Village Missionary Movement         கிராம மிஷனரி இயக்கம்

ಧೈನಂದಿನ ಧ್ಯಾನ(Kannada) – 03.02.2023
Share:

By Village Missionary Movement

Friday, 03-Feb-2023

ಧೈನಂದಿನ ಧ್ಯಾನ(Kannada) – 03.02.2023

 

TRY JESUS

 

“ಯೆಹೋವನು ಸರ್ವೋತ್ತಮನೆಂದು ಅನುಭವದಿಂದ ತಿಳಿದುಕೊಳ್ಳಿರಿ; ಆತನನ್ನು ಆಶ್ರಯಿಸಿಕೊಂಡವರು ಎಷ್ಟೋ ಧನ್ಯರು" - ಕೀರ್ತನೆ 34:8

 

ದೊಡ್ಡ ಪ್ರಮಾಣದ ವೈಜ್ಞಾನಿಕ ಸಮ್ಮೇಳನ ಒಂದನ್ನು ನಡೆಸಲಾಯಿತು, ಇದರಲ್ಲಿ ಅನೇಕ ವೈಜ್ಞಾನಿಕ ಆವಿಷ್ಕಾರಗಳನ್ನು ವೈಜ್ಞಾನಿಕ ಸಂಶೋಧಕರು ಸಾರ್ವಜನಿಕರಿಗೆ ಪ್ರಸ್ತುತಪಡಿಸಿದರು. ಅವರಲ್ಲಿ ಒಬ್ಬ ದೇವರು ಇಲ್ಲ ಎಂಬ ತತ್ವವನ್ನು ಹೊಂದಿರುವ ವಿಜ್ಞಾನಿ. ಅವನು ಇದ್ದಕ್ಕಿದ್ದಂತೆ ಜನರ ನಡುವೆ ಒಂದು ಕರೆ ನೀಡಿದನು. “ದೇವರೊಬ್ಬನಿದ್ದಾನೆ ಎಂದು ಸಾಬೀತುಪಡಿಸಲು ಈ ಗುಂಪಿನಲ್ಲಿ ಯಾರಾದರೂ ಇದ್ದೀರಾ? " ಎಂದು ಹೇಳಿ ಅಣಕಿಸಿ ನಕ್ಕನು. ಆ ಗುಂಪಿನಲ್ಲಿ ದೇವರನ್ನು ಆರಾಧಿಸುವವರು ಸಹ ಶಾಂತ ಮತ್ತು ಮೌನವಾಗಿದ್ದರು. ಇದ್ದಕ್ಕಿದ್ದಂತೆ ಒಬ್ಬ ಚಿಕ್ಕ ಹುಡುಗ ತನ್ನ ಕೈಯಲ್ಲಿ ಸೇಬಿನೊಂದಿಗೆ ವೇದಿಕೆಯ ಮೇಲೆ ಬಂದು "ದೇವರು ಇದ್ದಾನೆ ಎಂದು ನಾನು ಸಾಬೀತುಪಡಿಸುತ್ತೇನೆ" ಎಂದು ಸೇಬನ್ನು ತಿನ್ನಲು ಪ್ರಾರಂಭಿಸಿದನು. ದೇವರನ್ನು ನಿರಾಕರಿಸುವ ಆ ವ್ಯಕ್ತಿಗೆ ತೀವ್ರ ಕೋಪ! ನೀನು ಯಾಕೆ ಹೀಗೆ ಮಾಡುತ್ತಿದ್ದೀಯ? ಎಂದು ಕೇಳಿದನು. ಅದಕ್ಕೆ ಆ ಹುಡುಗ ಈಗ ನಾನು ತಿಂದ ಸೇಬು ಕಹಿಯಾಗಿದೆಯಾ? ಸಿಹಿಯಾಗಿದೆಯಾ? ಅಥವಾ ಹುಳಿಯಾಗಿದೆಯಾ? ಎಂದು ಕೇಳಿದನು. ನೀನು ತಿಂದ ಸೇಬಿನ ರುಚಿ ನನಗೆ ಹೇಗೆ ಗೊತ್ತು ಎಂದನು. ಆಗ ಆ ಹುಡುಗ ನಾನು ಹೇಗೆ ಈ ಹಣ್ಣನ್ನು ರುಚಿ ನೋಡಿದೆನೋ, ಅದರಂತೆಯೇ ದೇವರು ಇದ್ದಾರೆ ಎಂಬುದನ್ನು ಸಹ ನಾನು ರುಚಿ ನೋಡಿದ್ದೇನೆ ಎಂದು ಹೇಳಿದ್ದು ಮಾತ್ರವಲ್ಲದೇ ನೀವೂ ಸಹ ಅವರನ್ನು ರುಚಿ ನೋಡಿರಿ ಎಂದನು. ದೇವರನ್ನು ನಿರಾಕರಿಸಿದ ಆ ವ್ಯಕ್ತಿ ತನ್ನ ತಪ್ಪನ್ನು ಅರಿತು ತಲೆಬಾಗಿದನು.

