Village Missionary Movement         கிராம மிஷனரி இயக்கம்

ಧೈನಂದಿನ ಧ್ಯಾನ(Kannada) – 23.02.2023
Share:

By Village Missionary Movement

Thursday, 23-Feb-2023

ಧೈನಂದಿನ ಧ್ಯಾನ(Kannada) – 23.02.2023

 

ಜೊಂಡು 

 

"...ನಿಂತಿದ್ದೇನೆಂದು ನೆನಸುವವನು ಬೀಳದಂತೆ ಎಚ್ಚರಿಕೆಯಾಗಿರಲಿ" - 1 ಕೊರಿಂಥ 10:12

 

ನದಿಯ ಪಕ್ಕದಲ್ಲಿ ಒಂದು ದೊಡ್ಡ ಮರವಿತ್ತು ಮತ್ತು ಅದರ ಪಕ್ಕದಲ್ಲಿ ಜೊಂಡು ಗಿಡಗಳು ಸಹ ಬೆಳೆಯುತ್ತಿದ್ದವು. ಈ ಮರವು ಕೊಂಬೆಗಳನ್ನು ಹೊಂದಿರುವ ದೊಡ್ಡ ಮರವಾಗಿತ್ತು. ಅದಕ್ಕೆ ಅದರ ಕೊಂಬೆಗಳನ್ನು ಕಂಡರೇನೆ ಹೆಮ್ಮೆಯಾಗಿರುತ್ತಿತ್ತು. ಪಕ್ಕದಲ್ಲಿರುವ ಜೊಂಡು ಗಿಡವನ್ನು ಕೇವಲವಾಗಿ ನೋಡುತ್ತಿತ್ತು . “ಒಂದು ಸ್ವಲ್ಪ ಗಾಳಿ ಬೀಸಿದರೇನೆ ಆಕಡೆ ಈಕಡೆ ಬಾಗುವ ನಿನಗೆ ನನ್ನ ಪಕ್ಕದಲ್ಲಿರಲು ಯೋಗ್ಯತೆಯೇ ಇಲ್ಲ” ಎಂದು ಹೀನವಾಗಿ ಮಾತಾಡುತ್ತಿತ್ತು. ಒಂದು ದಿನ ಚಂಡಮಾರುತದ ಗಾಳಿಯೊಂದಿಗೆ ಜೋರಾಗಿ ಮಳೆ ಸುರಿಯಲಾರಂಭಿಸಿತು. "ಈ ಮಳೆಯಲ್ಲಿ ನೀನು ಬಿದ್ದುಹೋಗುತ್ತೀಯ" ಎಂದು ಆ ಮರವು ಜೊಂಡುಮರವನ್ನು ನೋಡಿ ಅಣಕಿಸಿತು. ಚಂಡಮಾರುತದಂತೆ ಗಾಳಿ ಬೀಸತೊಡಗಿತು. ಚಂಡಮಾರುತದ ರಭಸಕ್ಕೆ ದೊಡ್ಡ ಮರ ಬೇರುಸಹಿತ ಕಿತ್ತು ಬಿದ್ದುಹೋಯಿತು. ಎಲ್ಲವೂ ಶಾಂತವಾದ ನಂತರ, "ನಾವೇ ಹೀಗೆ ಬಿದ್ದಿದ್ದೇವೆ, ಈ ಜೊಂಡು ಇಲ್ಲದೇ ಹೋಗಿರಬಹುದು" ಎಂದು ಅಂದುಕೊಂಡಿತು. ಆದರೆ ಜೊಂಡು ಎಂದಿನಂತೆ ತೂಗಾಡುತ್ತಿತ್ತು. ಆಶ್ಚರ್ಯದಿಂದ ಮರ ಕೇಳಿತು, "ನಿನಗೇನೂ ಆಗಲಿಲ್ಲವಾ ನೀನು ಚೆನ್ನಾಗಿದ್ದೀಯ?" ಎಂದು. “ಗಾಳಿ ಬೀಸಿದಾಗ ನಾನು ಗಾಳಿಯ ದಿಕ್ಕಿಗೆ ಬಾಗುತ್ತೇನೆ. ಗಾಳಿ ನನ್ನ ಮೇಲೆ ಬೀಸಿ ಹೋಯಿತು. "ಇದು ನನ್ನ ಮೇಲೆ ಪರಿಣಾಮ ಬೀರಲಿಲ್ಲ" ಎಂದು ಜೊಂಡು ಗಿಡ ಹೇಳಿತು. ತನ್ನನ್ನು ತಗ್ಗಿಸಿಕೊಳ್ಳಲು ತಿಳಿದಿದ್ದ ಜೊಂಡು, ಕಾಪಾಡಲ್ಪಟ್ಟಿತು. ಹೆಮ್ಮೆಯ ಮರವು ನಾಶವಾಯಿತು.

 

ಸತ್ಯವೇದದಲ್ಲಿ, ದಾವೀದನು ಕೈಯಲ್ಲಿ ಕವಣೆಯೊಂದಿಗೆ ಬರುತ್ತಾರೆ. ಗೋಲಿಯಾತ್‌ನ ದೇಹ ಮತ್ತು ಕೈಯಲ್ಲಿ ಅನೇಕ ರಕ್ಷಣಾತ್ಮಕ ಆಯುಧಗಳನ್ನು ಹೊಂದಿದ್ದನು. ಆದರೆ ದಾವೀದನ ಕೈಯಲ್ಲಿದ್ದದ್ದು ನುಣುಪಾದ ಕಲ್ಲುಗಳು ಮಾತ್ರ! ದಾವೀದನು ಕಲ್ಲನ್ನು ಎಸೆದಾಗ ಗೋಲಿಯಾತ್ ತನ್ನ ಕೈಯಲ್ಲಿದ್ದ ಗುರಾಣಿಯಿಂದ ಅವನನ್ನು ತಡೆಯಬಹುದಿತ್ತು. ಆದರೆ ಈ ಕಲ್ಲು ನನ್ನನ್ನು ಏನೂ ಮಾಡಲಾರದು ಎಂದು ಹೆಮ್ಮೆಯಿಂದ ನಿಂತಿದ್ದನು. ಆ ಕಲ್ಲೇ ಗೊಲ್ಯಾತನನ್ನು ಬೀಳಿಸಿತು. ಹೌದು ಅಹಂಕಾರವೇ ಅವನ ಅವನತಿಗೆ ಕಾರಣ.

