By Village Missionary Movement
Thursday, 16-Feb-2023ಧೈನಂದಿನ ಧ್ಯಾನ(Kannada) – 16.02.2023
ಯಾವುದು ಅವರ ಚಿತ್ತ?
"...ನಾವು ದೇವರ ಚಿತ್ತಾನುಸಾರವಾಗಿ ಏನಾದರೂ ಬೇಡಿಕೊಂಡರೆ ಆತನು ನಮ್ಮ ವಿಜ್ಞಾಪನೆಯನ್ನು ಕೇಳುತ್ತಾನೆಂಬ ಧೈರ್ಯವು ಆತನ ವಿಷಯವಾಗಿ ನಮಗುಂಟು" - 1 ಯೋಹಾನ 5:14
ಇಂದಿನ ಯುಗದಲ್ಲಿ ಯಾರೂ ಯಾರನ್ನೂ ಅವಲಂಬಿಸಿ ಬದುಕಬಾರದು ಎಂಬ ಮನಸ್ಥಿತಿಲ್ಲಿದ್ದಾರೆ. ಕಾರಣ, ಅವಲಂಬನೆಯ ಜೀವನವು ಅನೇಕ ಜನರಿಗೆ ಬೇಸರವನ್ನುಂಟುಮಾಡಿದೆ. ಆ ಕಾಲದಲ್ಲಿ ಮಕ್ಕಳು ತಂದೆ-ತಾಯಿಯ ಇಚ್ಛೆಗೆ ತಕ್ಕಂತೆ ವಿಧೇಯರಾಗಿ ಬದುಕುತ್ತಿದ್ದರು. ಆದರೆ ಈಗಿನ ಪರಿಸ್ಥಿತಿಯಲ್ಲಿ ಹದಿಹರೆಯದ ಮಕ್ಕಳಿಗೆ ಪೋಷಕರ ಇಚ್ಛೆಗಳು ಕೋಪವನ್ನೆಬ್ಬಿಸುತ್ತಿದೆ. ನಮ್ಮ ಯುವ ಪೀಳಿಗೆ ತಂದೆ-ತಾಯಿಯ ಸಲಹೆಗಳನ್ನು ಕೇಳದೆ ಎಡವುತ್ತಿದ್ದಾರೆ. ಹೀಗಿರುವಾಗ ಇನ್ನು ದೇವರ ಚಿತ್ತಕ್ಕೆ ಹೇಗೆ ಕಿವಿಗೊಡುತ್ತಾರೆ? ಇದು ಯೋಚಿಸಬೇಕಾದ ವಿಷಯ! ನಾವು ದೇವರನ್ನು ಯಾವ ಸ್ಥಳದಲ್ಲಿ ಇರಿಸಿದ್ದೇವೆ? ನಿಮ್ಮ ಸ್ವಂತ ಆಸೆಗಳಿಗೆ ನಿಮಗೆ ಬೇಕಾದ ಯಾವುದೋ ಒಂದಕ್ಕೆ ಮೊದಲ ಆದ್ಯತೆ ನೀಡಿದ್ದೀರಾ? ಹಾಗಿರುವುದಾದರೆ, ನಿಮ್ಮಷ್ಟು ದುರದೃಷ್ಟವಂತರು ಯಾರೂ ಇಲ್ಲ. ನಾವು ದೇವರನ್ನು ಮೊದಲು ಇರಿಸಿ ನಂತರ ಇತರ ವಿಷಯಗಳನ್ನು ಕ್ರಮವಾಗಿ ಇರಿಸಿದಾಗ ನಾವು ಕೇಳದ ಆಶೀರ್ವಾದವನ್ನು ದೇವರು ನಮಗೆ ನೀಡಲು ಸಾಧ್ಯವಾಗುತ್ತದೆ.
