Village Missionary Movement         கிராம மிஷனரி இயக்கம்

ಧೈನಂದಿನ ಧ್ಯಾನ(Kannada) – 28.01.2023
Share:

By Village Missionary Movement

Saturday, 28-Jan-2023

ಧೈನಂದಿನ ಧ್ಯಾನ(Kannada) – 28.01.2023

 

ಓಡುತ್ತಲೇ ಇರೋಣ

 

 "ಶಿಷ್ಟನು ಏಳು ಸಾರಿ ಬಿದ್ದರೂ ಮತ್ತೆ ಏಳುವನು..." - ಜ್ಞಾನೋಕ್ತಿ. 24:16

 

 "ನಾನು ಕೊನೆವರೆಗೂ ಎಲ್ಲಿ ನೆಲೆಗೊಳ್ಳಲಿದ್ದೇನೆ?" ಎಂಬ ಆಲೋಚನೆಯೇ ಇಂದು ಅನೇಕರನ್ನು ಯೇಸುವಿನ ಶಿಷ್ಯರಾಗಿ ಮಾರ್ಪಡದಂತೆ ತಡೆ ಮಾಡುತ್ತಿದೆ. "ನಾನು ಯೇಸುವಿನ ಮಗು" ಎಂದು ಕುಟುಂಬ ಮತ್ತು ಸ್ನೇಹಿತರಿಗೆ ಧೈರ್ಯದಿಂದ ಹೇಳಿಬಿಟ್ಟ ನಂತರ, ಯಾವುದಾದರೂ ಪಾಪದಲ್ಲಿ ಬಿದ್ದು ಬಿಟ್ಟರೆ, ಅವರೆಲ್ಲಾ ನನ್ನನ್ನು ಅಪಹಾಸ್ಯ ಮಾಡುತ್ತಾರಲ್ಲಾ ಎಂಬ ಆಲೋಚನೆಯೇ ಅವರು ಕ್ರಿಸ್ತನಲ್ಲಿ ಬೇರೂರದಂತೆ ತಡೆಯುತ್ತಿದೆ.

 

ಯೇಸು ನಡೆದಂತೆಯೇ ನಾವೂ ನಡೆಯಬೇಕು (1 ಯೋಹಾನ 2:6) ಎಂಬುದು ನಿಜವೇ. ಆದರೂ, ನಾವೆಲ್ಲರೂ ಒಂದಲ್ಲ ಒಂದು ಹಂತದಲ್ಲಿ ಎಡವಿ ಬೀಳುತ್ತೇವೆ ಎಂಬ ಸತ್ಯವನ್ನು ಗ್ರಹಿಸಬೇಕು. ಇದಕ್ಕಾಗಿಯೇ ಅಪೊಸ್ತಲನಾದ ಯಾಕೋಬನು, "ನಾವೆಲ್ಲರೂ ಅನೇಕ ವಿಷಯಗಳಲ್ಲಿ ತಪ್ಪಿಹೋಗುತ್ತೇವೆ" ಎಂದು (ಯಾಕೋಬ 3:2) ದಿಲ್ಲಿ ತನ್ನನ್ನೂ ಒಳಗೊಂಡಂತೆ ಹೇಳಿದ್ದಾರೆ. ಹಾಗಾಗಿ ಎಡವಿ ಬೀಳುವ, ಭಯಪಡುವ ಬದಲು ಎಡವಿ ಬಿದ್ದಾಗ ಏನು ಮಾಡಬೇಕೆಂದು ತಿಳಿದಿರಬೇಕು. ಏನದು? ನಾವು ತಕ್ಷಣ ಜಿಗಿದೆದ್ದು ನಿರಂತರವಾಗಿ ನಮ್ಮ ಓಟವನ್ನು ಓಡಬೇಕು. ಅಷ್ಟೇ.

