Village Missionary Movement         கிராம மிஷனரி இயக்கம்

ಧೈನಂದಿನ ಧ್ಯಾನ(Kannada) – 17.02.2023
Share:

By Village Missionary Movement

Friday, 17-Feb-2023

ಧೈನಂದಿನ ಧ್ಯಾನ(Kannada) – 17.02.2023

 

ಮಹತ್ವದ ಎರೆಹುಳು

 

"ಕೆಟ್ಟತನಕ್ಕೆ ಸೋತು ಹೋಗದೆ ಒಳ್ಳೇತನದಿಂದ ಕೆಟ್ಟತನವನ್ನು ಸೋಲಿಸು" - ರೋಮಾ 12:21

 

ರಜೆಯಲ್ಲಿ ಇಬ್ಬರು ಹುಡುಗರು ಮಣ್ಣು ತೆಗೆದುಕೊಂಡು ಕೆಸರು ಮಾಡಿ ಆಟವಾಡುತ್ತಿದ್ದರು. ಆಗ ಒಂದು ಎರೆಹುಳು ಅವರ ಕೈಗೆ ಸಿಕ್ಕಿತು. ಅದನ್ನು ನಾಲ್ಕು ತುಂಡು ಮಾಡಿ ಹಾಗೆಯೇ ಬಿಟ್ಟು ಬೇರೆಡೆ ಆಡಲು ಹೋದರು. ಹುಳು ನೋವಿನಿಂದ ಒದ್ದಾಡಿತು. ಕೆಲವೇ ದಿನಗಳಲ್ಲಿ ನಾಲ್ಕು ಕತ್ತರಿಸಿದ ತುಂಡುಗಳು ನಾಲ್ಕು ಎರೆಹುಳುಗಳಾಗಿ ರೂಪಾಂತರಗೊಂಡವು. ನೆಲದಡಿಯಲ್ಲಿ ವಾಸಿಸುತ್ತಿದ್ದರೂ, ಎರೆಹುಳುಗಳ ಚಟುವಟಿಕೆಗಳು ಮಹತ್ವವಾದದ್ದು. ಮಣ್ಣನ್ನು ಮೃದುಗೊಳಿಸಿ, ಮಣ್ಣನ್ನು ಸಂಕುಚಿತಗೊಳಿಸದೆ, ಭೂಮಿಯ ಮೇಲಿರುವ ನೀರು ಭೂಮಿಯೊಳಗೆ ಹೋಗುವುದಕ್ಕೂ ಸಸ್ಯಗಳ ಬೆಳವಣಿಗೆಗೂ ತುಂಬಾ ಉಪಯುಕ್ತವಾಗಿದೆ. ಹೊರಗೆ ಕಾಣದೆ ಭೂಮಿಯಡಿಯಲ್ಲಿ ಬದುಕುತ್ತಿದ್ದರೂ ಇತರರಿಗೆ ಉಪಯೋಗವಾಗುವ ಈ ಎರೆಹುಳದ ಬದುಕು ಬಹಳ ಅದ್ಭುತ! ತಾನು ಕೆಟ್ಟದ್ದನ್ನು ಅನುಭವಿಸಿದರೂ ಸಹ ಅದನ್ನು ಇತರರಿಗೆ ಒಳ್ಳೆಯದಾಗಿ ಪ್ರಯೋಜನಕಾರಿಯಾಗಿ ಮಾರ್ಪಡಿಸಿತು.

 

ಸತ್ಯವೇದದಲ್ಲಿ 2 ಅರಸುಗಳ ಪುಸ್ತಕದಲ್ಲಿ, ಸಿರಿಯಾ ರಾಜನ ರಥಗಳು ಮತ್ತು ಸೈನ್ಯಗಳು ಇಸ್ರಾಯೇಲ್ ಗೆ ವಿರುದ್ಧವಾಗಿ ದಂಡೆತ್ತಿ ಮುತ್ತಿಗೆ ಹಾಕಲು, ಇಸ್ರಾಯೇಲ್ ಅರಸನು ಅವರಿಗೆ ವಿರುದ್ಧವಾಗಿ ನಿಲ್ಲದಂತೆ ರೊಟ್ಟಿ ಮತ್ತು ನೀರನ್ನು ಕಳುಹಿಸಿ ಅವರಿಗೆ ಔತಣವನ್ನು ನೀಡಿದ ಕ್ರಿಯೆಯು, "ಸಮಾಧಾನ ಪಡಿಸುವವರು ಧನ್ಯರು" ಎಂಬ ವಾಕ್ಯವನ್ನು ನೆನಪಿಸುತ್ತಿದೆಯಲ್ಲವೇ? ಅದರ ನಂತರ ಅವರು ಇಸ್ರಾಯೇಲ್ ದೇಶಕ್ಕೆ ಬರಲೇ ಇಲ್ಲ ಎಂದು ನಾವು ಓದುತ್ತೇವೆ. ತಮ್ಮ ವಿರುದ್ಧ ಬಂದವರನ್ನು ಔತಣವಿಟ್ಟು ಸಮಾಧಾನಪಡಿಸಿದ ಅವರ ಕಾರ್ಯ ಅಚ್ಚರಿ ಮೂಡಿಸಿದೆ. ಅಂತೆಯೇ, ಯೋಸೇಫನು ತನ್ನನ್ನು ಗುಲಾಮನಾಗಿ ಮಾಡಿಬಿಟ್ಟ ತನ್ನ ಸಹೋದರರನ್ನು ಶಿಕ್ಷಿಸದೆ ಅವರ ಜೀವರಕ್ಷಣೆ ಮಾಡಿದರು. ಸ್ತೆಫನು ತನ್ನನ್ನು ಕಲ್ಲೆಸೆದವರನ್ನು ಸಹ ಕ್ಷಮಿಸಿ, "ಈ ಪಾಪವನ್ನು ಇವರ ಮೇಲೆ ಹೊರಿಸಬೇಡ" ಎಂದು ಹೇಳಿದರು. ಹೊಸ ಒಡಂಬಡಿಕೆಯಲ್ಲಿ ನೀತಿವಂತನಾದ ಯೋಸೇಫನು ಕೂಡ ಮರಿಯಳನ್ನು ಅವಮಾನಿಸುವ ಉದ್ದೇಶವನ್ನು ಹೊಂದಿರಲಿಲ್ಲ. ಕ್ರಿಸ್ತನ ಮನಸ್ಸು ಇವರ ಜೀವನದಲ್ಲಿ ಇದ್ದಂತೆ ನಮ್ಮಲ್ಲಿಯೂ ಬೆಳೆದು ಅಭಿವೃದ್ಧಿಯಾಗಲಿ.

