By Village Missionary Movement
Sunday, 19-Feb-2023ಧೈನಂದಿನ ಧ್ಯಾನ(Kannada) – 19.02.2023 (Kids Special)
ಹುಲಿ ಮರಿ
"ಪಾಪ ಮಾಡುವ ಪ್ರಾಣವು ತಾನಾಗಿ ಸಾಯುವದು;..." - ಯೆಹೆಜ್ಕೇಲ 18:20
ಒಬ್ಬ ಬೇಟೆಗಾರ ಕಾಡಿನಲ್ಲಿ ಪ್ರಾಣಿಗಳನ್ನು ಬೇಟೆಯಾಡಲು ಹೋಗುತ್ತಾನೆ. ಒಂದು ದಿನ ಬೇಟೆಯಾಡುತ್ತಿದ್ದಾಗ ಒಂದು ಚಿಕ್ಕ ಹುಲಿ ಮರಿಯನ್ನು ನೋಡಿದನು. ಹುಲಿ ಮರಿ ಎಂದು ತಿಳಿಯದೆ ಕಾಡು ಬೆಕ್ಕು ಅಂದುಕೊಂಡು ಆಸೆಯಿಂದ ಮನೆಗೆ ತಂದು ಸಾಕಲು ಆರಂಭಿಸಿದ. ಅದು ನಾಯಿ ಮರಿ ಮತ್ತು ಬೇಟೆಗಾರನ ಇಬ್ಬರು ಮಕ್ಕಳಾದ ಕರಣ್ ಮತ್ತು ಶರಣ್ ಜೊತೆ ಬೆರೆತು ಸಂತೋಷವಾಗಿ ಆಟವಾಡುತ್ತಿತ್ತು. ಶಾಲೆ ಮುಗಿಸಿ ಮನೆಗೆ ಬಂದು ನಾಯಿಮರಿ ಮತ್ತು ಹುಲಿ ಮರಿಯೊಂದಿಗೆ ಆಟವಾಡುವುದು ಕರಣ್ ಗೆ ತುಂಬಾ ಜಾಲಿಯಾಗಿತ್ತು. ಶರಣ್ ತನ್ನ ಸ್ನೇಹಿತರೊಂದಿಗೆ ಕ್ರಿಕೆಟ್ ಆಡಲು ಹೊರಟು ಹೋಗುತ್ತಾನೆ. ಕೆಲವು ತಿಂಗಳುಗಳಲ್ಲಿ ಮರಿ ಬೆಳೆದಂತೆ, ಅವರು ವ್ಯತ್ಯಾಸವನ್ನು ಕಂಡರು. ಹುಲಿ ಎಂದು ಗೊತ್ತಿದ್ದರೂ ಬಿಡಲು ಮನಸ್ಸಿಲ್ಲ.
ಅಕ್ಕಪಕ್ಕದ ಮನೆಯವರೆಲ್ಲ ಆ ಹುಲಿಗೆ ಹೆದರಿ ಇದನ್ನು ಎತ್ತಿಕೊಂಡು ಹೋಗಿ ಕಾಡಿನಲ್ಲಿ ಬಿಟ್ಟು ಬಿಡಿ. ಮುಂದೊಂದು ದಿನ ನಮ್ಮನ್ನು ನಾಶಮಾಡಿಬಿಡುತ್ತದೆ ಎಂದು ಹೇಳಿದಾಗ ಬೇಟೆಗಾರನು ತಲೆಕೆಡಿಸಿಕೊಳ್ಳಲಿಲ್ಲ. ಇದನ್ನು ನನ್ನ ಮಗುವಿನಂತೆ ಬೆಳೆಸಿದ್ದೇನೆ. ಅದು ನಮ್ಮನ್ನು ಏನೂ ಮಾಡುವುದಿಲ್ಲ ಎಂದು ಹೇಳಿ ನಿಭಾಯಿಸುತ್ತಿದ್ದ. ಒಂದು ದಿನ ಕರಣ್ ಹೊರಗೆ ಆಟವಾಡುತ್ತಿದ್ದಾಗ ಅವನ ಕಾಲಿಗೆ ಪೆಟ್ಟು ಬಿದ್ದು ರಕ್ತಸ್ರಾವವಾಯಿತು. ಹುಲಿ ಮುಂದೆ ಧಾವಿಸಿ ನಾಲಿಗೆಯಿಂದ ಗಾಯವನ್ನು ಪ್ರೀತಿಯಿಂದ ನೆಕ್ಕಿತು. ಹುಲಿಗೆ ನನ್ನ ಮೇಲೆ ಎಷ್ಟೊಂದು