Village Missionary Movement         கிராம மிஷனரி இயக்கம்

ಧೈನಂದಿನ ಧ್ಯಾನ(Kannada) – 02.02.2023
Share:

By Village Missionary Movement

Wednesday, 01-Feb-2023

ಧೈನಂದಿನ ಧ್ಯಾನ(Kannada) – 02.02.2023

 

ಖಂಡಿತವಾಗಿ ನೆರವೇರುತ್ತದೆ

 

“ಅದು ಕ್ಲುಪ್ತಕಾಲದಲ್ಲಿ ನೆರವೇರತಕ್ಕದ್ದು, ಆದರೆ ಪರಿಣಾಮಕ್ಕೆ ತ್ವರೆಪಡುತ್ತದೆ,... ತಡವಾದರೂ ಅದಕ್ಕೆ ಕಾದಿರು; ಅದು ಬಂದೇ ಬರುವದು, ತಾಮಸವಾಗದು" - ಹಬಕ್ಕೂಕ್ಕ 2:3

 

ಮೆದುಳು ಬಾಧಿಸಲ್ಪಟ್ಟು ವೈದ್ಯರಿಂದ ಕೈಬಿಡಲ್ಪಟ್ಟ ಗಂಡ, ಅರಣ್ಯದಲ್ಲಿ ನಿಂತಂತ ಒಂಟಿತನ! ಹಲವು ಪ್ರಶ್ನೆಗಳನ್ನು ಹೊತ್ತು ದಣಿದ ಮನಸ್ಸಿನಿಂದ ನಿಂತಿದ್ದಳು ಆಕೆ! 2016 ರ ಹೊಸ ವರ್ಷವನ್ನು ನಿರಾಶೆಯಿಂದ ಎದುರು ನೋಡುತ್ತಿದ್ದ ಆ ಮಹಿಳೆಗೆ ದೇವರು ಕೊಟ್ಟ ವಾಗ್ದಾನ ವೆಂದರೆ "ಭಯಪಡಬೇಡ, ನಾನೇ ನಿನಗೆ ಸಹಾಯಮಾಡುತ್ತೇನೆ ಎಂದು ನಿನಗೆ ಹೇಳುವ ನಿನ್ನ ದೇವರಾದ ಯೆಹೋವನೆಂಬ ನಾನೇ ನಿನ್ನ ಕೈಹಿಡಿಯುತ್ತೇನಲ್ಲಾ." (ಯೆಶಾಯ 41:13) ಎಂಬುದೇ! ಆಕೆ ಕೂಡ ದೇವರು ತನ್ನ ಸ್ಥಿತಿಯನ್ನು ಬದಲಾಯಿಸುತ್ತಾರೆ ಮತ್ತು ಗಂಡನಿಗೆ ಉತ್ತಮ ಆರೋಗ್ಯವನ್ನು ನೀಡುತ್ತಾರೆ ಅಂತ ಅಂದುಕೊಂಡಿದ್ದಳು.

ಆದರೆ ಅದೇ ಫೆಬ್ರವರಿ ತಿಂಗಳಲ್ಲಿ ತನ್ನ ಗಂಡ ನಿಧನರಾದರು. ಬದುಕು ಕತ್ತಲೆಯಾದಂತಾಯಿತು.

 

