Village Missionary Movement         கிராம மிஷனரி இயக்கம்

ಧೈನಂದಿನ ಧ್ಯಾನ(Kannada) – 12.02.2023
Share:

By Village Missionary Movement

Sunday, 12-Feb-2023

ಧೈನಂದಿನ ಧ್ಯಾನ(Kannada) – 12.02.2023

 

ವಿಧೇಯನಾಗು

 

"ಕಂದಾ, ನನ್ನ ಜ್ಞಾನೋಪದೇಶವನ್ನು ಆಲಿಸು, ನನ್ನ ವಿವೇಕಬೋಧೆಗೆ ಕಿವಿಗೊಡು" - ಜ್ಞಾನೋಕ್ತಿ 5:1

 

ಹಲೋ! ಮುದ್ದು ಪುಟಾಣಿಗಳೇ ಹೇಗಿದ್ದೀರಾ? ನೀವು ಸಂತೋಷವಾಗಿದ್ದೀರಾ? Very good, ನೀವು Happy-ಯಾಗಿ ಇರೋದಕ್ಕೆ ಕಾರಣ ನಿಮ್ಮ ಅಪ್ಪ ಅಮ್ಮ ತಾನೇ. ನಿಮ್ಮ ಹೆತ್ತವರು ಯೇಸಪ್ಪ ನಿಮಗೆ ಕೊಟ್ಟಿರೋ ಗಿಫ್ಟ್ ತಾನೇ. ಅವರು ಹೇಳೋ ಮಾತನ್ನು ಕೇಳಿ ನಡಕೋಬೇಕು. ಆಗಲೇ ಯೇಸಪ್ಪ ಸಂತೋಷಪಡೋದು. ಸರಿ, ಕಥೆ ಕೇಳೋಕೆ ರೆಡೀನಾ? ಸೂಪರ್..

 

ತೋಟ, ಹೊಲ, ಗದ್ದೆ, ಇದಕ್ಕೆಲ್ಲಾ ಯಜಮಾನನಾಗಿದ್ದ ಒಂದು ಅಪ್ಪ ಇದ್ದರು. ಬೆಳಿಗ್ಗೆಯಿಂದ ಸಂಜೆಯವರೆಗೂ ತೋಟದಲ್ಲಿಯೇ ಇರುವ ಕಠಿಣವಾದ ಶ್ರಮಜೀವಿ ಇವರು. ಅವರಿಗೆ ಇಬ್ಬರು ಗಂಡು ಮಕ್ಕಳಿದ್ದಾರೆ. ಇವರಿಗೆ ತೋಟವನ್ನು ನೋಡಿಕೊಳ್ಳಲು ಮತ್ತು ಕೆಲಸದಾಳುಗಳನ್ನು ನೋಡಿಕೊಳ್ಳಲು ತಂದೆ ಕಲಿಸಿದರು. ಒಂದು ದಿನ ತಂದೆಯ ಆರೋಗ್ಯ ಹದಗೆಟ್ಟಿತು. ಆಗ ಹಿರಿಯ ಅಣ್ಣನನ್ನು ಕರೆದು “ತೋಟಕ್ಕೆ ಹೋಗಿ ಇವತ್ತಿನ ಕೆಲಸ ನೋಡಿಕೊಳ್ಳುತ್ತೀಯಾ?” ಎಂದರು. "ಇಲ್ಲಪ್ಪಾ ನಾನು ಹೋಗೋಕೆ ಆಗೋದಿಲ್ಲ. ನನಗೆ ಹೊರಗೆ ತುಂಬಾ ಕೆಲಸ ಇದೆ" ಅಂತಾ ಹೇಳ್ಬಿಟ್ರು. ಸರಿ ಅಂತಾ ಚಿಕ್ಕ ಅಣ್ಣ ಇದ್ದಾರಲ್ಲಾ ಅವರನ್ನು ಕರೆದು ತೋಟಕ್ಕೆ ಹೋಗೋಕೆ ಹೇಳುದ್ರು. "ಸರಿ ಅಪ್ಪ ನಾನು ಹೋಗಿ ಎಲ್ಲಾ ಕೆಲಸ ಮುಗಿಸಿ ಬರ್ತೀನಿ" ಅಂತಾ ಹೇಳ್ಬಿಟ್ಟು Friends ಜೊತೆ ಸೇರಿ ಆಟ ಆಡೋಕೆ ಹೊರಟೋದ್ರು. ನೋಡುದ್ರಾ ಪುಟಾಣಿಗಳೇ ಅಪ್ಪನಿಗೆ ಮೋಸ ಮಾಡ್ಬಿಟ್ರು ಅಲ್ವಾ. ನೀವು ಈ ರೀತಿ ಮೋಸ ಮಾಡಲ್ಲ ಅಲ್ವಾ! ಹಿರಿಯ ಅಣ್ಣ ಬೈಕಿನಲ್ಲಿ ಹೋಗುತ್ತಿದ್ದಾಗ ಯೇಸಪ್ಪ ಅವರ ಹೃದಯದಲ್ಲಿ ಮಾತಾಡಿದರು. "ವಯಸ್ಸಾದ ತಂದೆಯವರಿಗೆ ಹುಷಾರಿಲ್ಲದ ಕಾರಣ ತಾನೇ ನಿನ್ನನ್ನ ‌ತೋಟಕ್ಕೆ ಹೋಗು ಅಂತ ಹೇಳುದ್ರು. ನೀನು ವಿಧೇಯನಾಗದೇ ಇರಬಹುದಾ?" ಅಂದ ಕೂಡಲೇ ಬೈಕ್ ನಿಲ್ಲಿಸಿ ಯೋಚಿಸಿದರು. ಒಂದು ಯೂ ಟರ್ನ್ ಮಾಡಿ ತೋಟಕ್ಕೆ ಹೋಗಿ ಅಪ್ಪ ಹೇಳಿದ ಕೆಲಸವನ್ನೆಲ್ಲಾ ಮುಗಿಸಿ ಆಳುಗಳಿಗೆ ಸಂಬಳ ಕೊಟ್ಟು ಮನೆಗೆ ಬಂದರು. "ಅಪ್ಪಾ ನೀವು ಹೇಳಿದ ಕೆಲಸವನ್ನೆಲ್ಲಾ ಮುಗಿಸಿಬಿಟ್ಟೆ," ಎಂದು ಹೇಳುತ್ತಿರುವಾಗಲೇ ಚಿಕ್ಕ ಅಣ್ಣ ಬಂದರು. "ಸಾರಿ ಅಪ್ಪ ನೀವು ಹೇಳಿದ ಕೆಲಸವನ್ನು ಮಾಡದೆ ನಿಮ್ಮನ್ನು ಮೋಸ ಮಾಡ್ಬಿಟ್ಟೆ" ಎಂದಾಗ ಅಪ್ಪ ಕ್ಷಮಿಸಿಬಿಟ್ರು. ಆದರೆ ಮನದಾಳದಲ್ಲಿ ಚಿಂತೆಯಾಗಿತ್ತು. ಆದರೆ ಹಿರಿಯ ಅಣ್ಣ ಹೋಗೋದಿಲ್ಲ ಎಂದು ಹೇಳಿದರೂ ಜೀಸಸ್ ಮಾತಾಡಿದ ಕೂಡಲೇ ವಿಧೇ ಯರಾದರು. ಇದರಿಂದ ಅಪ್ಪನಿಗೆ ತುಂಬಾ ಸಂತೋಷವಾಯಿತು.

