Village Missionary Movement         கிராம மிஷனரி இயக்கம்

ಧೈನಂದಿನ ಧ್ಯಾನ(Kannada) – 05.02.2023 (Kids Special)
Share:

By Village Missionary Movement

Sunday, 05-Feb-2023

ಧೈನಂದಿನ ಧ್ಯಾನ(Kannada) – 05.02.2023 (Kids Special)

 

ಐಡಾ ಸ್ಕಡರ್

 

"...ನಿಮ್ಮ ಬೆಳಕು ಜನರ ಮುಂದೆ ಪ್ರಕಾಶಿಸಲಿ" - ಮತ್ತಾಯ 5:16

  

ಹಾಯ್ ಪುಟಾಣಿಗಳೇ, ಸಂಕ್ರಾಂತಿ ರಜೆ ಎಲ್ಲಾ ಸಂತೋಷವಾಗಿತ್ತಾ? ಇಂದು ತನ್ನ ಕೈಲಾದಷ್ಟು ಮಾಡಿದಂತಹ ಐಡಾ ಸ್ಕಡರ್ ಎಂಬ ಅಮ್ಮನವರ ಬಗ್ಗೆ ನೋಡೋಣ್ವಾ?

 

ಇಂಗ್ಲೆಂಡ್ ನಲ್ಲಿ ಐಡಾ ಎಂಬ ಹುಡುಗಿ ಹಾಸ್ಟೆಲ್ ನಲ್ಲಿ ಓದುತ್ತಿದ್ದಳು. ಒಂದು ದಿನ ಅವಳು ಮತ್ತು ಅವಳ Friends ಜಾಲಿಯಾಗಿ ಮಾತನಾಡುತ್ತಾ ನಗುತ್ತಿದ್ದರು. ಆಗ ಮೇರಿ ಎಂಬ ಸ್ನೇಹಿತೆ ಐಡಾಳ ಬಳಿ, "ಐಡಾ, ನೀನು ನಿನ್ನ ತಂದೆ ಸ್ಕಡರ್‌ನಂತೆ ಮಿಷನರಿಯಾಗಿ ಭಾರತಕ್ಕೆ ಹೋಗುತ್ತೀಯಾ?" ಎಂದು ಕೇಳಿದಳು. ತಕ್ಷಣ ಐಡಾ ಆ ಕೊಳಕು ಭಾರತ ದೇಶಕ್ಕೆ ಹೋಗುವುದು ನನಗೆ ಇಷ್ಟವಿಲ್ಲ" ಎಂದಳು. ಕ್ಲಾರಾ ಎಂಬ ಸ್ನೇಹಿತೆ "ಐಡಾ, ನೀನೂ ಕೂಡ ನಿನ್ನ ಅಪ್ಪನ ಹಾಗೆ ಡಾಕ್ಟರ್ ಆಗಿ ಸೇವೆ ಮಾಡು" ಎಂದು ಹೇಳಿದಳು. ತಕ್ಷಣವೇ ಐಡಾ, "ನಾನು ಹಾಗೆ ಎಂದಿಗೂ ಮಾಡುವುದೇ ಇಲ್ಲ" ಎಂದು ಹೇಳಿಬಿಟ್ಟಳು.

 

ಐಡಾ, ರಜೆಗಾಗಿ ಭಾರತಕ್ಕೆ ಬಂದಳು. ಒಂದು ದಿನ ಸಂಜೆ "ಟೋಕ್ ಟೋಕ್" ಎಂದು ಬಾಗಿಲು ತಟ್ಟುವ ಸದ್ದು ಕೇಳಿಸಿತು. ಐಡಾ ಓಡಿ ಹೋಗಿ ಬಾಗಿಲು ತೆರೆದಳು. ಒಬ್ಬ ಅಯ್ಯ ನಿಂತಿದ್ದರು. “ಅಮ್ಮ ನೀವು ಡಾಕ್ಟರ್ ತಾನೇ. ನನ್ನ ಹೆಂಡತಿ ಹೊಟ್ಟೆನೋವಿನಿಂದ ತುಂಬಾ ಬಳಲುತ್ತಿದ್ದಾಳೆ, ಬಂದು ಸ್ವಲ್ಪ ಔಷಧಿ ಕೊಡಿ ತಾಯಿ" ಎಂದರು. ನಾನಲ್ಲ, ನಮ್ಮಪ್ಪ ಡಾಕ್ಟರ್ ಅವರು ಬಂದ ತಕ್ಷಣ ಬರಲು ಹೇಳುತ್ತೇನೆ” ಎಂದಳು “ಇಲ್ಲಮ್ಮ, ನಾವು ಹೆಂಗಸರಿಗೆ ಗಂಡಸರ ಬಳಿ ಚಿಕಿತ್ಸೆಗೆ ಅನುಮತಿಸುವುದಿಲ್ಲ" ಎಂದು ಹೇಳಿ ಹೊರಟು ಹೋದರು.