 

ಸತ್ಯವೇದದಲ್ಲಿಯೂ ಸಹ ಇವನು ನನ್ನ ಹೃದಯಕ್ಕೆ ಒಪ್ಪುವವನು ಎಂದು ಕರೆಸಿಕೊಂಡ ದಾವೀದನು ಕರ್ತನು ಒಳ್ಳೆಯವನು ಎಂದು ಅನೇಕ ಕೀರ್ತನೆಗಳಲ್ಲಿ ಬರೆದಿದ್ದಾರೆ. ಸತ್ಯವೇದದಲ್ಲಿರುವ ಮಾತುಗಳು ಹೀಗೆ ಹೇಳುವುದರಿಂದ ಮಾತ್ರ ಅವರು ಒಳ್ಳೆಯವರಾಗಿರಲಿಲ್ಲ. ನಮ್ಮ ಜೀವನದ ಪ್ರತಿಯೊಂದು ಚಲನೆಯಲ್ಲೂ ಅವರು ಒಳ್ಳೆಯವರಾಗಿಯೇ ಇದ್ದಾರೆ. ಅರಣ್ಯದಲ್ಲಿ ಗುಣುಗುಟ್ಟುತ್ತಿದ್ದ ಇಸ್ರಾಯೇಲ್ ಜನರಿಗೆ ಅವರು ಒಳ್ಳೆಯವರಾಗಿದ್ದರು. ಅರಣ್ಯದಲ್ಲಿ ಅಲೆಯುತ್ತಿದ್ದ ಹಾಗರಳ ಜೀವನದಲ್ಲೂ ಕರ್ತನು ಒಳ್ಳೆಯವರಾಗಿದ್ದರು. ಕರ್ತನಾದ ಯೇಸು ಕೇವಲ ಮೂರುವರೆ ವರ್ಷಗಳಲ್ಲ, ಮೂವತ್ಮೂರುವರೆ ವರ್ಷಗಳ ಕಾಲ ಒಳ್ಳೆಯವರಾಗಿದ್ದರು ಮತ್ತು ಒಳ್ಳೆಯದನ್ನು ಮಾಡುತ್ತಲೇ ಇದ್ದರು.

 

ನನಗೆ ಪ್ರಿಯರಾದವರೇ! ಅವರು ನಮಗಾಗಿ ಮನುಷ್ಯನಾಗಿ ಅವತರಿಸಿರುವ ದೇವರು. ನನಗಾಗಿಯೂ ಮತ್ತು ಇದನ್ನು ಓದುತ್ತಿರುವ ನಿಮಗಾಗಿಯೂ, ನಮ್ಮ ಪಾಪಗಳಿಗಾಗಿಯೂ ಮತ್ತು ತಪ್ಪುಗಳಿಗಾಗಿಯೂ ಅವರು ತನ್ನ ಪ್ರಾಣವನ್ನು ಕೊಟ್ಟರು. ಯಾವ ಪಾಪವನ್ನೂ ಮಾಡದವನು ನಮ್ಮ ಪಾಪಗಳಿಗಾಗಿ ಬಲಿಯಾದನು. ಆತನು ಮೂರನೇ ದಿನ ಜೀವಂತವಾಗಿ ಎದ್ದರು. ಅವರು ಮತ್ತೆ ನಮಗಾಗಿ ಬರಲಿದ್ದಾರೆ. ನೀವು ಸಹ ಯೇಸುವನ್ನು ಏಕೆ ರುಚಿ ನೋಡಬಾರದು? TRY JESUS TODAY!

