Village Missionary Movement         கிராம மிஷனரி இயக்கம்

ಧೈನಂದಿನ ಧ್ಯಾನ(Kannada) – 31.01.2023
Share:

By Village Missionary Movement

Monday, 30-Jan-2023

ಧೈನಂದಿನ ಧ್ಯಾನ(Kannada) – 31.01.2023

 

ಹಸ್ತಪ್ರತಿ ಸೇವೆ

 

"ನತಾನಯೇಲನು - ಒಳ್ಳೇದೇನಾದರೂ ನಜರೇತಿನಿಂದ ಬರುವದುಂಟೇ? ಅಂದಾಗ ಫಿಲಿಪ್ಪನು - ಬಂದು ನೋಡು ಅಂದನು" - ಯೋಹಾನ 1:46

 

ಜಾನ್, 75 ವರ್ಷದ ವ್ಯಕ್ತಿ, ತನ್ನ ಸಬ್ಬತ್‌ನಲ್ಲಿ ಚರ್ಚ್‌ಗೆ ಹೋಗಿ, ಆರಾಧನೆಯನ್ನು ಮುಗಿಸಿ, ಮನೆಗೆ ಹೋಗುತ್ತಿದ್ದರು. ದಾರಿಯಲ್ಲಿ ಯಾರೋ ಒಬ್ಬರು ಯೇಸು ಒಳ್ಳೆಯವರು ಎಂಬ ಹಸ್ತಪ್ರತಿಗಳನ್ನು ಹಂಚುತ್ತಿದ್ದರು ಅದನ್ನು ನೋಡಿದ ಆ ಹಿರಿಯರು ಅವನ ಬಳಿಗೆ ಹೋಗಿ ಹಸ್ತಪ್ರತಿಗಳನ್ನು ತೆಗೆದುಕೊಂಡು, “ಇದನ್ನು ಕೊಟ್ಟು ನಿನ್ನ ಶ್ರಮ ಮತ್ತು ಸಮಯವನ್ನು ವ್ಯರ್ಥ ಮಾಡುತ್ತಿದ್ದೀಯ. ಇದರಿಂದಾಗಿ ಯಾವ ಆತ್ಮವೂ ದೇವರ ಬಳಿಗೆ ಸೇರುವುದಿಲ್ಲ. ಸುಮಾರು 30 ವರ್ಷಗಳ ಹಿಂದೆ ನಾನು ಕೂಡ ಪಾಪದಿಂದ ವಿಮೋಚನೆ ಎಂಬ ಹಸ್ತಪ್ರತಿಗಳನ್ನು ಸುತ್ತಮುತ್ತಲಿನ ಹಳ್ಳಿಗಳು ಮತ್ತು ಪಟ್ಟಣಗಳಲ್ಲಿ ಜನರಿಗೆ ವಿತರಿಸಿದೆ. ಆದರೆ ಎಲ್ಲಾ ಜನರು ಹಸ್ತಪ್ರತಿಯನ್ನು ತೆಗೆದುಕೊಂಡು ಯಾರೂ ಅದನ್ನು ಓದಲಿಲ್ಲ; ಕೆಲವರು ಹರಿದು ಹಾಕಿದರು ಮತ್ತು ಕೆಲವರು ಕೆಳಗೆ ಎಸೆದರು. ಇದರಿಂದ ಯಾವುದೇ ಪ್ರಯೋಜನವಿಲ್ಲ ಎಂದು ಭಾವಿಸಿ ನಾನು ಈ ಸೇವೆಯನ್ನು ನಿಲ್ಲಿಸಿಬಿಟ್ಟೆ" ಎಂದರು. ಅದಕ್ಕೆ ಅವರು ಅಯ್ಯನವರೇ "30 ವರ್ಷಗಳ ಹಿಂದೆ ನಾನು ಯೌವನಸ್ಥನಾಗಿದ್ದಾಗ ಪಾಪಕ್ಕೆ ಗುಲಾಮನಾಗಿದ್ದೆ. ನೀವು ಹೇಳಿದ ಈ ವಿಷಯದ ಹಸ್ತಪ್ರತಿಯನ್ನು ಓದಿದ ನಂತರ, ನಾನು ಯೇಸುವನ್ನು ತಿಳಿದುಕೊಂಡೆ ಮತ್ತು ಪಾಪದಿಂದ ಬಿಡುಗಡೆ ಹೊಂದಿಕೊಂಡು ಅಂದಿನಿಂದ ಕರ್ತನಲ್ಲಿ ಜೀವಿಸುತ್ತಿದ್ದೇನೆ" ಎಂದರು. ಕೊನೆಗೆ ನೋಡಿದರೆ ಆ ಮುದುಕ 30 ವರ್ಷಗಳ ಹಿಂದೆ ಇವರಿಗೆ ಹಸ್ತಪ್ರತಿ ನೀಡಿದ್ದಾರೆ ಎಂಬುದು ತಿಳಿದು ಬಂತು.

