Village Missionary Movement         கிராம மிஷனரி இயக்கம்

ಧೈನಂದಿನ ಧ್ಯಾನ(Kannada) – 01.02.2023
Share:

By Village Missionary Movement

Tuesday, 31-Jan-2023

ಧೈನಂದಿನ ಧ್ಯಾನ(Kannada) – 01.02.2023

 

ಕೃತಜ್ಞತೆ

 

“ಕ್ರಿಸ್ತನಿಂದಾದ ಸಮಾಧಾನವು ನಿಮ್ಮ ಹೃದಯಗಳಲ್ಲಿ ಯಜಮಾನನಂತಿದ್ದು ತೀರ್ಪುಹೇಳಲಿ; ನೀವು ಒಂದೇ ದೇಹಕ್ಕೆ ಸೇರಿದವರಾದದರಿಂದ ಸಮಾಧಾನದಿಂದಿರುವದಕ್ಕಾಗಿ ಕರೆಯಲ್ಪಟ್ಟಿರಿ. ಇದಲ್ಲದೆ ಕೃತಜ್ಞತೆಯುಳ್ಳವರಾಗಿರ್ರಿ" - ಕೊಲೊಸ್ಸೆ 3:15

 

ದೇವರು ನಮ್ಮ ಜೀವನದಲ್ಲಿ ಅನೇಕ ಉಪಕಾರಗಳನ್ನು ಮಾಡುತ್ತಲೇ ಇದ್ದಾರೆ. ನಮಗೆ ಊಟ, ಬಟ್ಟೆ, ವಸತಿ ನೀಡಿದ್ದಾರೆ. ಅವರು ನಮ್ಮ ದೇಹವನ್ನು ಎಷ್ಟು ಅದ್ಭುತವಾಗಿ ಸೃಷ್ಟಿಸಿದ್ದಾರೆ. ನಾವು ತಿನ್ನಲು ಅನುಕೂಲಕರವಾದ ಬೆಳೆಗಳನ್ನು, ಹಣ್ಣುಗಳನ್ನು ಮತ್ತು ತರಕಾರಿಗಳನ್ನು ಸೃಷ್ಟಿಸಿ ನಾವು ಅವುಗಳನ್ನು ತಿಂದು ಬಲಗೊಳ್ಳುವಂತೆ ನಮಗೆ ಕೊಟ್ಟಿದ್ದಾರೆ. ನಾವು ಊಟ ಮಾಡುವಾಗ ಇದನ್ನೆಲ್ಲ ಕೊಟ್ಟ ಕರ್ತನಿಗೆ ಕೃತಜ್ಞತೆ ಸಲ್ಲಿಸುವವರಾಗಿರಬೇಕು.

 

ಸತ್ಯವೇದದಲ್ಲಿ, ಕೀರ್ತನೆಗಾರನಾದ ದಾವೀದನು, ನಾನು ಗುಪ್ತಸ್ಥಳದಲ್ಲಿ ಏರ್ಪಡುತ್ತಾ ಭೂಗರ್ಭದಲ್ಲಿ ರಚಿಸಲ್ಪಡುತ್ತಾ ಇದ್ದಾಗ ನನ್ನ ಅಸ್ಥಿಪಂಜರವು ನಿನಗೆ ಮರೆಯಾಗಿದ್ದಿಲ್ಲ. ನಾನು ಇನ್ನೂ ಕೇವಲ ಪಿಂಡವಾಗಿರುವಾಗ ನಿನ್ನ ಕಣ್ಣುಗಳು ನನ್ನನ್ನು ನೋಡಿದವು; ನನ್ನ ಆಯುಷ್ಕಾಲದ ಪ್ರಥಮದಿನವು ಪ್ರಾರಂಭವಾಗುವ ಮೊದಲೇ ಅದರ ಎಲ್ಲಾ ದಿನಗಳು ನಿನ್ನ ಪುಸ್ತಕದಲ್ಲಿ ಬರೆಯಲ್ಪಟ್ಟವು" ಎಂದು ಹೇಳಿದರು. ಹೌದು, ನಾವು ನಮ್ಮ ತಾಯಿಯ ಗರ್ಭದಲ್ಲಿ ರೂಪುಗೊಳ್ಳುವ ಮೊದಲು ಅವರು ನಮ್ಮನ್ನು ತಿಳಿದಿದ್ದರು ಮತ್ತು ನಮಗೆ ಬೇಕಾದ ಎಲ್ಲವನ್ನೂ ಸೃಷ್ಟಿಸಿ ಆನಂದಿಸಿದರು. ಎಷ್ಟು ಅದ್ಭುತ ಸೃಷ್ಟಿಕರ್ತ ಅವರು! ಅವರನ್ನು ಕೃತಜ್ಞತೆಯೊಂದಿಗೆ ನೆನಪಿಸಿಕೊಳ್ಳೋಣ ಎಂದು ದಾವೀದನು ಹಾಡುತ್ತಿದ್ದಾರೆ. ಹೊಸ ಒಡಂಬಡಿಕೆಯಲ್ಲಿಯೂ ಸಹ, ಹತ್ತು ಕುಷ್ಠರೋಗಿಗಳಲ್ಲಿ ಒಬ್ಬನು ಮಾತ್ರ ತಾನು ಪಡೆದ ಉಪಕಾರಕ್ಕಾಗಿ ಕೃತಜ್ಞತೆ ಸಲ್ಲಿಸಲು ಹಿಂದಿರುಗಿ ಬಂದನು. ಶುದ್ಧರಾದವರು ಹತ್ತು ಮಂದಿ ಅಲ್ಲವೇ, ಉಳಿದ ಒಂಬತ್ತು ಮಂದಿ ಎಲ್ಲಿ? ಎಂದು ದೇವರು ಕೃತಜ್ಞತೆಯನ್ನು ಎದುರುನೋಡುತ್ತಿದ್ದಾರೆ. ಆದ್ದರಿಂದ ನಾವು ಕೃತಜ್ಞರಾಗಿರಲು ಕಲಿಯೋಣ.

