Village Missionary Movement         கிராம மிஷனரி இயக்கம்

ಧೈನಂದಿನ ಧ್ಯಾನ(Kannada) – 06.02.2023
Share:

By Village Missionary Movement

Monday, 06-Feb-2023

ಧೈನಂದಿನ ಧ್ಯಾನ(Kannada) – 06.02.2023

 

ನಿನ್ನ ಪ್ರಯಾಸದಿಂದ ಮಾತ್ರವಲ್ಲ...

 

"... ಪರಾಕ್ರಮದಿಂದಲ್ಲ, ಬಲದಿಂದಲ್ಲ, ನನ್ನ ಆತ್ಮದಿಂದಲೇ..." - ಜೆಕರ್ಯ 4: 6

 

ಡೇವಿಡ್ ಅಣ್ಣ ಯೌವ್ವನಸ್ಥನಾಗಿದ್ದ ಸಾಮುವೇಲನ ಬಳಿ ಪರಿಶುದ್ಧ ಜೀವನವನ್ನು ನಡೆಸುವ ಅಗತ್ಯದ ಕುರಿತು ವ್ಯಾಪಕವಾಗಿ ಮಾತನಾಡಿದರು. ಸಾಮುವೇಲ್, "ಈಗಿನ ಕಾಲದ ಪರಿಸ್ಥಿತಿಯಲ್ಲಿ ನಾನು ಪವಿತ್ರವಾಗಿ ಜೀವಿಸಲು ಸಾಧ್ಯ ಎಂದು ನಾನು ನಂಬುವುದಿಲ್ಲ, ಆದರೆ ನಾನು ಪ್ರಯತ್ನಿಸುತ್ತಿದ್ದೇನೆ ಅಣ್ಣ" ಎಂದನು. ತಕ್ಷಣವೇ ಅಣ್ಣ ಅವನ ಬಳಿ, “ಸಾಮುವೇಲ್, ನಿನ್ನ ಸ್ವಂತ ಪ್ರಯತ್ನದಿಂದ ಪವಿತ್ರ ಜೀವನವನ್ನು ನಡೆಸುವುದು ಎಂಬುದು ಸಾಧ್ಯವಿಲ್ಲದ ಕಾರ್ಯ. ಖಂಡಿತವಾಗಿಯೂ ಸೋಲನ್ನೇ ಕಾಣುತ್ತೀಯ” ಎಂದರು. "ಪ್ರಯತ್ನಿಸಲು ಬಯಸುತ್ತಿರುವ ತನ್ನನ್ನು ಅಭಿನಂದಿಸುವ ಬದಲು ನಕಾರಾತ್ಮಕವಾಗಿ ಮಾತನಾಡುತ್ತಿದ್ದಾರಲ್ಲಾ!" ಎಂದು ಸಾಮುವೇಲ್ ಯೋಚಿಸಿದ.

 

ಆದರೆ ಅಣ್ಣ ಹೇಳಿದ್ದು ಸರಿಯೇ. ಪವಿತ್ರ ಜೀವನ ನಡೆಸುವುದು ಎಂಬುದು ಕೇವಲ ಪ್ರಯತ್ನದಿಂದ ಮಾತ್ರವೇ ಸಾಧ್ಯವಿಲ್ಲ. ಅದು "ದೇವರು ನನ್ನನ್ನು ಪವಿತ್ರವಾಗಿ ಕಾಪಾಡುತ್ತಾರೆ" ಎಂಬ ನಂಬಿಕೆಯಿಂದಲೂ ಪವಿತ್ರಾತ್ಮನಿಂದಲೂ ಮಾತ್ರವೇ ಸಾಧ್ಯ. ಹೌದು, "ದೇವರು ನಮ್ಮನ್ನು ಪವಿತ್ರವಾಗಿ ಜೀವಿಸುವಂತೆ ಮಾಡಲು ಶಕ್ತನಾಗಿದ್ದಾನೆ" ಎಂಬ ನಂಬಿಕೆಯೇ ನಮ್ಮನ್ನು ಪವಿತ್ರ ಜೀವನವನ್ನು ನಡೆಸುವಂತೆ ಮಾಡುತ್ತದೆ. ಸಂಕ್ಷಿಪ್ತವಾಗಿ ಹೇಳುವುದಾದರೆ, ದೇವರ ಸಹಾಯವಿಲ್ಲದೆ ನಾವು ಏನನ್ನೂ ಮಾಡಲು ಸಾಧ್ಯವಿಲ್ಲ; ನಮ್ಮ ಪ್ರಯತ್ನವಿಲ್ಲದೆಯೂ ದೇವರು ಏನೂ ಮಾಡುವುದಿಲ್ಲ (Without God we cannot; without us He will not!) ಗೋಲಿಯಾತ್ ವಿರುದ್ಧ ದಾವೀದನ ವಿಜಯವು ಕೇವಲ ಪ್ರಯತ್ನದ ಫಲವಲ್ಲ. ಇದು ದೇವರಲ್ಲಿ ದಾವೀದನಿಗಿದ್ದ ನಂಬಿಕೆಯ ಪರಿಣಾಮವೇ. ದೇವರ ಮೇಲಿನ ನಂಬಿಕೆಯಿಂದ ನಾವೂ ಸಹ ಗೋಲಿಯಾತ್‌ನಂತಹ ಶೋಧನೆಗಳನ್ನು ಜಯಿಸಬಹುದು. ದೇವರು ನಮ್ಮೊಂದಿಗೆ ಬರುತ್ತಾರೆ. ಫಲವನ್ನು ಕೊಡುತ್ತಾರೆ. ಶೋಧನೆಯಲ್ಲಿ ನಾವು ಗೆಲ್ಲುತ್ತೇವೆ.

