Village Missionary Movement         கிராம மிஷனரி இயக்கம்

ಧೈನಂದಿನ ಧ್ಯಾನ(Kannada) – 10.02.2023
Share:

By Village Missionary Movement

Thursday, 09-Feb-2023

ಧೈನಂದಿನ ಧ್ಯಾನ(Kannada) – 10.02.2023

 

ತಡಮಾಡಬೇಡ

 

"ಬೆಳಿಗ್ಗೆ ಅಬ್ರಹಾಮನು ಎದ್ದು... ದೇವರು ಹೇಳಿದ ಸ್ಥಳಕ್ಕೆ ಹೊರಟನು” - ಆದಿಕಾಂಡ 22:3

 

ಚೈನಾ ದೇಶದಲ್ಲಿರುವ ಒಬ್ಬ ಚಿಕ್ಕ ಹುಡುಗ ಭಕ್ತಿಯುಳ್ಳ ತನ್ನ ತಾಯಿ ಕೊಡುತ್ತಿದ್ದ ಕೆಲವು ನಾಣ್ಯಗಳನ್ನು ಸ್ವಲ್ಪ ಸ್ವಲ್ಪವಾಗಿ ಸೇರಿಸಿಟ್ಟಿದ್ದನು. ಯಾವತ್ತಾದರೂ ಒಂದು ದಿನ ತನಗೆ ಇಷ್ಟವಾದದ್ದನ್ನು ತೆಗೆದುಕೊಳ್ಳಬೇಕೆಂದು ಹಣವನ್ನು ಸೇರಿಸಿಟ್ಟಿದ್ದನು. ಒಂದು ದಿನ ಮುಂಜಾನೆ ಅವನು ಹುಂಡಿಯೊಂದಿಗೆ ತನ್ನ ತಾಯಿಯ ಬಳಿಗೆ ಓಡಿಬಂದನು. ಅವನು ಬೇಗನೆ ಎಲ್ಲಾ ನಾಣ್ಯಗಳನ್ನು ತನ್ನ ತಾಯಿಯ ಮಡಿಲಿಗೆ ಸುರಿದು, “ಅಮ್ಮಾ, ನಿನ್ನೆ ರಾತ್ರಿ ನಾನು ಕನಸು ಕಂಡೆ. ಅದರಲ್ಲಿ ನಾನು ನಮ್ಮ ದೇಶದ ಮಂಚೂರಿಯಾ ರಾಜ್ಯದಲ್ಲಿ ಕೊಲೆಗಾರರ ನಡುವೆ ಸೇವೆ ಮಾಡುತ್ತಿದ್ದ ಮಿಷನರಿ ಗೋಫೋರ್ತ್ ಜೊತೆ ನಿಂತಿದ್ದೇನೆ. ನಾನು ಎಚ್ಚರವಾದ ತಕ್ಷಣ, ನನ್ನ ಹೃದಯದಲ್ಲಿ ಒಂದು ಸಣ್ಣ ಧ್ವನಿಯು ಕೇಳಿಸಿತು, "ನಿನ್ನ ಹುಂಡಿಯಲ್ಲಿರುವ ಹಣವನ್ನು ಮಿಷನರಿ ಗೋಫೋರ್ತ್ಗೆ ಕಳುಹಿಸು" ಎಂದು

 ಹೇಳಿದ್ದನ್ನು ಕೇಳಿದೆ. ಆದುದರಿಂದ ನೀವು ಅವರಿಗೆ ಈ ಹಣವನ್ನು ಕಳುಹಿಸಿ ಅಲ್ಲಿಯ ಜನರಿಗೆ ಯೇಸುವಿನ ಕುರಿತು ಬೋಧಿಸಲು ಹೇಳಿ ಮತ್ತು ಅವರಿಗೆ ಸೇವೆ ಮಾಡಲು ಹೇಳಿರಿ" ಎಂದು ಹೇಳಿ ಅವನು ಶಾಲೆಗೆ ಹೋದನು.

 

