Village Missionary Movement         கிராம மிஷனரி இயக்கம்

ಧೈನಂದಿನ ಧ್ಯಾನ(Kannada) – 18.02.2023
Share:

By Village Missionary Movement

Saturday, 18-Feb-2023

ಧೈನಂದಿನ ಧ್ಯಾನ(Kannada) – 18.02.2023

 

ನೆಲೆಗೊಳ್ಳಿರಿ

 

"ಮೊದಲಿಂದಿರುವ ಭರವಸವನ್ನು ಅಂತ್ಯದವರೆಗೂ ದೃಢವಾಗಿ ಹಿಡಿದುಕೊಳ್ಳುವ ಪಕ್ಷಕ್ಕೆ ಕ್ರಿಸ್ತನಲ್ಲಿ ಪಾಲುಗಾರರಾಗಿದ್ದೇವಲ್ಲಾ" - ಇಬ್ರಿಯ 3:14

 

ಒಬ್ಬ ಯುವಕ ಅಳುತ್ತಾ ಒಬ್ಬ ವಯಸ್ಸಾದ ಸೇವಕರನ್ನು ಭೇಟಿಯಾಗಲು ಬಂದನು. ಅವನು "ಬೋಧಕರೇ, ಈ ತಿಂಗಳಾದರೂ ನನಗೆ ಆಶೀರ್ವಾದಕರವಾಗಿರುವಂತೆ ಪ್ರಾರ್ಥಿಸಿರಿ" ಎಂದನು. ತಕ್ಷಣ ಬೋಧಕರು, “ಯಾಕೆ? ಅಂಥದ್ದೇನು ನಿನ್ನ ಜೀವನದಲ್ಲಿ ನಡೆಯಿತು? ” ಎಂದರು. ತಕ್ಷಣ ಆ ಯೌವನಸ್ಥನು “ನಾನು ಕಳೆದ ತಿಂಗಳು ಹೊಸದಾಗಿ ಒಂದು ಉದ್ಯೋಗವನ್ನು ಪ್ರಾರಂಭಿಸಿದೆ. ಹೆಚ್ಚೇನೂ ಲಾಭ ಇಲ್ಲ. ಹಾಗಾಗಿ ನಾನು ಬೇರೆ ಉದ್ಯೋಗವೇನಾದರೂ ಮಾಡೋಣ ಅಂತಾ ಇದೀನಿ. ಅದಕ್ಕಾಗಿಯೇ ನಾನು ಪ್ರಾರ್ಥನೆ ಮಾಡಲು ಬಂದಿದ್ದೇನೆ ಅಂದನು. ತಕ್ಷಣ ಬೋಧಕರು ನಗುತ್ತಾ, “ತಮ್ಮಾ, ದೇವರು ಅಲ್ಪವಾದ ಆರಂಭದ ಅಂತ್ಯವನ್ನು ಪರಿಪೂರ್ಣವಾಗಿ ಮಾರ್ಪಡಿಸುವಾತನು. ಅದಕ್ಕೆ ಸ್ಥಿರವಾದ ಮನಸ್ಸು ಬೇಕು. ಇದೇ ಉದ್ಯೋಗದಲ್ಲಿ ಇರು. ದೇವರು ಜ್ಞಾನವನ್ನು ನೀಡುತ್ತಾರೆ ಎಂದು ಪ್ರಾರ್ಥಿಸಿ ಕಳುಹಿಸಿದರು.

