಾನು ನಿಮ್ಮ ಮಾತಿಗೆ ವಿಧೇಯಳಾಗಿ ನಿಮ್ಮ ಸೇವೆ ಮಾಡಲು ಬಂದಿದ್ದೇನೆ. ನಾನು ಅವರನ್ನು ಹತ್ತಿರವಿದ್ದು ಗಮನಿಸಲು ಸಾಧ್ಯವಿಲ್ಲ. ಅಲ್ಲಿ ನನ್ನ ಸ್ಥಾನದಲ್ಲಿ ನೀವೇ ಹಿರಿಯ ಅಣ್ಣನಾಗಿದ್ದು ಎಲ್ಲವನ್ನು ನೋಡಿಕೊಳ್ಳಿರಿ” ಎಂದು ಪ್ರಾರ್ಥಿಸಿ ಮಲಗಲು ಹೋದೆ. ಮರುದಿನ ನಾನು ಅಮ್ಮನ ಬಳಿ ವಿಚಾರಿಸಿದಾಗ ರಾತ್ರಿಯಿದ್ದ ಗಾಯ ಬೆಳಗ್ಗೆ ಎದ್ದುನೋಡುವಾಗ ಒಣಗಿ ಕಡಿಮೆಯಾಗಿ ಬಿಟ್ಟಿದೆ ಎಂದು ಆಶ್ಚರ್ಯವಾಗಿ ಹೇಳಿದರು. ನಾನು ದೇವರಿಗೆ ಕೃತಜ್ಞತೆ ಸಲ್ಲಿಸಿದೆ.

 

ಸತ್ಯವೇದದಲ್ಲಿಯೂ ಸಹ ನಾವು ಅಬ್ರಹಾಮನ ಬಗ್ಗೆ ಓದುತ್ತೇವೆ. ಅವರು ಕರ್ತನಿಗೆ ವಿಧೇಯನಾಗಿ ತನ್ನ ಸ್ವಂತ ದೇಶ, ಜನಾಂಗ ಮತ್ತು ವೃತ್ತಿಯನ್ನು ತೊರೆದು ದೇವರು ತನಗೆ ಹೇಳಿದ ದೇಶಕ್ಕೆ ಪ್ರಯಾಣಿಸುತ್ತಾರೆ. ನಾನು ನಿನಗೆ ಹೇಳಿದ್ದನ್ನೆಲ್ಲಾ ನೆರವೇರಿಸಿದ ಹೊರತು ಬಿಡುವುದಿಲ್ಲ" (ಆದಿಕಾಂಡ. 28: 15) ಎಂದು ದೇವರು ಅವರಿಗೆ ವಾಗ್ದಾನ ಕೊಡುತ್ತಾರೆ. ತಾನು ಹೇಳಿದಂತೆಯೇ ಎಲ್ಲಾ ಕಾರ್ಯಗಳಲ್ಲಿ ಉತ್ತಮವಾಗಿ ನಡೆಸಿ ಅವರನ್ನು ಆಶೀರ್ವದಿಸಿದರು. ದೇವರು ಅಬ್ರಹಾಮನ ಬಳಿ ಇಸಾಕನನ್ನು ಬಲಿಕೊಡಲು ಹೇಳುವಾಗ ಯಾವ ಪ್ರಶ್ನೆಯನ್ನೂ ಕೇಳದೇ ವಿಧೇಯರಾದರು. ಕೊನೆಗೆ ಇಸಾಕನಿಗೆ ಬದಲಾಗಿ ಈ ಸ್ಥಳದಲ್ಲಿ ಒಂದು ಕುರಿಮರಿ ಬಲಿಯಾಯಿತು. ಅದು ಬೇರೇನೂ ಅಲ್ಲ; ನಮಗಾಗಿ ಬಲಿಯಾದ ಕುರಿಮರಿಯಾದ ಯೇಸುಕ್ರಿಸ್ತನನ್ನು ಸೂಚಿಸುತ್ತದೆ. ಅಬ್ರಹಾಮನು ದೇವರಿಗೆ ವಿಧೇಯನಾಗುವವನಾಗಿದ್ದದರಿಂದ ದೇವರು ಅವರೊಂದಿಗಿದ್ದು, ಅವರನ್ನು ದಿನದಿಂದ ದಿನಕ್ಕೆ ಆಶೀರ್ವದಿಸಿದರು. ನಾವು ಅಬ್ರಹಾಮನನ್ನು "ನಂಬಿಕೆಯ ತಂದೆ"ಎಂದು ಕರೆಯುತ್ತೇವೆ.