ಈ ವಾಗ್ದಾನವನ್ನು ದೇವರು ನನಗೆ ನೀಡಲಿಲ್ಲ, ನಾನು ಅದಕ್ಕೆ ಅರ್ಹಳೂ ಅಲ್ಲ ಎಂದು ಭಾವಿಸಿ, ಭರವಸೆಯನ್ನು ಬಿಟ್ಟು ವಾಗ್ದಾನ ಮಾಡಿದಾತನನ್ನು ಮಾತ್ರ "ನನ್ನನ್ನು ಮರೆಯಬೇಡಿರಿ" ಎಂದು ಗಟ್ಟಿಯಾಗಿ ಹಿಡಿದಿದ್ದಳು. ಗಂಡನ ಸಾವಿನಿಂದ ಎಲ್ಲವೂ ಮುಗಿದೇ ಹೋಯಿತು ಎಂದು ಆಕೆ ಮಾತ್ರವಲ್ಲ ಮನೆಯವರೂ ಭಾವಿಸಿದ್ದರು. ಜೊತೆಯಲ್ಲಿ ಇರುತ್ತೇನೆ ಎಂದು ಭರವಸೆ ನೀಡಿದ ದೇವರು ಬಿಟ್ಟು ಬಿಡದೇ ಬದುಕಿನ ಕರಾಳ ಸ್ಥಿತಿಯಲ್ಲೂ ಜೊತೆ ಇದ್ದು ಬದುಕನ್ನು ಮುನ್ನಡೆಸಿದರು. ಸಿಎಸ್‌ಐ ಶ್ರವಣದೋಷವುಳ್ಳವರ ಶಾಲೆಯಲ್ಲಿ ಕೆಲಸ ಸಿಗಲು ಮತ್ತು ಎಲ್ಲಾ ನಿರುತ್ಸಾಹದಿಂದ ಹೊರಬರಲು ಮತ್ತು ಮೂರು ವರ್ಷಗಳ ಕಾಲ ಅಲ್ಲಿ ಕೆಲಸ ಮಾಡಲು ದೇವರು ಸಹಾಯ ಮಾಡಿದರು. ಶ್ರವಣದೋಷವುಳ್ಳವರಿಗಾಗಿ ವಿಶೇಷ ಪಿಇಟಿಯನ್ನು ಅವರು ಪೂರ್ಣಗೊಳಿಸದಿದ್ದರೂ, ಅವರು ಮೂರು ವರ್ಷಗಳ ಕಾಲ ಕೆಲಸ ಮಾಡಲು ತಾತ್ಕಾಲಿಕವಾಗಿ ಸಹಾಯ ಮಾಡಿದರು. ದೇವರು ಕಡಿಮೆ ಆದಾಯದಲ್ಲೂ ಎಲ್ಲಾ ಅಗತ್ಯಗಳನ್ನು ಪೂರೈಸಿದರು ಮತ್ತು ಯಾವ ಅಗತ್ಯಕ್ಕೂ ಯಾರ ಬಳಿಯೂ ಕೈಚಾಚಿ ನಿಲ್ಲದಂತೆ ದೇವರು ಅಗತ್ಯಗಳನ್ನು ಪೂರೈಸಿದರು. ಕುಟುಂಬದಲ್ಲಿ ಇಕ್ಕಟ್ಟಾದ ಪರಿಸ್ಥಿತಿಗಳೂ ಇದ್ದವು. ಹೀಗೆ ಕಣ್ಣೀರಿಡುತ್ತಿರುವಾಗ, ತಾಯಿ ಮತ್ತು ಮಗುವನ್ನು ನಾನು ಪೋಷಿಸುತ್ತೇನೆ ಎಂದು ಮಿಷನರಿಯೊಬ್ಬರು ಮುಂದೆ ಬಂದು ನನ್ನನ್ನು ವಿವಾಹ ಮಾಡಿಕೊಂಡರು ಈಗ ಮೂವರು ಒಟ್ಟಾಗಿ ಸೇರಿ ಕರ್ತನ ಸೇವೆಯನ್ನು ಮಾಡುತ್ತಿದ್ದೇವೆ. ಆ ಹುಡುಗಿ ಬೇರೆ ಯಾರೂ ಅಲ್ಲ ನಾನೇ!

 

ಪ್ರಿಯರೇ! ನಾನು ದಾಟಿ ಬಂದ ಹಾದಿಗಳನ್ನು ಹಿಂತಿರುಗಿ ನೋಡುವಾಗ ನನಗೆ ಒಂದು ವಿಷಯ ಅರ್ಥವಾಗುತ್ತಿದೆ. ಒತ್ತಡದ ಭೀತಿಯಿಂದ ಪರದಾಡುವ ಪರಿಸ್ಥಿತಿ ಬರುತ್ತಿದೆ ಎಂದು ತಿಳಿದ ದೇವರು, ನನ್ನ ಕೈ ಹಿಡಿದು ನನಗೆ ವಾಗ್ದಾನ ನೀಡಿ ಜೊತೆ ಇದ್ದು ನಡೆಸುತ್ತಾ ಬಂದಿದ್ದಾರೆ. ಹೌದು, ವಾಗ್ದಾನ ಮಾಡಿದಾತನು ಬದಲಾಗದವನು; ಪರಿಸ್ಥಿತಿಗಳು ಹೇಗೇ ಇರಲಿ, ಹೇಳಿದ ವಾಗ್ದಾನವು ಖಂಡಿತವಾಗಿಯೂ ನೆರವೇರುತ್ತದೆ. ನಮ್ಮ ದೃಷ್ಟಿಗೆ ಅದು ನೆರವೇರದು, ಜೀವನವು ಕೊನೆಗೊಳ್ಳುತ್ತಿದೆ ಅನಿಸುತ್ತದೆ. ಆದರೆ ನಾವು ದಾಟಿ ಬಂದ ಹಾದಿಯನ್ನು ಹಿಂತಿರುಗಿ ನೋಡಿದಾಗ ಮಾತ್ರವೇ ದೇವರು ನಮ್ಮಲ್ಲಿ ತನ್ನ ವಾಗ್ದಾನವನ್ನು ಪೂರೈಸಿದ್ದಾರೆಂದು ನಾವು ಅರಿತುಕೊಳ್ಳಬಹುದು. ಎದೆಗುಂದಬೇಡಿರಿ. ವಾಗ್ದಾನ ಮಾಡಿದಾತನು ನಂಬಿಗಸ್ಥನು, ಅದನ್ನು ಪೂರೈಸುವವರೆಗೂ ಜೊತೆಯಲ್ಲೇ ಇರುತ್ತಾರೆ. ಆಮೆನ್.