- Bro. ಆಲ್ವಿನ್ ಜಾಕೋಬ್

 

ಪ್ರಾರ್ಥನಾ ಅಂಶ:

ಶಾಲೆಯ ಮಿಷನ್ ಸೇವೆಯ ಮೂಲಕ ಭೇಟಿ ಮಾಡುತ್ತಿರುವ ವಿದ್ಯಾರ್ಥಿಗಳು ಕ್ರಿಸ್ತನಲ್ಲಿ ಬೆಳೆಯುವಂತೆ ಪ್ರಾರ್ಥಿಸಿರಿ.

 

*Whatsapp*

ಈ ಧ್ಯಾನ ಸಂದೇಶವನ್ನು ತಮಿಳು, ಇಂಗ್ಲಿಷ್, ಹಿಂದಿ, ಮಲಯಾಳಂ, ತೆಲುಗು, ಕನ್ನಡ, ಪಂಜಾಬಿ ಮತ್ತು ಒರಿಯಾ ಭಾಷೆಗಳಲ್ಲಿ ವಾಟ್ಸಾಪ್‌ನಲ್ಲಿ ಪಡೆದುಕೊಳ್ಳಲು *+91 94440 11864* ಈ ಸಂಖ್ಯೆಯನ್ನು ಸಂಪರ್ಕಿಸಿ.

 

www.vmm.org.in

ಈಮೈಲ್:- info@vmm.org.in

Android App: https://play.google.com/store/apps/details?id=com.infobells.vmmorgin

        

ವಿಲೇಜ್ ಮಿಷಿನರಿ ಮೊಮೆಂಟ್ ವಿರುಧುನಗರ್, ಇಂಡಿಯಾ-626001

ಪ್ರಾರ್ಥನಾ ಅವಶ್ಯಕತೆಗಾಗಿ :- +91 93455 40482



hacklink satın al meritking meritking giriş meritking güncel giriş perabet perabet perabet giriş deneme bonusu deneme bonusu veren siteler Vdcasino vaycasino vaycasino giriş vaycasino güncel giriş matbet matbet giriş matbet güncel giriş matbet matbet giriş matbet güncel giriş betsmove betsmove giriş betsmove güncel giriş betsat betsat giriş betsat güncel giriş perabet perabet giriş perabet güncel giriş dumanbet giriş dumanbet dumanbet güncel giriş kingroyal kingroyal giriş kingroyal güncel giriş marsbahis marsbahis giriş marsbahis güncel giriş kingroyal kingroyal giriş kingroyal güncel giriş meritking meritking giriş meritking güncel giriş meritbet meritbet giriş meritbet güncel giriş nakitbahis nakitbahis giriş nakitbahis güncel giriş vaycasino vaycasino giriş vaycasino güncel giriş Holiganbet holiganbet giriş holiganbet güncel giriş bahissenin bahissenin giriş bahissenin güncel giriş bayconticasino bayconticasino giriş bayconticasino güncel giriş imajbet imajbet giriş imajbet güncel giriş prizmabet prizmabet giriş pashagaming pashagaming giriş pashagaming güncel giriş interbahis interbahis giriş interbahis güncel giriş jojobet superbetin matbet jojobet marsbahis marsbahis güncel marsbahis güncel giriş deneme bonusu deneme bonusu veren siteler bahsegel vaycasino vaycasino giriş perabet perabet giriş holiganbet holiganbet giriş holiganbet holiganbet giriş holiganbet holiganbet giriş jojobet jojobet giriş Superbetin superbetin giriş superbetin güncel giriş süperbetin