 

ಹೌದು! ಎರೆಹುಳುಗಳಂತೆ, ನಮ್ಮ ಕಾರ್ಯಗಳು ಇತರರನ್ನು ಯೋಚಿಸುವಂತೆ ಮಾಡಲಿ. ನಮ್ಮ ವಿರುದ್ಧ ಎದ್ದೇಳುವವರನ್ನು ಪ್ರೀತಿಸುವ ಹೃದಯ ನಮಗೆ ಬೇಕು. ಯೋಸೇಫನ ಹಾಗೆ ನಮ್ಮ ನಡುವೆ ಸಹೋದರ ಸ್ನೇಹ ಬೆಳೆಯಲಿ. ಸ್ತೆಫನನ ಹಾಗೆ ಸಂಕಟದ ಮಧ್ಯೆಯೂ ಇತರರಿಗಾಗಿ ಪ್ರಾರ್ಥಿಸುವ ಅನುಭವ ಉಂಟಾಗಲಿ. ಯೋಸೇಫನಂತೆ ಇತರರನ್ನು ಅವಮಾನಿಸದ ಯೇಸುವಿನ ಮನಸ್ಸು ನಮ್ಮೆಲ್ಲರಲ್ಲೂ ಬೆಳೆಯಲಿ. ದೇವರು ತಾನೇ ನಮ್ಮನ್ನು ಆಶೀರ್ವದಿಸಲಿ!

- Mrs. ಮಂಜುಳಾ

 

ಪ್ರಾರ್ಥನಾ ಅಂಶ:

ಪ್ರತಿ ಸೋಮವಾರ ರಾತ್ರಿ ನಡೆಯುವ ಸಂಪೂರ್ಣ ರಾತ್ರಿ ಪ್ರಾರ್ಥನೆಯಲ್ಲಿ ಅನೇಕರು ಭಾಗವಹಿಸುವಂತೆ ಪ್ರಾರ್ಥಿಸಿರಿ.

 

*Whatsapp*

ಈ ಧ್ಯಾನ ಸಂದೇಶವನ್ನು ತಮಿಳು, ಇಂಗ್ಲಿಷ್, ಹಿಂದಿ, ಮಲಯಾಳಂ, ತೆಲುಗು, ಕನ್ನಡ, ಪಂಜಾಬಿ ಮತ್ತು ಒರಿಯಾ ಭಾಷೆಗಳಲ್ಲಿ ವಾಟ್ಸಾಪ್‌ನಲ್ಲಿ ಪಡೆದುಕೊಳ್ಳಲು *+91 94440 11864* ಈ ಸಂಖ್ಯೆಯನ್ನು ಸಂಪರ್ಕಿಸಿ.

 

www.vmm.org.in

ಈಮೈಲ್:- info@vmm.org.in

Android App: https://play.google.com/store/apps/details?id=com.infobells.vmmorgin

        

ವಿಲೇಜ್ ಮಿಷಿನರಿ ಮೊಮೆಂಟ್ ವಿರುಧುನಗರ್, ಇಂಡಿಯಾ-626001

ಪ್ರಾರ್ಥನಾ ಅವಶ್ಯಕತೆಗಾಗಿ :- +91 93455 40482



hacklink satın al meritking meritking giriş meritking güncel giriş perabet perabet perabet giriş deneme bonusu deneme bonusu veren siteler matbet matbet giriş matbet güncel giriş betsat betsat giriş betsat güncel giriş perabet perabet giriş perabet güncel giriş kingroyal kingroyal giriş kingroyal güncel giriş vaycasino vaycasino giriş vaycasino güncel giriş jojobet superbetin matbet jojobet deneme bonusu deneme bonusu veren siteler holiganbet holiganbet giriş Superbetin superbetin giriş superbetin güncel giriş süperbetin aresbet aresbet giriş perabet perabet giriş milanbahis milanbahis giriş milanbahis milanbahis giriş holiganbet holiganbet giriş holiganbet holiganbet giriş jojobet jojobet giriş alobet alobet giriş casibom casibom giriş