- Mrs. ಅನ್ಬುಜ್ಯೋತಿ ಸ್ಟಾಲಿನ್

 

ಪ್ರಾರ್ಥನೆ ಟಿಪ್ಪಣಿ:

VMM ಮೂಲಕ ಶಾಲೆ ನಿರ್ಮಿಸುವ ಅವಶ್ಯಕತೆ ನಮಗಿದೆ. ಪೂರ್ವಸಿದ್ಧತಾ ಕೆಲಸಗಳಿಗಾಗಿ ಪ್ರಾರ್ಥಿಸಿರಿ.

 

*Whatsapp*

ಈ ಧ್ಯಾನ ಸಂದೇಶವನ್ನು ತಮಿಳು, ಇಂಗ್ಲಿಷ್, ಹಿಂದಿ, ಮಲಯಾಳಂ, ತೆಲುಗು, ಕನ್ನಡ, ಪಂಜಾಬಿ ಮತ್ತು ಒರಿಯಾ ಭಾಷೆಗಳಲ್ಲಿ ವಾಟ್ಸಾಪ್‌ನಲ್ಲಿ ಪಡೆದುಕೊಳ್ಳಲು *+91 94440 11864* ಈ ಸಂಖ್ಯೆಯನ್ನು ಸಂಪರ್ಕಿಸಿ.

 

www.vmm.org.in

ಈಮೈಲ್:- info@vmm.org.in

Android App: https://play.google.com/store/apps/details?id=com.infobells.vmmorgin

        

ವಿಲೇಜ್ ಮಿಷಿನರಿ ಮೊಮೆಂಟ್ ವಿರುಧುನಗರ್, ಇಂಡಿಯಾ-626001

ಪ್ರಾರ್ಥನಾ ಅವಶ್ಯಕತೆಗಾಗಿ :- +91 93455 40482



hacklink satın al meritking meritking giriş meritking güncel giriş meritking meritking giriş meritking güncel giriş perabet perabet perabet giriş deneme bonusu deneme bonusu veren siteler Vdcasino vaycasino vaycasino giriş vaycasino güncel giriş matbet matbet giriş matbet güncel giriş yakabet yakabet giriş yakabet güncel giriş betsmove betsmove giriş betsmove güncel giriş betsat betsat giriş betsat güncel giriş perabet perabet giriş perabet güncel giriş dumanbet giriş dumanbet dumanbet güncel giriş kingroyal kingroyal giriş kingroyal güncel giriş marsbahis marsbahis giriş marsbahis güncel giriş kingroyal kingroyal giriş kingroyal güncel giriş meritking meritking giriş meritking güncel giriş meritbet meritbet giriş meritbet güncel giriş nakitbahis nakitbahis giriş nakitbahis güncel giriş dumanbet dumanbet giriş dumanbet güncel giriş Holiganbet holiganbet giriş holiganbet güncel giriş bahissenin bahissenin giriş bahissenin güncel giriş bayconticasino bayconticasino giriş bayconticasino güncel giriş imajbet imajbet giriş imajbet güncel giriş prizmabet prizmabet giriş pashagaming pashagaming giriş pashagaming güncel giriş interbahis interbahis giriş interbahis güncel giriş jojobet superbetin matbet jojobet marsbahis marsbahis güncel marsbahis güncel giriş deneme bonusu deneme bonusu veren siteler bahsegel vaycasino vaycasino giriş perabet perabet giriş holiganbet holiganbet giriş holiganbet holiganbet giriş holiganbet holiganbet giriş jojobet jojobet giriş