 

ದೇವರು ನಮ್ಮಿಂದ ಏನನ್ನು ನಿರೀಕ್ಷಿಸುತ್ತಿದ್ದಾರೆ? ಎಂಬುದರಲ್ಲಿ ನಮ್ಮಲ್ಲಿ ಅನೇಕರಿಗೆ ತಪ್ಪು ಕಲ್ಪನೆ ಇದೆ. "ನಾವು ಆತನ ಬಳಿಗೆ ಹೋಗುವ ಮೊದಲು ದೇವರು ಎಲ್ಲವನ್ನೂ 100/100 ಪರಿಪೂರ್ಣವಾಗಬೇಕೆಂದು ನಿರೀಕ್ಷಿಸುತ್ತಾರೆ" ಎಂದು ನಮ್ಮಷ್ಟಕ್ಕೆ ನಾವೇ ನೆನೆಸುತ್ತೇವೆ. ಆದರೆ ಸತ್ಯ ಅದಲ್ಲ. "ನನ್ನ ಬಳಿಗೆ ಬರುವವರನ್ನು ನಾನು ತಳ್ಳಿಬಿಡುವುದಿಲ್ಲ," ಎಂದು ಅವರು ನಮ್ಮನ್ನು ಸತತವಾಗಿ ಕರೆಯುತ್ತಲೇ ಇದ್ದಾರೆ. ನೀವು ಎಲ್ಲೇ ಹೋದರೂ, ಈ ಅದ್ಭುತವಾದ ವಾಗ್ದಾನವನ್ನು ಮರೆತುಬಿಡಬೇಡಿ.

 

ಆದ್ದರಿಂದ ಪ್ರಿಯರೇ! ಬಿದ್ದು ಬಿಡುತ್ತೇನೆ ಎಂದುಕೊಂಡು ಓಡದೇ ಸುಮ್ಮನಿದ್ದುಬಿಡಬೇಡಿರಿ. ನೀವು ಬಿದ್ದರೂ, ತಪ್ಪಿತಸ್ಥರೆಂದು ಭಾವಿಸಿ ಬಿದ್ದ ಸ್ಥಳದಲ್ಲೇ ಇರದೇ ದೇವರ ಕಡೆಗೆ ಹಿಂತಿರುಗಿ, “ಕರ್ತನೇ, ನೀನು ನನ್ನನ್ನು ಎಂದಿಗೂ ತಳ್ಳಿಬಿಡುವುದಿಲ್ಲ ಎಂದು ನಾನು ನಂಬುತ್ತೇನೆ. ಇಗೋ ಮತ್ತೆ ನಾನು ನಿಮ್ಮ ಬಳಿಗೆ ಬರುತ್ತೇನೆ” ಎಂದು ಹೇಳಿ ಜಿಗಿದೆದ್ದು ನಿಮ್ಮ ಓಟವನ್ನು ಪ್ರಾರಂಭಿಸಿರಿ. ದೇವರು ನಿಮಗೆ ಮಾಡುವ ಅದ್ಭುತವನ್ನು ನೀವೇ ನಿಮ್ಮ ಕಣ್ಣುಗಳಿಂದ ನೋಡುತ್ತೀರ.

- Bro. ಜೆಕರ್ಯ

 

ಪ್ರಾರ್ಥನಾ ಅಂಶ:

ಪ್ರತಿ ಸೋಮವಾರ ನಡೆಯುತ್ತಿರುವ ರಾತ್ರಿ ಪ್ರಾರ್ಥನೆಯಲ್ಲಿ ಇನ್ನೂ ಹೆಚ್ಚು ಜನರು ಭಾಗವಹಿಸುವಂತೆ ಪ್ರಾರ್ಥಿಸಿರಿ.

 

*Whatsapp*

ಈ ಧ್ಯಾನ ಸಂದೇಶವನ್ನು ತಮಿಳು, ಇಂಗ್ಲಿಷ್, ಹಿಂದಿ, ಮಲಯಾಳಂ, ತೆಲುಗು, ಕನ್ನಡ, ಪಂಜಾಬಿ ಮತ್ತು ಒರಿಯಾ ಭಾಷೆಗಳಲ್ಲಿ ವಾಟ್ಸಾಪ್‌ನಲ್ಲಿ ಪಡೆದುಕೊಳ್ಳಲು *+91 94440 11864* ಈ ಸಂಖ್ಯೆಯನ್ನು ಸಂಪರ್ಕಿಸಿ.

 

www.vmm.org.in

ಈಮೈಲ್:- info@vmm.org.in

Android App: https://play.google.com/store/apps/details?id=com.infobells.vmmorgin

        

ವಿಲೇಜ್ ಮಿಷಿನರಿ ಮೊಮೆಂಟ್ ವಿರುಧುನಗರ್, ಇಂಡಿಯಾ-626001

ಪ್ರಾರ್ಥನಾ ಅವಶ್ಯಕತೆಗಾಗಿ :- +91 93455 40482



hacklink satın al