ಪರಿಶುದ್ದ ಗ್ರಂಥದಲ್ಲಿಯೂ ಸಹ ದೇವರ ಚಿತ್ತದಂತೆ ಬದುಕಿದ ವ್ಯಕ್ತಿಗಳಿದ್ದಾರೆ. ಅವರಲ್ಲಿ ಸೊಲೊಮೋನ ಎಂಬವರ ಕುರಿತು ಕೆಲವು ವಿಷಯಗಳನ್ನು ನಾನು ನಿಮಗೆ ತೋರಿಸಲು ಬಯಸುತ್ತೇನೆ. ಇಸ್ರಾಯೇಲನ್ನು ಆಳಿದ ಮೂರನೆಯ ರಾಜ ಇವರು. ಇವರು ಏಳು ವರ್ಷಗಳಲ್ಲಿ ದೇವರ ಆಲಯವನ್ನು ಅಚ್ಚುಕಟ್ಟಾಗಿ ನಿರ್ಮಿಸಿದವರು. ಪ್ರಸಂಗಿ, ಪರಮಗೀತೆ, ಜ್ಞಾನೋಕ್ತಿ ಈ ಪುಸ್ತಕಗಳನ್ನು ಬರೆದ ಲೇಖಕರು. ಇವರು ಇಸ್ರಾಯೇಲನ್ನು ನಲವತ್ತು ವರ್ಷಗಳ ಕಾಲ ಶಾಂತಿಯುತವಾಗಿ ಆಳಿದರು. ಅನೇಕ ಪ್ರತಿಭೆಗಳು ಮತ್ತು ಅನೇಕ ಗುಣಲಕ್ಷಣಗಳನ್ನು ಹೊಂದಿದ್ದ ಸೊಲೊಮೋನನು ತನಗೆ ಇಷ್ಟವಾದ ಪ್ರಾರ್ಥನೆಯನ್ನು ಮಾಡದೆ, ದೇವರಿಗೆ ಇಷ್ಟವಾದ ಪ್ರಾರ್ಥನೆಯನ್ನು ಪ್ರಾರ್ಥಿಸಿದರು. ಅವರು ಸ್ವಾರ್ಥಿಯಾಗಿರಲಿಲ್ಲ. 1 ಕೊರಿಂಥದವರಿಗೆ 10:24 ರಲ್ಲಿ ಹೇಳಿರುವಂತೆ, ಸೊಲೊಮೋನನು ದೇವರ ರಾಜ್ಯಕ್ಕಾಗಿ ಜನರನ್ನು ಒಟ್ಟುಗೂಡಿಸಲು ತನ್ನ ಸ್ವಂತ ಪ್ರಯೋಜನದ ಮೇಲೆ ಕೇಂದ್ರೀಕರಿಸಲಿಲ್ಲ, ಆದರೆ ಇತರರ ಪ್ರಯೋಜನದ ಮೇಲೆ ಕೇಂದ್ರೀಕರಿಸಿದನು. ಆತನ ಹೃದಯವನ್ನು ಕಂಡ ದೇವರು ಆತನು ಕೇಳಿದ ಜ್ಞಾನವನ್ನು ನೀಡಿದ್ದು ಮಾತ್ರವಲ್ಲದೆ, ಅವರು ಕೇಳದ ಸಂಪತ್ತನ್ನೂ ಸಹ ಕೊಟ್ಟರು.
ಇದನ್ನು ಓದುತ್ತಿರುವ ಪ್ರೀತಿಯ ಸಹೋದರ ಸಹೋದರಿಯರೇ, ನಿಮ್ಮ ಜೀವನದ ವಿಷಯಗಳಿಗಾಗಿ ನೀವು ದೇವರ ಬಳಿ ಹೋರಾಡುತ್ತಿದ್ದೀರಾ? ಇನ್ನೂ ನಿಮಗಾಗಿಯೇ ಬೇಡಿಕೊಳ್ಳುತ್ತಿದ್ದೀರಾ? ಹಾಗಾದರೆ ಬದಲಾಗಬೇಕಾದದ್ದು ಖಂಡಿತವಾಗಿಯೂ ನಿಮ್ಮ ಪ್ರಾರ್ಥನೆಯೇ. ನೀವು ಆತನ ಚಿತ್ತದ ಪ್ರಕಾರ ಪ್ರಾರ್ಥಿಸುವುದಾದರೆ, ಅವರು ಖಂಡಿತವಾಗಿಯೂ ನಿಮಗೆ ಕಿವಿಗೊಡುತ್ತಾರೆ. ಆಗ ನಿಮ್ಮ ಜೀವನವು ದೇವರ ಚಿತ್ತದಂತೆ ಇರುತ್ತದೆ ಎಂಬುದರಲ್ಲಿ ಸಂದೇಹವೇ ಇಲ್ಲ.
- Sis. ಹೇಮಲತಾ
ಪ್ರಾರ್ಥನಾ ಅಂಶ:
ಮೇ 1 ರಂದು ತಿರುಚ್ಚಿಯಲ್ಲಿ ನಡೆಯಲಿರುವ ಯೌವ್ವನಸ್ಥರ ಉಜ್ಜೀವನ ಕೂಟದ ಪೂರ್ವ ಸಿದ್ಧತಾ ಕಾರ್ಯಗಳಲ್ಲಿ ದೇವರ ಹಸ್ತವು ಜೊತೆ ಇರುವಂತೆ ಪ್ರಾರ್ಥಿಸಿರಿ.
*Whatsapp*
ಈ ಧ್ಯಾನ ಸಂದೇಶವನ್ನು ತಮಿಳು, ಇಂಗ್ಲಿಷ್, ಹಿಂದಿ, ಮಲಯಾಳಂ, ತೆಲುಗು, ಕನ್ನಡ, ಪಂಜಾಬಿ ಮತ್ತು ಒರಿಯಾ ಭಾಷೆಗಳಲ್ಲಿ ವಾಟ್ಸಾಪ್‌ನಲ್ಲಿ ಪಡೆದುಕೊಳ್ಳಲು *+91 94440 11864* ಈ ಸಂಖ್ಯೆಯನ್ನು ಸಂಪರ್ಕಿಸಿ.
www.vmm.org.in
ಈಮೈಲ್:- info@vmm.org.in
Android App: https://play.google.com/store/apps/details?id=com.infobells.vmmorgin
ವಿಲೇಜ್ ಮಿಷಿನರಿ ಮೊಮೆಂಟ್ ವಿರುಧುನಗರ್, ಇಂಡಿಯಾ-626001
ಪ್ರಾರ್ಥನಾ ಅವಶ್ಯಕತೆಗಾಗಿ :- +91 93455 40482