 

ನನಗೆ ಪ್ರಿಯರಾದವರೇ! ನಾವು ನಡೆಯುವಾಗ, ಕುಳಿತುಕೊಳ್ಳುವಾಗ ಮತ್ತು ಎದ್ದೇಳುವಾಗ, ಅವರು ನಮಗೆ ತೋರಿದ ಕೃಪೆಯನ್ನು ಕುರಿತೇ ಮಾತನಾಡಬೇಕು ಮತ್ತು ಯೋಚಿಸಬೇಕು. ನಾವು ಹಾಗೆ ಮಾಡುವಾಗ ದೇವರಿಗೆ ಕೃತಜ್ಞತೆ ಹೇಳದೆ ಸುಮ್ಮನಿರಲು ಸಾಧ್ಯವೇ ಇಲ್ಲ. "ನೆನೆಸಿ ನೋಡು ನೀನು ಪಡೆದಿರುವ ಆಶೀರ್ವಾದಗಳನ್ನು; ತಿರುಗಿ ನೋಡು ಅವರು ಮಾಡಿದ ಉಪಕಾರಗಳನ್ನು" ಎಂದು ಕಣ್ಣೀರಿನಿಂದ ದೇವರಿಗೆ ಕೃತಜ್ಞತೆ ಸಲ್ಲಿಸೋಣ. ನಮ್ಮ ಮಕ್ಕಳಿಗೂ ಕೃತಜ್ಞತೆಯ ಭಾವನೆಯನ್ನು ಕಲಿಸೋಣ ಮತ್ತು ದೇವರಿಗೆ ಕೃತಜ್ಞರಾಗಿ ಬೆಳೆಯಲು ಅವರನ್ನು ಪ್ರೋತ್ಸಾಹಿಸೋಣ. ಜನರು ನಿಮಗೆ ಮಾಡಿದ ಉಪಕಾರಕ್ಕಾಗಿ ಅವರಿಗೆ ಕೃತಜ್ಞತೆಯನ್ನು, ಅವರು ನಿಮಗೆ ಮಾಡಿದ ಕೆಟ್ಟದ್ದಕ್ಕಾಗಿ ದೇವರಿಗೆ ಕೃತಜ್ಞತೆಯನ್ನೂ ಸಲ್ಲಿಸಿರಿ. "ಕೃತಜ್ಞತೆ" ಎಂಬ ನಾಲ್ಕು ಅಕ್ಷರಗಳನ್ನು ಹೃದಯಪೂರ್ವಕವಾಗಿ ಹೇಳುವುದನ್ನು ಅಭ್ಯಾಸ ಮಾಡಿಕೊಳ್ಳೋಣ! ಕೃತಜ್ಞತೆಯ ಹೃದಯದಿಂದ ದೇವರನ್ನು ಆರಾಧಿಸೋಣ ಮತ್ತು ಮಹಿಮೆಪಡಿಸೋಣ! ಆಮೆನ್.

- Mrs. ಭುವನಾ ಧನಪಾಲನ್

 

ಪ್ರಾರ್ಥನಾ ಅಂಶ:

ಈ ತಿಂಗಳು ಪೂರ್ತಿಯಾಗಿ ನಡೆಯಲಿರುವ ಸೇವೆಗಳಲ್ಲಿ ದೇವರ ಹಸ್ತವು ಜೊತೆ ಇದ್ದು ನಡೆಸುವಂತೆ ಪ್ರಾರ್ಥಿಸಿರಿ.

 

*Whatsapp*

ಈ ಧ್ಯಾನ ಸಂದೇಶವನ್ನು ತಮಿಳು, ಇಂಗ್ಲಿಷ್, ಹಿಂದಿ, ಮಲಯಾಳಂ, ತೆಲುಗು, ಕನ್ನಡ, ಪಂಜಾಬಿ ಮತ್ತು ಒರಿಯಾ ಭಾಷೆಗಳಲ್ಲಿ ವಾಟ್ಸಾಪ್‌ನಲ್ಲಿ ಪಡೆದುಕೊಳ್ಳಲು *+91 94440 11864* ಈ ಸಂಖ್ಯೆಯನ್ನು ಸಂಪರ್ಕಿಸಿ.

 

www.vmm.org.in

ಈಮೈಲ್:- info@vmm.org.in

Android App: https://play.google.com/store/apps/details?id=com.infobells.vmmorgin

        

ವಿಲೇಜ್ ಮಿಷಿನರಿ ಮೊಮೆಂಟ್ ವಿರುಧುನಗರ್, ಇಂಡಿಯಾ-626001

ಪ್ರಾರ್ಥನಾ ಅವಶ್ಯಕತೆಗಾಗಿ :- +91 93455 40482



hacklink satın al