 

ಹೌದು, ದೇವರ ಮಕ್ಕಳೇ! ನಾವು ಹೊಸ ಹೊಸ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುತ್ತೇವೆ. ಆದರೆ ಒಂದು ಸಣ್ಣ ಎಡವಟ್ಟು, ನಿರಾಸೆ ಆದಾಗ “ಇದೆಲ್ಲಾ ನಮಗೆ ಸರಿಬರೋದಿಲ್ಲ, ಇದೆಲ್ಲಾ ಮಾಡುವುದು ತುಂಬಾ ಕಷ್ಟ” ಎಂದು ಯೋಚಿಸುವುದನ್ನು ಬಿಟ್ಟು ಹಿಂಜರಿಯದೇ ಸತತವಾಗಿ ಮಾಡೋಣ, ಸಂಪೂರ್ಣವಾಗಿ ಅದರ ಪ್ರತಿಫಲವನ್ನು ಪಡೆದುಕೊಳ್ಳೋಣ. ಆದುದರಿಂದಲೇ ದಾವೀದನು "ನನಗೆ ಸ್ಥಿರಚಿತ್ತವನ್ನು ಅನುಗ್ರಹಿಸಿ ನನ್ನನ್ನು ನೂತನ ಪಡಿಸು ಎಂದು ಹೇಳುತ್ತಾರೆ (ಕೀರ್ತನೆ 51: 10) ಆರಂಭದಲ್ಲಿ ಕೆಲವು ಹಿನ್ನಡೆಗಳು ಮತ್ತು ನಿರಾಶೆಗಳು ಇದ್ದರೂ, ನಾವು ನಂಬಿಕೆಯಿಂದ ಮುನ್ನಡೆದಾಗ, ನಾವು ಕರ್ತನಲ್ಲಿ ಪಾಲುದಾರರಾಗಿ ಮಾರ್ಪಡಲು ಸಾಧ್ಯ. ಇಸ್ರಾಯೇಲ್ಯರು ಐಗುಪ್ತದಿಂದ ಹೊರಬಂದಾಗ, ಅವರು ಕಾನಾನ್ ಗೆ ಪ್ರವೇಶಿಸುವ ಭರವಸೆಯಿಂದ ಹೋದರು. ಆದರೆ ಕೆಂಪು ಸಮುದ್ರ, ಕುಡಿಯುವ ನೀರು, ಆಹಾರದಂತಹ ಹಲವು ಸಮಸ್ಯೆಗಳನ್ನು ಕಂಡು ಭರವಸೆ ಬಿಟ್ಟು ಗುಣುಗುಟ್ಟಿದರು. ಅವರು ಕಾನಾನ್ ಅನ್ನು ಕಳೆದುಕೊಂಡರು. ನಿಮ್ಮ ಆಧ್ಯಾತ್ಮಿಕ ಮತ್ತು ಲೌಕಿಕ ಜೀವನದ ಪ್ರಗತಿಗಾಗಿ ನೀವು ತೆಗೆದುಕೊಂಡ ನಿರ್ಧಾರದಿಂದ ಹಿಂದೆ ಸರಿಯದೆ ಅಥವಾ ಬಿಟ್ಟುಕೊಡದೆ ಮುಂದುವರಿಯಿರಿ.

 

ನೀವು ಪ್ರಾರಂಭಿಸಿದ ಕ್ರಿಯೆಯಲ್ಲಿ ಸ್ವಲ್ಪ ಲೋಪವಾಗಿದೆ ಎಂದು ನೀವು ವಿಷಾದಿಸಿದ್ದೀರಾ ಮತ್ತು ಅದನ್ನು ಸ್ವೀಕರಿಸಲು ಸಾಧ್ಯವಾಗದ ಕಾರಣ ಬಿಟ್ಟುಕೊಡಲು ನಿರ್ಧರಿಸಿದ್ದೀರಾ? ನಿಮ್ಮ ಆರಂಭವು ಅತ್ಯಲ್ಪವಾಗಿದ್ದರೂ, ನಿಮ್ಮ ಅಂತ್ಯವು ಪರಿಪೂರ್ಣವಾಗಿರುತ್ತದೆ. ನೀವು ಈಗಷ್ಟೇ ಪ್ರಾರಂಭಿಸುತ್ತಿದ್ದರೆ, ಪ್ರಾರಂಭದಲ್ಲಿ ಅದು ಸುಗಮವಾಗಿ ಸಾಗಿದರೆ ವ್ಯವಹಾರಕ್ಕೆ ಹೆಚ್ಚಿನ ಗಮನ ಬೇಕು. ಏಕೆಂದರೆ "ಮೊದಲು ಬೇಗನೆ ಬಾಚಿಕೊಂಡ ಸ್ವಾಸ್ತ್ಯವು ಕೊನೆಯಲ್ಲಿ ಶುಭವನ್ನು ಹೊಂದದು" ಎಂದು ಜ್ಞಾನೋಕ್ತಿಗಳು. 20:21 ರಲ್ಲಿ ಸತ್ಯವೇದವು ಹೇಳುತ್ತಿದೆ. ದೇವರಿಂದ ಪರಿಪೂರ್ಣವಾದ ಉಪಕಾರವನ್ನು ಪಡೆಯಲು ನಾವು ದೃಢವಾದ ಮನೋಭಾವವನ್ನು ಹೊಂದಿರೋಣ.

