Village Missionary Movement         கிராம மிஷனரி இயக்கம்

ಧೈನಂದಿನ ಧ್ಯಾನ(Kannada) – 22.02.2023
Share:

By Village Missionary Movement

Wednesday, 22-Feb-2023

ಧೈನಂದಿನ ಧ್ಯಾನ(Kannada) – 22.02.2023

 

ದೀಕ್ಷಾಸ್ನಾನ ಬೇಡ

 

"...ಆ ನೀರಿಗೆ ಅನುರೂಪವಾದ ದೀಕ್ಷಾಸ್ನಾನವು...ಅದು ಮೈಕೊಳೆಯನ್ನು ಹೋಗಲಾಡಿಸುವಂಥದಲ್ಲ, ಒಳ್ಳೇ ಮನಸ್ಸಾಕ್ಷಿ ಬೇಕೆಂದು ದೇವರಿಗೆ ವಿಜ್ಞಾಪಿಸಿಕೊಳ್ಳುವಂಥದೇ." - 1 ಪೇತ್ರ 3:21

 

ಇಂದು, ನಾವು ದೀಕ್ಷಾಸ್ನಾನ ತೆಗೆದುಕೊಳ್ಳಲು ಯಾವುದೆಲ್ಲಾ ಕಾರಣವಾಗಿರಬಾರದು ಎಂದು ಪಟ್ಟಿ ಮಾಡಿ ಯೋಚಿಸೋಣ.

 

ಒಂದು ಕ್ರೈಸ್ತ ಮಹಿಳೆಯನ್ನು ಅಥವಾ ಪುರುಷನನ್ನು ಮದುವೆಯಾಗುವುದಕ್ಕಾಗಿ ಯಾರೂ ದೀಕ್ಷಾಸ್ನಾನ ತೆಗೆದುಕೊಳ್ಳಬಾರದು.

 

ತಮ್ಮ ಬೋಧಕರನ್ನು, ಪೋಷಕರನ್ನು ಅಥವಾ ಸ್ನೇಹಿತರನ್ನು ಮೆಚ್ಚಿಸಲು ಯಾರೂ ದೀಕ್ಷಾಸ್ನಾನ ತೆಗೆದುಕೊಳ್ಳಬಾರದು. ಕುಟುಂಬದ ಇತರರು ದೀಕ್ಷಾಸ್ನಾನ ತೆಗೆದುಕೊಂಡಿದ್ದಾರೆ ಎಂಬ ಕಾರಣಕ್ಕಾಗಿ ಯಾವ ವ್ಯಕ್ತಿಯೂ ದೀಕ್ಷಾಸ್ನಾನ ತೆಗೆದುಕೊಳ್ಳಬಾರದು.

 

ದೀಕ್ಷಾಸ್ನಾನವು ಪರಲೋಕಕ್ಕೆ ಕೊಂಡೊಯ್ಯುವ ಟಿಕೆಟ್ ಎಂದು ಭಾವಿಸಿ ಯಾರೂ ದೀಕ್ಷಾಸ್ನಾನ ತೆಗೆದುಕೊಳ್ಳಬಾರದು.

 

ದೇವರು ನಮ್ಮ ಪ್ರಾರ್ಥನೆ ವಿಜ್ಞಾಪನೆಗಳಿಗೆ ಉತ್ತರಿಸಬೇಕೆಂದು ನಾವು ದೀಕ್ಷಾಸ್ನಾನ ತೆಗೆದುಕೊಳ್ಳಬಾರದು.

 

ಪ್ರಬುದ್ಧ ವಯಸ್ಸನ್ನು ತಲುಪಿದ ಮಾತ್ರಕ್ಕೆ ಯಾರೂ ದೀಕ್ಷಾಸ್ನಾನ ತೆಗೆದುಕೊಳ್ಳಬಾರದು ದೀಕ್ಷಾಸ್ನಾನ ಎಂಬುದು ಹೊಗಳಿಕೆಗೆ ತಕ್ಕ ಕಾರ್ಯವೆಂದು ನೆನೆಸಿ ಯಾರೂ ದೀಕ್ಷಾಸ್ನಾನ ತೆಗೆದುಕೊಳ್ಳಬಾರದು. ಒಂದು ಸಭೆಗೆ ಅಥವಾ ಒಂದು ಬೋಧಕರಿಗೆ ಯಾವುದೋ ಒಂದು ರೀತಿಯಲ್ಲಿ ಋಣಿಯಾಗಿದ್ದೇನೆ ಎಂಬುದಕ್ಕಾಗಿ ಯಾರೂ ದೀಕ್ಷಾಸ್ನಾನ ತೆಗೆದುಕೊಳ್ಳಬಾರದು. ಸಭೆಯಿಂದ ಆರ್ಥಿಕ ಅಥವಾ ಭೌತಿಕ ಬೆಂಬಲವನ್ನು ನಿರೀಕ್ಷಿಸಿ ಯಾರೂ ದೀಕ್ಷಾಸ್ನಾನ ತೆಗೆದುಕೊಳ್ಳಬಾರದು. ಪ್ರಾರ್ಥನೆಯಲ್ಲಿ ಅದ್ಭುತವಾದ ಸ್ವಸ್ಥತೆಯನ್ನು ಪಡೆದುಕೊಂಡೆ ಎಂಬುದಕ್ಕಾಗಿ ಒಬ್ಬರು ಕೂಡ ದೀಕ್ಷಾಸ್ನಾನ ತೆಗೆದುಕೊಳ್ಳಬಾರದು