 

ಸ್ವಲ್ಪ ಸಮಯದ ನಂತರ, ಮತ್ತೆ ಬಾಗಿಲು ಬಡಿಯುವ ಶಬ್ದ. ಐಡಾ ಹೋಗಿ ನೋಡಿದಾಗ ಒಬ್ಬ ಅಯ್ಯ ನಿಂತಿದ್ದರು “ಅಮ್ಮಾ ಬನ್ನಿ, ನನ್ನ ಹೆಂಡತಿ ಚಳಿ ಜ್ವರದಿಂದ ಜೀವನ್ಮರಣ ಹೋರಾಟ ನಡೆಸುತ್ತಿದ್ದಾಳೆ'' ಎಂದರು. ಐಡಾ ಅದೇ ಉತ್ತರ ಕೊಟ್ಟ ತಕ್ಷಣ ಅವರೂ ಸಹ ಹೊರಟು ಹೋದರು.

 

ಬೆಳಿಗ್ಗೆ, ಐಡಾ ಕಿಟಕಿಯಿಂದ ಹೊರಗೆ ನೋಡಿದಾಗ, ಮೂರು ಶವಗಳನ್ನು ಹೊತ್ತು ಸಾಗುತ್ತಿರುವುದನ್ನು ನೋಡಿದಳು. ತಕ್ಷಣ, "ಯೇಸಪ್ಪಾ, ನಾನು ಡಾಕ್ಟರ್ ಆಗಿ ಈ ಜನರನ್ನು ಕಾಪಾಡುತ್ತೇನೆ" ಎಂದು ಅರ್ಪಿಸಿದಳು. ಐಡಾ ಡಾಕ್ಟರ್ ಆಗಿ ನಮ್ಮ ತಮಿಳುನಾಡಿನ ವೆಲ್ಲೂರಿನಲ್ಲಿ ಸಿಎಂಸಿ ಹಾಸ್ಪಿಟಲ್ ಅನ್ನು ಬಹಳ ದೊಡ್ಡ ಮಟ್ಟದಲ್ಲಿ ಕಟ್ಟಿದರು. ಇಂದಿಗೂ ಅಲ್ಲಿ ದೊಡ್ಡ ದೊಡ್ಡ ಪ್ರಮುಖ ಕಾಯಿಲೆಗಳಿಗೆ ಚಿಕಿತ್ಸೆ ನೀಡಲಾಗುತ್ತಿದೆ.

 

ಪ್ರೀತಿಯ ಮುದ್ದು ಪುಟಾಣಿಗಳೇ! ನೀವು ಕೂಡ ಯೇಸಪ್ಪನಿಗಾಗಿ ನಾನು ಏನಾದರೂ ಮಾಡುತ್ತೇನೆ ಎಂದು ಸಮರ್ಪಿಸಿಕೊಳ್ಳುತ್ತೀರ!!

- Sis. ಬ್ಯೂಲಾ

 

*Whatsapp*

ಈ ಧ್ಯಾನ ಸಂದೇಶವನ್ನು ತಮಿಳು, ಇಂಗ್ಲಿಷ್, ಹಿಂದಿ, ಮಲಯಾಳಂ, ತೆಲುಗು, ಕನ್ನಡ, ಪಂಜಾಬಿ ಮತ್ತು ಒರಿಯಾ ಭಾಷೆಗಳಲ್ಲಿ ವಾಟ್ಸಾಪ್‌ನಲ್ಲಿ ಪಡೆದುಕೊಳ್ಳಲು *+91 94440 11864* ಈ ಸಂಖ್ಯೆಯನ್ನು ಸಂಪರ್ಕಿಸಿ.

 

www.vmm.org.in

ಈಮೈಲ್:- info@vmm.org.in

Android App: https://play.google.com/store/apps/details?id=com.infobells.vmmorgin

        

ವಿಲೇಜ್ ಮಿಷಿನರಿ ಮೊಮೆಂಟ್ ವಿರುಧುನಗರ್, ಇಂಡಿಯಾ-626001

ಪ್ರಾರ್ಥನಾ ಅವಶ್ಯಕತೆಗಾಗಿ :- +91 93455 40482



hacklink satın al matbet matbet giriş hepsibet hepsibet giriş betnano betnano giriş betparibu betparibu giriş casibom virüsbet pashagaming kalebet perabet pashagaming virusbet marsbahis imajbet perabet perabet giriş perabet perabet giriş