By Village Missionary Movement
Monday, 20-Feb-2023ಧೈನಂದಿನ ಧ್ಯಾನ(Kannada) – 20.02.2023
ನೀವು ಅರ್ಹರಾಗಿದ್ದೀರಾ?
"ಅವರು ಯೇಸುವಿನ ಬಳಿಗೆ ಬಂದು - ನಿನ್ನಿಂದ ಇಂಥ ಉಪಕಾರ ಹೊಂದುವದಕ್ಕೆ ಅವನು ಯೋಗ್ಯನು;" - ಲೂಕ 7:4
ಒಮ್ಮೆ ಒಬ್ಬ ಸೇವಕರ ಸ್ನೇಹಿತ ಅವರ ಬಳಿ "ನನ್ನ ಹೆಂಡತಿಗೆ ಒಂದು ದೊಡ್ಡ ಆಪರೇಷನ್ ನಡೆಯಿತು. ಆ ನಂತರ ಚಳಿ ಜ್ವರ ಬಂದು ಸಾವಿನೊಂದಿಗೆ ಹೋರಾಡುತ್ತಿದ್ದಾಳೆ” ಎಂದು ಅಳಲು ತೋಡಿಕೊಂಡರು. ಸೇವಕರು ಆ ಸಹೋದರಿಗಾಗಿ ಪ್ರಾರ್ಥಿಸಿದಾಗ, ಪವಿತ್ರಾತ್ಮನು ಆ ಸಹೋದರಿ ಮಾಡಿದ ಅನೇಕ ಒಳ್ಳೆಯ ವಿಷಯಗಳನ್ನು ನೆನಪಿಸಿದರು. ಆಕೆ ಅನೇಕ ಸೇವಕರುಗಳಿಗೆ ಊಟೋಪಚಾರ ಮತ್ತು ಸತ್ಕಾರ ಮಾಡಿದ್ದಳು. ಈ ಸೇವಕರು ಸಹ ಸುವಾರ್ತೆ ಸಾರಲು ಮೂರು ಬಾರಿ ಆ ಸ್ಥಳಕ್ಕೆ ಭೇಟಿ ನೀಡಿದ್ದಾಗ, ಆಕೆಯೇ ಅವರಿಗೆ ಆಹಾರವನ್ನು ನೀಡಿ ಸತ್ಕರಿಸಿದ್ದಳು. "ದೇವರೇ, ಈ ಸಹೋದರಿ ನಿನ್ನ ಕರುಣೆಗೆ ಅರ್ಹಳು," ಎಂದು ಅವರು ಅವಳ ಜೀವಕ್ಕಾಗಿ ಹೋರಾಡಿ ಪ್ರಾರ್ಥಿಸಿದರು. ದೇವರು ಆ ಸಹೋದರಿಗೆ ಸ್ವಸ್ಥತೆಯನ್ನು ನೀಡಿದರು.
ಶತಾಧಿಪತಿಗೆ ಪ್ರಿಯನಾದ ಸೇವಕನು ಅನಾರೋಗ್ಯದಿಂದ, ಸಾವಿನೊಂದಿಗೆ ಹೋರಾಡುತ್ತಿದ್ದನು. ಶತಾಧಿಪತಿಯು ಯೇಸುವಿನ ಬಗ್ಗೆ ಕೇಳಿದಾಗ, ಅವನು ಒಬ್ಬ ಯೆಹೂದ್ಯರ ಹಿರಿಯನನ್ನು ಯೇಸುವಿನ ಬಳಿಗೆ ಕಳುಹಿಸಿ " ಅವರು ಬಂದು ಈ ಸೇವಕನನ್ನು ಗುಣಪಡಿಸಬೇಕು" ಎಂದು ಬೇಡಿಕೊಂಡನು. ಆ ಹಿರಿಯರು ಯೇಸುವಿನ ಬಳಿಗೆ ಬಂದು, “ನೀನು ಇದನ್ನು ಮಾಡಲು ಅವನು ಅರ್ಹನು. ನಮ್ಮ ಜನರನ್ನು ಇವನು ತುಂಬಾ ಪ್ರೀತಿಸುತ್ತಾನೆ; ನಮಗೆ ಒಂದು ದೇವಾಲಯವನ್ನೂ ಕಟ್ಟಿಸಿದನು’’ ಎಂದು ಆಸಕ್ತಿಯಿಂದ ಬೇಡಿಕೊಂಡರು. ಇದನ್ನು ಕೇಳಿದ ಯೇಸು ಶತಾಧಿಪತಿಯ ಮನೆಯ ಕಡೆಗೆ ನಡೆದರು. ಮನೆಯ ಹತ್ತಿರ ಬಂದಾಗ, ಅವನು ತನ್ನ ಸ್ನೇಹಿತರನ್ನು ಅವರ ಬಳಿಗೆ ಕಳುಹಿಸಿ, “ನೀವು ನನ್ನ ಮನೆಗೆ ಬರಲು ನಾನು ಅರ್ಹನಲ್ಲ. ಆದ್ದರಿಂದ ನೀವು ಕೇವಲ ಒಂದು ಮಾತು ಹೇಳಿದರೆ ಸಾಕು. ನನ್ನ ಸೇವಕನು ಸ್ವಸ್ಥನಾಗಿ ಬಿಡುತ್ತಾನೆ" ಎಂದು ಹೇಳಿದನು. ಕಳುಹಿಸಿದ ಸ್ನೇಹಿತರು ಹಿಂತಿರುಗಿ ಹೋದಾಗ ಸೇವಕನು ಸ್ವಸ್ಥವಾಗಿದ್ದನು.
