By Village Missionary Movement
Wednesday, 25-Jan-2023ಧೈನಂದಿನ ಧ್ಯಾನ(Kannada) – 26.01.2023
ನನ್ನ ಭಾರತ
“ಅವರವರಿಗೆ ಸಲ್ಲಿಸತಕ್ಕದ್ದನ್ನು ಸಲ್ಲಿಸಿರಿ; ಯಾರಿಗೆ ಕಂದಾಯವೋ ಅವರಿಗೆ ಕಂದಾಯವನ್ನು...ಸಲ್ಲಿಸಿರಿ” - ರೋಮಾ 13: 7
ಭಾರತದ ನಾಗರಿಕರಾದ ನಮಗೆಲ್ಲರಿಗೂ ಸತ್ಯವೇದವು ಮೂಲಭೂತ ಕರ್ತವ್ಯವಾಗಿ ಕೆಲವು ವಿಷಯಗಳನ್ನು ಕಲಿಸುತ್ತಿದೆ. ನಾವು ಇದನ್ನು ಸರಿಯಾಗಿ ಮಾಡಿದಾಗ ನಮ್ಮ ದೇಶವು ಆಶೀರ್ವದಿಸಲ್ಪಡುತ್ತದೆ. ನಮಗೂ ಆಶೀರ್ವಾದ ಸಿಗುತ್ತದೆ. ಆ ಜವಾಬ್ದಾರಿಗಳು ಯಾವುವು ಎಂದು ನೋಡೋಣವಾ?
1. ತೆರಿಗೆ ಕಟ್ಟುವುದು :- (ಮತ್ತಾಯ 17:24-27) ಕಪ್ಪುಹಣ ನಮ್ಮ ದೇಶದ ದೊಡ್ಡ ಸಮಸ್ಯೆಯಾಗಿದೆ. ಇದನ್ನು ಹೋಗಲಾಡಿಸಲು ಕೇಂದ್ರ ಸರ್ಕಾರ ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಂಡಿದ್ದರೂ ತೆರಿಗೆ ಕಟ್ಟದೆ ಸುಳ್ಳು ಖಾತೆಗಳ ಮೂಲಕ ಸಂಗ್ರಹವಾಗಿರುವ ಕಪ್ಪುಹಣದಿಂದ ನಮ್ಮ ದೇಶ ಪ್ರಗತಿ ಸಾಧಿಸಲು ಸಾಧ್ಯವಾಗುತ್ತಿಲ್ಲ. ಕ್ರೈಸ್ತರಾದ ನಾವು ತೆರಿಗೆಯನ್ನು ಸರಿಯಾಗಿ ಪಾವತಿಸಿದಾಗ ದೇಶವು ಆಶೀರ್ವದಿಸಲ್ಪಡುತ್ತದೆ. ಯೇಸುಕ್ರಿಸ್ತನು ತನಗೆ ಮತ್ತು ತನ್ನ ಶಿಷ್ಯರಿಗೆ ತೆರಿಗೆ ಕಟ್ಟಿದರೆಂಬುದು ನಮಗೆ ತಿಳಿದಿರುವ ವಿಷಯವಲ್ಲವೇ?
2. ಅಧಿಕಾರದಲ್ಲಿರುವವರನ್ನು ಗೌರವಿಸುವುದು:- (1 ಪೇತ್ರ 2:17)
ಎಲ್ಲಾ ಸರ್ಕಾರಿ ಅಧಿಕಾರಿಗಳು ದೇವರಿಂದ ಬಂದವರು ಮತ್ತು ನಾವು ಅವರನ್ನು ಗೌರವಿಸಬೇಕು ಎಂದು ಸತ್ಯವೇದವು ನಮಗೆ ಬೋಧಿಸುತ್ತಿದೆ. "ನಾನು ದೇವರ ಮಗು, ನಾನು ದೇವರನ್ನು ಹೊರತುಪಡಿಸಿ ಯಾರನ್ನೂ ಗೌರವಿಸುವುದಿಲ್ಲ" ಎಂದು ಹೇಳುವುದು ತಿರಸ್ಕಾರವಾಗಿದೆ. ಒಬ್ಬ ಅಧಿಕಾರಿ ಸತ್ಕ್ರಿಯೆ ಇಲ್ಲದವನೂ ಲಂಚ ತೆಗೆದುಕೊಳ್ಳುವವನಾಗಿದ್ದರೂ ಸಹ ನಾವು ಅವರನ್ನು ಗೌರವಿಸಬೇಕು. ಇದನ್ನು ಹೃದಯದಿಂದ ಮಾಡಬೇಕು, ಬಾಹ್ಯ ಭಾವನೆಗಳಿಂದಲ್ಲ. ಅದೇ ಸಮಯದಲ್ಲಿ ಅಧಿಕಾರಿಗಳು ಅಥವಾ ಕಾನೂನುಗಳು ನಮ್ಮ ಸುವಾರ್ತಾಬೋಧನೆಗೆ ಅಡ್ಡಿಯಾಗಿ ಬಂದಾಗ ಅವುಗಳಿಗೆ ನಾವು ವಿಧೇಯರಾಗಬೇಕಾದ ಅಗತ್ಯವಿಲ್ಲ. ಮತಾಂತರ ಕಾಯ್ದೆಗಳು ನಮ್ಮನ್ನು ತಡೆಯಬಾರದು. ಅಪೊಸ್ತಲನಾದ ಪೇತ್ರನನ್ನು ಒಮ್ಮೆ ಸುವಾರ್ತೆಯನ್ನು ಸಾರಬಾರದು ಎಂದು ಉನ್ನತ ಅಧಿಕಾರಿಯೊಬ್ಬರು ಬೆದರಿಕೆ ಹಾಕಿದರು. ಆಗ ಪೇತ್ರನು, "ಮನುಷ್ಯರಿಗಿಂತಲೂ ದೇವರಿಗೆ ಹೆಚ್ಚಾಗಿ ವಿಧೇಯರಾಗಿರಬೇಕಲ್ಲಾ" (ಅಪೊಸ್ತಲ. 5:29) ಎಂದು ಹೇಳಿದರು.
