By Village Missionary Movement
Wednesday, 15-Feb-2023ಧೈನಂದಿನ ಧ್ಯಾನ(Kannada) – 15.02.2023
ಹೊಸ ಆರಂಭ
"ಇಗೋ, ನಾನು ನಿನ್ನನ್ನು ಮಸೆದ ಮೊನೆಹಲ್ಲಿನ ಹೊಸ ಹಂತಿಕುಂಟೆಯನ್ನಾಗಿ ಮಾಡಿದ್ದೇನೆ, ನೀನು ಬೆಟ್ಟಗಳನ್ನು ಒಕ್ಕುತ್ತಾ ಪುಡಿಪುಡಿಗೈದು ಗುಡ್ಡಗಳನ್ನು ಹೊಟ್ಟುಮಾಡುವಿ" - ಯೆಶಾಯ 41:15
ನಾನಿದ್ದ ಹಳ್ಳಿಯಲ್ಲಿ ಒಂದು ಸುಂದರ ಕುಟುಂಬ ವಾಸವಾಗಿತ್ತು. ಕುಟುಂಬದ ಯಜಮಾನ ತನ್ನ ಶೇರ್ ಮಾರ್ಕೆಟಿಂಗ್ ವ್ಯವಹಾರದ ಲಾಭದಿಂದ ಸಂತೋಷವಾಗಿ ಬದುಕುತ್ತಿದ್ದಾಗ, ಇದ್ದಕ್ಕಿದ್ದಂತೆ ಒಂದು ದಿನ ಒಂದು ಫೋನ್ ಕರೆ ಬಂತು. ತನ್ನ ಬಿಜಿನೆಸ್ ಪಾರ್ಟ್ನರ್ ಹಲವು ಲಕ್ಷ ರೂಪಾಯಿಗಳನ್ನು ಪಡೆದು ವಂಚಿಸಿದ್ದಾರೆ ಎಂದು ಆ ದೂರವಾಣಿ ಕರೆಯಲ್ಲಿ ಹೇಳಲಾಯಿತು. ಜೀವನದಲ್ಲಿ ಹಣ, ವಸ್ತು, ಎಲ್ಲವನ್ನೂ ಕಳೆದುಕೊಂಡು ಜೀವನದಲ್ಲಿ ಅವಮಾನ ಮತ್ತು ನಿರಾಶೆಯಿಂದ "ಜೀವನವನ್ನೇ ಕಳೆದುಕೊಂಡಿದ್ದೇನೆ, ಎಲ್ಲಾ ಮುಗಿಯಿತು" ಅಂದುಕೊಂಡು ಸೋತು ಹೋದಂತ ಪರಿಸ್ಥಿತಿಗೆ ತಳ್ಳಲ್ಪಟ್ಟರು. ಅಂಥಾ ಸೋತು ಹೋದಂತ ಪರಿಸ್ಥಿತಿಯಲ್ಲಿ ತನ್ನ ದೇವರ ಶಬ್ದಕ್ಕೆ ವಿಧೇಯನಾಗಿ, ಸೇವೆಗೆ ಸಮರ್ಪಿಸಿಕೊಂಡದ್ದರ ನಿಮಿತ್ತವಾಗಿ ದೇವರು ಆ ಸಹೋದರನ ಜೀವನದಲ್ಲಿ ಒಂದು ಹೊಸ ಆರಂಭವನ್ನು ಕೊಟ್ಟು, ಇಂದು ಸೇವೆಯ ಹಾದಿಯಲ್ಲಿ ಅನೇಕ ಜನರಿಗೆ ಆಶೀರ್ವಾದವಾಗಿ ಮಾರ್ಪಡಿಸಿ, ಕಳೆದುಕೊಂಡ ಸಂತೋಷ ಮತ್ತು ಸಮಾಧಾನವನ್ನು ಮರಳಿ ಪಡೆಯಲು ದೇವರು ಸಹಾಯ ಮಾಡಿದರು.
ಇದೇ ರೀತಿಯ ಒಂದು ಘಟನೆಯೇ ಯೇಸುವಿನ ಶಿಷ್ಯನಾದ ಸೀಮೋನ ಪೇತ್ರನ ಜೀವನದಲ್ಲೂ ಸಂಭವಿಸಿತು. ಈ ಸೀಮೋನ ಪೇತ್ರನು ಯೇಸುವಿನ 12 ಶಿಷ್ಯರಲ್ಲಿ ಒಬ್ಬನು. ಸೀಮೋನ ಎಂದರೆ "ಕಿವಿಗೊಡುವವನು" ಮತ್ತು ಪೀಟರ್ ಎಂದರೆ "ಬಂಡೆ" ಎಂದರ್ಥ. ಸೀಮೋನ ಪೇತ್ರನು ವೃತ್ತಿಯಲ್ಲಿ ಮೀನುಗಾರನಾಗಿದ್ದನು. ಗಲಿಲಾಯದ ಸಮುದ್ರವೇನೂ ಅವರಿಗೆ ಹೊಸದಲ್ಲ. ಸಮುದ್ರದಲ್ಲಿ ಮೀನು ಹಿಡಿಯುವುದು ಅವರಿಗೆ ಕೈಗೆ ಬಂದ ಕಲೆಯಾಗಿತ್ತು, ಆದರೂ ಒಂದು ದಿನ ರಾತ್ರಿ ಪೂರ್ತಿ ಸಮುದ್ರದಲ್ಲಿ ಬಲೆ ಬೀಸಿದರೂ ಒಂದೇ ಒಂದು ಮೀನನ್ನು ಕೂಡ ಹಿಡಿಯಲಾಗಲಿಲ್ಲ ಇದೇ ಅವರ ಜೀವನದಲ್ಲಿ ಎದುರಾದ ಮೊದಲ ಸೋಲು. ಯೇಸುವನ್ನು