By Village Missionary Movement
Thursday, 09-Feb-2023ಧೈನಂದಿನ ಧ್ಯಾನ(Kannada) – 09.02.2023
ಸತ್ಯವೇದದ ಮಹತ್ವ
"ನಿನ್ನ ವಾಕ್ಯವನ್ನೇ ಅನುಸರಿಸಬೇಕೆಂದು ನನ್ನ ಕಾಲುಗಳನ್ನು ಯಾವ ಕೆಟ್ಟ ದಾರಿಗೂ ಹೋಗದಂತೆ ಕಾದಿದ್ದೇನೆ” - ಕೀರ್ತನೆ 119:101
ಫ್ರಾನ್ಸ್‌ನ ಪ್ರಮುಖ ನಾಸ್ತಿಕ ಇಂಗರ್‌ಸಾಲ್ ಮತ್ತು ಅವನ ಸ್ನೇಹಿತರು ಪೂರ್ವ ದೇಶಗಳನ್ನು ಸುತ್ತಿ ನೋಡಲು ಪ್ರಯಾಣ ಬೆಳೆಸಿದ್ದರು. ಅವರು ಅನೇಕ ದೇಶಗಳ ದ್ವೀಪಗಳನ್ನು ಸುತ್ತಿ ನೋಡಿದರು. ಒಂದು ಚಿಕ್ಕ ದ್ವೀಪದಲ್ಲಿ ಮರದ ಕೆಳಗೆ ಒಬ್ಬ ಯುವಕ ಬೈಬಲ್ ಓದುತ್ತಿದ್ದನು. ಇಂಗರ್ಸಾಲ್ ಅವನ ಬಳಿಗೆ ಹೋಗಿ, "ತಮ್ಮ ಯಾಕೆ ನೀನು ಕಟ್ಟುಕತೆಗಳಿಂದ ತುಂಬಿರುವ ಈ ನಿರುಪಯುಕ್ತ ಪ್ರಾಚೀನ ಪುಸ್ತಕವನ್ನು ಓದುತ್ತಿದ್ದೀಯ? ಅದನ್ನು ಎತ್ತಿ ಬಿಸಾಡು, ನಾನು ನಿನಗೆ ಕೊಡುವ ಈ ವೈಜ್ಞಾನಿಕ ಪುಸ್ತಕವನ್ನು ಓದು ನಿನ್ನ ಜ್ಞಾನವು ಬೆಳೆಯುತ್ತದೆ ಮತ್ತು ನಿನ್ನ ಜೀವನಕ್ಕೆ ಉಪಯುಕ್ತವಾಗಿರುತ್ತದೆ" ಎಂದರು. ಆ ಹುಡುಗ ಇಂಗರಸಾಲನನ್ನು ಮೇಲಿಂದ ಕೆಳಗಿನವರೆಗೂ ನೋಡಿ, "ಈ ವೇದ ಪುಸ್ತಕವನ್ನು ಬಿಸಾಡಲು ಹೇಳುತ್ತಿದ್ದೀಯಾ, ಈ ಪುಸ್ತಕ ನಮಗೆ ಸಿಗದಿದ್ದರೆ ಇಷ್ಟೊತ್ತಿಗೆ ನಿಮ್ಮನ್ನೆಲ್ಲ ಕೊಂದು ಬೇಯಿಸಿ ತಿನ್ನುತ್ತಿದ್ದೆವು" ಎಂದನು. ವೇದಗಳು ನರಭಕ್ಷಕರನ್ನು ನಾಗರಿಕಗೊಳಿಸಿದವು.
ಪಾಪ, ಅಧರ್ಮ, ಅಕ್ರಮಗಳು ಮತ್ತು ಅನ್ಯಾಯಗಳಿಂದ ಗುಲಾಮನಾದ ಮನುಷ್ಯನನ್ನು ಮಾರ್ಪಡಿಸಲು ಸತ್ಯವೇದದ ವಾಕ್ಯಗಳಿಂದ ಮಾತ್ರವೇ ಸಾಧ್ಯ. ದೇವರು ನಮಗೆ ಅನುಗ್ರಹಿಸಿದ ಮಹಾನ್ ಕೊಡುಗೆಗಳಲ್ಲಿ ಒಂದು ಸತ್ಯವೇದ. ಪ್ರಾಚೀನ ಪ್ರಪಂಚವು ವ್ಯಭಿಚಾರ, ವೇಶ್ಯಾವಾಟಿಕೆ, ಜಾತಿ ಭೇದ, ಕೊಲೆ ಮತ್ತು ದರೋಡೆಗಳಿಂದ ತುಂಬಿತ್ತು. ಕ್ರಿಶ್ಚಿಯಾನಿಟಿಯನ್ನು ಕೈಗೆತ್ತಿಕೊಂಡ ಬೆಲೆಕಟ್ಟಲಾಗದ ಮಿಷನರಿಗಳಿಂದ ಜಗತ್ತು ಸುಸಂಸ್ಕೃತವಾಯಿತು ಎಂಬುದು ಎಲ್ಲ ಇತಿಹಾಸಕಾರರೂ ಒಪ್ಪಿಕೊಂಡ ಸತ್ಯ. ಪಾಪದ ಕತ್ತಲೆಯಲ್ಲಿರುವ ಜನರು ಸತ್ಯವೇದದ ಮೂಲಕ ಯೇಸುಕ್ರಿಸ್ತನೆಂಬ ನಿಜವಾದ ಬೆಳಕನ್ನು ಕಂಡು ರಕ್ಷಣೆ ಹೊಂದಿದರು.