ಸ್ವಲ್ಪ ಹೊತ್ತಿನ ನಂತರ ಮತ್ತೆ ಓಡಿ ಬಂದು “ಅಮ್ಮಾ ತಡಮಾಡದೆ ತಕ್ಷಣ ಕಳಿಸಿಬಿಡು. ಕರ್ತನು ಎರಡನೆ ಬಾರಿ ಹೇಳುವುದನ್ನು ಕೇಳಲು ನನಗೆ ಇಷ್ಟವಿಲ್ಲ" ಎಂದು ಹೇಳಿದನು. ನಮಗೆ ಇಂದು ಅಂತಹ ಮಗುವಿನ ಹೃದಯ ಬೇಕು. ದೇವರು ಹೇಳಿದಾಗ ಪಾಲಿಸುವ ನಂಬಿಕೆ! ಹೌದು, ಅಬ್ರಹಾಮನು ದೇವರ ಮಾತಿಗೆ ಹಾಗೆ ವಿಧೇಯನಾದನು. ಅವರು ಇದನ್ನು ತನ್ನ ಹೆಂಡತಿಯಾದ ಸಾರಳೊಂದಿಗೆ ಹಂಚಿಕೊಂಡರೆ, ದೇವರ ವಾಕ್ಯವನ್ನು ಪಾಲಿಸುವುದರಲ್ಲಿ ವಿಳಂಬ ಅಥವಾ ಅಡಚಣೆ ಉಂಟಾಗಬಹುದೆಂದು ಅವರು ಭಾವಿಸಿರಬಹುದು.ಅದಕ್ಕಾಗಿಯೇ ಸಾರಳಿಗೆ ಹೇಳದೆಯೇ, ಅವರು ಬೆಳಿಗ್ಗೆ ಬೇಗನೆ ಎದ್ದು ಇಸಾಕನನ್ನು ಬಲಿಕೊಡಲು ದೇವರು ಹೇಳಿದ ಮಾತನ್ನು ನೆರವೇರಿಸಲು ತೀವ್ರವಾಗಿದ್ದರು. ಮುಕ್ತಾಯ ನಮಗೆ ಗೊತ್ತು. ಇಸಾಕನಿಗೆ ಬದಲಾಗಿ ಕುರಿಮರಿ ಯು ಬಲಿಯಾದ ಅದ್ಭುತವು ಸಂಭವಿಸಿತು.

 

ಪ್ರಿಯರೇ! ತಡವಾದ ವಿಧೇಯತೆ ಅಸಹಕಾರಕ್ಕೆ ಸಮ! ಸಾಮಾನ್ಯವಾಗಿ ನಮಗೆ ಇಷ್ಟವಾಗುವಂತಹ ಕೆಲಸವನ್ನು ಮಾಡಲು ನಮಗೆ ಆಜ್ಞಾಪಿಸಲ್ಪಟ್ಟಾಗ, ತಕ್ಷಣವೇ ಪಾಲಿಸುವುದು ಸುಲಭ. ಆದರೆ ನಾವು ಒಪ್ಪಿಕೊಳ್ಳಲಾಗದ ಮತ್ತು ಮಾಡಲು ಬಯಸದದ್ದನ್ನು ಪಾಲಿಸುವುದು ಕಷ್ಟ! ಆದರೆ ಅಬ್ರಹಾಮನು ವಿಧೇಯನಾದನು. ನಾವು ಮೊದಲು ದೇವರಿಗೆ ವಿಧೇಯರಾಗೋಣ. ದೇವರಿಗೆ ವಿಧೇಯರಾದರೆ ಗಂಡನಿಗೂ, ನಾಯಕತ್ವಕ್ಕೂ ವಿಧೇಯರಾಗುವುದು ಸುಲಭವಾಗುತ್ತದೆ. ನಮಗೆ ಆಜ್ಞಾಪಿಸಲಾದ ಕೆಲಸವನ್ನು ಮತ್ತೆ ಮಾಡಲು ಸೂಚಿಸುವ ಮೊದಲೇ ನಾವು ತಕ್ಷಣ ವಿಧೇಯರಾಗಲು ಕಲಿತುಕೊಂಡು ಆಶೀರ್ವಾದವನ್ನು ಹೊಂದೋಣ. 

- Mrs. ಎಬನ್ ಸಂತೋಷ್

 

ಪ್ರಾರ್ಥನಾ ಅಂಶ:

ಎಲ್ಲಾ ಸೇವಾ ಕ್ಷೇತ್ರಗಳಲ್ಲಿ 30 ದಿನಗಳೂ 30 ಮನೆಗಳಲ್ಲಿ ಪ್ರಾರ್ಥನಾ ಕೂಟಗಳು ನಡೆಯುವಂತೆ ಪ್ರಾರ್ಥಿಸಿರಿ.

 

*Whatsapp*

ಈ ಧ್ಯಾನ ಸಂದೇಶವನ್ನು ತಮಿಳು, ಇಂಗ್ಲಿಷ್, ಹಿಂದಿ, ಮಲಯಾಳಂ, ತೆಲುಗು, ಕನ್ನಡ, ಪಂಜಾಬಿ ಮತ್ತು ಒರಿಯಾ ಭಾಷೆಗಳಲ್ಲಿ ವಾಟ್ಸಾಪ್‌ನಲ್ಲಿ ಪಡೆದುಕೊಳ್ಳಲು *+91 94440 11864* ಈ ಸಂಖ್ಯೆಯನ್ನು ಸಂಪರ್ಕಿಸಿ.

 

www.vmm.org.in

ಈಮೈಲ್:- info@vmm.org.in

Android App: https://play.google.com/store/apps/details?id=com.infobells.vmmorgin

        

ವಿಲೇಜ್ ಮಿಷಿನರಿ ಮೊಮೆಂಟ್ ವಿರುಧುನಗರ್, ಇಂಡಿಯಾ-626001

ಪ್ರಾರ್ಥನಾ ಅವಶ್ಯಕತೆಗಾಗಿ :- +91 93455 40482



hacklink satın al