ಸ್ವೀಕರಿಸಿ ಅವರೊಂದಿಗೆ ನಡೆದ ನಂತರವೂ ಯೇಸುವನ್ನು ತಿರಸ್ಕರಿಸಿದ್ದೇ, ಅವರ ಜೀವನದಲ್ಲಿ ಕಂಡ ಅತಿ ದೊಡ್ಡ ವೈಫಲ್ಯ! "ಇನ್ನು ಜೀವನದಲ್ಲಿ ಏನೂ ಇಲ್ಲ, ಎಲ್ಲಾ ಮುಗಿದು ಹೋಯಿತು" ಎಂದು ಸೋತು ಹೋಗಿ ಮನ ಮುರಿದ ಸ್ಥಿತಿಯಲ್ಲಿದ್ದ ಪೇತ್ರನನ್ನು ಹುಡುಕಿಕೊಂಡು ಮತ್ತೆ ಕರೆ ಬರುತ್ತದೆ."ಇವಕ್ಕಿಂತ ಹೆಚ್ಚಾಗಿ ನೀನು ನನ್ನನ್ನು ಪ್ರೀತಿಸುತ್ತೀಯಾ? ನೀನು ನನ್ನನ್ನು ಪ್ರೀತಿಸುತ್ತೀಯಾ?" ಎಂಬ ದೇವರ ಶಬ್ದವು ಪೇತ್ರನ ಜೀವನದಲ್ಲಿ ಒಂದು ಹೊಸ ಆರಂಭವನ್ನು ತಂದಿತು ಮತ್ತು ಪೇತ್ರನ ಜೀವನದಲ್ಲಿ ನಂಬಿಕೆಯು ಚಿಗುರುವಂತೆ ಮಾಡಿತು. ಪುನಃ ಅವರು ದೇವರಿಗಾಗಿ ವೈರಾಗ್ಯವಾಗಿ ಓಡುವಂತೆ ಮಾಡಿತು ಮತ್ತು ಅವನನ್ನು ಸಭೆಯ ಸ್ತಂಭವಾಗಿ ಪರಿವರ್ತಿಸಿತು.
ಇದನ್ನು ಓದುತ್ತಿರುವ ಪ್ರೀತಿಯ ಸ್ನೇಹಿತರೇ! ಹೀಗೆಯೇ ನಿಮ್ಮ ಜೀವನದಲ್ಲಿಯೂ ಸಹ ನೀವು ಸೋತುಹೋಗಿ ಭರವಸೆಯನ್ನು ಕಳೆದುಕೊಂಡ ಸ್ಥಿತಿಯಲ್ಲಿ ಮನನೊಂದು ವೇದನೆಯಲ್ಲಿದ್ದೀರಾ? ಯೇಸು ನಿಮ್ಮನ್ನು ಪ್ರೀತಿಸುತ್ತಿದ್ದಾರೆ. ಅವರು ನಿಮ್ಮ ಜೀವನದಲ್ಲಿ ಹೊಸ ಆರಂಭವನ್ನು ನೀಡಲು ಬಯಸುತ್ತಿದ್ದಾರೆ. ಪೇತ್ರನಂತೆ ದೇವರ ಧ್ವನಿಗೆ ನಮ್ಮನ್ನು ಸಮರ್ಪಿಸಿಕೊಳ್ಳೋಣ. ನಮ್ಮ ಜೀವನವೂ ಸೋತು ಹೋದ ಅನೇಕರಿಗೆ ಆಶೀರ್ವಾದವಾಗಿ ಮಾರ್ಪಡುತ್ತದೆ ಎಂಬುದು ಖಚಿತ.
- Mrs. ಜ್ಞಾನಸೆಲ್ವಂ ಸೆಲ್ವರಾಜ್
ಪ್ರಾರ್ಥನಾ ಅಂಶ:
ನಮ್ಮ ಮಾಸಿಕ ಪತ್ರಿಕೆಗಳಲ್ಲಿ ಸಂದೇಶಗಳನ್ನು ಬರೆಯುತ್ತಿರುವ ಪ್ರತಿಯೊಬ್ಬರನ್ನು ದೇವರು ತನ್ನ ವಿಶೇಷವಾದ ಆತ್ಮದಿಂದ ತುಂಬಿಸುವಂತೆ ಪ್ರಾರ್ಥಿಸಿರಿ.
*Whatsapp*
ಈ ಧ್ಯಾನ ಸಂದೇಶವನ್ನು ತಮಿಳು, ಇಂಗ್ಲಿಷ್, ಹಿಂದಿ, ಮಲಯಾಳಂ, ತೆಲುಗು, ಕನ್ನಡ, ಪಂಜಾಬಿ ಮತ್ತು ಒರಿಯಾ ಭಾಷೆಗಳಲ್ಲಿ ವಾಟ್ಸಾಪ್‌ನಲ್ಲಿ ಪಡೆದುಕೊಳ್ಳಲು *+91 94440 11864* ಈ ಸಂಖ್ಯೆಯನ್ನು ಸಂಪರ್ಕಿಸಿ.
www.vmm.org.in
ಈಮೈಲ್:- info@vmm.org.in
Android App: https://play.google.com/store/apps/details?id=com.infobells.vmmorgin
ವಿಲೇಜ್ ಮಿಷಿನರಿ ಮೊಮೆಂಟ್ ವಿರುಧುನಗರ್, ಇಂಡಿಯಾ-626001
ಪ್ರಾರ್ಥನಾ ಅವಶ್ಯಕತೆಗಾಗಿ :- +91 93455 40482