Village Missionary Movement         கிராம மிஷனரி இயக்கம்

ಧೈನಂದಿನ ಧ್ಯಾನ(Kannada) – 11.02.2023
Share:

By Village Missionary Movement

Saturday, 11-Feb-2023

ಧೈನಂದಿನ ಧ್ಯಾನ(Kannada) – 11.02.2023

 

ಇಸ್ರಾಯೇಲ್ಯರು ಮಾಡಲು ತಪ್ಪಿಹೋದ ವಿಷಯ

 

"ನೀನು ದಾಸತ್ವದಲ್ಲಿದ್ದ ಐಗುಪ್ತದೇಶದೊಳಗಿಂದ ನಿನ್ನನ್ನು ಬಿಡುಗಡೆ ಮಾಡಿದ ಯೆಹೋವನು ಎಂಬ ನಿನ್ನ ದೇವರು ನಾನೇ" - ವಿಮೋಚನಕಾಂಡ 20:2

 

ಕ್ರಿಸ್ತನಲ್ಲಿ ಪ್ರಿಯರೇ! ಇಂದು, ಇಸ್ರಾಯೇಲ್ಯರು ಮಾಡಲು ವಿಫಲವಾದ ಎರಡು ವಿಷಯಗಳನ್ನು ನೋಡೋಣ. ದೇವರಿಂದ ಬಿಡುಗಡೆ ಮತ್ತು ಉಪಕಾರಗಳನ್ನು ಹೊಂದಿಕೊಂಡ ಇಸ್ರಾಯೇಲ್ಯರು ಅದರಂತೆ ನಡೆಯದೇ ಹೋದ ಅನೇಕ ವಿಷಯಗಳನ್ನು ನಾವು ಸತ್ಯವೇದದಲ್ಲಿ ನೋಡಬಹುದು. ಅಂತಹ ಒಂದು ಘಟನೆಯ ಮೂಲಕ ಕರ್ತನು ಇಂದು ನಮ್ಮೊಂದಿಗೆ ಮಾತನಾಡಲಿ.

 

ಇಸ್ರಾಯೇಲ್ಯರ ವಿರುದ್ಧ ಮಿದ್ಯಾನ್ಯರ ಕೈ ಬಲವಾಗಿತ್ತು. ಮಿದ್ಯಾನ್ಯರು ಇಸ್ರಾಯೇಲ್ಯರ ಭೂಮಿಯನ್ನು ಹಾಳುಮಾಡಿದರು ಮತ್ತು ಪ್ರಾಣಿಗಳನ್ನು ತೆಗೆದುಕೊಂಡು ಹೋದರು. ಮಿದ್ಯಾನ್ಯರು ಇಸ್ರಾಯೇಲ್ಯರನ್ನು ಅವಮಾನಿಸಿದ ದಿನಗಳಲ್ಲಿ ದೇವರು ಗಿದ್ಯೋನ್ ಎಂಬ ರಕ್ಷಕನನ್ನು ಎಬ್ಬಿಸಿದರು. ಅವನು ಕರ್ತನ ಮೇಲೆ ಅವಲಂಬಿತನಾಗಿ ಕರ್ತನ ವಾಕ್ಯದ ಪ್ರಕಾರ ಮಿದ್ಯಾನ್ಯರ ವಿರುದ್ಧ ಹೋರಾಡಿದ್ದರಿಂದ ದೇವರು ಅವನಿಗೆ ಜಯವನ್ನು ಕೊಟ್ಟರು. ಆದ್ದರಿಂದ ಮಿದ್ಯಾನ್ಯರು ಪುನಃ ತಲೆಯೆತ್ತದಂತೆ ಇಸ್ರಾಯೇಲ್ ಪುತ್ರರ ಮುಂದೆ ತಗ್ಗಿಸಲ್ಪಟ್ಟರು. ದೇಶವು ಗಿದ್ಯೋನನ ಕಾಲದಲ್ಲಿ ನಲವತ್ತು ವರ್ಷಗಳ ಕಾಲ ಶಾಂತವಾಗಿತ್ತು.

 