3. ದೇಶಕ್ಕಾಗಿ ಪ್ರಾರ್ಥಿಸುವುದು :- (1 ತಿಮೊಥೆ. 2:1,2)
ದೇವರನ್ನು ಸ್ತುತಿಸಿ ಎಲ್ಲರಿಗಾಗಿ ಪ್ರಾರ್ಥಿಸುವುದು ನಮ್ಮ ಕರ್ತವ್ಯ. ನಾವು ರೈಲಿನಲ್ಲಿ ಪ್ರಯಾಣಿಸುವಾಗ, ಅದರ ಅಧಿಕಾರಿಗಳು ಮತ್ತು ಅದರ ಉದ್ಯೋಗಿಗಳಿಗಾಗಿ ನಾವು ದೇವರನ್ನು ಸ್ತುತಿಸುತ್ತೇವೆ. ನಮ್ಮ ದೇಶದ ಗಡಿಯಲ್ಲಿ ನಿಂತು ನಮ್ಮನ್ನು ರಕ್ಷಿಸುವ ಸೈನಿಕರಿಗಾಗಿ ಪ್ರಾರ್ಥಿಸೋಣ. ಆರಾಮದಾಯಕ ಕಟ್ಟಡಕ್ಕೆ ಅಡಿಪಾಯ ಎಷ್ಟು ಅವಶ್ಯಕವೋ, ಅದೇರೀತಿ ಕ್ರೈಸ್ತರಾಗಿರುವ ನಾವು ಮತ್ತು ನಮ್ಮ ಪ್ರಾರ್ಥನೆಗಳು ನಮ್ಮ ಭಾರತ ದೇಶಕ್ಕೆ ಅವಶ್ಯಕ! ದೇವರಿಗೆ ಯಾರು ವಿಧೇಯರಾಗುತ್ತಾರೋ, ಅವರು ಸರ್ಕಾರಕ್ಕೂ ವಿಧೇಯರಾಗಿ ಉತ್ತಮ ಪ್ರಜೆಗಳಾಗಿ ಬದುಕುತ್ತಾರೆ.
ಗಣರಾಜ್ಯೋತ್ಸವದ ಶುಭಾಶಯಗಳು.
- J. ಸಂತೋಷ್
ಪ್ರಾರ್ಥನಾ ಅಂಶ:
ಫಿಲಿಪ್ ಗಾಸ್ಪೆಲ್ ತಂಡದ ಮೂಲಕ ಭೇಟಿ ನೀಡುವ ಹೊಸ ಹಳ್ಳಿಗಳಿಗಾಗಿ ಪ್ರಾರ್ಥಿಸಿರಿ.
*Whatsapp*
ಈ ಧ್ಯಾನ ಸಂದೇಶವನ್ನು ತಮಿಳು, ಇಂಗ್ಲಿಷ್, ಹಿಂದಿ, ಮಲಯಾಳಂ, ತೆಲುಗು, ಕನ್ನಡ, ಪಂಜಾಬಿ ಮತ್ತು ಒರಿಯಾ ಭಾಷೆಗಳಲ್ಲಿ ವಾಟ್ಸಾಪ್‌ನಲ್ಲಿ ಪಡೆದುಕೊಳ್ಳಲು *+91 94440 11864* ಈ ಸಂಖ್ಯೆಯನ್ನು ಸಂಪರ್ಕಿಸಿ.
www.vmm.org.in
ಈಮೈಲ್:- info@vmm.org.in
Android App: https://play.google.com/store/apps/details?id=com.infobells.vmmorgin
ವಿಲೇಜ್ ಮಿಷಿನರಿ ಮೊಮೆಂಟ್ ವಿರುಧುನಗರ್, ಇಂಡಿಯಾ-626001
ಪ್ರಾರ್ಥನಾ ಅವಶ್ಯಕತೆಗಾಗಿ :- +91 93455 40482