 

ಇಂದಿನ ವಾಕ್ಯಭಾಗದಲ್ಲಿ ಫಿಲಿಪ್ಪನ ಕೆಲವು ಮಾತುಗಳೇ ನತಾನಯೇಲನೆಂಬ ವ್ಯಕ್ತಿಯನ್ನು ದೇವರ ಬಳಿಗೆ ತಂದವು. ಅವನು ಮಾಡಿದ ಸಣ್ಣ ಪ್ರಯತ್ನ, "ಬಂದು ನೋಡು" ಎಂಬ ಮಾತುಗಳೇ ನತಾನಯೇಲನನ್ನು ರಕ್ಷಣೆಯೊಳಗೆ ಕರೆತಂದಿತು. ಅದೇ ರೀತಿ ನಾವು ಮಾಡುವ ಸೇವೆಯಲ್ಲಿ ನಮ್ಮ ಸಣ್ಣ ಪ್ರಯತ್ನಗಳಲ್ಲೂ ನಮ್ಮ ಕರ್ತನು ದೊಡ್ಡ ಕಾರ್ಯಗಳನ್ನು ಮಾಡಲು ಸಾಧ್ಯ.

 

ಪ್ರಿಯರೇ, ನಮ್ಮ ಹಸ್ತಪ್ರತಿ ಸೇವೆಯು ಕೂಡ ಹೀಗಿಯೇ. ದೇವರು ತಕ್ಷಣವೇ ಫಲಿತಾಂಶಗಳನ್ನು ತೋರಿಸುವುದಿಲ್ಲ. ಆದರೆ ಅವೆಲ್ಲವನ್ನೂ ಮರೆಯದೆ ತನ್ನ ಖಾತೆಯಲ್ಲಿ ಇಟ್ಟುಕೊಂಡಿರುತ್ತಾರೆ. ಸೂಕ್ತವಾದ ಸಮಯವು ಬಂದಾಗ ಅದರ ಪ್ರಯೋಜನಗಳನ್ನು ನಾವು ನೋಡುವಂತೆ ಮಾಡುತ್ತಾರೆ. ಒಂದು ವೇಳೆ ನಾವು ಅದನ್ನು ಭೂಮಿಯ ಮೇಲೆ ನೋಡದಿದ್ದರೂ, ಪರಲೋಕದಲ್ಲಿ ನಾವು ಅದನ್ನು ನೋಡುವಂತೆ ಮಾಡುತ್ತಾರೆ. ನಾವು ಹಸ್ತಪ್ರತಿಗಳನ್ನು ಜನರಿಗೆ ಹಸ್ತಾಂತರಿಸಿದಾಗ ಕೆಲವರು ನಮ್ಮನ್ನು ಕೀಳಾಗಿ ನೋಡಬಹುದು; ಕೆಲವರು ಅವುಗಳನ್ನು ಎಸೆಯಬಹುದು. ಆದರೂ ನಿರಾಶೆಗೊಳ್ಳದೆ ಪ್ರಾರ್ಥಿನೆಯೊಂದಿಗೆ ಈ ಸೇವೆಯನ್ನು ಮಾಡೋಣ. ಇದರ ಫಲಿತಾಂಶವನ್ನು ನಾವು ಖಂಡಿತವಾಗಿಯೂ ನೋಡುತ್ತೇವೆ.

 

ನೆನಪಿಡಿ: ನೀವು ಪ್ರತಿದಿನ 100 ಪ್ರತಿಗಳನ್ನು ನೀಡಿದರೆ, ಅದರಲ್ಲಿ ಎಷ್ಟು ಜನರು ರಕ್ಷಿಸಲ್ಪಡುತ್ತಾರೆ ಎಂಬುದು ನಿಮ್ಮ ಪ್ರಾರ್ಥನೆಯ ಮೇಲೆ ಅವಲಂಬಿತವಾಗಿರುತ್ತದೆ ಎಂಬುದನ್ನು ನೆನಪಿಟ್ಟುಕೊಳ್ಳಿ.

- S. ಮನೋಜ್ ಕುಮಾರ್

 

ಪ್ರಾರ್ಥನಾ ಅಂಶ:

ನಮ್ಮ ಸೇವಕರುಗಳ ಸುರಕ್ಷಿತ ಪ್ರಯಾಣಕ್ಕಾಗಿ ಪ್ರಾರ್ಥಿಸಿರಿ.

 

*Whatsapp*

ಈ ಧ್ಯಾನ ಸಂದೇಶವನ್ನು ತಮಿಳು, ಇಂಗ್ಲಿಷ್, ಹಿಂದಿ, ಮಲಯಾಳಂ, ತೆಲುಗು, ಕನ್ನಡ, ಪಂಜಾಬಿ ಮತ್ತು ಒರಿಯಾ ಭಾಷೆಗಳಲ್ಲಿ ವಾಟ್ಸಾಪ್‌ನಲ್ಲಿ ಪಡೆದುಕೊಳ್ಳಲು *+91 94440 11864* ಈ ಸಂಖ್ಯೆಯನ್ನು ಸಂಪರ್ಕಿಸಿ.

 

www.vmm.org.in

ಈಮೈಲ್:- info@vmm.org.in

Android App: https://play.google.com/store/apps/details?id=com.infobells.vmmorgin

        

ವಿಲೇಜ್ ಮಿಷಿನರಿ ಮೊಮೆಂಟ್ ವಿರುಧುನಗರ್, ಇಂಡಿಯಾ-626001

ಪ್ರಾರ್ಥನಾ ಅವಶ್ಯಕತೆಗಾಗಿ :- +91 93455 40482



hacklink satın al