Village Missionary Movement         கிராம மிஷனரி இயக்கம்

ಧೈನಂದಿನ ಧ್ಯಾನ(Kannada) – 13.02.2023
Share:

By Village Missionary Movement

Monday, 13-Feb-2023

ಧೈನಂದಿನ ಧ್ಯಾನ(Kannada) – 13.02.2023

 

ರಕ್ಷಣೆ ಹೊಂದಿದವರೆ ನೀವು ಹೊರಡಿರಿ

 

"ನಿಮ್ಮೆದುರಿಗಿರುವ ಹಳ್ಳಿಗೆ ಹೋಗಿರಿ;... ಕಟ್ಟಿರುವ ಒಂದು ಕತ್ತೇಮರಿಯನ್ನು ಕಾಣುವಿರಿ;... ಅದನ್ನು ಬಿಚ್ಚಿ ಹಿಡುಕೊಂಡು ಬನ್ನಿರಿ" - ಲೂಕ 19:29,30

      

ಉತ್ತರದ ರಾಜ್ಯದಲ್ಲಿ ಒಬ್ಬ ಮಿಷನರಿ ಸೇವೆ ಮಾಡುತ್ತಿದ್ದರು. ಒಂದು ದಿನ ಆ ಹಳ್ಳಿಯಲ್ಲಿ ಒಂದು ಕುಟುಂಬವನ್ನು ಭೇಟಿಯಾದರು. ಆ ಮನೆಯವರು ತಮಗೆ ಪರಿಚಯವಿದ್ದ ಒಬ್ಬ ಮುದುಕನನ್ನು ಪರಿಚಯಿಸಿದರು. ಅವರು ಒಂದು ರೇಡಿಯೋ ಗೆ ಹಾರ ಹಾಕಿ ಪೂಜೆ ಮಾಡುತ್ತಿದ್ದರು. ಆಘಾತಕ್ಕೊಳಗಾದ ಮಿಷನರಿ "ಇದೇನು?" ಎಂದು ಕೇಳಿದ್ದಕ್ಕೆ, "ಇದೇ ನನ್ನ ಗುರು" ಎಂದು ಉತ್ತರಿಸಿದರು. "ಯಾಕೆ ಈ ರೀತಿ ಹೇಳುತ್ತಿದ್ದೀರ?" ಎಂದು ಮಿಷನರಿ ಕೇಳಿದರು. "ಇದರಲ್ಲಿ ಬೆಳಿಗ್ಗೆ ಮತ್ತು ಸಂಜೆ ಯೇಸುವಿನ ಬಗ್ಗೆ ಸಂದೇಶಗಳು ಬರುತ್ತವೆ. ನಾನು ಅದನ್ನು ಕೇಳುತ್ತಿದ್ದೇನೆ. ನನಗೆ ಅದು ತುಂಬಾ ಇಷ್ಟವಾಗಿದೆ. ನಾನು ಅದರಲ್ಲಿ ಬರುವ ಯೇಸು ದೇವರನ್ನು ಆರಾಧಿಸುತ್ತಿದ್ದೇನೆ" ಎಂದು ಅವರು ಹೇಳಿದರು. ಅಯ್ಯೋ ಇದುವರೆಗೂ ಬುದ್ಧಿ ಹೇಳಿ ಮುನ್ನಡೆಸಲು ಯಾರೂ ಇಲ್ಲವೇ ಎಂದು ಅಂಗಲಾಚಿದರು. ಅವರಿಗೆ ಪ್ರಾರ್ಥಿಸಲು ಸಹ ಗೊತ್ತಿಲ್ಲ. ಇದನ್ನು ತಿಳಿದ ಮಿಷನರಿ ಅವರಿಗೆ ಪ್ರಾರ್ಥಿಸಲು ಕಲಿಸಿಕೊಟ್ಟು ಪರಿಶುದ್ಧ ಗ್ರಂಥವನ್ನು ಕೊಟ್ಟು ಸಹಾಯ ಮಾಡಿದರು.

 

ಪ್ರಿಯರೇ! ಈ ಘಟನೆ ನಮಗೆ ಕಲಿಸುವುದೇನೆಂದರೆ ಯಾವುದೋ ಒಂದು ರೀತಿಯಲ್ಲಿ ಕರ್ತನಿಂದ ಸ್ಪರ್ಶಿಸಲ್ಪಟ್ಟವರು ನಮ್ಮ ಹತ್ತಿರದಲ್ಲೇ ಇದ್ದಾರೆ. ನಾವು ಅವರಿಗೆ ಸತತವಾಗಿ ಮಾರ್ಗದರ್ಶನ ನೀಡಿ ಮುನ್ನಡೆಸುತ್ತಾ ಯೇಸುವಿನ ಬಗ್ಗೆ ಇನ್ನೂ ಹೆಚ್ಚಿನ ವಿಷಯಗಳನ್ನು ತಿಳಿಸುವಾಗ ಅದನ್ನು ಕೂಡಲೇ ಸ್ವೀಕರಿಸುವ ಹೃದಯವುಳ್ಳ ಜನರು ಹೇರಳವಾಗಿ ನಮ್ಮ ಮುಂದೆ ಇದ್ದಾರೆ. ಅವರನ್ನು ಭೇಟಿಯಾಗಲು ನಾವೇ ಹೊರಡಬೇಕು. ಯೇಸು ಕ್ರಿಸ್ತನು ತನ್ನ ಶಿಷ್ಯರಿಗೆ, "ನಿಮ್ಮೆದುರಿಗಿರುವ ಹಳ್ಳಿಗೆ ಹೋಗಿರಿ" ಎಂದು ಹೇಳಿದರು. ಹೌದು, ನಾವು ಹೊರಟಾಗ ಮಾತ್ರವೇ ಕಟ್ಟಲ್ಪಟ್ಟವರನ್ನು ನೋಡಬಹುದು ಮತ್ತು ಯೇಸುವಿನ ಬಳಿಗೆ ಅವರನ್ನು ಕರೆತರಬಹುದು. 