 

ಮುದ್ದು ಪುಟಾಣಿಗಳೇ! ನೀವು ಕೂಡ ಹಿರಿಯ ಅಣ್ಣನಂತೆ ನಿಮ್ಮ ಹೆತ್ತವರನ್ನು ಸಂತೋಷಪಡಿಸುತ್ತೀರಾ? ಹೌದು, ನಿಮ್ಮ ಶಿಕ್ಷಕರು, ಪೋಷಕರು ಮತ್ತು ಹಿರಿಯರ ಮೂಲಕ ಯೇಸಪ್ಪ ನಿಮಗೆ ಒಳ್ಳೆಯ ವಿಷಯಗಳನ್ನು ಕಲಿಸಿಕೊಡುತ್ತಾರೆ. ನೀವು ವಿಧೇಯರಾಗುವಾಗ, ಆಶೀರ್ವದಿಸಲ್ಪಟ್ಟವರಾಗಿರುತ್ತೀರ. God bless you. 

- Sis. ದೆಬೋರಾ

 

*Whatsapp*

ಈ ಧ್ಯಾನ ಸಂದೇಶವನ್ನು ತಮಿಳು, ಇಂಗ್ಲಿಷ್, ಹಿಂದಿ, ಮಲಯಾಳಂ, ತೆಲುಗು, ಕನ್ನಡ, ಪಂಜಾಬಿ ಮತ್ತು ಒರಿಯಾ ಭಾಷೆಗಳಲ್ಲಿ ವಾಟ್ಸಾಪ್‌ನಲ್ಲಿ ಪಡೆದುಕೊಳ್ಳಲು *+91 94440 11864* ಈ ಸಂಖ್ಯೆಯನ್ನು ಸಂಪರ್ಕಿಸಿ.

 

www.vmm.org.in

ಈಮೈಲ್:- info@vmm.org.in

Android App: https://play.google.com/store/apps/details?id=com.infobells.vmmorgin

        

ವಿಲೇಜ್ ಮಿಷಿನರಿ ಮೊಮೆಂಟ್ ವಿರುಧುನಗರ್, ಇಂಡಿಯಾ-626001

ಪ್ರಾರ್ಥನಾ ಅವಶ್ಯಕತೆಗಾಗಿ :- +91 93455 40482



hacklink satın al