ವಾತ್ಸಲ್ಯವಿದೆ ಎಂದು ಕರಣ್ ಯೋಚಿಸುತ್ತಿರುವಾಗಲೇ, ರಕ್ತದ ರುಚಿ ನೋಡಿದ ಹುಲಿಯೊಳಗೆ ಜನ್ಮಸ್ವಭಾವ ತಲೆಯೆತ್ತಲು ಪ್ರಾರಂಭಿಸಿತು. ಒಂದೇ ಏಟಿನಲ್ಲಿ ಕರಣ್ ಅನ್ನು ಕೊಂದುಹಾಕಿತು. ಪ್ರೀತಿಯಿಂದ ಬಹು ಮುದ್ದಾಗಿ ಸಾಕಿದ ಹುಲಿಮರಿ ಇದೇನಾ ಎಂದು ಬೇಟೆಗಾರ ಓಡಿ ಬಂದನು. ಅವನ ಮೇಲೂ ಹಾರಿ ಗಾಯಮಾಡಿತು. "ನಾನು ನನ್ನ ನೆರೆಹೊರೆಯವರ ಸಲಹೆಯನ್ನು ಕೇಳದೆ ಹೋದೆನಲ್ಲಾ, ಹುಲಿ ಮರಿ ಬೇಕೆಂದು ಆಸೆಪಟ್ಟು ನನ್ನ ಮಗನನ್ನು ಕಳೆದುಕೊಂಡೆನಲ್ಲಾ" ಎಂದು ಪಶ್ಚಾತ್ತಾಪಪಟ್ಟನು. ಅರಣ್ಯ ಇಲಾಖೆಗೆ ಮಾಹಿತಿ ನೀಡಿ ಹುಲಿಯನ್ನು ಒಪ್ಪಿಸಿದ ಬಳಿಕ ನೆಮ್ಮದಿಯ ನಿಟ್ಟುಸಿರು ಬಿಟ್ಟನು.
ಏನು ಪುಟಾಣಿಗಳೇ! ಹುಲಿಯ ಕಥೆ ತುಂಬಾ ದುಃಖಕರವಾಗಿ ಅಂತ್ಯವಾಯಿತಲ್ಲವೇ? ಪಾಪದೊಂದಿಗೆ ಆಟವಾಡುವುದು ಸಹ ಹೀಗೆಯೇ ನಮ್ಮನ್ನು ನಾಶಮಾಡಿಬಿಡುತ್ತದೆ. ಚಿಕ್ಕ ಸುಳ್ಳು ಹೇಳುವುದು, ಕದಿಯುವುದು, ಅಸೂಯೆ, ಸೆಲ್ ಫೋನ್ ನೋಡುವುದು ಮುಂತಾದ ಪಾಪಗಳನ್ನು ಜಯಿಸಲು ಚಿಕ್ಕ ವಯಸ್ಸಿನಲ್ಲಿಯೇ ಯೇಸಪ್ಪನ ಬಳಿ ಕೃಪೆ ಕೇಳಬೇಕು. ಮುದ್ದು ಪುಟಾಣಿಗಳೇ! ಓಕೆ ನಾ..
- Mrs. ಜೀವಾ ವಿಜಯ್
*Whatsapp*
ಈ ಧ್ಯಾನ ಸಂದೇಶವನ್ನು ತಮಿಳು, ಇಂಗ್ಲಿಷ್, ಹಿಂದಿ, ಮಲಯಾಳಂ, ತೆಲುಗು, ಕನ್ನಡ, ಪಂಜಾಬಿ ಮತ್ತು ಒರಿಯಾ ಭಾಷೆಗಳಲ್ಲಿ ವಾಟ್ಸಾಪ್‌ನಲ್ಲಿ ಪಡೆದುಕೊಳ್ಳಲು *+91 94440 11864* ಈ ಸಂಖ್ಯೆಯನ್ನು ಸಂಪರ್ಕಿಸಿ.
www.vmm.org.in
ಈಮೈಲ್:- info@vmm.org.in
Android App: https://play.google.com/store/apps/details?id=com.infobells.vmmorgin
ವಿಲೇಜ್ ಮಿಷಿನರಿ ಮೊಮೆಂಟ್ ವಿರುಧುನಗರ್, ಇಂಡಿಯಾ-626001
ಪ್ರಾರ್ಥನಾ ಅವಶ್ಯಕತೆಗಾಗಿ :- +91 93455 40482