ಸತ್ಯವೇದದ ವಿಚಾರಗಳನ್ನು ಯುಕ್ತವಾಗಿ ಹೇಳದೇ ಅಧಿಕಾರದೊಂದಿಗೆ ಮತ್ತು ದೃಢವಿಶ್ವಾಸದೊಂದಿಗೆ ಹೇಳಲಾಗಿದೆ. ಜಗತ್ತನ್ನು ಬದಲಿಸಿದ ಮಹಾನ್ ಗ್ರಂಥ ಸತ್ಯವೇದ. ಯಾರು ಸತ್ಯವೇದವನ್ನು ಪ್ರೀತಿಸುತ್ತಾರೋ ಮತ್ತು ಓದುತ್ತಾರೋ ಅವರು ಪವಿತ್ರ ಜೀವನವನ್ನು ನಡೆಸಲು ಸಾಧ್ಯ. ಕರ್ತನಾದ ಯೇಸು ಕ್ರಿಸ್ತನನ್ನು ತಮ್ಮ ಸ್ವಂತ ರಕ್ಷಕನಾಗಿ ಅಂಗೀಕರಿಸಿದ ಪ್ರತಿಯೊಬ್ಬರೂ ಪ್ರತಿದಿನ "ಸತ್ಯವೇದವೆಲ್ಲಾ ದೇವರು ಮಾತುಗಳೇ" ಎಂಬ ನಂಬಿಕೆಯೊಂದಿಗೆ, ಬಯಕೆಯೊಂದಿಗೆ ಓದಿ, ಪರಿಶುದ್ಧತೆಯನ್ನು ಹೊಂದಿಕೊಂಡು ಜೀವಿಸಲು ದೇವರು ಕರೆಯಲ್ಪಡುತ್ತಿದ್ದಾರೆ.
ನನ್ನ ಪ್ರಿಯರೇ, ನಿಮ್ಮನ್ನು ಮತ್ತು ನನ್ನನ್ನು ಪಾಪದ ಕತ್ತಲೆಯಿಂದ ರಕ್ಷಿಸಿದ ರಾಜಾಧಿರಾಜನಾದ ಯೇಸುವಿನ ಮಾತುಗಳನ್ನು ನಾವು ಪ್ರೀತಿಸುತ್ತಾ, ಓದುತ್ತಾ, ಉಸಿರಾಡುತ್ತಾ ಧ್ಯಾನಿಸುತ್ತಿದ್ದೇವೆಯೇ? ನಿನ್ನ ನುಡಿಯು ಪರಿಶುದ್ಧವಾದದ್ದು; ನಿನ್ನ ಸೇವಕನು ಅದನ್ನೇ ಪ್ರೀತಿಸುತ್ತಾನೆ (ಕೀರ್ತನೆ 119:140). ದೇವರ ಕೃಪೆ ನಮ್ಮನ್ನು ಕಾಪಾಡಲಿ! ಆಮೆನ್.
- Mrs. ಸರೋಜಾ ಮೋಹನ್ ದಾಸ್
ಪ್ರಾರ್ಥನಾ ಅಂಶ:
ನಮ್ಮ 24 ಗಂಟೆಗಳ ಟಿವಿ ಚಾನೆಲ್ “ಆಮೆನ್ ಗ್ರಾಮೀಯ ಟಿವಿ” ಯ ಪೂರ್ವಸಿದ್ಧತಾ ಕೆಲಸಗಳಲ್ಲಿ ದೇವರ ದಯೆ ಮತ್ತು ಸಹಾಯಕ್ಕಾಗಿ ಪ್ರಾರ್ಥಿಸಿರಿ.
*Whatsapp*
ಈ ಧ್ಯಾನ ಸಂದೇಶವನ್ನು ತಮಿಳು, ಇಂಗ್ಲಿಷ್, ಹಿಂದಿ, ಮಲಯಾಳಂ, ತೆಲುಗು, ಕನ್ನಡ, ಪಂಜಾಬಿ ಮತ್ತು ಒರಿಯಾ ಭಾಷೆಗಳಲ್ಲಿ ವಾಟ್ಸಾಪ್‌ನಲ್ಲಿ ಪಡೆದುಕೊಳ್ಳಲು *+91 94440 11864* ಈ ಸಂಖ್ಯೆಯನ್ನು ಸಂಪರ್ಕಿಸಿ.
www.vmm.org.in
ಈಮೈಲ್:- info@vmm.org.in
Android App: https://play.google.com/store/apps/details?id=com.infobells.vmmorgin
ವಿಲೇಜ್ ಮಿಷಿನರಿ ಮೊಮೆಂಟ್ ವಿರುಧುನಗರ್, ಇಂಡಿಯಾ-626001
ಪ್ರಾರ್ಥನಾ ಅವಶ್ಯಕತೆಗಾಗಿ :- +91 93455 40482