ಪ್ರಿಯರೇ! ನಮ್ಮ ಕೆಲಸಗಳಿಂದ ನಾವು ಪರಲೋಕಕ್ಕೆ ಹೋಗಲು ಸಾಧ್ಯವಿಲ್ಲ. ಆದರೆ ನಮ್ಮ ಪ್ರೀತಿಯ ಕಾರ್ಯಗಳಿಗೆ ಪರಲೋಕದಲ್ಲಿ ಪ್ರತಿಫಲವಿದೆ ಎಂಬುದನ್ನು ನಾವು ಮರೆಯಬಾರದು. ಕೊರ್ನೇಲ್ಯನು ಮಾಡಿದ ದಾನ ಧರ್ಮಗಳು ದೇವರ ಸನ್ನಿಧಿಯಲ್ಲಿ ನೆನಪಿಸಿಕೊಳ್ಳಲಾಯಿತು. ತಬಿಥಾಳ ಒಳ್ಳೆಯ ಕಾರ್ಯಗಳು ಅವಳು ಜೀವಂತವಾಗಿ ಎದ್ದೇಳುವುದಕ್ಕೆ ಒಂದು ಕಾರಣವಾಯಿತು. ಕೆಲವು ಕ್ರಿಯೆಗಳು ದೇವರ ಬಳಿಯಿಂದ ದಯೆಯನ್ನು, ಅದ್ಭುತವನ್ನು ಹೊಂದಲು ಕಾರಣವಾಗಿದೆ. ನಾವು ಸಹ ಉಪಕಾರಗಳನ್ನು ಹೊಂದಿಕೊಳ್ಳಲು ಅರ್ಹರಾಗಿ ಬದುಕೋಣ! ನಿಮ್ಮಿಂದ ಸಾಧ್ಯವಾದದ್ದನ್ನು ಮಾಡುವ ಪ್ರತಿಯೊಂದಕ್ಕೂ ಪ್ರತಿಫಲವಿದೆ ಎಂಬುದನ್ನು ಎಂದಿಗೂ ಮರೆತು ಹೋಗದೇ, ಸೋತುಹೋಗದೆ ಒಳ್ಳೆಯದನ್ನು ಮಾಡಿರಿ.
- Mrs. ಬ್ಯೂಲ
ಪ್ರಾರ್ಥನಾ ಅಂಶ:
ನಮ್ಮ ಮಾಧ್ಯಮ ಸೇವೆಗೆ ಅಗತ್ಯವಾದ ಉಪಕರಣಗಳನ್ನು ಖರೀದಿಸಲು ಮತ್ತು ಅವಶ್ಯಕತೆಗಳು ಪೂರೈಸಲ್ಪಡಲು ಪ್ರಾರ್ಥಿಸಿರಿ.
*Whatsapp*
ಈ ಧ್ಯಾನ ಸಂದೇಶವನ್ನು ತಮಿಳು, ಇಂಗ್ಲಿಷ್, ಹಿಂದಿ, ಮಲಯಾಳಂ, ತೆಲುಗು, ಕನ್ನಡ, ಪಂಜಾಬಿ ಮತ್ತು ಒರಿಯಾ ಭಾಷೆಗಳಲ್ಲಿ ವಾಟ್ಸಾಪ್‌ನಲ್ಲಿ ಪಡೆದುಕೊಳ್ಳಲು *+91 94440 11864* ಈ ಸಂಖ್ಯೆಯನ್ನು ಸಂಪರ್ಕಿಸಿ.
www.vmm.org.in
ಈಮೈಲ್:- info@vmm.org.in
Android App: https://play.google.com/store/apps/details?id=com.infobells.vmmorgin
ವಿಲೇಜ್ ಮಿಷಿನರಿ ಮೊಮೆಂಟ್ ವಿರುಧುನಗರ್, ಇಂಡಿಯಾ-626001
ಪ್ರಾರ್ಥನಾ ಅವಶ್ಯಕತೆಗಾಗಿ :- +91 93455 40482