 

ಇಂದು ನಾವು ರಕ್ಷಣೆ ಹೊಂದಿ ಯೇಸುವನ್ನು ನಮ್ಮ ಸ್ವಂತ ರಕ್ಷಕನಾಗಿ ಅಂಗೀಕರಿಸಿದ್ದೇವೆ. ಇದಕ್ಕೆ ಕಾರಣವೇನೆಂದು ನಿಧಾನಿಸಿ ನೋಡುವುದಾದರೆ ಎಷ್ಟೋ ಮಿಷನರಿಗಳು ತಮ್ಮ ಸುಖಕರ ಜೀವನವನ್ನು ತ್ಯಜಿಸಿ ಮತ್ತು ಅಗತ್ಯಗಳನ್ನು ಪರಿಗಣಿಸದೆ ರಕ್ತವನ್ನು ಸುರಿಸಲು ಮತ್ತು ಸಾಯಲು ತಮ್ಮನ್ನು ಒಪ್ಪಿಸಿಕೊಟ್ಟದ್ದರ ಪರಿಣಾಮವೇ ಹೊರತು ಬೇರೇನೂ ಅಲ್ಲ. ಮಿಷನರಿಗಳ ರಕ್ತ ಮತ್ತು ದೇಹವು ನಮ್ಮ ಭೂಮಿಯಲ್ಲಿ ಬೀಜಗಳಾಗಿ ಬಿತ್ತಲ್ಪಟ್ಟದ್ದರಿಂದ ಬೆಳೆದ ವೃಕ್ಷವೇ ನಮ್ಮ ರಕ್ಷಣೆ! ಇದನ್ನೇ ಅಪೊಸ್ತಲನಾದ ಪೌಲನು ತನ್ನ ಪತ್ರಿಕೆಯಲ್ಲಿ ಇಷ್ಟು ದೊಡ್ಡ ರಕ್ಷಣೆಯ ಕುರಿತು ಚಿಂತಿಸದಿದ್ದರೆ ನಾವು ಶಿಕ್ಷೆಯಿಂದ ತಪ್ಪಿಸಿಕೊಳ್ಳುವುದು ಹೇಗೆ ಎಂದು ಬರೆಯುತ್ತಾರೆ.

 

ಯಾರೋ ಒಬ್ಬರು ನಮ್ಮ ಬಳಿಗೆ ಬಂದು ರಕ್ಷಣೆಯ ಸಂದೇಶವನ್ನು ಹೇಳಿದ್ದರಿಂದಲೇ ತಾನೇ ನಾವು ನರಕದಿಂದ ಪಾರಾಗಿದ್ದೇವೆ ಎಂಬುದನ್ನು ಅರಿತುಕೊಂಡರೆ, ಹೇಗೆ ಮತ್ತೊಬ್ಬರಿಗೆ ಹೇಳದೇ ಸುಮ್ಮನಿರಲು ಸಾಧ್ಯ?

- Bro. ರೂಬೆನ್ ಕ್ರಿಸ್ಟಿ

 

ಪ್ರಾರ್ಥನಾ ಅಂಶ:

ಹಸಿದವರಿಗೆ ಆಹಾರ ನೀಡುವ ಯೋಜನೆಯ ಮೂಲಕ ಭೇಟಿಯಾಗುತ್ತಿರುವ ಪ್ರತಿಯೊಬ್ಬರು ರಕ್ಷಣೆ ಹೊಂದುವಂತೆ ಪ್ರಾರ್ಥಿಸಿರಿ.

 

*Whatsapp*

ಈ ಧ್ಯಾನ ಸಂದೇಶವನ್ನು ತಮಿಳು, ಇಂಗ್ಲಿಷ್, ಹಿಂದಿ, ಮಲಯಾಳಂ, ತೆಲುಗು, ಕನ್ನಡ, ಪಂಜಾಬಿ ಮತ್ತು ಒರಿಯಾ ಭಾಷೆಗಳಲ್ಲಿ ವಾಟ್ಸಾಪ್‌ನಲ್ಲಿ ಪಡೆದುಕೊಳ್ಳಲು *+91 94440 11864* ಈ ಸಂಖ್ಯೆಯನ್ನು ಸಂಪರ್ಕಿಸಿ.

 

www.vmm.org.in

ಈಮೈಲ್:- info@vmm.org.in

Android App: https://play.google.com/store/apps/details?id=com.infobells.vmmorgin

        

ವಿಲೇಜ್ ಮಿಷಿನರಿ ಮೊಮೆಂಟ್ ವಿರುಧುನಗರ್, ಇಂಡಿಯಾ-626001

ಪ್ರಾರ್ಥನಾ ಅವಶ್ಯಕತೆಗಾಗಿ :- +91 93455 40482



hacklink satın al