 

ಇದನ್ನು ಓದುತ್ತಿರುವ ಪ್ರೀತಿಯ ದೇವರ ಮಕ್ಕಳೇ! ನೀವು ಇರುವ ಸ್ಥಳವು ಆಲದ ಮರದಂತೆ ಕಾಣಿಸಬಹುದು. ಆದರೆ ಜೊಂಡು ಗಿಡದಂತಹ ಜನರನ್ನು ಕಡಿಮೆ ಅಂದಾಜು ಮಾಡದಂತೆ ಎಚ್ಚರಿಕೆ ವಹಿಸೋಣ. ನಾನು ಯಾರು ಗೊತ್ತಾ? ನನ್ನ ಕೆಲಸ, ನನ್ನ ಸಂಬಳ, ನನ್ನ ಮನೆ, ಇದು ನನ್ನ ಪ್ರಯಾಸ, ನನ್ನ ಪ್ರತಿಭೆ ನನ್ನ ಬಲ ಎಂದು ಯೋಚಿಸುತ್ತಿದ್ದರೆ, ಈ ಹೆಮ್ಮೆ ಬಂದಾಗ, ನಾವು ನಮಗೆ ಗೊತ್ತಿಲ್ಲದೆ ನಮ್ಮ ಸುತ್ತಮುತ್ತಲಿನವರನ್ನು ಕೀಳಾಗಿ ಕಾಣಲು ಪ್ರಾರಂಭಿಸುತ್ತೇವೆ. ಹೀಗೆ ಯೋಚಿಸುವುದೇ ನಮ್ಮ ಕುಸಿತಕ್ಕೆ ಆರಂಭ. ಇದರ ಬಗ್ಗೆ, ಜ್ಞಾನೋಕ್ತಿ 18: 12 ರಲ್ಲಿ, "ಭಂಗಕ್ಕೆ ಮೊದಲು ಗರ್ವದ ಹೃದಯ; ಮಾನಕ್ಕೆ ಮುಂಚೆ ದೈನ್ಯ" ಎಂದು ಓದುತ್ತೇವೆ. ಹೌದು, ಅಹಂಕಾರ, ಹೆಮ್ಮೆಯಿಂದ ಬದುಕುವ ಬದಲು ನಮ್ಮನ್ನು ತಗ್ಗಿಸಿಕೊಳ್ಳಲು ಕಲಿಯೋಣ. ದೇವರು ನಮ್ಮನ್ನು ಆಶೀರ್ವದಿಸುತ್ತಾರೆ.

 

ಪ್ರಾರ್ಥನೆ: ಪ್ರಿಯ ಕರ್ತನೇ, ಈ ಗೋಲಿಯಾತ್‌ನಂತೆ ನಾನು ಯಾರನ್ನೂ ಹೀನವಾಗಿ ನೆನೆಸಿ ಬಿದ್ದುಹೋಗದಂತೆ ಜಾಗರೂಕನಾಗಿರಲು ಸಹಾಯ ಮಾಡಿ. ಯೇಸುವಿನ ಹೆಸರಿನಲ್ಲಿ, ಆಮೆನ್.

- Mrs. ತವಮಣಿ ವೈರವೇಲ್

 

ಪ್ರಾರ್ಥನಾ ಅಂಶ:

ಪ್ರತಿ ಗುರುವಾರ ಆಸ್ಪತ್ರೆಗಳಲ್ಲಿ ಭೇಟಿ ಮಾಡುವ ಆತ್ಮಗಳು ಯೇಸುವನ್ನು ಗಟ್ಟಿಯಾಗಿ ಹಿಡಿದುಕೊಳ್ಳಬೇಕೆಂದು ಪ್ರಾರ್ಥಿಸಿರಿ.

 

*Whatsapp*

ಈ ಧ್ಯಾನ ಸಂದೇಶವನ್ನು ತಮಿಳು, ಇಂಗ್ಲಿಷ್, ಹಿಂದಿ, ಮಲಯಾಳಂ, ತೆಲುಗು, ಕನ್ನಡ, ಪಂಜಾಬಿ ಮತ್ತು ಒರಿಯಾ ಭಾಷೆಗಳಲ್ಲಿ ವಾಟ್ಸಾಪ್‌ನಲ್ಲಿ ಪಡೆದುಕೊಳ್ಳಲು *+91 94440 11864* ಈ ಸಂಖ್ಯೆಯನ್ನು ಸಂಪರ್ಕಿಸಿ.

 

www.vmm.org.in

ಈಮೈಲ್:- info@vmm.org.in

Android App: https://play.google.com/store/apps/details?id=com.infobells.vmmorgin

        

ವಿಲೇಜ್ ಮಿಷಿನರಿ ಮೊಮೆಂಟ್ ವಿರುಧುನಗರ್, ಇಂಡಿಯಾ-626001

ಪ್ರಾರ್ಥನಾ ಅವಶ್ಯಕತೆಗಾಗಿ :- +91 93455 40482



hacklink satın al