 

ಹೌದು ಪ್ರಿಯರೇ! ನಾವು ನಮ್ಮ ಜೀವನದಲ್ಲಿ ದೇವರಿಗೆ ಮೊದಲ ಸ್ಥಾನ ನೀಡಿದಾಗ, ಅವರು ನಮ್ಮ ಜೀವನದಲ್ಲಿ ಉಪಕಾರ ಮಾಡುತ್ತಾರೆ. ನೀವು ದೇವರಿಗೋಸ್ಕರ ಏನನ್ನಾದರೂ ಮಾಡಲು ಪ್ರಯತ್ನಿಸಿದಾಗ ಮತ್ತು ಆತನ ಮಾತಿಗೆ ವಿಧೇಯರಾಗಿರುವಾಗ ಅವರು ನಿಮ್ಮನ್ನು ಕೈಬಿಡದ ತಂದೆಯಾಗಿದ್ದಾರೆ. ಅವರು ಹೇಳಿದ್ದನ್ನು ಮಾಡುವವರೆಗೂ ನಿಮ್ಮನ್ನು ಕೈಬಿಡದ ದೇವರಾಗಿದ್ದಾರೆ. ಅವರು ಹೇಳಿದ್ದನ್ನು ಮಾಡುವವರೆಗೂ ನಿಮ್ಮ ಕೈಬಿಡುವುದಿಲ್ಲ. ನಿಮಗಾಗಿ ಆತನು ಎಲ್ಲವನ್ನೂ ಮಾಡಿ ಮುಗಿಸುತ್ತಾರೆ. ದೇವರ ಚಿತ್ತದಂತೆ ಬಾಳಲು ಒಪ್ಪಿಸಿಕೊಟ್ಟ ನಿಮ್ಮ ಜೀವನದಲ್ಲಿ ನೀವು ಹಿಂದೆಂದೂ ನೋಡಿರದ ಅದ್ಭುತಗಳನ್ನು ಮಾಡಲು ಆತನು ಸಮರ್ಥನಾಗಿದ್ದಾನೆ. ಆಮೆನ್.

- M. ಹೆಪ್ಸಿಬಾ

 

ಪ್ರಾರ್ಥನಾ ಅಂಶ:

ನಾವು ಕಳುಹಿಸುವ ಪ್ರಾರ್ಥನಾ ಅಂಶಗಳಿಗೆ ಮಧ್ಯಸ್ಥಿಕೆ ವಹಿಸಿ ಪ್ರಾರ್ಥಿಸುವಂತಹ ಎಸ್ತೇರ್ ನಂತಹ ಮಹಿಳೆಯರು ಅನೇಕರುಎದ್ದೇಳುವಂತೆ ಪ್ರಾರ್ಥಿಸಿರಿ.

 

*Whatsapp*

ಈ ಧ್ಯಾನ ಸಂದೇಶವನ್ನು ತಮಿಳು, ಇಂಗ್ಲಿಷ್, ಹಿಂದಿ, ಮಲಯಾಳಂ, ತೆಲುಗು, ಕನ್ನಡ, ಪಂಜಾಬಿ ಮತ್ತು ಒರಿಯಾ ಭಾಷೆಗಳಲ್ಲಿ ವಾಟ್ಸಾಪ್‌ನಲ್ಲಿ ಪಡೆದುಕೊಳ್ಳಲು *+91 94440 11864* ಈ ಸಂಖ್ಯೆಯನ್ನು ಸಂಪರ್ಕಿಸಿ.

 

www.vmm.org.in

ಈಮೈಲ್:- info@vmm.org.in

Android App: https://play.google.com/store/apps/details?id=com.infobells.vmmorgin

        

ವಿಲೇಜ್ ಮಿಷಿನರಿ ಮೊಮೆಂಟ್ ವಿರುಧುನಗರ್, ಇಂಡಿಯಾ-626001

ಪ್ರಾರ್ಥನಾ ಅವಶ್ಯಕತೆಗಾಗಿ :- +91 93455 40482



hacklink satın al matbet matbet giriş hepsibet hepsibet giriş betnano betnano giriş betparibu betparibu giriş casibom virüsbet pashagaming kalebet perabet pashagaming virusbet marsbahis imajbet perabet perabet giriş perabet perabet giriş