ಹೀಗೆ, ಗಿದ್ಯೋನನ ಮೂಲಕ ದೇವರಿಂದ ಉಪಕಾರವನ್ನು ಹೊಂದಿಕೊಂಡ ಇಸ್ರಾಯೇಲ್ ಪುತ್ರರು ಎರಡು ಪ್ರಮುಖ ವಿಷಯಗಳನ್ನು ಮಾಡಲು ವಿಫಲರಾದರು. ಒಂದು, ಇಸ್ರಾಯೇಲ್ಯರು ಕರ್ತನನ್ನು ಮರೆತರು. ಇನ್ನೊಂದು, ಗಿದ್ಯೋನನು ಮಾಡಿದ ಎಲ್ಲಾ ಉಪಕಾರಗಳಿಗೆ ತಕ್ಕ ದಯೆಯನ್ನು ಅವನ ಮನೆಯವರಿಗೆ ತೋರಿಸಲಿಲ್ಲ. ಬದಲಾಗಿ ಅವರ ಕುಟುಂಬಕ್ಕೆ ದ್ರೋಹ ಬಗೆದರು. ಹೌದು, ಗಿದ್ಯೋನನ ದಾಸಿಯ ಮಗನಾದ ಅಬೀಮೆಲೆಕನು ಗಿದ್ಯೋನನ ಗರ್ಭಫಲವಾದ ಎಪ್ಪತ್ತು ಮಂದಿಯನ್ನು ಕೊಲ್ಲಲು ಇಸ್ರಾಯೇಲ್ಯರು ಅಬೀಮೆಲೆಕನ ಪರವಾಗಿ ನಿಂತರು. ಆದರೆ ಗಿದ್ಯೋನನ ಕಿರಿಯ ಮಗನಾದ ಯೋತಾಮನು ಅಡಗಿಕೊಂಡಿದ್ದರಿಂದ ಅವನು ತಪ್ಪಿಸಿಕೊಂಡನು. ಇಸ್ರಾಯೇಲಿನ ಶೆಕೆಮಿನ ಜನರು ಮಾಡಿದ ಇಂತಹ ಎಲ್ಲಾ ದುಷ್ಟತನವನ್ನು ದೇವರು ಅವರ ತಲೆಯ ಮೇಲೆ ಹಿಂತಿರುಗುವಂತೆ ಮಾಡಿದರು. ಯೆರುಬ್ಬಾಳನೆಂದು ಕರೆಯಲ್ಪಡುವ ಗಿದ್ಯೋನನ ಮಗನಾದ ಯೋತಾಮನ ಶಾಪವು ಅವರಿಗೆ ತಗುಲಿತು.

 

ಪ್ರೀತಿಯ ಸಹೋದರ ಸಹೋದರಿಯರೇ, ಇಸ್ರಾಯೇಲ್ಯರು ಕೃತಜ್ಞತೆ ಇಲ್ಲದವರಾಗಿ ಉಪಕಾರ ಮಾಡಿದವರ ವಿರುದ್ಧ ದ್ರೋಹ ಮಾಡಿದರು. ಅವರು ತಮ್ಮ ದೇವರಾದ ಯೆಹೋವನನ್ನು ಮರೆತರು. ಅವರ ಅಂತ್ಯ ಶಾಪಕ್ಕೊಳಗಾಯಿತು. ಕ್ರೈಸ್ತರಾದ ನಾವು ಸಹ, ನಮಗೆ ಒಳ್ಳೆಯದನ್ನು ಮಾಡಿದವರಿಗೆ ಕೆಟ್ಟದ್ದನ್ನು ಮಾಡದೇ ಶಾಪವನ್ನಲ್ಲ ಆಶೀರ್ವಾದವನ್ನು ಹೊಂದಿಕೊಳ್ಳಲು ಅರ್ಹರಾಗಿ ಜೀವಿಸೋಣ.

 

ನೆನಪಿಡಿ: ನನ್ನ ಮನವೇ, ಆತನು ಮಾಡಿದ ಸಕಲ ಉಪಕಾರಗಳನ್ನೂ ಮರೆಯಬೇಡ.

- K. ಬೆಂಜಮಿನ್

 

ಪ್ರಾರ್ಥನಾ ಅಂಶ:

ನಮ್ಮ ಮಾಧ್ಯಮ ಸೇವೆಗಳಲ್ಲಿ ದೇವರ ಹಸ್ತವು ಜೊತೆಯಿದ್ದು ನಡೆಸುವಂತೆ ಪ್ರಾರ್ಥಿಸಿರಿ.

 

*Whatsapp*

ಈ ಧ್ಯಾನ ಸಂದೇಶವನ್ನು ತಮಿಳು, ಇಂಗ್ಲಿಷ್, ಹಿಂದಿ, ಮಲಯಾಳಂ, ತೆಲುಗು, ಕನ್ನಡ, ಪಂಜಾಬಿ ಮತ್ತು ಒರಿಯಾ ಭಾಷೆಗಳಲ್ಲಿ ವಾಟ್ಸಾಪ್‌ನಲ್ಲಿ ಪಡೆದುಕೊಳ್ಳಲು *+91 94440 11864* ಈ ಸಂಖ್ಯೆಯನ್ನು ಸಂಪರ್ಕಿಸಿ.

 

www.vmm.org.in

ಈಮೈಲ್:- info@vmm.org.in

Android App: https://play.google.com/store/apps/details?id=com.infobells.vmmorgin

        

ವಿಲೇಜ್ ಮಿಷಿನರಿ ಮೊಮೆಂಟ್ ವಿರುಧುನಗರ್, ಇಂಡಿಯಾ-626001

ಪ್ರಾರ್ಥನಾ ಅವಶ್ಯಕತೆಗಾಗಿ :- +91 93455 40482



hacklink satın al meritking meritking giriş meritking güncel giriş perabet perabet perabet giriş deneme bonusu deneme bonusu veren siteler matbet matbet giriş matbet güncel giriş betsat betsat giriş betsat güncel giriş perabet perabet giriş perabet güncel giriş kingroyal kingroyal giriş kingroyal güncel giriş vaycasino vaycasino giriş vaycasino güncel giriş jojobet superbetin matbet jojobet deneme bonusu deneme bonusu veren siteler holiganbet holiganbet giriş Superbetin superbetin giriş superbetin güncel giriş süperbetin aresbet aresbet giriş perabet perabet giriş milanbahis milanbahis giriş milanbahis milanbahis giriş holiganbet holiganbet giriş holiganbet holiganbet giriş jojobet jojobet giriş alobet alobet giriş casibom casibom giriş