- Mrs. ಅನ್ಬುಜ್ಯೋತಿ ಸ್ಟಾಲಿನ್

 

ಪ್ರಾರ್ಥನಾ ಅಂಶ:

ಗುಣಪಡಿಸುವ ಆರಾಧನೆಯಲ್ಲಿ ಪ್ರಾರ್ಥನಾ ವಿಜ್ಞಾಪನೆಯನ್ನು ಕೊಡುವ ಪ್ರತಿಯೊಬ್ಬರು ಪ್ರಾಣ ಆತ್ಮ, ಶರೀರದಲ್ಲಿ ಬಿಡುಗಡೆ ಹೊಂದುವಂತೆ ಪ್ರಾರ್ಥಿಸಿರಿ.

 

*Whatsapp*

ಈ ಧ್ಯಾನ ಸಂದೇಶವನ್ನು ತಮಿಳು, ಇಂಗ್ಲಿಷ್, ಹಿಂದಿ, ಮಲಯಾಳಂ, ತೆಲುಗು, ಕನ್ನಡ, ಪಂಜಾಬಿ ಮತ್ತು ಒರಿಯಾ ಭಾಷೆಗಳಲ್ಲಿ ವಾಟ್ಸಾಪ್‌ನಲ್ಲಿ ಪಡೆದುಕೊಳ್ಳಲು *+91 94440 11864* ಈ ಸಂಖ್ಯೆಯನ್ನು ಸಂಪರ್ಕಿಸಿ.

 

www.vmm.org.in

ಈಮೈಲ್:- info@vmm.org.in

Android App: https://play.google.com/store/apps/details?id=com.infobells.vmmorgin

        

ವಿಲೇಜ್ ಮಿಷಿನರಿ ಮೊಮೆಂಟ್ ವಿರುಧುನಗರ್, ಇಂಡಿಯಾ-626001

ಪ್ರಾರ್ಥನಾ ಅವಶ್ಯಕತೆಗಾಗಿ :- +91 93455 40482



hacklink satın al meritking meritking giriş meritking güncel giriş perabet perabet perabet giriş deneme bonusu deneme bonusu veren siteler matbet matbet giriş matbet güncel giriş betsat betsat giriş betsat güncel giriş perabet perabet giriş perabet güncel giriş kingroyal kingroyal giriş kingroyal güncel giriş vaycasino vaycasino giriş vaycasino güncel giriş jojobet superbetin matbet jojobet deneme bonusu deneme bonusu veren siteler holiganbet holiganbet giriş Superbetin superbetin giriş superbetin güncel giriş süperbetin aresbet aresbet giriş perabet perabet giriş milanbahis milanbahis giriş milanbahis milanbahis giriş holiganbet holiganbet giriş holiganbet holiganbet giriş jojobet jojobet giriş alobet alobet giriş casibom casibom giriş