 

ಒಂದು ಕನಸು ಕಂಡ ಕಾರಣದಿಂದ ದೀಕ್ಷಾಸ್ನಾನ ತೆಗೆದುಕೊಳ್ಳಬಾರದು. ಒಂದು ರೋಗ ಗುಣವಾಗಬೇಕೆಂದು ದೀಕ್ಷಾಸ್ನಾನ ತೆಗೆದುಕೊಳ್ಳಬಾರದು. ಯೇಸುಕ್ರಿಸ್ತನನ್ನು ಸ್ವಂತ ರಕ್ಷಕನಾಗಿ ಸ್ವೀಕರಿಸುವ ಮೊದಲು ದೀಕ್ಷಾಸ್ನಾನ ತೆಗೆದುಕೊಳ್ಳಬಾರದು. ದೀಕ್ಷಾಸ್ನಾನದ ಸ್ಪಷ್ಟ ಅರ್ಥವನ್ನು ಅರ್ಥಮಾಡಿಕೊಳ್ಳದೆ ಯಾರೂ ದೀಕ್ಷಾಸ್ನಾನವನ್ನು ತೆಗೆದುಕೊಳ್ಳಬಾರದು. 

 

ಹಾಗಾದರೆ ಯಾರು ದೀಕ್ಷಾಸ್ನಾನ ತೆಗೆದುಕೊಳ್ಳಬೇಕು? ಮಾನಸಾಂತರ ಹೊಂದಿ ದೀಕ್ಷಾಸ್ನಾನ ತೆಗೆದುಕೊಳ್ಳಿರಿ. (ಅಪೊಸ್ತಲ. 2:38) ದೇವರ ವಾಕ್ಯವನ್ನು ಸಂತೋಷದಿಂದ ಸ್ವೀಕರಿಸಿ ಮತ್ತು ದೀಕ್ಷಾಸ್ನಾನ ತೆಗೆದುಕೊಳ್ಳಿರಿ. (ಅಪೊಸ್ತಲ. 2:41) ಅದೇ ದೇವರೊಂದಿಗೆ ನಮ್ಮನ್ನು ನಿಜವಾಗಿಯೂ ಐಕ್ಯಗೊಳಿಸುತ್ತದೆ.

- J.F ರೋಲ್ಯಾಂಡ್ಸ್

 

ಪ್ರಾರ್ಥನಾ ಅಂಶ:

You tube ಮತ್ತು ಟಿವಿ ಕಾರ್ಯಕ್ರಮಗಳನ್ನು ವೀಕ್ಷಿಸುವ ಜನರು ಸೇವೆಗಾಗಿ ಪ್ರಾರ್ಥಿಸುವ ಮತ್ತು ಬೆಂಬಲಿಸುವ ಪಾಲುದಾರರಾಗಿ ಎದ್ದೇಳುವಂತೆ ಪ್ರಾರ್ಥಿಸಿರಿ.

 

*Whatsapp*

ಈ ಧ್ಯಾನ ಸಂದೇಶವನ್ನು ತಮಿಳು, ಇಂಗ್ಲಿಷ್, ಹಿಂದಿ, ಮಲಯಾಳಂ, ತೆಲುಗು, ಕನ್ನಡ, ಪಂಜಾಬಿ ಮತ್ತು ಒರಿಯಾ ಭಾಷೆಗಳಲ್ಲಿ ವಾಟ್ಸಾಪ್‌ನಲ್ಲಿ ಪಡೆದುಕೊಳ್ಳಲು *+91 94440 11864* ಈ ಸಂಖ್ಯೆಯನ್ನು ಸಂಪರ್ಕಿಸಿ.

 

www.vmm.org.in

ಈಮೈಲ್:- info@vmm.org.in

Android App: https://play.google.com/store/apps/details?id=com.infobells.vmmorgin

        

ವಿಲೇಜ್ ಮಿಷಿನರಿ ಮೊಮೆಂಟ್ ವಿರುಧುನಗರ್, ಇಂಡಿಯಾ-626001

ಪ್ರಾರ್ಥನಾ ಅವಶ್ಯಕತೆಗಾಗಿ :- +91 93455 40482



hacklink satın al matbet matbet giriş hepsibet hepsibet giriş betnano betnano giriş betparibu betparibu giriş casibom virüsbet pashagaming kalebet perabet pashagaming virusbet marsbahis imajbet perabet perabet giriş perabet perabet giriş