 

"ಪರಾಕ್ರಮದಿಂದಲ್ಲ, ಬಲದಿಂದಲ್ಲ, ನನ್ನ ಆತ್ಮದಿಂದಲೇ" ಎಂದು ಸತ್ಯವೇದವು ಹೇಳುತ್ತಿದೆ. ಹೌದು, ನಾವು ನಮ್ಮ ಸ್ವಂತ ಶಕ್ತಿಯಿಂದ ಏನು ಮಾಡಲಾಗುವುದಿಲ್ಲವೋ ಅದನ್ನು ನಾವು ಪವಿತ್ರಾತ್ಮನ ಸಹಾಯದಿಂದ ಮಾಡಬಹುದು. ದೇವರಿಗೆ ಇಷ್ಟವಾಗುವ ವಿಷಯಗಳಲ್ಲಿ ನಮ್ಮನ್ನು ನಾವು ತೊಡಗಿಸಿಕೊಂಡಾಗ ನಮ್ಮಲ್ಲಿ ನಂಬಿಕೆ ಬೆಳೆಯುತ್ತದೆ. ಆ ನಂಬಿಕೆಯನ್ನು ಪ್ರಯತ್ನದೊಂದಿಗೆ ಸಂಯೋಜಿಸಿದಾಗ, ಅದ್ಭುತವಾದ ಸಂಗತಿಗಳು ಸಂಭವಿಸುತ್ತವೆ. ಯೆಹೋಶುವ ಮತ್ತು ಕಾಲೇಬನು ಕಾನಾನ್‌ಗೆ ಪ್ರವೇಶಿಸಲು ನಂಬಿಕೆಯ ಮೇಲೆ ಅವಲಂಬಿತರಾಗಿದ್ದರು. ಆದರೆ ಅವರೊಂದಿಗೆ ಇದ್ದ ಇತರ ಹತ್ತು ಮಂದಿ ತಮ್ಮ ಸ್ವಂತ ಬಲದ ಮೇಲೆ ಅವಲಂಬಿತರಾಗಿದ್ದದರಿಂದ ಕಾನಾನ್‌ಗೆ ಪ್ರವೇಶಿಸಲು ಸಾಧ್ಯವಾಗಲಿಲ್ಲ. ನೀವು ನಂಬಿದರೆ ದೇವರ ಮಹಿಮೆಯನ್ನು ಕಾಣುವಿರಿ.

- S. ಬೆರ್ಲಿನ್ ಸೆಲ್ಲಾಬಾಯ್

 

ಪ್ರಾರ್ಥನಾ ಅಂಶ:

ನಮ್ಮ ಕ್ಯಾಂಪಸ್‌ನಲ್ಲಿ ನಡೆಯುತ್ತಿರುವ ನಿರ್ಮಾಣ ಕಾರ್ಯಗಳನ್ನು ದೇವರು ವಹಿಸಿಕೊಳ್ಳುವಂತೆ ಪ್ರಾರ್ಥಿಸಿರಿ.

 

*Whatsapp*

ಈ ಧ್ಯಾನ ಸಂದೇಶವನ್ನು ತಮಿಳು, ಇಂಗ್ಲಿಷ್, ಹಿಂದಿ, ಮಲಯಾಳಂ, ತೆಲುಗು, ಕನ್ನಡ, ಪಂಜಾಬಿ ಮತ್ತು ಒರಿಯಾ ಭಾಷೆಗಳಲ್ಲಿ ವಾಟ್ಸಾಪ್‌ನಲ್ಲಿ ಪಡೆದುಕೊಳ್ಳಲು *+91 94440 11864* ಈ ಸಂಖ್ಯೆಯನ್ನು ಸಂಪರ್ಕಿಸಿ.

 

www.vmm.org.in

ಈಮೈಲ್:- info@vmm.org.in

Android App: https://play.google.com/store/apps/details?id=com.infobells.vmmorgin

        

ವಿಲೇಜ್ ಮಿಷಿನರಿ ಮೊಮೆಂಟ್ ವಿರುಧುನಗರ್, ಇಂಡಿಯಾ-626001

ಪ್ರಾರ್ಥನಾ ಅವಶ್ಯಕತೆಗಾಗಿ :- +91 93455 40482



hacklink satın al